Cauvery tourism: ವಿವಾದ ಬಿಟ್ಟು ಬಿಡಿ: ಕರುನಾಡಿನ ಕಾವೇರಿ ನಿಸರ್ಗ ತಾಣಗಳನ್ನು ನೋಡಲು ಹೊರಡಿ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Cauvery Tourism: ವಿವಾದ ಬಿಟ್ಟು ಬಿಡಿ: ಕರುನಾಡಿನ ಕಾವೇರಿ ನಿಸರ್ಗ ತಾಣಗಳನ್ನು ನೋಡಲು ಹೊರಡಿ

Cauvery tourism: ವಿವಾದ ಬಿಟ್ಟು ಬಿಡಿ: ಕರುನಾಡಿನ ಕಾವೇರಿ ನಿಸರ್ಗ ತಾಣಗಳನ್ನು ನೋಡಲು ಹೊರಡಿ

  • ಕಾವೇರಿ ತೀರ ಅದೊಂದು ಭಾವಯಾನ. ಅಲ್ಲಿ ಸ್ವಚ್ಚಂದ ಪರಿಸರ, ಧಾರ್ಮಿಕ ತಾಣ, ಜಲಪಾತದಂತಹ ಖುಷಿಕೊಡುವ ತೀರಗಳಿವೆ. ಕಾವೇರಿ ನದಿ ವಿವಾದ ಮರೆತು ಕರ್ನಾಟಕದ ಆರು ಜಿಲ್ಲೆಗಳಲ್ಲಿ 380 ಕಿ.ಮಿ ಉದ್ದ ಹರಿಯುತ್ತಾಳೆ.  ತಲಕಾವೇರಿಯಲ್ಲಿಎಳೆಯಾಗಿ ಹುಟ್ಟಿ ಹೊಗೆನೆಕಲ್‌ನಲ್ಲಿ ಜಲಪಾತವಾಗಿ ಹರಿವ ಕಾವೇರಿ ಪ್ರವಾಸ ಆಹ್ಲಾದಕರ. ಪ್ರವಾಸಿ ದಿನಕ್ಕಾಗಿ ಕಾವೇರಿ ಟೂರ್‌ ಫೋಟೋ ನೋಟ ಇಲ್ಲಿದೆ.

ತಲಕಾವೇರಿ ಭಾಗಮಂಡಲಕೊಡಗಿನ ಕಾವೇರಿ ಉಗಮ ಸ್ಥಳ ತಲಕಾವೇರಿ ಹಾಗೂ ಕಾವೇರಿ ಮೊದಲ ಸಂಗಮ ಭಾಗಮಂಡಲ. ಮಡಿಕೇರಿಯಿಂದ  ಸುಮಾರು 50 ಕಿ.ಮಿ ದೂರದಲ್ಲಿರುವ ಈ ಎರಡೂ ತಾಣಗಳು ಧಾರ್ಮಿಕ ಪ್ರವಾಸಿ ಸ್ಥಳಗಳು. ತಲಕಾವೇರಿಯಲ್ಲಿ ಕಾವೇರಿ ಉಗಮ ಸ್ಥಾನ, ಸುತ್ತಮುತ್ತಲಿನ ಬೆಟ್ಟಗಳ ಸಾಲು, ಹಸಿರು ನೋಟ ಮುದ ನೀಡುತ್ತದೆ. ಭಾಗಮಂಡಲದಲ್ಲಿ ಸಂಗಮ ಸ್ನಾನ, ಭಗಂಡೇಶ್ವರ ದರ್ಶನಕ್ಕೆ ಅವಕಾಶವಿದೆ.
icon

(1 / 12)

