Patchy Beard: ಗಡ್ಡ ಸರಿಯಾಗಿ ಬೆಳೆಯದಿದ್ರೆ ಈ ಟಿಪ್ಸ್‌ ಫಾಲೊ ಮಾಡಿ; ನಾಲ್ವರ ನಡುವೆ ನೀವೇ ಆಕರ್ಷಕವಾಗಿ ಕಾಣ್ತೀರ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Patchy Beard: ಗಡ್ಡ ಸರಿಯಾಗಿ ಬೆಳೆಯದಿದ್ರೆ ಈ ಟಿಪ್ಸ್‌ ಫಾಲೊ ಮಾಡಿ; ನಾಲ್ವರ ನಡುವೆ ನೀವೇ ಆಕರ್ಷಕವಾಗಿ ಕಾಣ್ತೀರ

Patchy Beard: ಗಡ್ಡ ಸರಿಯಾಗಿ ಬೆಳೆಯದಿದ್ರೆ ಈ ಟಿಪ್ಸ್‌ ಫಾಲೊ ಮಾಡಿ; ನಾಲ್ವರ ನಡುವೆ ನೀವೇ ಆಕರ್ಷಕವಾಗಿ ಕಾಣ್ತೀರ

  • ಯುವಕರಿಗೆ ತಮ್ಮ ಗಡ್ಡದ ಬಗ್ಗೆ ಅತೀವ ಕಾಳಜಿ. ಕೆಲವೊಮ್ಮೆ ಈ ಕಾಳಜಿ ಕಡಿಮೆಯಾದರೆಕೆನ್ನೆಯ ಕೆಲವು ಭಾಗಗಳಲ್ಲಿ ಸರಿಯಾಗಿ ಗಡ್ಡ ಬೆಳೆಯುವುದಿಲ್ಲ. ಇದಕ್ಕೆ ಪ್ಯಾಚಿ ಬಿಯರ್ಡ್‌ ಎಂದು ಹೇಳಲಾಗುತ್ತದೆ. ಆಕರ್ಷಕವಾಗಿ ಕಾಣಲು ಕಪ್ಪು ಬಣ್ಣದ ದಡ್ಡ ಗಡ್ಡ ಬೆಳೆಸುವ ಬಯಕೆ ಯುವಕರದ್ದು. ಆದರೆ ಗಡ್ಡ ಸರಿಯಾಗಿ ಬೆಳೆಯದಿದ್ದರೆ ಏನು ಮಾಡಲಿ ಎಂದು ಚಿಂತಿಸುತ್ತಾರೆ.

ಗಡ್ಡ ಬೆಳೆಯಬೇಕಾದ ಜಾಗದಲ್ಲಿ ಅಲ್ಲಲ್ಲಿ ಗಡ್ಡ ಕೂದಲು ಇರದಿದ್ದರೆ, ಚೆನ್ನಾಗಿ ಕಾಣಿಸುವುದಿಲ್ಲ. ಪ್ಯಾಚಿ ಗಡ್ಡವು ಅಥವಾ ಅಶಿಸ್ತಿನ ಗಡ್ಡದ ಬೆಳವಣಿಗೆಯು ಹಲವು ಪುರುಷರ ಚಿಂತೆ. ಇದಕ್ಕೆ ಕೆಲವೊಂದು ಜೀವನಶೈಲಿ ಕೂಡಾ ಕಾರಣವಿರಬಹುದು. ಈ ಸಲಹೆಗಳನ್ನು ಅನುಸರಿಸುವುದರಿಂದ ಆರೋಗ್ಯಕರ ಗಡ್ಡದ ಬೆಳವಣಿಗೆ ಖಾತ್ರಿಪಡಿಸಿಕೊಳ್ಳಬಹುದು.
icon

(1 / 7)

ಗಡ್ಡ ಬೆಳೆಯಬೇಕಾದ ಜಾಗದಲ್ಲಿ ಅಲ್ಲಲ್ಲಿ ಗಡ್ಡ ಕೂದಲು ಇರದಿದ್ದರೆ, ಚೆನ್ನಾಗಿ ಕಾಣಿಸುವುದಿಲ್ಲ. ಪ್ಯಾಚಿ ಗಡ್ಡವು ಅಥವಾ ಅಶಿಸ್ತಿನ ಗಡ್ಡದ ಬೆಳವಣಿಗೆಯು ಹಲವು ಪುರುಷರ ಚಿಂತೆ. ಇದಕ್ಕೆ ಕೆಲವೊಂದು ಜೀವನಶೈಲಿ ಕೂಡಾ ಕಾರಣವಿರಬಹುದು. ಈ ಸಲಹೆಗಳನ್ನು ಅನುಸರಿಸುವುದರಿಂದ ಆರೋಗ್ಯಕರ ಗಡ್ಡದ ಬೆಳವಣಿಗೆ ಖಾತ್ರಿಪಡಿಸಿಕೊಳ್ಳಬಹುದು.(Unsplash)

