ನಿರ್ಣಾಯಕ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ಸೋಲಿಗೆ 5 ಕಾರಣಗಳಿವು; ಮಾಡಿದ ತಪ್ಪಿಗೆ ಸೋಲಿನ ಪಾಠ
- ಐಪಿಎಲ್ 2024ರ ಆವೃತ್ತಿಯ ಇಬ್ಬರು ಫೈನಲಿಸ್ಟ್‌ಗಳು ಯಾರು ಎಂಬುದು ಅಂತಿಮವಾಗಿದೆ. ಆದರೆ, ಗೆಲ್ಲುವ ಫೇವರೆಟ್ ತಂಡಗಳಲ್ಲಿ ಒಂದಾಗಿದ್ದ ರಾಜಸ್ಥಾನ್ ರಾಯಲ್ಸ್ ಟೂರ್ನಿಯಿಂದ ಹೊರಬಿದ್ದಿದೆ. ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಸೋತ ಸಂಜು ಸ್ಯಾಮ್ಸನ್ ಪಡೆ, ಮತ್ತೊಮ್ಮೆ ನಿರಾಶೆ ಅನುಭವಿಸಿದೆ. ಹಾಗಿದ್ದರೆ ಆರ್‌ಆರ್ ಸೋಲಿಗೆ ಕಾರಣಗಳೇನು ಎಂಬುದನ್ನು ನೋಡೋಣ.
- ಐಪಿಎಲ್ 2024ರ ಆವೃತ್ತಿಯ ಇಬ್ಬರು ಫೈನಲಿಸ್ಟ್‌ಗಳು ಯಾರು ಎಂಬುದು ಅಂತಿಮವಾಗಿದೆ. ಆದರೆ, ಗೆಲ್ಲುವ ಫೇವರೆಟ್ ತಂಡಗಳಲ್ಲಿ ಒಂದಾಗಿದ್ದ ರಾಜಸ್ಥಾನ್ ರಾಯಲ್ಸ್ ಟೂರ್ನಿಯಿಂದ ಹೊರಬಿದ್ದಿದೆ. ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಸೋತ ಸಂಜು ಸ್ಯಾಮ್ಸನ್ ಪಡೆ, ಮತ್ತೊಮ್ಮೆ ನಿರಾಶೆ ಅನುಭವಿಸಿದೆ. ಹಾಗಿದ್ದರೆ ಆರ್‌ಆರ್ ಸೋಲಿಗೆ ಕಾರಣಗಳೇನು ಎಂಬುದನ್ನು ನೋಡೋಣ.
(1 / 6)
ಐಪಿಎಲ್ 2024ರ ಎರಡನೇ ಕ್ವಾಲಿಫೈಯರ್ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಸೋತ ನಂತರ ರಾಜಸ್ಥಾನ್ ರಾಯಲ್ಸ್ ತಂಡವು ಟೂರ್ನಿಯಿಂದ ಹೊರಬಿದ್ದಿದೆ. ಮೊದಲು ಬ್ಯಾಟಿಂಗ್ ಮಾಡಿದ ಹೈದರಾಬಾದ್, 9 ವಿಕೆಟ್ ನಷ್ಟಕ್ಕೆ 175 ರನ್ ಗಳಿಸಿತು. ಚೇಸಿಂಗ್ ವೇಳೆ ರಾಜಸ್ಥಾನವು 7 ವಿಕೆಟ್ ನಷ್ಟಕ್ಕೆ 139 ರನ್ ಗಳಿಸಲಷ್ಟೇ ಶಕ್ತವಾಯಿತು. ಪಂದ್ಯವನ್ನು 36 ರನ್ ಗಳಿಂದ ಗೆದ್ದ ಎಸ್‌ಆರ್‌ಎಚ್ ಫೈನಲ್ ತಲುಪಿತು. ನಿರ್ಣಾಯಕ ಕ್ವಾಲಿಫೈಯರ್ ಕದನದಲ್ಲಿ ಆರ್‌ಆರ್ ವೈಫಲ್ಯಕ್ಕೆ 5 ಸಂಭಾವ್ಯ ಕಾರಣಗಳನ್ನು ನೋಡೋಣ.(PTI)
