ಷೇರು ಮಾರುಕಟ್ಟೆಯ ಇಂಟ್ರಾಡೇ ಟ್ರೇಡಿಂಗ್‌ನಲ್ಲಿ ಯಶಸ್ಸು ಸಿಗೋದು ಶೇ 5 ಕ್ಕಿಂತಲೂ ಕಡಿಮೆ; ಕಾರಣ ಹೀಗಿದೆ
Intraday Trading Tips: ಇಂಟ್ರಾಡೇ ಟ್ರೇಡಿಂಗ್ ಆಸಕ್ತಿ ನಿಮಗಿದ್ದರೆ ಮೊದಲು ಈ ವಹಿವಾಟಿನ ಬಗ್ಗೆ ತಿಳಿದುಕೊಳ್ಳುವುದು ತುಂಬಾ ಅಗತ್ಯ. ಪ್ರಮುಖವಾಗಿ ಇಂಟ್ರಾಡೇ ಟ್ರೇಡಿಂಗ್ ತುಂಬಾ ರಿಸ್ಕಿ ವಹಿವಾಟು. ಇದರ ವಿವರ ಇಲ್ಲಿದೆ.
(1 / 6)
ಷೇರು ಮಾರುಕಟ್ಟೆ ಅಪಾಯಕಾರಿ ವ್ಯವಹಾರವಾಗಿದೆ. ಇಂಟ್ರಾಡೇ ವಹಿವಾಟಿನಲ್ಲಿ ಅಪಾಯ ಇನ್ನೂ ಜಾಸ್ತಿ ಇರುತ್ತದೆ. ಇದನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗದೆ ಅನೇಕ ಜನರು ಸುಲಭ ಮಾರ್ಗದ ವಹಿವಾಟುಗಳನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಮಾರುಕಟ್ಟೆ ಮೊದಮೊದಲು ಹಣ ಕೊಡುತ್ತದೆ. ನಂತರ ದೊಡ್ಡ ಹೊಡೆತವನ್ನು ನೀಡುತ್ತದೆ. ಈ ಅನುಭವ ಬಹುತೇಕರಿಗೆ ಆಗಿರುತ್ತದೆ.
(2 / 6)
ಹೀಗಾಗಿಯೇ ಇಂಟ್ರಾಡೇ ಟ್ರೇಡಿಂಗ್‌ನಲ್ಲಿ ತುಂಬಾ ಜಾಗರೂಕರಾಗಿರಬೇಕು. ಇಂಟ್ರಾಡೇ ಟ್ರೇಡಿಂಗ್‌ನಲ್ಲಿ ಸ್ಟ್ರಾಟಜಿ, ರಿಸ್ಕ್ ಮ್ಯಾನೇಜ್ಮೆಂಟ್‌ಗೆ ಮೀರಿದ ಒಂದು ವಿಷಯವಿದೆ. ಅದನ್ನು ಅಳವಡಿಸಿಕೊಳ್ಳಲು ಅನೇಕರು ವಿಫಲವಾಗುತ್ತಲೇ ಇರುತ್ತಾರೆ. ಅದೇ ಸೈಕಾಲಜಿ.
