Bagalkot News:ಬಾಗಲಕೋಟೆ ತೋಟಗಾರಿಕೆ ವಿಶ್ವ ವಿದ್ಯಾನಿಲಯ ಕಟ್ಟಿದ ಕುಲಪತಿ ಪ್ರೊ.ದಂಡಿನ್‌ ಗೆ 75 ರ ಅಭಿನಂದನಾ ಕಾರ್ಯಕ್ರಮ photos
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Bagalkot News:ಬಾಗಲಕೋಟೆ ತೋಟಗಾರಿಕೆ ವಿಶ್ವ ವಿದ್ಯಾನಿಲಯ ಕಟ್ಟಿದ ಕುಲಪತಿ ಪ್ರೊ.ದಂಡಿನ್‌ ಗೆ 75 ರ ಅಭಿನಂದನಾ ಕಾರ್ಯಕ್ರಮ Photos

Bagalkot News:ಬಾಗಲಕೋಟೆ ತೋಟಗಾರಿಕೆ ವಿಶ್ವ ವಿದ್ಯಾನಿಲಯ ಕಟ್ಟಿದ ಕುಲಪತಿ ಪ್ರೊ.ದಂಡಿನ್‌ ಗೆ 75 ರ ಅಭಿನಂದನಾ ಕಾರ್ಯಕ್ರಮ photos

  • ಶಂಕರ ಬ ದಂಡಿನ ಕರ್ನಾಟಕದ ತೋಟಗಾರಿಕೆ,ರೇಷ್ಮೆ, ಕೃಷಿ ವಿಜ್ಞಾನ ಸಂಶೋಧನೆ, ಆಡಳಿತದಲ್ಲಿ ದೊಡ್ಡ ಹೆಸರು.  ಮೈಸೂರಿನ ರೇಷ್ಮೆ ಸಂಶೋಧನಾಲಯ ನಿರ್ದೇಶಕರಾಗಿ ಆನಂತರ ಬಾಗಲಕೋಟೆಯಲ್ಲಿ ತೋಟಗಾರಿಕೆ ವಿಶ್ವವಿದ್ಯಾನಿಲಯ ಕಟ್ಟಿದ ಹಿರಿಮೆ ಇವರದ್ದು. 75 ತುಂಬಿದ ಸಂದರ್ಭದಲ್ಲಿ ಅವರ ಹಿತೈಷಿಗಳು ಜೂನ್‌ 29ರಂದು ಬಾಗಲಕೋಟೆಯಲ್ಲಿ ಅಭಿನಂದನೆ ಇಟ್ಟುಕೊಂಡಿದ್ದಾರೆ. 

ಕೆಲವರು ವಿಜ್ಞಾನಿಗಳಾಗಿದ್ದರೆ, ಮತ್ತೆ ಕೆಲವರು ಆಡಳಿತಗಾರರಾಗಿರುತ್ತಾರೆ. ಎರಡು ಗುಣ ಇರುವವರು ಅಪರೂಪ, ಅಂತವರಲ್ಲಿ ಕನ್ನಡಿಗರಾದ ಎಸ್.ಬಿ.ದಂಡಿನ್‌ ಪ್ರಮುಖರು.
icon

(1 / 8)

ತೋಟಗಾರಿಕೆ. ರೇಷ್ಮೆ ಕೃಷಿ ಸಂಶೋಧನೆ, ಯೋಜನೆ ಜಾರಿ ವಿಚಾರದಲ್ಲಿ ಎಸ್‌ ,ಬಿ.ದಂಡಿನ್‌ ಅವರ ಹೆಸರು ದೊಡ್ಡದು. ಮೂಲತಃ ಬೆಳಗಾವಿ ಜಿಲ್ಲೆಯವರಾದ ದಂಡಿನ್‌ ಅವರು ಕರ್ನಾಟಕ ವಿವಿ ಹಳೆಯ ವಿದ್ಯಾರ್ಥಿ.
icon

(2 / 8)

ಕರ್ನಾಟಕ ಮಾತ್ರವಲ್ಲದೇ ಹೊರ ದೇಶದಲ್ಲೂ ಉನ್ನತ ಸಂಶೋಧನೆ ಕೈಗೊಂಡು ಭಾರತಕ್ಕೆ ಬಂದವರು ದಂಡಿನ್‌. 
icon

(3 / 8)

