ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಸಿನಿಮಾ ಪಾತ್ರಕ್ಕಾಗಿ ದೇಹದ ರೂಪಾಂತರ ಮಾಡಿಕೊಂಡ 10 ತಾರೆಯರು; ದಿನಕ್ಕೆ 1 ಕ್ಯಾರೆಟ್‌ ತಿಂದು 22 ದಿನದಲ್ಲಿ ತೂಕ ಇಳಿಸಿಕೊಂಡ ರಾಜ್‌ಕುಮಾರ್‌

ಸಿನಿಮಾ ಪಾತ್ರಕ್ಕಾಗಿ ದೇಹದ ರೂಪಾಂತರ ಮಾಡಿಕೊಂಡ 10 ತಾರೆಯರು; ದಿನಕ್ಕೆ 1 ಕ್ಯಾರೆಟ್‌ ತಿಂದು 22 ದಿನದಲ್ಲಿ ತೂಕ ಇಳಿಸಿಕೊಂಡ ರಾಜ್‌ಕುಮಾರ್‌

  • ಚಂದು ಚಾಂಪಿಯನ್‌ ಸಿನಿಮಾಕ್ಕಾಗಿ ಕಾರ್ತಿಕ್‌ ಆರ್ಯನ್‌ ಅವರ ಹೊಸ ಲುಕ್‌ ನೋಡಿ ಪ್ರಭಾವಿತರಾಗಿದ್ದೀರಾ? ಇದೇ ರೀತಿ ಸಿನಿಮಾಗಳ ಪಾತ್ರಕ್ಕಾಗಿ ದೇಹದ ರೂಪಾಂತರ ಮಾಡಿಕೊಂಡ ಭಾರತದ 10 ಪ್ರಮುಖ ನಟರ ಪರಿಚಯ ಇಲ್ಲಿದೆ.

ದಂಗಲ್ ಸಿನಿಮಾದಲ್ಲಿ ತನ್ನ ಹಳೆ ಜಮಾನದ (ಹಿರಿಯ ವ್ಯಕ್ತಿ) ವ್ಯಕ್ತಿತ್ವವನ್ನು ತೋರಿಸಲು ಅಮೀರ್‌ ಖಾನ್‌ ತೂಕ ಹೆಚ್ಚಿಸಿಕೊಂಡಿದ್ದರು. ಇದಾದ ಬಳಿಕ ಅದೇ ಸಿನಿಮಾದಲ್ಲಿ ತನ್ನ ಕಿರಿಯ ವ್ಯಕ್ತಿತ್ವದ ಪಾತ್ರದಲ್ಲಿ ನಟಿಸಲು 28 ಕೆ.ಜಿ. ತೂಕ ಕಳೆದುಕೊಂಡಿದ್ದರು. 
icon

(1 / 10)

'ದಿ ಡರ್ಟಿ ಪಿಕ್ಚರ್' ಚಿತ್ರದಲ್ಲಿ ಸಿಲ್ಕ್ ಪಾತ್ರದಲ್ಲಿ ನಟಿಸಲು ವಿದ್ಯಾ ಬಾಲನ್ 12 ಕೆಜಿ ತೂಕ ಹೆಚ್ಚಿಸಿಕೊಂಡಿದ್ದಾರೆ. ಈ ಸಿನಿಮಾದ ಅಭಿನಯಕ್ಕಾಗಿ  ರಾಷ್ಟ್ರೀಯ ಅತ್ಯುತ್ತಮ ನಟಿ ಪ್ರಶಸ್ತಿಯನ್ನು  ಪಡೆದಿದ್ದಾರೆ.
icon

(2 / 10)

ಪೃಥ್ವಿರಾಜ್ ಸುಕುಮಾರನ್ ಇತ್ತೀಚೆಗೆ ತೀವ್ರ ದೈಹಿಕ ರೂಪಾಂತರಕ್ಕೆ ಒಳಗಾಗಿದ್ದರು, ಅವರು ಆಡುಜೀವಿತಂ: ದಿ ಗೋಟ್‌ ಲೈಫ್ ಚಿತ್ರಕ್ಕಾಗಿ 31 ಕೆಜಿ ತೂಕವನ್ನು  ಇಳಿಸಿಕೊಂಡಿದ್ದರು. 
icon

(3 / 10)