(3 / 6)
ಇಂಟ್ರಾಡೇ ವಹಿವಾಟಿಗೆ ಸ್ಟ್ರಾಟಜಿ ಅಗತ್ಯವಿರುತ್ತದೆ. ಆದರೆ ಸ್ಟ್ರಾಟಜಿ ತಿಳಿದಿರುವ ಎಲ್ಲರೂ ಹಣ ಗಳಿಸುತ್ತಿದ್ದರೂ ಈ ಮಾದರಿಯ ವಹಿವಾಟಿನಲ್ಲಿ ಯಶಸ್ಸು ಪಡೆದವರ ಪ್ರಮಾಣ ಶೇಕಡಾ 5ಕ್ಕಿಂತ ಕಡಿಮೆ ಇದೆ. ಇದರಲ್ಲಿ ಸೈಕಾಲಜಿ ಪ್ರಮುಖ ಪಾತ್ರ ವಹಿಸುತ್ತದೆ. ಇಲ್ಲಿ ಲಾಭ ನಷ್ಟ ಎರಡನ್ನೂ ಸಮಾನವಾಗಿ ಪರಿಗಣಿಸಬೇಕು. ಯಾವುದನ್ನೂ ಹೃದಯಕ್ಕೆ ತೆಗೆದುಕೊಳ್ಳಬಾರುದು. ಇವತ್ತು ನಷ್ಟವಾಗಿದ್ದನ್ನು ಇಂದಿಗೆ ಬಿಟ್ಟುಬಿಡಬೇಕು. ಇದರ ಬಗ್ಗೆಯೇ ಅಲೋಚನೆ ಮಾಡುತ್ತಾ ಕೂತರೆ ನಾಳಿನ ವಹಿವಾಟಿನ ಮೇಲೆ ಪರಿಣಾಮ ಬೀರುತ್ತದೆ. ವ್ಯಾಪಾರದ ವೃತ್ತಿಯಲ್ಲಿ ಇದು ಒಳ್ಳೆಯ ಬೆಳವಣಿಗೆಯಲ್ಲ.
(4 / 6)
ಲಾಸ್ ಆದರೆ ಕೆಲವರು ಸೇಡಿನ ವ್ಯಾಪಾರ ಮಾಡುತ್ತಾರೆ. ಇದು ಎಲ್ಲಕ್ಕಿಂತ ಅಪಾಯಕಾರಿ. ಸೇಡಿನ ವಹಿವಾಟು ಮಾಡಲು ಹೋದರೆ ಮಾರುಕಟ್ಟೆಗೆ ನಷ್ಟವಾಗುವುದಿಲ್ಲ. ಬದಲಾಗಿ ನಮಗೆ ಹೊಡೆತ ಬೀಳುತ್ತದೆ. ನಷ್ಟವಾದರೂ ಲಾಭ ಗಳಿಸಿದರೂ ಶಾಂತವಾಗಿ ಇರಬೇಕಾಗುತ್ತದೆ. ಇಂಟ್ರಾಡೇ ಟ್ರೇಡಿಂಗ್ ಮಾಡಲು ಆಸಕ್ತಿ ಇರುವವರು ಈ ವಿಷಯವನ್ನು ಗಮನದಲ್ಲಿಟ್ಟುಕೊಳ್ಳಬೇಕು.
(5 / 6)
ಇಂಟ್ರಾಡೇ ಟ್ರೇಡಿಂಗ್‌ನಲ್ಲಿ ಸಕ್ಸಸ್ ಅನ್ನೋದು ನಮ್ಮ ಲೈಫ್‌ಸ್ಟೈಲ್ ಮೇಲೆ ಅವಲಂಬಿಸಿರುತ್ತದೆ. ವ್ಯಾಪಾರ ಮಾಡುವಾಗ ನಮ್ಮ ಬ್ರೈನ್ ಕ್ಲಿಯರ್ ಮತ್ತು ಆ್ಯಕ್ಟಿವ್ ಆಗಿ ಇರಬೇಕು. ರಾತ್ರಿ ಸರಿಯಾದ ನಿದ್ದೆ ಇಲ್ಲದೆ ಹೋದರೆ ಮೆದುಳು ಸರಿಯಾಗಿ ಕೆಲಸ ಮಾಡುವುದಿಲ್ಲ. ಬೆಳ್ಳಗ್ಗೆ ಕೆಲಸ ಸರಿಯಾಗಿ ಮಾಡಲು ಆಗೋದಿಲ್ಲ. ಉತ್ತಮ ಜೀವನಶೈಲಿಯನ್ನು ಅಳವಡಿಸಿಕೊಂಡಿರಬೇಕು.
ಇತರ ಗ್ಯಾಲರಿಗಳು