Viral News: ಸೂಟ್‌ಕೇಸ್‌ನಲ್ಲಿ 5 ವರ್ಷದ ಮಗನ ಶವ, ತಾಯಿ ಬಂಧಿಸಿದ ಪೊಲೀಸರು
ಅನಾರೋಗ್ಯದಿಂದ ಮೃತಪಟ್ಟ ಮಗುವಿನ ಶವವನ್ನು ಸೂಟ್‌ಕೇಸ್‌ಗೆ ತುಂಬಿ ಸಾಗಿಸಿ ಸಿಕ್ಕಿಬಿದ್ದರೂ ತಪ್ಪಿಸಿಕೊಂಡಿದ್ದ ಅಮೆರಿಕಾದ ಮಹಿಳೆಯನ್ನು ಎರಡು ವರ್ಷದ ನಂತರ ಬಂಧಿಸಲಾಗಿದೆ.
ಲಾಸ್ ಏಂಜಲೀಸ್: ಎರಡೂವರ ತಿಂಗಳ ಹಿಂದೆಯಷ್ಟೇ ಗೋವಾದಲ್ಲಿ ಮಗು ಸಾವಿನ ನಂತರ ದೇಹವನ್ನು ಸೂಟ್‌ಕೇಸ್‌ನಲ್ಲಿ ಬೆಂಗಳೂರಿಗೆ ಸಾಗಿಸುವ ತಾಯಿ ಸಿಕ್ಕಿಬಿದ್ದ ಪ್ರಕರಣ ಇನ್ನೂ ಮಾಸಿಲ್ಲ. ಅಂತಹುದೇ ಮತ್ತೊಂದು ಘಟನೆ ಅಮೆರಿಕಾದಲ್ಲಿ ನಡೆದಿದೆ. ಐದು ವರ್ಷದ ಮಗುವಿನ ದೇಹವನ್ನು ಸೂಟ್‌ಕೇಸ್‌ನಲ್ಲಿ ತುಂಬಿ ಸಾಗಿಸಿದ್ದ ತಾಯಿಯನ್ನು ಅಮೆರಿಕಾದ ಲಾಸ್ ಏಂಜಲೀಸ್ ನಲ್ಲಿ ಬಂಧಿಸಲಾಗಿದೆ. ಘಟನೆ ನಡೆದು ಎರಡು ವರ್ಷಗಳಾಗಿದ್ದು ಆದರೆ ತಾಯಿಯನ್ನು ಈಗ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಇಂಡಿಯಾನದ ಡೆಜಾನೆ ಲೂಡಿ ಆಂಡರ್ಸನ್(38) ಎಂಬಾಕೆಯ ಐದು ವರ್ಷದ ಪುತ್ರ ಕೈರೋ ಅಮ್ಮರ್ ಜೋರ್ಡಾನ್ ಎಂಬಾತ ಎರಡು ವರ್ಷದ ಹಿಂದೆ ಮೃತಪಟ್ಟಿದ್ದ. ಆತನಿಗೆ ಹೊಟ್ಟೆ ನೋವಿಗೆ ಸಂಬಂಧಿಸಿ ನೀಡಿದ್ದ ಎಲೆಕ್ಟ್ರೋಲೈಟ್ ಅನ್ನು ನೀಡಲಾಗಿತ್ತು. ಇದು ಅಡ್ಡಪರಿಣಾಮ ಬೀರಿ ಕೈರೋ ಮೃತಪಟ್ಟಿದ್ದ.
ಇದು ಬಹಿರಂಗವಾದರೆ ತೊಂದರೆಯಾಗುತ್ತದೆ ಎನ್ನುವ ಕಾರಣ ನೀಡಿ ಆಕೆ ವಿಶೇಷವಾದ ಸೂಟ್‌ಕೇಸ್‌ನಲ್ಲಿ ದೇಹವನ್ನು ತುಂಬಿ ವಾಷಿಂಗ್ಟನ್ ಗ್ರಾಮೀಣ ಪ್ರದೇಶದಲ್ಲಿ ಎಸೆದಿದ್ದಳು. ವ್ಯಕ್ತಿಯೊಬ್ಬ ಸಮೀಪದಲ್ಲಿಯೇ ಅಣಬೆ ಹುಡುಕಲು ಬಂದಾಗ ಸೂಟ್‌ಕೇಸ್ ಕಂಡು ಬಂದಿತ್ತು. ಇದರಲ್ಲಿ ಶವ ಇರುವುದು ಪತ್ತೆಯಾಗಿತ್ತು.