ಗಡ್ಡದ ಬೆಳವಣಿಗೆಗೆ ಗುಣಮಟ್ಟದ ಎಣ್ಣೆಯನ್ನು ಬಳಸಬಹುದು. ರೆಟೆನ್ಸಿಲ್ ಮತ್ತು ಡಿಎಚ್ ಟಿ ಬೂಸ್ಟರ್‌ಗಳಂತಹ ಎಣ್ಣೆಗಳು ಗಡ್ಡದ ನಡುವೆ ಇರುವ ಖಾಲಿ ಸ್ಥಳದಲ್ಲಿ ಗಡ್ಡದ ಕೂದಲನ್ನು ಬೆಳೆಸಲು ಸಹಾಯ ಮಾಡುತ್ತದೆ. ನಿಮ್ಮ ಮುಖ ಮತ್ತು ಗಡ್ಡದ ಪ್ರಕಾರಕ್ಕೆ ಅನುಗುಣವಾಗಿ ನೀವು ಎಣ್ಣೆಯನ್ನು ಆಯ್ಕೆ ಮಾಡಬಹುದು. ಯಾವ ಎಣ್ಣೆ ಆಯ್ಕೆ ಮಾಡುವುದು ಎಂಬುದಕ್ಕೆ ತಜ್ಞರನ್ನು ಸಂಪರ್ಕಿಸಿ ಸರಿಯಾದ ಎಣ್ಣೆಯನ್ನು ಆಯ್ಕೆ ಮಾಡಿ.
icon

(2 / 7)

ಗಡ್ಡದ ಬೆಳವಣಿಗೆಗೆ ಗುಣಮಟ್ಟದ ಎಣ್ಣೆಯನ್ನು ಬಳಸಬಹುದು. ರೆಟೆನ್ಸಿಲ್ ಮತ್ತು ಡಿಎಚ್ ಟಿ ಬೂಸ್ಟರ್‌ಗಳಂತಹ ಎಣ್ಣೆಗಳು ಗಡ್ಡದ ನಡುವೆ ಇರುವ ಖಾಲಿ ಸ್ಥಳದಲ್ಲಿ ಗಡ್ಡದ ಕೂದಲನ್ನು ಬೆಳೆಸಲು ಸಹಾಯ ಮಾಡುತ್ತದೆ. ನಿಮ್ಮ ಮುಖ ಮತ್ತು ಗಡ್ಡದ ಪ್ರಕಾರಕ್ಕೆ ಅನುಗುಣವಾಗಿ ನೀವು ಎಣ್ಣೆಯನ್ನು ಆಯ್ಕೆ ಮಾಡಬಹುದು. ಯಾವ ಎಣ್ಣೆ ಆಯ್ಕೆ ಮಾಡುವುದು ಎಂಬುದಕ್ಕೆ ತಜ್ಞರನ್ನು ಸಂಪರ್ಕಿಸಿ ಸರಿಯಾದ ಎಣ್ಣೆಯನ್ನು ಆಯ್ಕೆ ಮಾಡಿ.(Freepik)

ಆರೋಗ್ಯಕರ ಆಹಾರ ಸೇವನೆಯು ಗಡ್ಡದ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಆರೋಗ್ಯಕರ ಮತ್ತು ದಟ್ಟ ಗಡ್ಡವನ್ನು ಪಡೆಯಲು, ಎಣ್ಣೆಯುಕ್ತ ಆಹಾರಗಳು, ಕಾರ್ಬೋಹೈಡ್ರೇಟ್‌ಗಳು, ಸಕ್ಕರೆ ಮತ್ತು ಜಂಕ್ ಫುಡ್‌ ಸೇವನೆ ಕಡಿಮೆ ಮಾಡಬೇಕು. ವಿಟಮಿನ್‌ಗಳು ಮತ್ತು ಪ್ರೋಟೀನ್ ಸಮೃದ್ಧವಾಗಿರುವ ಆಹಾರ ಸೇವಿಸಿ. ಆರೋಗ್ಯಕರ ಗಡ್ಡದ ಬೆಳವಣಿಗೆ ಉತ್ತೇಜಿಸಲು ಹಸಿರು ತರಕಾರಿ, ಡೈರಿ, ಮೊಟ್ಟೆ ಮತ್ತು ಧಾನ್ಯಗಳ ಸಮತೋಲಿತ ಆಹಾರ ಅತ್ಯಗತ್ಯ.
icon