ಕಾವೇರಿ ನಿಸರ್ಗ ಧಾಮ-‌ ದುಬಾರೆಕೊಡಗಿನ ಕುಶಾಲನಗರ ಪಟ್ಟಣದ ಸಮೀಪದಲ್ಲಿಯೇ ಇರುವ ಕಾವೇರಿ ನಿಸರ್ಗಧಾಮ ಅರಣ್ಯ ಇಲಾಖೆ ಪ್ರವಾಸಿ ಸ್ಥಳ. ಕಾವೇರಿ ನದಿಯ ಜುಳು ಜುಳು ನಿನಾದದ ನಡುವೆ ಇಲ್ಲಿ ಕಳೆಯುವುದೇ ಚಂದ. ಇಲ್ಲಿಂದ ಇಪ್ಪತ್ತು ಕಿ.ಮಿ ದೂರದಲ್ಲಿರುವುದು ದುಬಾರೆ. ಇಲ್ಲಿಯೂ ಕಾವೇರಿ ನದಿ ನಿಸರ್ಗದ ವಾತಾವರಣ ಚೆನ್ನಾಗಿದೆ. ಪಕ್ಕದಲ್ಲೇ ಆನೆ ಶಿಬಿರ, ರಾಫ್ಟಿಂಗ್‌ ಮುದ ನೀಡುತ್ತವೆ.
icon

(2 / 12)

ರಾಮನಾಥಪುರ ಸಂಗೀತ ಗ್ರಾಮ ಹಾಸನ ಜಿಲಲೆ ಅರಕಲಗೂಡು ಪಟ್ಟಣದಿಂದ ಹತ್ತು ಕಿ.ಮಿ. ದೂರದಲ್ಲಿರುವ ರಾಮನಾಥಪುರ  ಭಾರತದ ಸಂಗೀತ ಗ್ರಾಮವೂ ಹೌದು. ಕಾವೇರಿ ನದಿ ತಟದಲ್ಲಿ ಸಂಗೀತ ನಿನಾದ ಆಲಿಸಬಹುದು. ಗ್ರಾಮದಲ್ಲಿ ನಿರ್ಮಿಸಿರುವ ಸಂಗೀತಕ್ಕೆ ಸಂಬಂಧಿಸಿದ ಮ್ಯೂಸಿಯಂ ಕೂಡ ವೀಕ್ಷಣೆಗೆ ಲಭ್ಯ
icon

(3 / 12)

ಚುಂಚನಕಟ್ಟೆ ಜಲಪಾತಮೈಸೂರು ಜಿಲ್ಲೆಯ ಚುಂಚನಕಟ್ಟೆ ಜಲಪಾತ ರಮಣೀಯ ತಾಣಗಳಲ್ಲೊಂದು. ಮೈಸೂರಿನಿಂದ  60  ಕಿ.ಮೀ ದೂರದಲ್ಲಿರುವ ಚುಂಚನಕಟ್ಟೆಯ ಸುತ್ತಮುತ್ತಲಿನ ಹಸಿರು ಪ್ರದೇಶ, ಶ್ರೀರಾಮದೇಗುಲ ದರ್ಶನಕ್ಕೂ ಅವಕಶವಿದೆ.
icon

(4 / 12)

ಕೃಷ್ಣರಾಜಸಾಗರಮಂಡ್ಯ ಜಿಲ್ಲೆಯ ಪ್ರಸಿದ್ದತಾಣ, ಕಾವೇರಿ ಜಲಾಶಯಕ್ಕೆ ಹೊಂದಿಕೊಂಡಂತೆ ನಿರ್ಮಿಸಿರುವ ಬೃಂದಾವನ ಹೊಸ ರೂಪದೊಂದಿಗೆ ಅಣಿಯಾಗಿದೆ. ಈಗಲೂ ಲಕ್ಷಾಂತರ ಜನರನ್ನು ಆಕರ್ಷಿಸುತ್ತದೆ. 
icon

(5 / 12)