(2 / 6)
ಮೊದಲನೆಯದಾಗಿ, ನಾಯಕ ಸಂಜು ಸ್ಯಾಮ್ಸನ್ ಚೆಪಾಕ್‌ನ ನಿಧಾನಗತಿಯ ಪಿಚ್ ಮತ್ತು ಪರಿಸ್ಥಿತಿಗಳನ್ನು ಅರ್ಥಮಾಡಿಕೊಳ್ಳಲಿಲ್ಲ. ಹೀಗಾಗಿ ಟಾಸ್ ಗೆದ್ದ ಬಳಿಕ ಇಬ್ಬನಿ ಬೀಳುತ್ತದೆ ಎಂದು ಭಾವಿಸಿ ಚೇಸಿಂಗ್ ಆಯ್ಕೆ ಮಾಡಿಕೊಂಡರು. ಆದರೆ, ಇಬ್ಬನಿಯ ಕೊರತೆಯಿಂದಾಗಿ ಹೈದರಾಬಾದ್ ಸ್ಪಿನ್ನರ್‌ಗಳಿಗೆ ಬೌಲಿಂಗ್ ಮಾಡಲು ಕಷ್ಟವಾಗಲಿಲ್ಲ. ಎರಡನೇ ಇನ್ನಿಂಗ್ಸ್‌ನಲ್ಲಿ ರಾಜಸ್ಥಾನ್ ಬ್ಯಾಟರ್‌ಗಳು ಬ್ಯಾಟ್ ಬೀಸಲು ಪರದಾಡಿದರು. ಹೀಗಾಗಿ ರಾಯಲ್ಸ್ ಟಾಸ್ ಲಾಭ ಪಡೆಯಲು ವಿಫಲವಾಯಿತು.(PTI)
(3 / 6)
ಎರಡನೆಯದಾಗಿ, ಎಸ್‌ಆರ್‌ಎಚ್ ಸ್ಫೋಟಕ ಬ್ಯಾಟರ್ ಅನ್ರಿಚ್ ಕ್ಲಾಸೆನ್ ಪರಿಸ್ಥಿತಿಗೆ ಅನುಗುಣವಾಗಿ ತಮ್ಮ ಆಟದ ಶೈಲಿಯನ್ನು ಬದಲಾಯಿಸಿದರು. ವೇಗದ ಆಟದ ಬದಲಿಗೆ ಜವಾಬ್ದಾರಿಯುತ ಆಟವಾಡಿ ವಿಕೆಟ್ ಉಳಿಸಿಕೊಂಡು ರನ್ ಹೆಚ್ಚಿಸಿದರು. ಇದೇ ತಂತ್ರವನ್ನು ಅನುಸರಿಸಲು ಸಂಜು ಸ್ಯಾಮ್ಸನ್ ಮತ್ತು ರಿಯಾನ್ ಪರಾಗ್ ವಿಫಲರಾದರು. ಪವರ್ ಪ್ಲೇನಲ್ಲಿ ಹೈದರಾಬಾದ್ ಬೇಗನೆ ವಿಕೆಟ್ ಕಳೆದುಕೊಂಡಿತು. ಆದರೆ, ಕ್ಲಾಸೆನ್ ತನ್ನ ಆಕ್ರಮಣಕಾರಿ ಮನೋಧರ್ಮವನ್ನು ಬದಿಗಿಟ್ಟು ಆಡಲು ನಿರ್ಧರಿಸಿದನು. ಇದು ಎಸ್‌ಆರ್‌ಎಚ್ ಇನ್ನಿಂಗ್ಸ್ ಸುದೀರ್ಘ ಹೊತ್ತಿನವರೆಗೆ ಮುಂದುವರೆಯಲು ಕಾರಣವಾಯ್ತು. ಅತ್ತ ಸತತ ವಿಕೆಟ್ ಉರುಳುತ್ತಿದ್ದರೂ, ಸ್ಯಾಮ್ಸನ್-ರಿಯಾನ್ ದೊಡ್ಡ ಹೊಡೆತಕ್ಕೆ ಕೈಹಾಕಿ ವಿಕೆಟ್ ಕಳೆದುಕೊಂಡರು.(PTI)
(4 / 6)
