ಐಪಿಎಲ್ ಮೆಗಾ ಹರಾಜು: ಪಂತ್-ರಾಹುಲ್ ಮಾತ್ರವಲ್ಲ, ಈ 7 ಯುವ ಆಟಗಾರರ ಖರೀದಿಗೂ ಮುಗಿಬೀಳಲಿವೆ ಫ್ರಾಂಚೈಸಿಗಳು
- ಐಪಿಎಲ್ 2025ರ ಮೆಗಾ ಹರಾಜಿನಲ್ಲಿ ಎಲ್ಲಾ ತಂಡಗಳು ಕೆಎಲ್ ರಾಹುಲ್, ರಿಷಭ್ ಪಂತ್, ಶ್ರೇಯಸ್ ಅಯ್ಯರ್ ಮೇಲೆ ಕಣ್ಣಿಟ್ಟಿವೆ. ಇವರ ಹೊರತಾಗಿ ಫ್ರಾಂಚೈಸಿಗಳು ಅನೇಕ ಪ್ರತಿಭಾವಂತ ಆಟಗಾರರ ಖರೀದಿಗೆ ಲೆಕ್ಕಾಚಾರ ಹಾಕುತ್ತಿವೆ. ಈ ಆಟಗಾರರಿಗೆ ಬಿಡ್ ಮಾಡಲು ತಂಡಗಳು ಹಣದ ಮಳೆ ಸುರಿಸುವುದು ಖಚಿತವಾಗಿದೆ. ಅಂಥಾ ಯುವ ಆಟಗಾರರು ಯಾರು ನೋಡೋಣ.
- ಐಪಿಎಲ್ 2025ರ ಮೆಗಾ ಹರಾಜಿನಲ್ಲಿ ಎಲ್ಲಾ ತಂಡಗಳು ಕೆಎಲ್ ರಾಹುಲ್, ರಿಷಭ್ ಪಂತ್, ಶ್ರೇಯಸ್ ಅಯ್ಯರ್ ಮೇಲೆ ಕಣ್ಣಿಟ್ಟಿವೆ. ಇವರ ಹೊರತಾಗಿ ಫ್ರಾಂಚೈಸಿಗಳು ಅನೇಕ ಪ್ರತಿಭಾವಂತ ಆಟಗಾರರ ಖರೀದಿಗೆ ಲೆಕ್ಕಾಚಾರ ಹಾಕುತ್ತಿವೆ. ಈ ಆಟಗಾರರಿಗೆ ಬಿಡ್ ಮಾಡಲು ತಂಡಗಳು ಹಣದ ಮಳೆ ಸುರಿಸುವುದು ಖಚಿತವಾಗಿದೆ. ಅಂಥಾ ಯುವ ಆಟಗಾರರು ಯಾರು ನೋಡೋಣ.
(1 / 8)
ರಿಷಭ್ ಪಂತ್, ಶ್ರೇಯಸ್ ಅಯ್ಯರ್, ಅರ್ಷದೀಪ್ ಸಿಂಗ್ ಅವರಂಥಾ ಆಟಗಾರರನ್ನು ಹೊರತುಪಡಿಸಿ, ಕೆಲವೊಬ್ಬ ಕ್ರಿಕೆಟಿಗರ ಖರೀದಿಗೆ ಫ್ರಾಂಚೈಸಿಗಳು ಮುಂದಾಗಿವೆ. ಈ ಯುವ ಆಟಗಾರರ ಮೇಲೆ ತಂಡಗಳು ದುಬಾರಿ ಹಣ ಸುರಿಯಬಹುದು.
(2 / 8)
ಇಂಗ್ಲೆಂಡ್ ಜೇಕಬ್ ಬೆತೆಲ್ ಈ ಪಟ್ಟಿಯಲ್ಲಿ ಅಚ್ಚರಿಯ ಸ್ಥಾನ ಪಡೆದಿದ್ದಾರೆ. ಜೇಕಬ್ ಬೆತೆಲ್ ಇತ್ತೀಚೆಗೆ ಇಂಗ್ಲೆಂಡ್ ಟಿ20 ತಂಡದಲ್ಲಿ ಸ್ಥಿರ ಪ್ರದರ್ಶನ ನೀಡಿದ್ದಾರೆ. ಯುವ ಆಟಗಾರ ತಮ್ಮ ಅಂತಾರಾಷ್ಟ್ರೀಯ ವೃತ್ತಿಜೀವನದಲ್ಲಿ 57.66ರ ಸರಾಸರಿಯಲ್ಲಿ 167ಕ್ಕೂ ಹೆಚ್ಚು ಸ್ಟ್ರೈಕ್ ರೇಟ್‌ನಲ್ಲಿ ರನ್ ಗಳಿಸಿದ್ದಾರೆ. ಈ ಯುವ ಬ್ರಿಟಿಷ್ ತಾರೆಗಾಗಿ ಫ್ರಾಂಚೈಸಿಗಳು ಮುಗಿ ಬೀಳಬಹುದು.(X)
(3 / 8)
ಭಾರತದ ಯುವ ಬೌಲರ್ ಪ್ರಸಿದ್ಧ್ ಕೃಷ್ಣ ಕೂಡ ಈ ಪಟ್ಟಿಯಲ್ಲಿದ್ದಾರೆ. ಗಾಯದಿಂದಾಗಿ ಅವರು ದೀರ್ಘಕಾಲ ಮೈದಾನದಿಂದ ಹೊರಗುಳಿದಿದ್ದರು. ಆದರೆ ಈಗ ಅವರು ಫಿಟ್ ಆಗಿದ್ದಾರೆ. ದೇಶೀಯ ಪಂದ್ಯಾವಳಿಗಳಲ್ಲಿ ಉತ್ತಮ ಫಾರ್ಮ್ ಕಾಯ್ದುಕೊಂಡಿದ್ದಾರೆ. ಕಗಿಸೊ ರಬಾಡ ಮತ್ತು ಮಿಚೆಲ್ ಸ್ಟಾರ್ಕ್ ಅವರಂತಹ ಪ್ರಬಲ ಆಟಗಾರರ ನಡುವೆ, ಪ್ರಸಿದ್ಧ್ ಕೃಷ್ಣ ಅವರನ್ನು ಹರಾಜಿನಲ್ಲಿ ಖರೀದಿಸಲು ಫ್ರಾಂಚೈಸಿಗಳು ಮುಂದಾಗಬಹುದು.(X)
