Bengaluru- Bellandur Today in Pics: ಬೆಂಗಳೂರು- ಬೆಳ್ಳಂದೂರು ಬುಧವಾರ ಹೀಗಿತ್ತು ನೋಡಿ..
- Bengaluru Rains: ಬೆಂಗಳೂರು- ಬೆಳ್ಳಂದೂರು ಪ್ರದೇಶ ಬುಧವಾರ ಮಳೆ ಕಡಿಮೆಯಾದ ಕಾರಣ ಕೊಂಚ ನಿರಾಳವಾಗಿತ್ತು. ಆದರೂ, ಮಳೆ ನೀರ ಪ್ರವಾಹ ಪರಿಸ್ಥಿತಿ ತಗ್ಗಿರಲಿಲ್ಲ. ಯೆಮಲೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳಿಂದ ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸುವ ಕಾರ್ಯ ನಡೆದಿತ್ತು. ವಲಸಿಗರು ಸುರಕ್ಷಿತ ಸ್ಥಳಕ್ಕೆ ತೆರಳಲು ಪ್ರಯತ್ನಿಸುತ್ತಿದ್ದ ದೃಶ್ಯವೂ ಕಂಡುಬಂತು.
- Bengaluru Rains: ಬೆಂಗಳೂರು- ಬೆಳ್ಳಂದೂರು ಪ್ರದೇಶ ಬುಧವಾರ ಮಳೆ ಕಡಿಮೆಯಾದ ಕಾರಣ ಕೊಂಚ ನಿರಾಳವಾಗಿತ್ತು. ಆದರೂ, ಮಳೆ ನೀರ ಪ್ರವಾಹ ಪರಿಸ್ಥಿತಿ ತಗ್ಗಿರಲಿಲ್ಲ. ಯೆಮಲೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳಿಂದ ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸುವ ಕಾರ್ಯ ನಡೆದಿತ್ತು. ವಲಸಿಗರು ಸುರಕ್ಷಿತ ಸ್ಥಳಕ್ಕೆ ತೆರಳಲು ಪ್ರಯತ್ನಿಸುತ್ತಿದ್ದ ದೃಶ್ಯವೂ ಕಂಡುಬಂತು.
(1 / 12)
ಬೆಂಗಳೂರು- ಬೆಳ್ಳಂದೂರು ಪ್ರದೇಶದಿಂದ ವಲಸಿಗರು ತಮ್ಮ ಮನೆ ಸಾಮಗ್ರಿಗಳನ್ನು ಗೂಡ್ಸ್ ಇತ್ತು ಇತರೆ ವಾಹನಗಳಲ್ಲಿ ತುಂಬಿ ಸುರಕ್ಷಿತ ಪ್ರದೇಶಕ್ಕೆ ಕೊಂಡೊಯ್ಯುವ ದೃಶ್ಯ ಬುಧವಾರ ಕಂಡುಬಂತು. (PTI Photo/Shailendra Bhojak)(PTI)
(2 / 12)
ಬೆಳ್ಳಂದೂರು ಸಮೀಪ ಯಮಲೂರಿನಲ್ಲಿ ಭಾರತೀಯ ಸೇನೆಯ ಪ್ರವಾಹ ಪರಿಹಾರ ಟಾಸ್ಕ್ ಫೋರ್ಸ್ ಸಿಬ್ಬಂದಿ ಪ್ರವಾಹ ಪೀಡಿತ ಕಾಲನಿಯ ಜನರನ್ನು ಸುರಕ್ಷಿತ ಸ್ಥಳಕ್ಕೆ ಬುಧವಾರ ಸ್ಥಳಾಂತರಿಸಿದರು. (ANI Photo/Defence PRO Bengaluru Twitter)(ANI)
(3 / 12)
ಬೆಂಗಳೂರು- ಬೆಳ್ಳಂದೂರು ಪ್ರದೇಶದಲ್ಲಿ ಸುರಿದ ಭಾರಿ ಮಳೆಗೆ ಮುಳುಗಿದ ರಸ್ತೆಗಳ ಪಕ್ಕದಲ್ಲಿರುವ ಪಾದಚಾರಿ ಮಾರ್ಗದಲ್ಲಿ ನಡೆಯುತ್ತಿದ್ದ ವ್ಯಕ್ತಿ ಫೋಟೋಗೆ ಸೆರೆ ಸಿಕ್ಕಿದ್ದು ಹೀಗೆ (ANI Photo)(Shashidhar Byrappa)