(3 / 7)

ಆರೋಗ್ಯಕರ ಆಹಾರ ಸೇವನೆಯು ಗಡ್ಡದ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಆರೋಗ್ಯಕರ ಮತ್ತು ದಟ್ಟ ಗಡ್ಡವನ್ನು ಪಡೆಯಲು, ಎಣ್ಣೆಯುಕ್ತ ಆಹಾರಗಳು, ಕಾರ್ಬೋಹೈಡ್ರೇಟ್‌ಗಳು, ಸಕ್ಕರೆ ಮತ್ತು ಜಂಕ್ ಫುಡ್‌ ಸೇವನೆ ಕಡಿಮೆ ಮಾಡಬೇಕು. ವಿಟಮಿನ್‌ಗಳು ಮತ್ತು ಪ್ರೋಟೀನ್ ಸಮೃದ್ಧವಾಗಿರುವ ಆಹಾರ ಸೇವಿಸಿ. ಆರೋಗ್ಯಕರ ಗಡ್ಡದ ಬೆಳವಣಿಗೆ ಉತ್ತೇಜಿಸಲು ಹಸಿರು ತರಕಾರಿ, ಡೈರಿ, ಮೊಟ್ಟೆ ಮತ್ತು ಧಾನ್ಯಗಳ ಸಮತೋಲಿತ ಆಹಾರ ಅತ್ಯಗತ್ಯ.(unsplash)

ಗಡ್ಡದ ಸರಿಯಾದ ಬೆಳವಣಿಗೆಗಾಗಿ, ಚರ್ಮದ ಆರೈಕೆ ಮುಖ್ಯ. ತ್ವಚೆಯು ಅಡ್ಡಪರಿಣಾಮವಿಲ್ಲದಂತೆ ಕಾಣಿಸಿಕೊಳ್ಳಲು ನೈಸರ್ಗಿಕ ಚರ್ಮದ ಉತ್ಪನ್ನಗಳನ್ನು ಬಳಸುವುದು ಮುಖ್ಯ. ಮುಖದ ಮೇಲ್ಮೈಯಿಂದ ಸತ್ತ ಚರ್ಮದ ಕೋಶಗಳನ್ನು ತೆಗೆದುಹಾಕಲು ವಾರಕ್ಕೊಮ್ಮೆ ಎಕ್ಸ್ಫೋಲಿಯೇಟ್ ಮಾಡಿ. ಇದು ಮುಖವನ್ನು ಶುದ್ಧೀಕರಿಸಿ ಪುನರುಜ್ಜೀವನಗೊಳಿಸುತ್ತದೆ. ಆ ಮೂಲಕ ಗಡ್ಡದ ಬೆಳವಣಿಗೆಯನ್ನು ಉತ್ತೇಜಿಸುತ್ತದೆ. ವಾರಕ್ಕೆ ಒಂದು ಅಥವಾ ಎರಡು ಬಾರಿ ಮೃದುವಾದ ಎಕ್ಸ್ಫೋಲಿಯೇಟಿಂಗ್ ಸ್ಕ್ರಬ್ ಅನ್ನು ಅನ್ವಯಿಸುವ ಮೂಲಕ ಸತ್ತ ಚರ್ಮದ ಕೋಶಗಳನ್ನು ತೆಗೆದುಹಾಕಬಹುದು. 
icon

(4 / 7)

ಗಡ್ಡದ ಸರಿಯಾದ ಬೆಳವಣಿಗೆಗಾಗಿ, ಚರ್ಮದ ಆರೈಕೆ ಮುಖ್ಯ. ತ್ವಚೆಯು ಅಡ್ಡಪರಿಣಾಮವಿಲ್ಲದಂತೆ ಕಾಣಿಸಿಕೊಳ್ಳಲು ನೈಸರ್ಗಿಕ ಚರ್ಮದ ಉತ್ಪನ್ನಗಳನ್ನು ಬಳಸುವುದು ಮುಖ್ಯ. ಮುಖದ ಮೇಲ್ಮೈಯಿಂದ ಸತ್ತ ಚರ್ಮದ ಕೋಶಗಳನ್ನು ತೆಗೆದುಹಾಕಲು ವಾರಕ್ಕೊಮ್ಮೆ ಎಕ್ಸ್ಫೋಲಿಯೇಟ್ ಮಾಡಿ. ಇದು ಮುಖವನ್ನು ಶುದ್ಧೀಕರಿಸಿ ಪುನರುಜ್ಜೀವನಗೊಳಿಸುತ್ತದೆ. ಆ ಮೂಲಕ ಗಡ್ಡದ ಬೆಳವಣಿಗೆಯನ್ನು ಉತ್ತೇಜಿಸುತ್ತದೆ. ವಾರಕ್ಕೆ ಒಂದು ಅಥವಾ ಎರಡು ಬಾರಿ ಮೃದುವಾದ ಎಕ್ಸ್ಫೋಲಿಯೇಟಿಂಗ್ ಸ್ಕ್ರಬ್ ಅನ್ನು ಅನ್ವಯಿಸುವ ಮೂಲಕ ಸತ್ತ ಚರ್ಮದ ಕೋಶಗಳನ್ನು ತೆಗೆದುಹಾಕಬಹುದು. (Unsplash)