ಕರೀನಾ ಕಪೂರ್ ಅವರ ತಶಾನ್ ಯುಗದ ಸೈಜ್ ಝೀರೋ ಕ್ರೇಜ್ ನೆನಪಿದೆಯೇ? 2008ರಲ್ಲಿ ತೆರೆಕಂಡ 'ತಶಾನ್' ಸಿನಿಮಾದ ಶೂಟಿಂಗ್‌ಗಾಗಿ ಕರೀನಾ ಸಾಕಷ್ಟು ತೂಕ ಇಳಿಸಿಕೊಂಡಿದ್ದರು.  
icon

(4 / 10)

(5 / 10)

ಪ್ರಿಯಾಂಕಾ ಚೋಪ್ರಾ ಅವರು ಬಾಕ್ಸರ್ ಮೇರಿ ಕೋಮ್ ಜೀವನಚರಿತ್ರೆಯ ಸಿನಿಮಾದಲ್ಲಿ ನಟಿಸಿದ್ದರು. ಕ್ರೀಡಾಪಟುವಿನ ದೇಹದಂತೆ ತನ್ನ ದೇಹವನ್ನು ಹುರಿಗೊಳಿಸಲು ಹಲವು ತಿಂಗಳ ಕಾಲ ಕಠಿಣ ದೈಹಿಕ ತರಬೇತಿ ಪಡೆದಿದ್ದರು. 
icon

(6 / 10)

ಸಂಜಯ್ ಲೀಲಾ ಬನ್ಸಾಲಿ ಅವರ ಗುಜಾರಿಶ್ ಚಿತ್ರದಲ್ಲಿ ಪಾರ್ಶ್ವವಾಯುವಿಗೆ ಒಳಗಾದ ಜಾದೂಗಾರ-ರೇಡಿಯೋ ಜಾಕಿಯ ಪಾತ್ರವನ್ನು ನಿರ್ವಹಿಸಲು ಹೃತಿಕ್ ರೋಷನ್ ತೂಕವನ್ನು ಹೆಚ್ಚಿಸಿಕೊಂಡಿದ್ದರು. ಪೂರ್ತಿ ಸಿನಿಮಾದಲ್ಲಿ ಇವರು ಗಾಳಿ ಕುರ್ಚಿಯಲ್ಲೇ ಕಳೆಯುತ್ತಾರೆ.  
icon

(7 / 10)

ಪ್ರತಿದಿನ ಕೇವಲ ಒಂದು ಕ್ಯಾರೆಟ್ ಮತ್ತು  ಕಾಫಿ ಕುಡಿಯುವ ಮೂಲಕ ರಾಜ್‌ಕುಮಾರ್‌ ರಾವ್‌ 22 ದಿನಗಳ ಅವಧಿಯಲ್ಲಿ 7 ಕೆಜಿ ತೂಕವನ್ನು ಕಳೆದುಕೊಂಡಿದ್ದರು. 
icon

(8 / 10)

ಭಾಗ್ ಮಿಲ್ಖಾ ಭಾಗ್ ಚಿತ್ರದಲ್ಲಿ ಖ್ಯಾತ ಭಾರತೀಯ ಒಲಿಂಪಿಯನ್ ಮಿಲ್ಖಾ ಸಿಂಗ್ ಪಾತ್ರವನ್ನು ನಿರ್ವಹಿಸಿದ ಫರ್ಹಾನ್ ಅಖ್ತರ್ ಈ ಪಾತ್ರಕ್ಕಾಗಿ ತಮ್ಮ ದೇಹವನ್ನು ಟೋನಿಂಗ್ ಮಾಡಲು 18 ತಿಂಗಳುಗಳನ್ನು ತೆಗೆದುಕೊಂಡರು.
icon

(9 / 10)

ರಣದೀಪ್ ಹೂಡಾ ತಮ್ಮ ನಿರ್ದೇಶನದ ಸ್ವತಂತ್ರ ವೀರ್ ಸಾವರ್ಕರ್ ಚಿತ್ರಕ್ಕಾಗಿ ದೈಹಿಕ ರೂಪಾಂತರಕ್ಕೆ ಒಳಗಾಗಿದ್ದರು, ಈ ಪಾತ್ರಕ್ಕಾಗಿ 32 ಕೆಜಿ ತೂಕ ಕಡಿಮೆ ಮಾಡಿಕೊಂಡಿದ್ದರು. 
icon

(10 / 10)

ಟಿ20 ವರ್ಲ್ಡ್‌ಕಪ್ 2024

ಇತರ ಗ್ಯಾಲರಿಗಳು