ಸಿಗದ ಹಲಾಲ್ ಮಾಂಸ; ವೆಸ್ಟ್ ಇಂಡೀಸ್‌ನಲ್ಲಿ ಬಾಣಸಿಗರಾಗಿ ಬದಲಾದ ಅಫ್ಘಾನಿಸ್ತಾನ ಆಟಗಾರರು!
- ಅಫ್ಘಾನಿಸ್ತಾನ ತಂಡದ ಕ್ರಿಕೆಟಿಗರು ತಮಗೆ ಬೇಕಾದ ಅಡುಗೆಯನ್ನು ತಾವೇ ಮಾಡಿಕೊಂಡಿದ್ದಾರೆ. ಬ್ರಿಡ್ಜ್‌ಟೌನ್‌ನಲ್ಲಿ ಆಟಗಾರರು ತಂಗಿರುವ ಹೋಟೆಲ್‌ನಲ್ಲಿ ಹಲಾಲ್ ಮಾಂಸದ ಲಭ್ಯವುಲ್ಲ. ಅಫ್ಘನ್ ಕ್ರಿಕೆಟಿಗರರಿಗೆ ನಿತ್ಯದ ಆಹಾರ ಮೆನುವಿನಲ್ಲಿ ಹಲಾಲ್ ಮಾಂಸ ಕಡ್ಡಾಯವಾಗಿ ಇರಬೇಕು. ಅದು ಲಭ್ಯವಿಲ್ಲದ ಕಾರಣ ಆಟಗಾರರೇ ತಾತ್ಕಾಲಿಕ ಬಾಣಸಿಗರಾಗಿದ್ದಾರೆ.

(1 / 5)
ಭಾರತದ ವಿರುದ್ಧ ಟಿ20 ವಿಶ್ವಕಪ್‌ನ ಸೂಪರ್ ಎಂಟರ ಪಂದ್ಯಕ್ಕಾಗಿ ಬಾರ್ಬಡೋಸ್ ಸುಂದರವಾದ ಕಡಲತೀರದ ಪಟ್ಟಣಕ್ಕೆ ಬಂದ ಆಫ್ಘನ್ನರಿಗೆ, ಈ ಅನುಭವವಾಗಿದೆ. ಕೆರಿಬಿಯನ್ ನಾಡಿನಲ್ಲಿ ಹಲಾಲ್ ಮಾಂಸ ಲಭ್ಯವಿದೆ. ಆದರೆ ಎಲ್ಲಾ ಹೋಟೆಲ್‌ಗಳು ಮತ್ತು ರೆಸ್ಟೋರೆಂಟ್‌ಗಳಲ್ಲಿ ಈ ಮಾಂಸ ಇಲ್ಲ. ಹೀಗಾಗಿ ಆಟಗಾರರು ಬದಲಿ ದಾರಿ ಹುಡುಕಿದ್ದಾರೆ.(AFP)
(2 / 5)
ನಮ್ಮ ಹೋಟೆಲ್‌ನಲ್ಲಿ ಹಲಾಲ್ ಮಾಂಸ ಲಭ್ಯವಿಲ್ಲ. ಹೀಗಾಗಿ ಕೆಲವೊಮ್ಮೆ ನಾವಾಗಿಯೇ ಅಡುಗೆ ಮಾಡುತ್ತೇವೆ. ಇನ್ನೂ ಕೆಲವೊಮ್ಮೆ ನಾವು ಹೊರಗೆ ಹೋಗಿ ನಮಗೆ ಬೇಕಾದ ಆಹಾರ ಸೇವಿಸುತ್ತೇವೆ, ಎಂದು ಆಟಗಾರರೊಬ್ಬರು ಸುದ್ದಿಸಂಸ್ಥೆ ಪಿಟಿಐಗೆ ತಿಳಿಸಿದ್ದಾರೆ.(AFP)
(3 / 5)
ಭಾರತದಲ್ಲಿ ಕಳೆದ ವರ್ಷ ನಡೆದ ವಿಶ್ವಕಪ್ ವೇಳೆ ಎಲ್ಲವೂ ಪರಿಪೂರ್ಣವಾಗಿತ್ತು. ಆದರೆ, ವೆಸ್ಟ್ ಇಂಡೀಸ್‌ನಲ್ಲಿ ಹಲಾಲ್ ಮಾಂಸ ಒಂದು ಸಮಸ್ಯೆಯಾಗಿದೆ ಎಂದು ಆಟಗಾರರು ಹೇಳಿದ್ದಾರೆ.(AFP)
(4 / 5)
"ಸೇಂಟ್ ಲೂಸಿಯಾದಲ್ಲಿ ಹಲಾಲ್ ಮಾಂಸ ಇತ್ತು. ಆದರೆ ಅದು ಎಲ್ಲಾ ಸ್ಥಳಗಳಲ್ಲಿ ಇಲ್ಲ. ಸ್ನೇಹಿತರೊಬ್ಬರು ಅದನ್ನು ನಮಗೆ ವ್ಯವಸ್ಥೆ ಮಾಡಿದರು. ಮತ್ತೊಮ್ಮೆ ನಾವೇ ಅಡುಗೆ ಮಾಡಿದ್ದೇವೆ ಎಂದು ಆಟಗಾರರೊಬ್ಬರು ಪಿಟಿಐಗೆ ತಿಳಿಸಿದ್ದಾರೆ.(AFP)
ಇತರ ಗ್ಯಾಲರಿಗಳು