Chanakya Niti: ಈ 5 ಅಂಶಗಳು ಇಲ್ಲ ಎಂದಾದರೆ ಅಲ್ಲಿ ನೆಲೆಸಬಾರದು ಎಂದಿದ್ದಾರೆ ಆಚಾರ್ಯ ಚಾಣಕ್ಯ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Chanakya Niti: ಈ 5 ಅಂಶಗಳು ಇಲ್ಲ ಎಂದಾದರೆ ಅಲ್ಲಿ ನೆಲೆಸಬಾರದು ಎಂದಿದ್ದಾರೆ ಆಚಾರ್ಯ ಚಾಣಕ್ಯ

Chanakya Niti: ಈ 5 ಅಂಶಗಳು ಇಲ್ಲ ಎಂದಾದರೆ ಅಲ್ಲಿ ನೆಲೆಸಬಾರದು ಎಂದಿದ್ದಾರೆ ಆಚಾರ್ಯ ಚಾಣಕ್ಯ

Chanakya Niti: ಪ್ರತಿಯೊಬ್ಬ ವ್ಯಕ್ತಿಯ ಪ್ರಗತಿಯು ಅವನು ವಾಸಿಸುವ ಸ್ಥಳವನ್ನು ಅವಲಂಬಿಸಿರುತ್ತದೆ. ಹಿಂದೆ ಮುಂದೆ ಆಲೋಚಿಸದೆ ಯಾವುದೇ ಸ್ಥಳಕ್ಕೆ ಹೋಗಿ ನೆಲೆಸಿದರೆ ಅಲ್ಲಿ ಸಮಸ್ಯೆಗಳು ಎದುರಾಗಬಹುದು. ಹೀಗಾಗಿ ಎಲ್ಲೇ ನೆಲೆಸುವುದಾದರೂ 5 ಅಂಶಗಳನ್ನು ಗಮನಿಸಿ. ಆ 5 ಅಂಶಗಳು ಇಲ್ಲ ಎಂದಾದರೆ ಅಲ್ಲಿ ನೆಲೆಸಬಾರದು ಎಂದಿದ್ದಾರೆ ಆಚಾರ್ಯ ಚಾಣಕ್ಯ.

ಪ್ರತಿಯೊಬ್ಬರಿಗೂ ಬದುಕಿನಲ್ಲ ಪ್ರಗತಿ ಬೇಕು. ಹೀಗಾಗಿ ನೆಲೆಯನ್ನು ಆಯ್ಕೆ ಮಾಡುವಾಗ ಕನಿಷ್ಠ 5 ವಿಷಯಗಳನ್ನು ಗಮನಿಸಬೇಕು ಎಂದು ಆಚಾರ್ಯ ಚಾಣಕ್ಯರು ಹೇಳಿದ್ದಾರೆ. 
icon

(1 / 7)

ಎಲ್ಲಿ ಗೌರವವಿಲ್ಲವೋ ಅಲ್ಲಿ ನೆಲೆಸಬಾರದು - ಸರಳವಾಗಿ ಹೇಳಬೇಕು ಎಂದರೆ ನಿಮ್ಮನ್ನು ಗೌರವಿಸದ ಜನರು ಇರುವಲ್ಲಿ, ನಿಮಗೆ ಗೌರವವಿಲ್ಲದ ಸ್ಥಳದಲ್ಲಿ ನೀವು ವಾಸಿಸಬಾರದು, ನೆಲೆಸಬಾರದು.
icon

(2 / 7)

ಉದ್ಯೋಗವಿಲ್ಲದ ಕಡೆ ಇರಬಾರದು- ಉದ್ಯೋಗ ಇಲ್ಲದ ಕಡೆ ಅಥವಾ ಉದ್ಯೋಗಕ್ಕೆ ಅವಕಾಶವೇ ಇಲ್ಲದ ಸ್ಥಳಗಳಲ್ಲಿ ಇರಬಾರದು. ಅಂತಹ ಸ್ಥಳವು ಎಷ್ಟೇ ಸುಂದರವಾಗಿರಲಿ, ಆ ಜಾಗದಲ್ಲಿರಬಾರದು. 
icon

