ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಬಾಹುಬಲಿ, Rrr ರೇಂಜ್​ಗೆ ನಟಿಸಿದ ಆಸೀಸ್ ಕ್ರಿಕೆಟಿಗ; ಡೇವಿಡ್ ವಾರ್ನರ್ ಜಾಹೀರಾತಿನ ಫನ್ನಿ ಫೋಟೋಗಳು ಇಲ್ಲಿವೆ

ಬಾಹುಬಲಿ, RRR ರೇಂಜ್​ಗೆ ನಟಿಸಿದ ಆಸೀಸ್ ಕ್ರಿಕೆಟಿಗ; ಡೇವಿಡ್ ವಾರ್ನರ್ ಜಾಹೀರಾತಿನ ಫನ್ನಿ ಫೋಟೋಗಳು ಇಲ್ಲಿವೆ

  • David Warner : ನಿರ್ದೇಶಕ ಎಸ್​ಎಸ್​ ರಾಜಮೌಳಿ ಅವರೊಂದಿಗಿನ ಜಾಹೀರಾತು ಶೂಟಿಂಗ್​ನಲ್ಲಿ ಕಾಣಿಸಿಕೊಂಡ ಆಸೀಸ್ ಕ್ರಿಕೆಟಿಗ ಡೇವಿಡ್ ವಾರ್ನರ್​, ಹೊಸ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಫನ್ನಿ ಫೋಟೋಗಳ ಝಲಕ್ ಇಲ್ಲಿದೆ.

ಪ್ರಸ್ತುತ ಐಪಿಎಲ್​​ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಪರ ಆಡುತ್ತಿರುವ ಆಸ್ಟ್ರೇಲಿಯಾ ತಂಡದ ಕ್ರಿಕೆಟಿಗ ಡೇವಿಡ್ ವಾರ್ನರ್, ಎಸ್​ಎಸ್​ ರಾಜಮೌಳಿ ಅವರೊಂದಿಗೆ ನಟಿಸಿದ್ದಾರೆ. ಆದರೆ ಇದು ಸಿನಿಮಾವಲ್ಲ, ಜಾಹೀರಾತು.
icon

(1 / 9)

ಹೌದು, ಇದು ಕ್ರೆಡ್​ಗೆ ಸಂಬಂಧಿಸಿದ ಜಾಹೀರಾತು. ಪ್ಯಾನ್ ಇಂಡಿಯಾ ಡೈರೆಕ್ಟರ್ ಎಸ್​ಎಸ್​ ರಾಜಮೌಳಿ ಅವರೊಂದಿಗೆ ಕಾಣಿಸಿಕೊಂಡಿರುವ ವಾರ್ನರ್ ಬಾಹುಬಲಿ ಮತ್ತು ಆರ್​ಆರ್​​ಆರ್​ ರೇಂಜ್​ಗೆ​ ನಟಿಸಿದ್ದಾರೆ.
icon

(2 / 9)

ಪ್ರಭಾಸ್ ನಟನೆಯ ಬಾಹುಬಲಿ ಪಾತ್ರದಲ್ಲಿ ಕಾಣಿಸಿಕೊಂಡಿರುವ ಆಸೀಸ್ ಕ್ರಿಕೆಟಿಗ ಸಖತ್ ಫನ್ನಿಯಾಗಿ ನಟಿಸಿದ್ದಾರೆ. ಇಲ್ಲೂ ರಾಜಮೌಳಿಯೇ ನಿರ್ದೇಶಕನಾಗಿದ್ದು, ವಾರ್ನರ್​ರಿಂದ ನಟನೆ ಮಾಡಿಸುವಷ್ಟರಲ್ಲಿ ಸುಸ್ತಾಗಿದ್ದಾರೆ.
icon

(3 / 9)

ಜಾಹೀರಾತಿಗೆ ಸಂಬಂಧಿಸಿದ ಫೋಟೋಗಳನ್ನು ತಮ್ಮ ಇನ್​ಸ್ಟಾಗ್ರಾಂನಲ್ಲಿ ಡೇವಿಡ್ ವಾರ್ನರ್ ಹಂಚಿಕೊಂಡಿದ್ದಾರೆ. ಅದಕ್ಕೂ ಮುನ್ನ ಕ್ರೆಡ್ ಜಾಹೀರಾತಿನ ವಿಡಿಯೋ ಹಂಚಿಕೊಂಡಿದ್ದಾರೆ.
icon

(4 / 9)

