Harley Davidson X440: ರಸ್ತೆಗಿಳಿದ ಹಾರ್ಲೆ ಡೇವಿಡ್‌ಸನ್‌ ಎಕ್ಸ್‌440 ಬೈಕ್‌, ದರ 2.29 ಲಕ್ಷ, ರಾಯಲ್‌ ಎನ್‌ಫೀಲ್ಡ್‌ಗೆ ಹೊಸ ಸ್ಪರ್ಧೆ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Harley Davidson X440: ರಸ್ತೆಗಿಳಿದ ಹಾರ್ಲೆ ಡೇವಿಡ್‌ಸನ್‌ ಎಕ್ಸ್‌440 ಬೈಕ್‌, ದರ 2.29 ಲಕ್ಷ, ರಾಯಲ್‌ ಎನ್‌ಫೀಲ್ಡ್‌ಗೆ ಹೊಸ ಸ್ಪರ್ಧೆ

Harley Davidson X440: ರಸ್ತೆಗಿಳಿದ ಹಾರ್ಲೆ ಡೇವಿಡ್‌ಸನ್‌ ಎಕ್ಸ್‌440 ಬೈಕ್‌, ದರ 2.29 ಲಕ್ಷ, ರಾಯಲ್‌ ಎನ್‌ಫೀಲ್ಡ್‌ಗೆ ಹೊಸ ಸ್ಪರ್ಧೆ

  • Harley-Davidson X440 Price: ಬಹುನಿರೀಕ್ಷಿತ ಹಾರ್ಲೆ ಡೇವಿಡ್‌ಸನ್‌ ಎಕ್ಸ್‌440 ಬೈಕ್‌ ದೇಶದ ರಸ್ತೆಗಿಳಿದಿದೆ. ಈ ಬೈಕ್‌ ಭಾರತದಲ್ಲಿ ಲಾಂಚ್‌ ಆಗಿದೆ. ಈ ಬೈಕ್‌ನ ಆರಂಭಿಕ ಎಕ್ಸ್‌ಶೋರೂಂ ದರ 2.29 ಲಕ್ಷ ರೂಪಾಯಿ. ಇದು ಹಾರ್ಲೆ ಡೇವಿಡ್‌ಸನ್‌ ಬೈಕ್‌ಗಳಲ್ಲಿಯೇ ಅಗ್ಗದ ಬೈಕಾಗಿದೆ.

ಹಾರ್ಲೆ ಡೇವಿಡ್‌ಸನ್‌ನ ಹೊಸ X440 ಬೈಕ್‌ ರಸ್ತೆಗಿಳಿದಿದೆ. ಇದು ಹಾರ್ಲೆ ಡೇವಿಡ್‌ಸನ್‌ ಬೈಕ್‌ಗಳಲ್ಲಿಯೇ ಕಡಿಮೆ ದರದ ಬೈಕಾಗಿದೆ. ಭಾರತದ ರಸ್ತೆಯಲ್ಲಿ ಇನ್ನುಮುಂದೆ ರಾಯಲ್‌ ಎನ್‌ಫೀಲ್ಡ್‌ ಇತ್ಯಾದಿ ಬೈಕ್‌ಗಳಿಗೆ ಪ್ರತಿಸ್ಪರ್ಧಿಯಾಗಿ ಈ ಬೈಕ್‌ ಕಾಣಿಸಲಿದೆ. ಕಡಿಮೆ ದರ ಇರುವುದರಿಂದ ಬಹುತೇಕ ಗ್ರಾಹಕರು ಈ ಬೈಕ್‌ ಖರೀದಿಸುವ ಸಾಧ್ಯತೆಯಿದ್ದು, ರಸ್ತೆಯಲ್ಲಿನ್ನು ಹಾರ್ಲೆ ಡೇವಿಡ್‌ಸನ್‌ ಲೊಗೊ ಹೆಚ್ಚಿನ ಪ್ರಮಾಣದಲ್ಲಿ ಕಾಣಿಸಲಿದೆ. 
icon

(1 / 9)

Harley-Davidson X440 ಆರಂಭಿಕ ಎಕ್ಸ್‌ಶೋರೂಂ ದರ 2.29 ಲಕ್ಷ ರೂಪಾಯಿ. ಹೀರೋ ಮೊಟೊಕಾರ್ಪ್‌ ಜತೆ ಪಾಲುದಾರಿಕೆಯಲ್ಲಿ ಈ ಬೈಕನ್ನು ಪರಿಚಯಿಸಲಾಗಿದೆ. ಹೀರೋ ಮೊಟೊಕಾರ್ಪ್‌ ಕಂಪನಿಯೇ ಈ ಮಾಡೆಲ್‌ ಅನ್ನು ದೇಶದಲ್ಲಿ ಉತ್ಪಾದನೆ ಮತ್ತು ವಿತರಣೆ ಮಾಡಲಿದೆ.  
icon

