ಮಾಜಿ ವಿಶ್ವ ಸುಂದರಿ ಮಾನುಷಿ ಚಿಲ್ಲರ್ ಅವರ ಸಿನಿಯಾನವೂ ಬಲುಸುಂದರ; ಇಲ್ಲಿದೆ ಚಿಲ್ಲರ್ ಚಿತ್ರ ಲಹರಿ
Manushi chhillar: 2017ರಲ್ಲಿ ವಿಶ್ವ ಸುಂದರಿ ಕಿರೀಟ ತನ್ನದಾಗಿಸಿಕೊಂಡ ಭಾರತದ ಮಾನುಷಿ ಚಿಲ್ಲರ್ ಅವರು ಈಗ ಹಲವು ಸಿನಿಮಾಗಳಲ್ಲಿ ಬ್ಯುಸಿ. ಟಾಲಿವುಡ್ನ ಆಪರೇಷನ್ ಆಲಮೆಲ್ಲಮ್ಮ ಸೇರಿದಂತೆ ಹಲವು ಪ್ರಾಜೆಕ್ಟ್ಗಳು ಅವರ ಕೈಯಲ್ಲಿದೆ. ಮಾನುಷಿ ಚಿಲ್ಲರ್ ಬಗ್ಗೆ ಹೆಚ್ಚಿನ ವಿವರ ಇಲ್ಲಿದೆ.
(1 / 6)
ಮಾನುಷಿ ಚಿಲ್ಲರ್ 1997ರ ಮೇ 14ರಂದು ಜನಿಸಿದರು. ಇವರು ನಟಿ, ಮಾಡೆಲ್ ಮತ್ತು ಮಿಸ್ ವರ್ಲ್ಡ್ 2017 ವಿನ್ನರ್. ಹರ್ಯಾಣ ಮೂಲದ ಇವರು ಫೆಮಿನಾ ಮಿಸ್ ಇಂಡಿಯಾ 2017 ಅನ್ನೂ ಪ್ರತಿನಿಧಿಸಿದ್ದರು. ಇವರು ಭಾರತಕ್ಕೆ 17 ವರ್ಷದ ಬಳಿಕ ವಿಶ್ವ ಸುಂದರಿ ಕರೀಟ ತಂದುಕೊಟ್ಟರು.
(2 / 6)
ಮಾನುಷಿ ಚಿಲ್ಲರ್ ಅವರ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಯಶ್ ರಾಜ್ ಫಿಲ್ಮ್ಸ್ನಲ್ಲಿ ಮೂರು ಸಿನಿಮಾಗಳಲ್ಲಿ ನಟಿಸಿದ್ದರು. ಸಾಮ್ರಾಟ್ ಪೃಥ್ವಿರಾಜ್ ಮೂಲಕ ಇವರು ಸಿನಿರಂಗಕ್ಕೆ ಕಾಲಿಟ್ಟರು.
(3 / 6)
ಅಕ್ಷಯ್ ಕುಮಾರ್ ಜತೆ ಪೃಥ್ವಿರಾಜ್ ಪತ್ನಿಯಾಗಿ ಸಾಮ್ರಾಟ್ ಪೃಥ್ವಿರಾಜ್ ಚಿತ್ರದಲ್ಲಿ ನಟಿಸಿದರು. ಇದಾದ ಬಳಿಕ ಇವರು ದಿ ಗ್ರೇಟ್ ಇಂಡಿಯನ್ ಫ್ಯಾಮಿಲಿ ಎಂಬ ಕಾಮಿಡಿ ಫಿಲ್ಮ್ನಲ್ಲಿ ಕಾಣಿಸಿಕೊಂಡರು. ಈ ಚಿತ್ರದಲ್ಲಿ ವಿಕ್ಕಿ ಕೌಶಲ್ ಜತೆ ನಟಿಸಿದ್ದರು.
(4 / 6)
ಮಾನುಷಿ ಚಿಲ್ಲರ್ ಈಗ ಆಪರೇಷನ್ ವ್ಯಾಲೆಂಟಿನ್ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಇದು ತೆಲುಗು ಮತ್ತು ಹಿಂದಿ ಭಾಷೆಯ ಚಿತ್ರ. ಇದರೊಂದಿಗೆ ಬಡೇ ಮಿಯಾನ್, ಚೋಟೆ ಮಿಯಾನ್ ಎಂಬ ಚಿತ್ರವೂ ಇವರ ಕೈಯಲ್ಲಿದೆ. ತೆಹ್ರಾನ್ ಎಂಬ ಚಿತ್ರದಲ್ಲೂ ನಟಿಸುತ್ತಿದ್ದಾರೆ. ಇವರಿಗೆ 68 ಫಿಲ್ಮ್ಫೇರ್ ಅವಾರ್ಡ್ ಪಡೆದಿದ್ದಾರೆ.
(5 / 6)
ವಿಶ್ವ ಸುಂದರಿ ಕಿರೀಟ ಪಡೆದ ಬಳಿಕ ಇವರಿಗೆ ಹಲವು ಅವಕಾಶಗಳು ದೊರಕಿದವು. ಹರ್ಯಾಣ ಸರಕಾರದ ಅನಿಮಿಯಾ ಫ್ರೀ ಅಭಿಯಾನದ ರಾಯಭಾರಿಯಾದರು. 2017ರಲ್ಲಿ ಇವರು ಗೂಗಲ್ ಟ್ರೆಂಡ್ ಆಗಿದ್ದರು.
ಇತರ ಗ್ಯಾಲರಿಗಳು