ಸೂಕ್ತ ಸ್ಟೈಲ್ ಸನುಸರಿಸಿ. ಜಿಗುಟು ಅಥವಾ ಪ್ಯಾಚಿ ಗಡ್ಡಕ್ಕೆ ಸೂಕ್ತವಾಗುವ ಅನೇಕ ಗಡ್ಡದ ಶೈಲಿಗಳಿವೆ. ನಿಮ್ಮ ಕೂದಲಿನ ಬೆಳವಣಿಗೆ ಮತ್ತು ಮುಖದ ಆಕಾರಕ್ಕೆ ಅನುಗುಣವಾಗಿ ಗಡ್ಡದ ಶೈಲಿಯನ್ನು ಆಯ್ಕೆ ಮಾಡಬಹುದು. ಫ್ರೆಂಚ್ ಶೈಲಿ, ಹಿಪ್ಸ್ಟರ್  ಬಿಯರ್ಡ್, ವ್ಯಾನ್ ಡಿಗ್ ಗಡ್ಡ, ಬಾಲ್ಬೊ ಮತ್ತು ಇಂಗ್ಲಿಷ್ ಬಿಯರ್ಡ್ ಸ್ಟೈಲ್ ಮಾಡಬಹುದು.
icon

(5 / 7)

ಸೂಕ್ತ ಸ್ಟೈಲ್ ಸನುಸರಿಸಿ. ಜಿಗುಟು ಅಥವಾ ಪ್ಯಾಚಿ ಗಡ್ಡಕ್ಕೆ ಸೂಕ್ತವಾಗುವ ಅನೇಕ ಗಡ್ಡದ ಶೈಲಿಗಳಿವೆ. ನಿಮ್ಮ ಕೂದಲಿನ ಬೆಳವಣಿಗೆ ಮತ್ತು ಮುಖದ ಆಕಾರಕ್ಕೆ ಅನುಗುಣವಾಗಿ ಗಡ್ಡದ ಶೈಲಿಯನ್ನು ಆಯ್ಕೆ ಮಾಡಬಹುದು. ಫ್ರೆಂಚ್ ಶೈಲಿ, ಹಿಪ್ಸ್ಟರ್  ಬಿಯರ್ಡ್, ವ್ಯಾನ್ ಡಿಗ್ ಗಡ್ಡ, ಬಾಲ್ಬೊ ಮತ್ತು ಇಂಗ್ಲಿಷ್ ಬಿಯರ್ಡ್ ಸ್ಟೈಲ್ ಮಾಡಬಹುದು.(pixabay)

ಜೀವನಶೈಲಿಯಲ್ಲಿ ಕೆಲವೊಂದು ಬದಲಾವಣೆ ಮಾಡಿಕೊಳ್ಳಬಹುದು. ಆರೋಗ್ಯಕರ ಜೀವನಶೈಲಿಯನ್ನು ಕಾಪಾಡಿಕೊಳ್ಳುವುದು ಬಹಳ ಮುಖ್ಯ. ನಿಯಮಿತ ವ್ಯಾಯಾಮವು ಒತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದು ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸುತ್ತದೆ. ಆರೋಗ್ಯಕರ ಆಹಾರ, ಸರಿಯಾದ ನಿದ್ದೆಯೂ ಇದರಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಅಲ್ಲದೆ ಗಡ್ಡವನ್ನು ಕೂಡಾ ಬಾಚಣಿಕೆ ಮೂಲಕ ಬಾಚಿಕೊಳ್ಳಿ. ಆಗ ಗಡ್ಡದ ಬುಡದಲ್ಲಿ ರಕ್ತದ ಚಲನೆ ಸರಾಗವಾಗುತ್ತದೆ. ಚರ್ಮ ಸಕ್ರಿಯವಾಗುತ್ತದೆ.
icon