(4 / 12)
ಬೆಂಗಳೂರು - ಬೆಳ್ಳಂದೂರು ರಸ್ತೆ ಮತ್ತು ಇತರೆ ರಸ್ತೆಗಳಲ್ಲಿ ನಿಂತ ನೀರನ್ನು ತೆರವುಗೊಳಿಸಲು ಬಿಬಿಎಂಪಿ ಸಿಬ್ಬಂದಿ ಹರಸಾಹಸ ಪಟ್ಟರು. (ANI Photo)(Shashidhar Byrappa)
(5 / 12)
ಬೆಂಗಳೂರು - ಬೆಳ್ಳಂದೂರು ವ್ಯಾಪ್ತಿಯಲ್ಲಿ ರಸ್ತೆ ನಡುವೆ ಸಂಚಾರಕ್ಕೆ ತೆಪ್ಪವನ್ನು ಬಳಸಿದ ಜನ. REUTERS/Samuel Rajkumar(REUTERS)
(6 / 12)
ಬೆಳ್ಳಂದೂರಿನ ನೀರು ತುಂಬಿದ ರಸ್ತೆಯಲ್ಲಿ ಮನೆ ಸಾಮಗ್ರಿಗಳನ್ನು ಹಿಡಿದುಕೊಂಡು ಸುರಕ್ಷಿತ ಸ್ಥಳಕ್ಕೆ ತೆರಳುತ್ತಿರುವ ಜನ (PTI Photo/Shailendra Bhojak) (PTI09_07_2022_000153A)(PTI)
(7 / 12)
ಬೆಂಗಳೂರು- ಬೆಳ್ಳಂದೂರು ವ್ಯಾಪ್ತಿಯಲ್ಲಿ ಮಹಿಳೆಯೊಬ್ಬರು ತಮ್ಮ ಮಗುವನ್ನು ಸೊಂಟಕ್ಕೇರಿಸಿಕೊಂಡು ಮೊಣಕಾಲು ಮಟ್ಟದ ನೀರಿನಲ್ಲಿ ಮುಂದೆ ಸಾಗಿದ ವೇಳೆ ಸೆರೆ ಸಿಕ್ಕ ದೃಶ್ಯ (ANI Photo)(Shashidhar Byrappa)
(8 / 12)
ಬೆಂಗಳೂರು - ಬೆಳ್ಳಂದೂರು ವ್ಯಾಪ್ತಿಯ ಔಟರ್ ರಿಂಗ್ ರೋಡ್‌ನಲ್ಲಿ ನೀರು ನಿಂತು ವಾಹನ ಸಂಚಾರಕ್ಕೆ ಅಡ್ಡಿ ಉಂಟಾಗಿತ್ತು. ಬುಧವಾರ ಮಳೆ ಕಡಿಮೆ ಆಗಿದ್ದರೂ, ನೀರು ಕಡಿಮೆ ಆಗಿರಲಿಲ್ಲ. (PTI Photo/Shailendra Bhojak) (PTI)
(9 / 12)
ಬೆಳ್ಳಂದೂರು ಪ್ರದೇಶದಲ್ಲಿ ನೀರು ನಿಂತ ರಸ್ತೆಗಿಳಿಯದೇ ಕಾಂಪೌಂಡ್ ಗೋಡೆ ಮೇಲೇರಿ ಮಗುವಿನ ಬಳಿ ಸಾಗುತ್ತಿರುವ ಮಹಿಳೆ (PTI Photo/Shailendra Bhojak)(PTI)
(10 / 12)
ಬೆಂಗಳೂರಿನಲ್ಲಿ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಜನರಿಗೆ ಆಹಾರ ಪೂರೈಕೆ ಮಾಡಿದ ಅಕ್ಷಯ ಪಾತ್ರ ಫೌಂಡೇಶನ್, ಅದಮ್ಯ ಚೇತನ ಮತ್ತು ಇತರೆ ಎನ್‌ಜಿಒಗಳ ಕಾರ್ಯಕರ್ತರು. (ANI Photo)(Arunkumar Rao)
(11 / 12)
ನೀರು ತುಂಬಿದ ರಸ್ತೆಯಲ್ಲಿ ಸಂಚಾರಕ್ಕೆ ಟ್ರ್ಯಾಕ್ಟರ್ ಟ್ರೋಲಿ ಬಳಸಿದ ಜನ REUTERS/Samuel Rajkumar(REUTERS)
ಇತರ ಗ್ಯಾಲರಿಗಳು