ಜಾಹೀರಾತು ವಿಡಿಯೋ ನೋಡಿದ ಎಲ್ಲರೂ ಕೂಡ ನಕ್ಕು ನಕ್ಕು ಸುಸ್ತಾಗಿದ್ದಾರೆ. ವಾರ್ನರ್‌ ಮಾತುಗಳು ತುಂಬಾ ಫನ್ನಿಯಾಗಿದ್ದು, ಬಾಹುಬಲಿ ಸಿನಿಮಾವನ್ನು ಹೋಲುವ ಹಲವು ದೃಶ್ಯಗಳು ಇವೆ.
icon

(5 / 9)

ಈ ಜಾಹೀರಾತು ವಿಡಿಯೋವನ್ನು ವಾರ್ನರ್​ ತನ್ನ ಸಾಮಾಜಿಕ ಖಾತೆಯಲ್ಲಿ ಹಂಚಿಕೊಂಡಿದ್ದು, 'ನನ್ನ ಜೀವನದ ದೀರ್ಘವಾದ ಶೂಟಿಂಗ್‌' ಎಂದು ಕ್ಯಾಪ್ಷನ್‌ ಬರೆದಿದ್ದಾರೆ. ಈ ವಿಡಿಯೋಗೆ "ಹಿಲರಿಯಸ್‌" "ಸಖತ್‌ ಕಾಮಿಡಿ" ಎಂದೆಲ್ಲ ನೆಟ್ಟಿಗರು ಪ್ರತಿಕ್ರಿಯಿಸಿದ್ದಾರೆ.
icon

(6 / 9)

ಸದ್ಯ ತಾನು ಹಂಚಿಕೊಂಡಿರುವ ಫೋಟೋಗಳ ಪೈಕಿ ಭಾರತದ ಆಧಾರ್​ ಕಾರ್ಡ್​ ಅನ್ನು ಸಿದ್ಧಪಡಿಸಿಕೊಂಡಿದ್ದಾರೆ.
icon

(7 / 9)

ಈ ಬಗ್ಗೆ ಕ್ಯಾಪ್ಶನ್ ಬರೆದಿರುವ ವಾರ್ನರ್, ಭಾರತದಲ್ಲಿ ಆಡುವ ಮೂಲಕ ನನಗೆ ಅನೇಕ ವಿಷಯಗಳನ್ನು ಪರಿಚಯಿಸಿದೆ. ನಾನು ಹೆಚ್ಚು ಮೆಚ್ಚುವುದೆಂದರೆ, ಸಿನಿಮಾ. ಪುಷ್ಪ, ಬಾಹುಬಲಿ, RRR...ಈ ಸಿನಿಮಾಗಳನ್ನು ನಾನು ಎಷ್ಟು ಬಾರಿ ವೀಕ್ಷಿಸಿದ್ದೇನೆ ಎಂಬುದಕ್ಕೆ ಲೆಕ್ಕವೇ ಇಲ್ಲ. ಆದ್ದರಿಂದ ನನ್ನ ನೆಚ್ಚಿನ ಚಲನಚಿತ್ರಗಳಿಗೆ ಗೌರವ ಸಲ್ಲಿಸುವ ಅವಕಾಶವನ್ನು ಪಡೆಯುವ ಸಿಕ್ಕಿದ್ದಕ್ಕೆ ಧನ್ಯನಾದೆ. ಅದಕ್ಕಾಗಿ ಎಸ್​ಎಸ್ ರಾಜಮೌಳಿ ಮತ್ತು ಕ್ರೆಡ್​ ಕ್ಲಬ್​ಗೆ ಧನ್ಯವಾದ ಎಂದಿದ್ದಾರೆ.
icon

(8 / 9)

ಪ್ರಸ್ತುತ ಐಪಿಎಲ್​​ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಪರ ಆಡುತ್ತಿರುವ ಡೇವಿಡ್ ವಾರ್ನರ್​ ನಿರೀಕ್ಷಿತ ಪ್ರದರ್ಶನ ನೀಡುವಲ್ಲಿ ವಿಫಲರಾಗಿದ್ದಾರೆ. 6 ಪಂದ್ಯಗಳಲ್ಲಿ ಕೇವಲ 166 ರನ್ ಮಾತ್ರ ಗಳಿಸಿದ್ದಾರೆ. ಒಂದು ಪಂದ್ಯದಲ್ಲೂ ದೊಡ್ಡ ಇನ್ನಿಂಗ್ಸ್​ ಕಟ್ಟಲಿಲ್ಲ.
icon

(9 / 9)

IPL_Entry_Point

ಇತರ ಗ್ಯಾಲರಿಗಳು