(4 / 8)
ಇತ್ತೀಚೆಗೆ ಮುಕ್ತಾಯಗೊಂಡ ಭಾರತ ಮತ್ತು ದಕ್ಷಿಣ ಆಫ್ರಿಕಾ ಸರಣಿಯಲ್ಲಿ ದಕ್ಷಿಣ ಆಫ್ರಿಕಾ ಸೋತರೂ, ಮಾರ್ಕೊ ಜಾನ್ಸೆನ್ ಉತ್ತಮ ಪ್ರದರ್ಶನ ನೀಡಿದ್ದರು. ಬೌಲಿಂಗ್ ಜೊತೆಗೆ ಬ್ಯಾಟಿಂಗ್‌ನಲ್ಲೂ ಅಬ್ಬರಿಸಿದರು.(X)
(5 / 8)
ಸನ್‌ರೈಸರ್ಸ್ ಹೈದರಾಬಾದ್ ತಂಡವು ಅತ್ಯುತ್ತಮ ಬೌಲರ್‌ಗಳಲ್ಲಿ ಒಬ್ಬರಾದ ಟಿ ನಟರಾಜನ್ ಅವರನ್ನು ಬಿಡುಗಡೆ ಮಾಡಿದೆ. ಇವರಿಗೆ ಬೇಡಿಕೆ ಹೆಚ್ಚಿದೆ. ಟಿ ನಟರಾಜನ್ ಅತ್ಯುತ್ತಮ ಐಪಿಎಲ್ ಬೌಲರ್. ಟಿ20 ಕ್ರಿಕೆಟ್ ಮೇಲೆ ನಟರಾಜನ್ ಅವರ ಪ್ರಭಾವವು ಫ್ರಾಂಚೈಸಿಗಳಿಗೆ ಚಿರಪರಿಚಿತವಾಗಿದೆ. ಹೀಗಾಗಿ ಎಲ್ಲಾ ತಂಡಗಳ ಆಯ್ಕೆ ಪಟ್ಟಿಯಲ್ಲಿ ನಟರಾಜನ್ ಸ್ಥಾನ ಪಡೆದಿದ್ದಾರೆ.(X)
(6 / 8)
ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ಮಾಜಿ ಆಲ್‌ರೌಂಡರ್ ವೆಂಕಟೇಶ್ ಅಯ್ಯರ್ ಮೇಲೂ ಎಲ್ಲರ ಕಣ್ಣು ನೆಟ್ಟಿದೆ. ಇದಕ್ಕೆ ಮುಖ್ಯ ಕಾರಣ ಅವರ ಸ್ಫೋಟಕ ಬ್ಯಾಟಿಂಗ್. ಅಗ್ರ ಕ್ರಮಾಂಕವಾಗಿರಲಿ ಅಥವಾ ಮಧ್ಯಮ ಕ್ರಮಾಂಕವಾಗಿರಲಿ, ವೆಂಕಟೇಶ್ ಅಯ್ಯರ್ ಅವರ ಸ್ಫೋಟಕ ಬ್ಯಾಟಿಂಗ್ ಮಾಡಬಲ್ಲರು. ಹೀಗಾಗಿಯೇ ಮುಂಬರುವ ಹರಾಜಿನಲ್ಲಿ ವೆಂಕಟೇಶ್ ಅಯ್ಯರ್ ಖರೀದಿಗೆ ಹಲವು ಫ್ರಾಂಚೈಸಿಗಳು ಎದುರು ನೋಡುತ್ತಿವೆ.(X)
(7 / 8)
ವಿಲ್ ಜ್ಯಾಕ್ಸ್: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿ ಕಳೆದ ಆವೃತ್ತಿಯಲ್ಲಿ ಅಬ್ಬರಿಸಿದ ಆಟಗಾರ ವಿಲ್ ಜಾಕ್ಸ್. ಗುಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯದಲ್ಲಿ ಸ್ಫೋಟಕ ಶತಕ ಸಿಡಿಸಿ ಮಿಂಚಿದ್ದರು. ಆರ್‌ಸಿಬಿ ತಂಡವು ಅವರನ್ನು ರಿಲೀಸ್ ಮಾಡಿದ್ದು, ಈ ಬಾರಿ ಬೆಂಗಳೂರು ಮಾತ್ರವಲ್ಲದೆ ವಿವಿಧ ತಂಡಗಳು ಇವರ ಖರೀದಿಗೆ ಮುಂದಾಗಬಹುದು.(AP)
ಇತರ ಗ್ಯಾಲರಿಗಳು