ರಂಗನತಿಟ್ಟು ಪಕ್ಷಿಧಾಮಜಗತ್ತಿನ ಅತಿ ಹೆಚ್ಚು ಪಕ್ಷಿಗಳು ಬರುವ ತಾಣವಿದು. ಕಾವೇರಿ ತೀರದ ಶ್ರೀರಂಗಪಟ್ಟಣ ತಾಲ್ಲೂಕಿನ ಈ ಪಕ್ಷಿಧಾಮ ಹುಡುಕಿಕೊಂಡು ಬರುವ ಹಕ್ಕಿಗಳ ಕಲರವ ಅನುಭವಿಸುವ ಖುಷಿ ಬೇರೆ. ಅಲ್ಲಿ ಅರಣ್ಯ ಇಲಾಖೆ ಬೋಟಿಂಗ್‌ ಸೇವೆ ಒದಗಿಸಿದೆ.
icon

(6 / 12)

ಶ್ರೀರಂಗಪಟ್ಟಣಇಡೀ ಕರ್ನಾಟಕದ ಏಕೈಕ ದ್ವೀಪ ನಗರಿ ಶ್ರೀರಂಗಪಟ್ಟಣ. ಇಲ್ಲಿ ಕಾವೇರಿ ನದಿ ಕವಲೊಡೆದು ಇಡೀ ಊರನ್ನೇ ದ್ವೀಪ ಮಾಡಿದೆ. ಕಾವೇರಿ ತೀರದ ಗೋಸಾಯಿಘಾಟ್‌, ಸಂಗಮ, ನಿಮಿಷಾಂಬ ದೇಗುಲ ವೀಕ್ಷಣೆ ಮಾಡಬಹುದು, ಟಿಪ್ಪುಸುಲ್ತಾನ್‌ ಸಂಬಂಧಿತ ಸ್ಮಾರಕಗಳು, ಶ್ರೀರಂಗನಾಥ ದೇಗುಲ ಕೂಡ ವೀಕ್ಷಿಸಬಹುದು, 
icon

(7 / 12)

ತಲಕಾಡುಮೈಸೂರು ಜಿಲ್ಲೆಯ ತಿ.ನರಸೀಪುರ ತಾಲ್ಲೂಕಿನ ತಲಕಾಡು ಐತಿಹಾಸಿಕ ಪ್ರದೇಶ. ಇಲ್ಲಿನ ಕಾವೇರಿ ತೀರದ ಮರಳಿನ ನಡುವೆ ಆಟವಾಡುವ ಖುಷಿಯೇ ಬೇರೆ. ಅಷ್ಟರಮಟ್ಟಿಗೆ ಕಾವೇರಿ ಇಲ್ಲಿ ಪ್ರವಾಸಿ ಸ್ನೇಹಿ. ಇದೇ ಊರಲ್ಲಿ ಪಂಚಲಿಂಗ ದೇಗುಲಗಳೂ ಕೂಡ ಅತ್ಯಾಕರ್ಷಕ. 
icon

(8 / 12)

ಶಿವನಸಮುದ್ರಕರ್ನಾಟಕದ ವಿದ್ಯುತ್‌ ಘಟಕವನ್ನು ನೀಡಿರುವ ಕಾವೇರಿ ತಾಣವಿದು. ಇಲ್ಲಿನ ಭರಚುಕ್ಕಿ ಹಾಗೂ ಗಗನಚುಕ್ಕಿ ಜಲಪಾತ ವೀಕ್ಷಣೆ ಖುಷಿ ಕೊಡುತ್ತದೆ. ಮಂಡ್ಯ ಹಾಗೂ ಚಾಮರಾಜನಗರ ಜಿಲ್ಲೆಗಳಲ್ಲಿ ಹಂಚಿ ಹೋಗಿರುವ ಎರಡೂ ಜಲಪಾತಗಳು ಹದಿನೈದು ಕಿ.ಮಿ ಅಂತರದಲ್ಲಿವೆ.
icon

(9 / 12)

