iPhone SE 4: ಐಪೋನ್ ಎಸ್‌ಇ4 ಬಿಡುಗಡೆ ಹತ್ತಿರದಲ್ಲೇ ಇದೆ, 5 ಬಿಗ್ ಅಪ್‌ಗ್ರೇಡ್ ಕುರಿತಂತೆ ಹೆಚ್ಚಿದೆ ಆಪಲ್ ಫ್ಯಾನ್ಸ್ ನಿರೀಕ್ಷೆ,
ಇತ್ತೀಚಿನ ಲಭ್ಯ ಮಾಹಿತಿ ಪ್ರಕಾರ, ಐಫೋನ್ ಎಸ್‌ಇ 4 ಡಿವೈಸ್ 2025ರ ಮಾರ್ಚ್ ತಿಂಗಳಲ್ಲಿ ಬಿಡುಗಡೆಯಾಗುವ ನಿರೀಕ್ಷೆ ಇದೆ. ಹೀಗೆ, ಐಪೋನ್ ಎಸ್‌ಇ4 ಬಿಡುಗಡೆ ಹತ್ತಿರದಲ್ಲೇ ಇದ್ದು, ಅದರಲ್ಲಿ 5 ಬಿಗ್ ಅಪ್‌ಗ್ರೇಡ್‌ಗಳ ಕುರಿತಂತೆ ಆಪಲ್ ಫ್ಯಾನ್ಸ್ ನಿರೀಕ್ಷೆ ಹೆಚ್ಚಾಗಿದೆ.
(1 / 5)
ಐಫೋನ್ ಎಸ್‌ಇ 4 ಸದ್ಯ ಜಗತ್ತಿನಲ್ಲಿ ಹೆಚ್ಚು ಚರ್ಚೆಯಲ್ಲಿರುವ ಸ್ಮಾರ್ಟ್‌ಫೋನ್. ಕಳೆದ ತಿಂಗಳು ಐಫೋನ್ 16 ಸೀರೀಸ್ ಫೋನ್‌ಗಳು ಮಾರುಕಟ್ಟೆಗೆ ಬಂದ ಬಳಿಕ ಆಪಲ್ ಪರಿಚಯಿಸಲಿರುವ ಮಧ್ಯಮ ಸ್ತರದ ಫೋನ್ ಇದು. ಮೂಲಗಳನ್ನು ಉಲ್ಲೇಖಿಸಿರುವ ವರದಿಗಳು ನಿಜವೇ ಆದರೆ ಐಫೋನ್ ಎಸ್‌ಇ4 2025ರ ಮಾರ್ಚ್‌ನಲ್ಲಿ ಬಿಡುಗಡೆಯಾಗಲಿದೆ. ಐಫೋನ್ ಎಸ್‌ಇ 4ನಲ್ಲಿ ಒಎಲ್‌ಇಡಿ ಡಿಸ್‌ಪ್ಲೇ 6.06 ಇಂಚ್ ಇರಲಿದೆ. ಐಫೋನ್ ಎಸ್‌ಇ 3 ಫೋನ್‌ಲ್ಲಿ ಡಿಸ್‌ಪ್ಲೇ 4.7 ಇಂಚು ಇದೆ.(X.com/MajinBuOfficial)
(2 / 5)
ಐಫೋನ್ ಎಸ್‌ಇ 4 ಫೋನ್ ಆಪಲ್ ಬಿಡುಗಡೆ ಮಾಡುತ್ತಿರುವ ಎಸ್‌ಇ ಸರಣಿಯ ಮೊದಲ ಫೇಸ್ ಐಡಿ ಫೋನ್ ಆಗಿರಲಿದೆ. ಈ ಹಿಂದಿನ ಎಸ್‌ಇ ಸರಣಿ ಫೋನ್‌ಗಳಲ್ಲಿ ಟಚ್ ಐಡಿ ನೀಡಲಾಗಿದೆ. ಇದಕ್ಕೂ ಮೊದಲು ಎಸ್‌ಇ ಮಾದರಿಯ ಮೂರು ಫೋನ್‌ಗಳನ್ನು ಆಪಲ್ ಲಾಂಚ್ ಮಾಡಿತ್ತು. ಐಫೋನ್ 14ರ ಚಾಸಿಸ್ ಅನ್ನು ಐಫೋನ್ ಎಸ್‌ಇ 4ರಲ್ಲಿ ಬಳಸಿರುವುದಾಗಿ ಹೇಳಲಾಗುತ್ತಿದೆ.(IceUniverse)
(3 / 5)
ಐಫೋನ್ ಎಸ್‌ಇ 4 ಆಪಲ್ ಬಿಡುಗಡೆ ಮಾಡುತ್ತಿರುವ ಮಧ್ಯಮ ಸ್ತರದ ಮೊದಲ ಸ್ಮಾರ್ಟ್‌ಫೋನ್ ಎಂದೆನಿಸಿಕೊಳ್ಳಲಿದೆ. ಹೊಸ ಡಿವೈಸ್‌ಗಳಲ್ಲಿ ಆಪಲ್, ಲೈಟ್ನಿಂಗ್ ಪೋರ್ಟ್ ಕೈಬಿಟ್ಟಿದ್ದು, ಯುಎಸ್‌ಬಿ ಸಿ ಚಾರ್ಜಿಂಗ್ ಅನ್ನು ಪರಿಚಯಿಸತೊಡಗಿದೆ. ಐಫೋನ್ ಎಸ್4 ಲಾಂಚ್ ಆದ ಬಳಿಕ ಯುಎಸ್‌ಬಿ ಸಿ ಇರುವ ಮಧ್ಯಮಸ್ತರದ ಮತ್ತು ಏಕೈಕ ಫೋನ್ ಎಂದೆನಿಸಿಕೊಳ್ಳಲಿದೆ.
(4 / 5)
ಆಪಲ್ ಇಂಟೆಲಿಜೆನ್ಸ್ ಆಫ್ ಆಫ್ ದಿ ಬಾಕ್ಸ್ ಹೊಂದಿರುವ ಮೊದಲ ಸ್ಮಾರ್ಟ್‌ಫೋನ್ ಆಗಿ ಐಫೋನ್ ಎಸ್‌ಇ 4 ಗ್ರಾಹಕರ ಕೈ ಸೇರುವ ನಿರೀಕ್ಷೆ ಇದೆ. ಆಪಲ್ ಇಂಟೆಲಿಜೆನ್ಸ್ ಅನ್ನು ಐಫೋನ್ 16 ಸೀರೀಸ್‌ನಲ್ಲಿ ನಿರೀಕ್ಷಿಸಲಾಗಿತ್ತು. ಆದರೆ, ಕಳೆದ ತಿಂಗಳು ಬಿಡುಗಡೆಯಾದ ಐಫೋನ್ 16 ಸೀರೀಸ್‌ನಲ್ಲಿ ಇದು ಕಾಣಲಿಲ್ಲ. ಎಐ ಸ್ಯೂಟ್ ವಿಳಂಬವಾಗಿದೆ. ಅದು ಐಒಎಸ್ 18.1ರಲ್ಲಿ ಬರಲಿದೆ.(Ming-Chi Kuo)
ಇತರ ಗ್ಯಾಲರಿಗಳು