ಆನಂತರ ದೇಹವನ್ನು ವಶಕ್ಕೆ ಪಡೆದಿದ್ದ ಪೊಲೀಸರು ಮಗುವಿನ ಪೋಷಕರ ಪತ್ತೆ ಹಾಗೂ ಸಾವಿಗೆ ನಿಖರ ಕಾರಣ ಪತ್ತೆಗೆ ಮುಂದಾಗಿದ್ದರು.
ಎಲೆಕ್ಟ್ರೋಲೈಟ್ ಬಳಕೆಯಲ್ಲಿ ವ್ಯತ್ಯಾಸವಾಗಿ ವಾಂತಿ ಹಾಗೂ ಬೇಧಿಯಿಂದ ಬಾಲಕ ಮೃತಪಟ್ಟಿದ್ದಾನೆ ಎನ್ನುವುದು ತಿಳಿದಿತ್ತು. ಆನಂತರ ಮಗುವಿನ ತಾಯಿಯನ್ನು ಪತ್ತೆ ಮಾಡಿದ್ದರು.
ಆಗಲೇ ಇಂಡಿಯಾನ ರಾಜ್ಯ ಪೊಲೀಸರು ಆಗಲೇ ಆಂಡರ್‌ಸನ್ ವಿರುದ್ದ ನಿರ್ಲಕ್ಷ್ಯ, ಕೊಲೆ ಪ್ರಕರಣವನ್ನು ದಾಖಲಿಸಿದ್ದರು. ಆದರೆ ಆಕೆ ನಾನಾ ಕಾರಣ ನೀಡಿ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದಳು.
ಈ ಕುರಿತು ನ್ಯಾಯಾಲಯದಲ್ಲಿ ಹೋರಾಟ ಮಾಡುವುದಾಗಿ ಹೇಳಿದ್ದಳು. ಪೊಲೀಸರು ಆಕೆಯನ್ನು ಬಂಧಿಸಲು ಪ್ರಯತ್ನಿಸಿದರೂ ಆಗಿರಲಿಲ್ಲ. ಮೂರು ದಿನದ ಹಿಂದೆ ಲಾಸ್‌ಏಂಜಲೀಸ್ ನಲ್ಲಿ ರೈಲು ಹತ್ತಲು ಹೊರಟಿದ್ದ ಆಕೆಯನ್ನು ಪೊಲೀಸರು ಕೊನೆಗೂ ಬಂಧಿಸಿದ್ದರು.
ಈಗ ಆಕೆಯನ್ನು ವಿಚಾರಣೆಗೆ ಒಳಪಡಿಸಿದ್ದು. ಮಗು ಮೃತಪಟ್ಟ ಬಗ್ಗೆ, ಆನಂತರ ನಿರ್ಲಕ್ಷ್ಯ ತೋರಿದ್ದು, ಇಡೀ ಪ್ರಕರಣ ಮುಚ್ಚಿಟ್ಟಿದ್ದರ ಕುರಿತು ತನಿಖೆಯನ್ನು ಕೈಗೊಂಡಿದ್ದಾರೆ. ಇದರೊಟ್ಟಿಗೆ ಕೆಲ ಡಿಟೆಕ್ಟಿವ್ ಏಜೆನ್ಸಿಗಳೂ ಕೂಡ ಈ ಪ್ರಕರಣದಲ್ಲಿ ಪ್ರತ್ಯೇಕ ತನಿಖೆ ಕೈಗೊಂಡಿರುವುದಾಗಿ ಸಿಎನ್‌ಎನ್ ವರದಿ ಮಾಡಿದೆ.
ಈ ವರ್ಷದ ಜನವರಿ ಮೊದಲ ವಾರ ಬೆಂಗಳೂರು ಮೂಲದ ಕಂಪೆನಿಯೊಂದರ ಸಿಇಒ ಆಗಿದ್ದ ಸುಚನಾ ಸೇಥ್ ಅವರು ತಮ್ಮ ನಾಲ್ಕು ವರ್ಷದ ಮಗುವಿನ ದೇಹವನ್ನು ಸೂಟ್‌ಕೇಸ್‌ನಲ್ಲಿ ಇರಿಸಿ ಗೋವಾದಿಂದ ತರುವಾಗ ಚಿತ್ರದುರ್ಗ ಪೊಲೀಸರಿಗೆ ಸಿಕ್ಕಿಬಿದ್ದಿದ್ದರು. ಆನಂತರ ಗೋವಾ ಪೊಲೀಸರು ಸುತನಾ ಅವರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದರು. ಆನಂತರ ಪತಿಯಿಂದಲೂ ಹೇಳಿಕೆ ಪಡೆದಿದ್ದರು. ಈ ಪ್ರಕರಣದ ವಿಚಾರಣೆ ಇನ್ನೂ ಗೋವಾದಲ್ಲಿ ನಡೆದಿದೆ.
ವಿಭಾಗ