ರೈತರು ಸ್ವಾವಲಂಬಿಗಳಾಗಬೇಕು. ಆರ್ಥಿಕವಾಗಿ ಸ್ಥಿತಿವಂತರಾಗಬೇಕು.ಅವರಿಗೆ ಸಂಶೋಧನೆಯ ಲಾಭ ಸಿಗಬೇಕು ಎಂದು ಯೋಜನೆ ರೂಪಿಸಿ ಅದನ್ನು ಅನುಷ್ಠಾನಕ್ಕೆ ತಂದವರು ದಂಡಿನ್‌.
icon

(4 / 8)

 ರೇಷ್ಮೆ ಸಂಶೋಧನೆ ಹಾಗೂ ತಂತ್ರಜ್ಞಾನ ಸಂಸ್ಥೆ( CSRTI) ಅಡಿ ಹಲವು ರಾಜ್ಯಗಳಲ್ಲಿ ಕೆಲಸ ಮಾಡಿ ಮೈಸೂರಿನ ಕೇಂದ್ರದ ನಿರ್ದೇಶಕರಾಗಿದ್ದವರು ದಂಡಿನ್‌. ಆಗ ಇಡೀ ಕರ್ನಾಟಕ ಮಾತ್ರವಲ್ಲದೇ ಆರೇಳು ರಾಜ್ಯದಲ್ಲಿ ರೇಷ್ಮೆ ಚಟುವಟಿಕೆ ವಿಸ್ತರಣೆಗೆ ಶ್ರಮಿಸಿದರು.
icon

(5 / 8)

ಇದಾದ ನಂತರ ಅವರಿಗೆ ಅವಕಾಶ ಸಿಕ್ಕಿದ್ದು ಬಾಗಲಕೋಟೆಯಲ್ಲಿ ತೋಟಗಾರಿಕೆ ವಿಶ್ವವಿದ್ಯಾನಿಲಯದ ಕೆಲಸ. ಅಲ್ಲಿ ವಿಶೇಷಾಧಿಕಾರಿ ಹಾಗೂ ವಿಶ್ವವಿದ್ಯಾನಿಲಯದ ಕುಲಪತಿಯಾಗಿ ಆರು ವರ್ಷದಲ್ಲಿ ಒಂದು ವಿಶ್ವವಿದ್ಯಾನಿಲಯ ಕಟ್ಟಿದರು ದಂಡಿನ್.‌ ಈಗ ತೋಟಗಾರಿಕೆ ವಿವಿ ಒಂದೂವರೆ ದಶಕದಲ್ಲಿ ಹೆಮ್ಮರವಾಗಿ ಬೆಳೆದಿದೆ.
icon

(6 / 8)

ತೋಟಗಾರಿಕೆ ವಿಶ್ವವಿದ್ಯಾನಿಲಯವನ್ನು ಕಟ್ಟಿ ಕರ್ನಾಟಕದ ಹಲವು ಕಡೆ ಕೇಂದ್ರಗಳನ್ನು ಸ್ಥಾಪಿಸಿ ಪ್ರತಿ ವರ್ಷ ಸಾವಿರಾರು ವಿದ್ಯಾರ್ಥಿಗಳು ತೋಟಗಾರಿಕೆ ಪದವಿ ಪಡೆದು ಉದ್ಯೋಗ ಪಡೆಯುವಂತಹ. ಸಂಶೋಧನೆ ಚಟುವಟಿಕೆ ಮೂಲಕ ಇಳುವರಿ ಹಾಗೂ ಆದಾಯ ಹೆಚ್ಚಿಸುವುದಕ್ಕೂ ದಂಡಿನ್‌ ಒತ್ತು ನೀಡಿದರು. ಅವರನ್ನು ತೋಟಗಾರಿಕೆ ವಿವಿ ಹಿಂದಿನ ಕುಲಪತಿ ಡಾ.ಮಹೇಶ್ವರ ಅಭಿನಂದಿಸಿದ್ದರು.
icon

(7 / 8)

ಬಾಗಲಕೋಟ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾನಿಲಯ ಬೆಳೆಯುವ ಹಿಂದೆ ದಂಡಿನ ಅವರ ಅವಿರತ ಪ್ರಯತ್ನವೂ ಇತ್ತು. ಈಗ ಅವರಿಗೆ 75 ವರ್ಷ ತುಂಬುವ ನೆನಪಿನಲ್ಲಿ ಬಾಗಲಕೋಟೆಯಲ್ಲಿಯೇ ಅಭಿನಂದನಾ ಕಾರ್ಯಕ್ರಮ ರೂಪಿಸಲಾಗಿದೆ. 
icon

(8 / 8)

ಇತರ ಗ್ಯಾಲರಿಗಳು