ಹೊಸ ಟಿವಿಎಸ್ ಅಪಾಚೆ ಆರ್‌ಟಿಆರ್ 160 4ವಿ ಬಿಡುಗಡೆ, ದರವೆಷ್ಟು, ಫೀಚರ್ಸ್ ಏನೇನಿದೆ? ಹಳೆ ಅಪಾಚೆಗೆ ಹೋಲಿಸಿದರೆ ಸಾಕಷ್ಟು ಹೊಸತನ- ಚಿತ್ರಗಳು
- ಟಿವಿಎಸ್ ಕಂಪನಿಯು ಅಪ್‌ಗ್ರೇಡ್ ಮಾಡಿರುವ ಹೊಸ ಅಪಾಚೆ ಆರ್ ಟಿಆರ್ 160 4ವಿ ಬೈಕನ್ನು ಬಿಡುಗಡೆ ಮಾಡಿದೆ. ಇದರ ಎಕ್ಸ್ ಶೋರೂಂ ದರ 1,39,990 ರೂಪಾಯಿ. ಇದು 160 ಸಿಸಿ ಆಯಿಲ್ ಕೂಲ್ಡ್, ಫ್ಯೂಯಲ್ ಇಂಜೆಕ್ಟೆಡ್, 4 ವಾಲ್ವ್ ಎಂಜಿನ್ ಸಹಾಯದಿಂದ 17.3 ಬಿಹೆಚ್ ಪಿ ಪವರ್ ಮತ್ತು 14.7 ಎನ್ಎಂ ಟಾರ್ಕ್ ನೀಡುತ್ತದೆ.
- ಟಿವಿಎಸ್ ಕಂಪನಿಯು ಅಪ್‌ಗ್ರೇಡ್ ಮಾಡಿರುವ ಹೊಸ ಅಪಾಚೆ ಆರ್ ಟಿಆರ್ 160 4ವಿ ಬೈಕನ್ನು ಬಿಡುಗಡೆ ಮಾಡಿದೆ. ಇದರ ಎಕ್ಸ್ ಶೋರೂಂ ದರ 1,39,990 ರೂಪಾಯಿ. ಇದು 160 ಸಿಸಿ ಆಯಿಲ್ ಕೂಲ್ಡ್, ಫ್ಯೂಯಲ್ ಇಂಜೆಕ್ಟೆಡ್, 4 ವಾಲ್ವ್ ಎಂಜಿನ್ ಸಹಾಯದಿಂದ 17.3 ಬಿಹೆಚ್ ಪಿ ಪವರ್ ಮತ್ತು 14.7 ಎನ್ಎಂ ಟಾರ್ಕ್ ನೀಡುತ್ತದೆ.
(1 / 5)
ಟಿವಿಎಸ್ ಮೋಟಾರ್ ಕಂಪನಿಯು ನವೀಕರಿಸಿದ ಅಪಾಚೆ ಆರ್ ಟಿಆರ್ 160 4ವಿ ಬೈಕನ್ನು ಬಿಡುಗೆ ಮಾಡಿದೆ. ಇದರ ದೆಹಲಿ ಎಕ್ಸ್‌ಶೋರೂಂ ದರ 1,39,990 ರೂಪಾಯಿ ಇದೆ. ಈ ಹಿಂದಿನ ಅಪಾಚೆಗೆ ಹೋಲಿಸಿದರೆ ದರ 5,000 ರೂಪಾಯಿಯಷ್ಟು ಹೆಚ್ಚಾಗಿದೆ.