ಮೂರನೆಯದಾಗಿ, ಚೆನ್ನೈ ಪಿಚ್ ಸ್ಪಿನ್ನರ್‌ಗಳಿಗೆ ನೆರವಾಗುತ್ತದೆ ಎಂದುದು ಸಾಬೀತಾಗಿದೆ. ಬಹುಶಃ ಎರಡನೇ ಇನ್ನಿಂಗ್ಸ್ ವೇಳೆಗೆ ಸ್ಪಿನ್ನರ್‌ಗಳಿಗೆ ಇಪ್ಪತ್ತೆರಡು ಯಾರ್ಡ್‌ಗಳಿಂದ ಹೆಚ್ಚಿನ ಸಹಾಯ ಸಿಕ್ಕಿತು. ಅಶ್ವಿನ್-ಚಹಾಲ್ ಅವರಂಥ ಇಬ್ಬರು ಅನುಭವಿ ಸ್ಪಿನ್ನರ್‌ಗಳಿದ್ದರೂ ರಾಜಸ್ಥಾನಕ್ಕೆ ಯಾವುದೇ ನೆರವಯ ಸಿಗಲಿಲ್ಲ. ಇವರ ಎಸೆತಗಳಲ್ಲಿ ರನ್ ಹರಿದವು. ವಿಕೆಟ್ ಪಡೆಯಲು ಇವರಿಂದ ಸಾಧ್ಯವಾಗಲಿಲ್ಲ.(RR X)
(5 / 6)
ನಾಲ್ಕನೆಯದಾಗಿ, ನಾಯಕನಾಗಿ ಪ್ಯಾಟ್ ಕಮಿನ್ಸ್ ಅವರ ಪ್ರದರ್ಶನ ಪ್ರಮುಖ ನಿರ್ಧಾರಗಳು ಹೈದರಾಬಾದ್ ಗೆಲ್ಲಲು ಸಹಾಯ ಮಾಡಿತು. ವೇಗಿಗಳು ಉತ್ತಮವಾಗಿ ಬೌಲಿಂಗ್ ಮಾಡುತ್ತಿದ್ದರು. ಇದರ ಹೊರತಾಗಿಯೂ, ಕಮಿನ್ಸ್ ಮಧ್ಯಮ ಓವರ್‌ಗಳಲ್ಲಿ ಶಹಬಾಜ್ ಅಹ್ಮದ್ ಮತ್ತು ಅಭಿಷೇಕ್ ಶರ್ಮಾ ಅವರಿಂದ ಬೌಲಿಂಗ್ ಮಾಡಿಸಿದರು. ಇದು ಪಂದ್ಯದ ದಿಕ್ಕನ್ನೇ ಬದಲಿಸಿತು. ನಿಧಾನಗತಿಯ ಬೌಲರ್‌ಗಳು ಪಂದ್ಯದಲ್ಲಿ ಮೇಲುಗೈ ಸಾಧಿಸಿದರು. ಅದರಲ್ಲೂ ಇಪ್ಯಾಕ್ಟ್ ಪ್ಲೇಯರ್ ಆಗಿ ಶಹಬಾಜ್ ಆಡಿಸಿ ತಂಡ ದೊಡ್ಡ ಲಾಭ ಪಡೆಯಿತು. ಅವರು ಪಂದ್ಯಶ್ರೇಷ್ಠರಾದರು.
(6 / 6)
ಮುಖ್ಯವಾಗಿ, ಹೈದರಾಬಾದ್ ಫೀಲ್ಡಿಂಗ್ ಅನೋಘವಾಗಿತ್ತು. ಅಭಿಷೇಕ್ ಶರ್ಮಾ, ಐಡೆನ್ ಮಾರ್ಕ್ರಮ್ ಮತ್ತು ರಾಹುಲ್ ತ್ರಿಪಾಠಿ ಅದ್ಭುತ ಫೀಲ್ಡಿಂಗ್ ಮಾಡಿದರು. ಯಾವುದೇ ಅವಕಾಶವನ್ನು ಮಿಸ್ ಮಾಡಲಿಲ್ಲ. ಪ್ರಮುಖ ಪಂದ್ಯಗಳಲ್ಲಿ ಗೆಲ್ಲಲು ಬ್ಯಾಟಿಂಗ್, ಬೌಲಿಂಗ್ ಮಾತ್ರವಲ್ಲದೆ ಸಮರ್ಥ ಫೀಲ್ಡಿಂಗ್ ಕೂಡಾ ಬೇಕು. ಆ ಕೆಲಸವನ್ನು ಹೈದರಾಬಾದ್ ಫೀಲ್ಡರ್‌ಗಳು ಸಮರ್ಥವಾಗಿ ಮಾಡಿದರು.(PTI)
ಇತರ ಗ್ಯಾಲರಿಗಳು