(3 / 7)

ನಿಮ್ಮವರು ಯಾರೂ ಇಲ್ಲದ ಸ್ಥಳ- ನಿಮಗೆ ಯಾವುದೇ ಸಂಬಂಧಿಕರು ಅಥವಾ ಯಾವುದೇ ಸ್ನೇಹಿತರಿಲ್ಲದ ಸ್ಥಳಕ್ಕೂ ಹೋಗಬಾರದು. ಅಲ್ಲಿ ನೆಲೆಕಂಡುಕೊಳ್ಳುವುದು ಕಷ್ಟ. ಹಾಗಾಗಿ ಅಂತಹ ಸ್ಥಳವನ್ನು ಕೂಡಲೇ ತೊರೆಯಬೇಕು.
icon

(4 / 7)

ಎಲ್ಲಿ ಶಿಕ್ಷಣವಿಲ್ಲವೋ ಅಲ್ಲಿ ಇರಬಾರದು - ಎಲ್ಲಿ ಶಿಕ್ಷಣಕ್ಕೆ ಸಂಪನ್ಮೂಲಗಳ ಕೊರತೆಯಿದೆಯೋ, ಅದೇ ರೀತಿ ಎಲ್ಲಿ ಶಿಕ್ಷಣಕ್ಕೆ ಕಡಿಮೆ ಪ್ರಾಮುಖ್ಯ ನೀಡಲಾಗುತ್ತದೆಯೋ ಅಂತಹ ಸ್ಥಳದಲ್ಲಿಇರಬಾರದು. ಕೂಡಲೇ ಆ ಪ್ರದೇಶವನ್ನು ಬಿಡಬೇಕು.
icon

(5 / 7)

ಎಲ್ಲಿ ಗುಣಗಳಿಲ್ಲವೋ ಅಲ್ಲಿ ಇರಬಾರದು - ನೀವು ಕಲಿಯಲು ಯಾವುದೇ ಒಳ್ಳೆಯ ಗುಣಗಳಿಲ್ಲವೋ, ಜನರಿಗೆ ಗುಣಗಳ ಕೊರತೆಯಿದೆಯೋ, ಅಂತಹ ಊರು, ಸ್ಥಳದಲ್ಲಿ ಇರಬಾರದು.
icon

(6 / 7)

ಆಚಾರ್ಯ ಚಾಣಕ್ಯರು ಈ ವಿಷಯವನ್ನು ಶ್ಲೋಕದಲ್ಲಿ ವಿವರಿಸಿರುವುದು ಹೀಗೆ - ಯಸ್ಮಿನ್ ದೇಶೇ ನ ಸಮ್ಮಾನೋ ನ ವೃತ್ತಿರ್ನ ಚ ಬಾನ್ಧವಃ । ನ ಚ ವಿದ್ಯಾಗಮೋಪಯಾಸ್ತಿ ವಶಾಸ್ತ್ರ ನ ಕಾರಯೇತ್ ॥ ಅರ್ಥ - ಗೌರವವಿಲ್ಲದ, ಉದ್ಯೋಗವಿಲ್ಲದ, ಸ್ನೇಹಿತರು ಅಥವಾ ಬಂಧುಗಳಿಲ್ಲದ ಸ್ಥಳಗಳಲ್ಲಿ, ಶಿಕ್ಷಣವಿಲ್ಲದಿರುವಲ್ಲಿ, ಜನರು ಸದ್ಗುಣಿಗಳಲ್ಲದ ಸ್ಥಳಗಳಲ್ಲಿ ಮನೆಯನ್ನು ಕಟ್ಟಬಾರದು. ಅಂತಹ ಸ್ಥಳವನ್ನು ತತ್‌ಕ್ಷಣವೇ ಬಿಡಬೇಕು.
icon

(7 / 7)

ಇತರ ಗ್ಯಾಲರಿಗಳು