(2 / 5)
ಹೊಸ ಟಿವಿಎಸ್ ಅಪಾಚೆ ಆರ್ ಟಿಆರ್ 160 4ವಿ ಬೈಕಿನಲ್ಲಿ ಗ್ಲೈಟ್ ಥ್ರೂ ಟೆಕ್ನಾಲಜಿ (ಜಿಟಿಟಿ) ಅನ್ನು ಅಳವಡಿಸಲಾಗಿದೆ. ಇದು ಪ್ರಯಾಣದ ಸಮಯದಲ್ಲಿ ಸವಾರಿಯನ್ನು ಸ್ಮೂತ್ ಆಗಿಸುತ್ತದೆ. ಯಾವುದೇ ಥ್ರೋಟಲ್ ಇನ್ ಪುಟ್ ಗಳಿಲ್ಲದೆ ಕ್ಲಚ್ ಬಿಡುಗಡೆಯಾದಾಗ ಬೈಕ್ ಮುಂದೆ ಸಾಗಲು ಜಿಟಿಟಿ ಸಹಾಯ ಮಾಡುತ್ತದೆ, ನೇಕೆಡ್ ಸ್ಪೋರ್ಟ್ ಮೋಟಾರ್ ಬೈಕ್ ನಲ್ಲಿ ನೀಡಲಾಗುವ ಹೊಸ ಅಡ್ಜಸ್ಟ್ ಮಾಡಬಹುದಾದ ಲಿವರ್ ಗಳೊಂದಿಗೆ ಸವಾರನ ಆರಾಮದಾಯಕತೆಯನ್ನ ಮತ್ತಷ್ಟು ಹೆಚ್ಚಿಸಲಾಗುತ್ತದೆ.
(3 / 5)
ಈ ಬೈಕ್ ಈಗ ಬ್ಲೂಟೂತ್ ಮೂಲಕ ಸಂಪರ್ಕವನ್ನು ಸಕ್ರಿಯಗೊಳಿಸಲು ಹೊಸ ಫೀಚರ್ ಪಡೆದಿದೆ. ಟಿವಿಎಸ್ ಸ್ಮಾರ್ಟ್ ಎಕ್ಸೊನೆಕ್ಟ್ ಸಂಪರ್ಕ ಹೊಂದಿದೆ. ಟರ್ನ್-ಬೈ-ಟರ್ನ್ ನ್ಯಾವಿಗೇಷನ್, ಕಾಲ್ ಅಲರ್ಟ್, ಎಸ್ಎಂಎಸ್ ಅಲರ್ಟ್ ಮತ್ತು ಧ್ವನಿ ಅಸಿಸ್ಟ್ ಫೀಚರ್‌ಗಳು ಇದರಲ್ಲಿವೆ. ಸ್ಪೋರ್ಟ್, ಅರ್ಬನ್ ಮತ್ತು ರೈನ್ ಎಂಬ ಮೂರು ರೈಡಿಂಗ್ ಮೋಡ್ ಗಳಲ್ಲಿ ಲಭ್ಯ. ಆರ್ ಎಲ್ ಪಿಯೊಂದಿಗೆ ಡ್ಯುಯಲ್-ಚಾನೆಲ್ ಎಬಿಎಸ್, 37 ಎಂಎಂ ಯುಎಸ್ ಡಿ ಫ್ರಂಟ್ ಸಸ್ಪೆಂಷನ್ ಮತ್ತು ಬುಲ್ಪಪ್ ಎಕ್ಸಾಸ್ಟ್ ಅನ್ನು ಹೊಂದಿದೆ.
(4 / 5)
160 ಸಿಸಿ ಸಿಂಗಲ್ ಸಿಲಿಂಡರ್ ಏರ್ ಮತ್ತು ಆಯಿಲ್ ಕೂಲ್ಡ್ ಎಂಜಿನ್ ಅಳವಡಿಸಲಾಗಿದೆ. ಈ ಎಂಜಿನ್ 8,000 ಆರ್ ಪಿಎಂನಲ್ಲಿ 17.3 ಬಿಹೆಚ್ ಪಿ ಪವರ್ ಮತ್ತು 6,500 ಆರ್ ಪಿಎಂನಲ್ಲಿ 14.8 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ನೊಂದಿಗೆ 5-ಸ್ಪೀಡ್ ಗೇರ್ ಬಾಕ್ಸ್ ಅನ್ನು ಅಳವಡಿಸಲಾಗಿದೆ.
ಇತರ ಗ್ಯಾಲರಿಗಳು