(2 / 9)

ಹಾರ್ಲೆ ಡೇವಿಡ್‌ಸನ್‌ ಹಲವು ಆವೃತ್ತಿಗಳಲ್ಲಿ ಲಭ್ಯ. ಇವುಗಳಲ್ಲಿ ಹಾರ್ಲೆ ಡೇವಿಡ್‌ಸನ್‌ನ ಮಸ್ಟರ್ಡ್‌ ಡೆನಿಮ್‌ನ ಎಕ್ಸ್‌ಶೋರೂಂ ದರ  2,29,000 ರೂಪಾಯಿ ಇದೆ.
icon

(3 / 9)

ಹಾರ್ಲೆ ಡೇವಿಡ್‌ಸನ್‌ ಎಕ್ಸ್‌440 ಮೆಟಾಲಿಕ್‌ ಡಾರ್ಕ್‌ ಸಿಲ್ವರ್‌ನ ಎಕ್ಸ್‌ಶೋರೂಂ ದರ 2,49,000  ರೂಪಾಯಿ ಇದೆ. 
icon

(4 / 9)

ಹಾರ್ಲೆ ಡೇವಿಡ್‌ಸನ್‌ ಎಕ್ಸ್‌440 ಮೆಟಾಲಿಕ್‌ ಥಿಕ್‌ ರೆಡ್‌ನ ಎಕ್ಸ್‌ಶೋರೂಂ ದರವೂ 2,49,000  ರೂಪಾಯಿ. 
icon

(5 / 9)

ಹಾರ್ಲೆ ಡೇವಿಡ್‌ಸನ್‌ ಎಕ್ಸ್‌440 ಮೆಟಾಲಿಕ್‌  ಮೇಟ್‌ ಬ್ಲಾಕ್‌ ಎಕ್ಸ್‌ಶೋರೂಂ ದರ 2,69,000 ರೂಪಾಯಿ ಇದೆ. 
icon

(6 / 9)

ಈ ಬೈಕ್‌ನಲ್ಲಿ ಹೊಸ 398  ಸಿಂಗಲ್‌ ಸಿಲಿಂಡರ್‌ ಏರ್‌ ಮತ್ತು ಆಯಿಲ್‌ ಕೂಲ್ಡ್‌ ಎಂಜಿನ್‌ ಇದೆ. ಇದು 27 ಬಿಎಚ್‌ಪಿ ಪವರ್‌ ಮತ್ತು 38ಎನ್‌ಎಂ ಟಾರ್ಕ್‌ ಒದಗಿಸುತ್ತದೆ. ಆರು ಸ್ಪೀಡ್‌ನ ಗಿಯರ್‌ಬಾಕ್ಸ್‌ ಜತೆಗಿದೆ.  
icon

(7 / 9)

ವೃತ್ತಾಕಾರದ ಹೆಡ್‌ಲ್ಯಾಂಪ್‌, ಟಿಯರ್‌ಡ್ರಾಪ್‌ ಆಕಾರದ ಇಂಧನ ಟ್ಯಾಂಕ್‌ ಇತ್ಯಾದಿ ರೆಟ್ರೊ ವಿನ್ಯಾಸ ಗಮನ ಸೆಳೆಯುತ್ತದೆ. ಎಲ್‌ಇಡಿ ಲೈಟಿಂಗ್‌, ಎಲ್‌ಸಿಡಿ ಇನ್‌ಸ್ಟ್ರುಮೆಂಟ್‌ ಕನ್ಸೊಲ್‌ ಇತ್ಯಾದಿಗಳು ಬೈಕ್‌ಗೆ ಆಧುನಿಕ ಟಚ್‌ ನೀಡಿವೆ. 
icon

(8 / 9)

ಭಾರತದಲ್ಲಿ ಈ ಬೈಕ್‌ನ ರಿಟೇಲ್‌ ಮತ್ತು ವಿತರಣೆಯನ್ನು ಹೀರೋ ಮೊಟೊಕಾರ್ಪ್‌ ನೋಡಿಕೊಳ್ಳಲಲಿದೆ. ತನ್ನ ಈಗಿನ 15 ಡೀಲರ್‌ಶಿಪ್‌ಗಳ ಪ್ರಮಾಣವನ್ನು ಈ ವರ್ಷದದ ಅಂತ್ಯಕ್ಕೆ ಇನ್ನಷ್ಟು ಹೆಚ್ಚಿಸುವ ಗುರಿಯನ್ನು ಕಂಪನಿ ಹೊಂದಿದೆ. 
icon

(9 / 9)

ಇತರ ಗ್ಯಾಲರಿಗಳು