(6 / 7)

ಜೀವನಶೈಲಿಯಲ್ಲಿ ಕೆಲವೊಂದು ಬದಲಾವಣೆ ಮಾಡಿಕೊಳ್ಳಬಹುದು. ಆರೋಗ್ಯಕರ ಜೀವನಶೈಲಿಯನ್ನು ಕಾಪಾಡಿಕೊಳ್ಳುವುದು ಬಹಳ ಮುಖ್ಯ. ನಿಯಮಿತ ವ್ಯಾಯಾಮವು ಒತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದು ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸುತ್ತದೆ. ಆರೋಗ್ಯಕರ ಆಹಾರ, ಸರಿಯಾದ ನಿದ್ದೆಯೂ ಇದರಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಅಲ್ಲದೆ ಗಡ್ಡವನ್ನು ಕೂಡಾ ಬಾಚಣಿಕೆ ಮೂಲಕ ಬಾಚಿಕೊಳ್ಳಿ. ಆಗ ಗಡ್ಡದ ಬುಡದಲ್ಲಿ ರಕ್ತದ ಚಲನೆ ಸರಾಗವಾಗುತ್ತದೆ. ಚರ್ಮ ಸಕ್ರಿಯವಾಗುತ್ತದೆ.(pixabay)

ನಿಯಮಿತವಾಗಿ ಟ್ರಿಮ್ ಮಾಡಿ. ಗಡ್ಡದ ಕೂದಲು ಶಿಸ್ತಿನಿಂದ ಇಟಟ್ಟುಕೊಳ್ಳುವುದು ಮುಖ್ಯ. ಅದಕ್ಕಾಗಿ ಬಾಚಣಿಗೆಯ ಸಹಾಯದಿಂದ ಆಗಾಗ್ಗೆ ಬಾಚಿಕೊಳ್ಳಿ. ಇದು ಕೂದಲನ್ನು ಮೃದುಗೊಳಿಸುತ್ತದೆ. ಕೆಲವು ದಿನಗಳೀಗೊಮ್ಮೆ ಗಡ್ಡವನ್ನು ನಿರಂತರವಾಗಿ ಟ್ರಿಮ್‌ ಮಾಡುತ್ತಿರಿ. ಗಡ್ಡವನ್ನು ಕತ್ತರಿಸುವುದು ಆರೋಗ್ಯಕರ ಬೆಳವಣಿಗೆಗೆ ಸಹಾಯ ಮಾಡುತ್ತದೆ. ಒಡೆದ ಕೂದಲುಗಳು ಮತ್ತು ಇತರ ಹಾನಿಗೊಳಗಾದ ಕೂದಲುಗಳನ್ನು ಕತ್ತರಿಸುವ ಮೂಲಕ ಹೊಸ ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸುತ್ತದೆ.
icon

(7 / 7)

ನಿಯಮಿತವಾಗಿ ಟ್ರಿಮ್ ಮಾಡಿ. ಗಡ್ಡದ ಕೂದಲು ಶಿಸ್ತಿನಿಂದ ಇಟಟ್ಟುಕೊಳ್ಳುವುದು ಮುಖ್ಯ. ಅದಕ್ಕಾಗಿ ಬಾಚಣಿಗೆಯ ಸಹಾಯದಿಂದ ಆಗಾಗ್ಗೆ ಬಾಚಿಕೊಳ್ಳಿ. ಇದು ಕೂದಲನ್ನು ಮೃದುಗೊಳಿಸುತ್ತದೆ. ಕೆಲವು ದಿನಗಳೀಗೊಮ್ಮೆ ಗಡ್ಡವನ್ನು ನಿರಂತರವಾಗಿ ಟ್ರಿಮ್‌ ಮಾಡುತ್ತಿರಿ. ಗಡ್ಡವನ್ನು ಕತ್ತರಿಸುವುದು ಆರೋಗ್ಯಕರ ಬೆಳವಣಿಗೆಗೆ ಸಹಾಯ ಮಾಡುತ್ತದೆ. ಒಡೆದ ಕೂದಲುಗಳು ಮತ್ತು ಇತರ ಹಾನಿಗೊಳಗಾದ ಕೂದಲುಗಳನ್ನು ಕತ್ತರಿಸುವ ಮೂಲಕ ಹೊಸ ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸುತ್ತದೆ.(pixabay)


ಇತರ ಗ್ಯಾಲರಿಗಳು