ಕನಕಪುರ ಸಂಗಮ ಮೇಕೆದಾಟುರಾಮನಗರ ಜಿಲ್ಲೆ ಕನಕಪುರ ತಾಲ್ಲೂಕಿನಲ್ಲಿ ಕಾವೇರಿ ಸಂಗಮ ಪ್ರವಾಸಿಗರಿಗೆ ಹೇಳಿ ಮಾಡಿಸಿದ ತಾಣ. ಕೊರೆದ ಕಲ್ಲುಗಳ ನಡುವೆ ದಾಟುವ ಕಾವೇರಿ ಮೇಕೆದಾಟು ಕೂಡ ಹತ್ತಿರದಲ್ಲೇ ಇದೆ. ಇಲ್ಲಿನ ನಿಸರ್ಗ ರಮಣೀಯ ಸನ್ನಿವೇಶದ ನಡುವೆ ಕಾವೇರಿ ನದಿಯಲ್ಲಿ ದಿನವಿಡೀ ಕುಟುಂಬದವರೊಂದಿಗೆ ಕಳೆಯಬಹುದು. ಬೆಂಗಳೂರಿಗೆ ಸಮೀಪ ಕೂಡ ಇದೆ.
icon

(10 / 12)

ಮುತ್ತತ್ತಿಮಂಡ್ಯ ಜಿಲ್ಲೆ ಮಳವಳ್ಳಿ ತಾಲ್ಲೂಕಿನ ಮುತ್ತತ್ತಿ ಅರಣ್ಯದ ನಡುವೆ ಕಾವೇರಿ ವೀಕ್ಷಣೆ ಮುದ ನೀಡುತ್ತದೆ. ನಿಸರ್ಗದ ನಡುವೆ ಹರಿವ ಕಾವೇರಿ ನದಿ, ಸಮೀಪದಲ್ಲೇ ಆಂಜನೇಯ ದೇಗುಲ. ಡಾ.ರಾಜ್‌ಕುಮಾರ್‌ ಬಹು ಇಷ್ಟಪಡುತ್ತಿದ್ದ ತಾಣವಿದು. ಸಮೀಪದಲ್ಲಿಯೇ ಭೀಮೇಶ್ವರಿ ಮೀನು ಶಿಬಿರವೂ ಇದೆ.
icon

(11 / 12)

ಹೊಗೆನಕಲ್‌ ಫಾಲ್ಸ್‌ಕರ್ನಾಟಕದಲ್ಲಿ ಹರಿಯುವ ಕಾವೇರಿ ನದಿಯ ಕೊನೆಯ ಪ್ರವಾಸಿ ತಾಣವಿದು. ಚಾಮರಾಜನಗರ ಜಿಲ್ಲೆಯ ಹನೂರು ತಾಲ್ಲೂಕಿಗೆ ಹೊಂದಿಕೊಂಡಂತೆ ಇರುವ ಹೊಗೆನೆಕಲ್‌ ಫಾಲ್ಸ್‌ ಪ್ರವಾಸಿಗರ ಸ್ವರ್ಗವೇ ಸರಿ. ಬೋಟಿಂಗ್‌ ನಲ್ಲಿ ಹೋಗಿ ಜಲಪಾತ ವೀಕ್ಷಿಸಿ ಬರುವ ಖುಷಿಯೇ ಬೇರೆ. ಇದು ಬೆಂಗಳೂರಿಗೂ ಸಮೀಪ. ಹತ್ತಿರದಲ್ಲೇ ವೀರಪ್ಪನ್‌ ಅವರಿಂದ ಹತರಾದ ಅರಣ್ಯ ಇಲಾಖೆ ಅಧಿಕಾರಿ ಶ್ರೀನಿವಾಸ್‌ ಸ್ಮಾರಕವೂ ಇದೆ. ಮಲೈಮಹದೇಶ್ವರ ಬೆಟ್ಟವನ್ನೂ ನೋಡಿಕೊಂಡು ಬರಬಹುದು.
icon

(12 / 12)

ಇತರ ಗ್ಯಾಲರಿಗಳು