ಮೊದಲ ಎಸೆತದಲ್ಲೇ ವಿಕೆಟ್ ಉರುಳಿಸಿ ಅಪರೂಪದ ದಾಖಲೆ ನಿರ್ಮಿಸಿದ ಅರ್ಷದೀಪ್; ಈ ಸಾಧನೆಗೈದ ವಿಶ್ವದ ನಾಲ್ಕನೇ ಆಟಗಾರ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಮೊದಲ ಎಸೆತದಲ್ಲೇ ವಿಕೆಟ್ ಉರುಳಿಸಿ ಅಪರೂಪದ ದಾಖಲೆ ನಿರ್ಮಿಸಿದ ಅರ್ಷದೀಪ್; ಈ ಸಾಧನೆಗೈದ ವಿಶ್ವದ ನಾಲ್ಕನೇ ಆಟಗಾರ

ಮೊದಲ ಎಸೆತದಲ್ಲೇ ವಿಕೆಟ್ ಉರುಳಿಸಿ ಅಪರೂಪದ ದಾಖಲೆ ನಿರ್ಮಿಸಿದ ಅರ್ಷದೀಪ್; ಈ ಸಾಧನೆಗೈದ ವಿಶ್ವದ ನಾಲ್ಕನೇ ಆಟಗಾರ

  • Arshdeep Singh Record: ವೇಗಿ ಅರ್ಷದೀಪ್ ಸಿಂಗ್ ಟಿ20 ವಿಶ್ವಕಪ್​ನಲ್ಲಿ ಟೀಮ್ ಇಂಡಿಯಾ ಪರ ಅಪರೂಪದ ದಾಖಲೆ ನಿರ್ಮಿಸಿದ್ದಾರೆ. ಅಲ್ಲದೆ, ವಿಶ್ವ ಕ್ರಿಕೆಟ್​​ನಲ್ಲಿ ಈ ಸಾಧನೆಗೈದ ನಾಲ್ಕನೇ ಬೌಲರ್​​ ಎನಿಸಿದ್ದಾರೆ.

ಅರ್ಷದೀಪ್ ಸಿಂಗ್​ ಟಿ20 ಕ್ರಿಕೆಟ್​​ನಲ್ಲಿ ಭಾರತದ ಪರ ಹೊಸ ಇತಿಹಾಸ ನಿರ್ಮಿಸಿದ್ದಾರೆ. ಅಲ್ಲದೆ, ಈ ಎಡಗೈ ವೇಗಿ ಚುಟುಕು ವಿಶ್ವಕಪ್​​ನಲ್ಲಿ​​ ಅಪರೂಪದ ಪಟ್ಟಿಗೂ ಹೆಸರು ಸೇರ್ಪಡೆಗೊಳಿಸಿದ್ದಾರೆ. ನ್ಯೂಯಾರ್ಕ್​​ನ ನಸ್ಸೌ ಕೌಂಟಿ ಕ್ರಿಕೆಟ್ ಮೈದಾನದಲ್ಲಿ ನಡೆದ ಯುನೈಟೆಡ್ ಸ್ಟೇಟ್ಸ್ ವಿರುದ್ಧದ ಮೊದಲ ಎಸೆತದಲ್ಲೇ ವಿಕೆಟ್ ಪಡೆದು ಅಪರೂಪದ ದಾಖಲೆ ನಿರ್ಮಿಸಿದ್ದಾರೆ.
icon

(1 / 6)

ಜೂನ್ 12ರ ಬುಧವಾರ ಅಮೆರಿಕ ವಿರುದ್ಧ ಭಾರತದ ನಾಯಕ ರೋಹಿತ್​ ಶರ್ಮಾ, ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡರು. ಮೊದಲ ಓವರ್​ನಲ್ಲೇ ಅರ್ಷದೀಪ್​ ಸಿಂಗ್ ಅವರು, ಶಯಾನ್ ಜಹಾಂಗೀರ್ ಅವರನ್ನು ಔಟ್ ಮಾಡಿದರು.
icon

(2 / 6)

ಈ ಮೂಲಕ ಅರ್ಷದೀಪ್ ಟಿ20 ಕ್ರಿಕೆಟ್​​ನಲ್ಲಿ ಮೊದಲ ಎಸೆತದಲ್ಲಿ ವಿಕೆಟ್ ಪಡೆದ ಮೊದಲ ಭಾರತೀಯ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಇನ್ನಿಂಗ್ಸ್ ಆರಂಭದ ಮೊದಲ ಎಸೆತದಲ್ಲೇ ವಿಕೆಟ್ ಪಡೆಯುವ ಮೂಲಕ ಅಪರೂಪದ ದಾಖಲೆ ಬರೆದರು.
icon

(3 / 6)

ಮತ್ತೊಂದೆಡೆ, ಅರ್ಷದೀಪ್ ಟಿ20 ವಿಶ್ವಕಪ್​ ಇತಿಹಾಸದಲ್ಲಿ ಪಂದ್ಯದ ಮೊದಲ ಎಸೆತದಲ್ಲಿ ವಿಕೆಟ್ ಪಡೆದ ನಾಲ್ಕನೇ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು.
icon

(4 / 6)

ಬಾಂಗ್ಲಾದೇಶದ ಮಶ್ರಫೆ ಮೊರ್ತಾಜಾ ಮೊದಲ ಬಾರಿಗೆ ಈ ಸಾಧನೆ ಮಾಡಿದ್ದಾರೆ. 2014ರಲ್ಲಿ ಬಾಂಗ್ಲಾ ವಿರುದ್ಧದ ಪಂದ್ಯದ ಮೊದಲ ಎಸೆತದಲ್ಲಿ ವಿಕೆಟ್ ಪಡೆದಿದ್ದರು. ಅಫ್ಘಾನಿಸ್ತಾನದ ಶಪೂರ್ ಝದ್ರನ್ ಕೂಡ ಅದೇ ವಿಶ್ವಕಪ್​​ನಲ್ಲಿ ಈ ಸಾಧನೆ ಮಾಡಿದ್ದರು.
icon

(5 / 6)

ನಮೀಬಿಯಾದ ರೂಬೆನ್ ಟ್ರಂಪ್ಲೆಮನ್ ಈ ಸಾಧನೆಗೈದ ಮೂರನೇ ಬೌಲರ್​​ ಆಗಿದ್ದಾರೆ. 2021ರ ವಿಶ್ವಕಪ್​​ನಲ್ಲಿ ಸ್ಕಾಟ್ಲೆಂಡ್ ವಿರುದ್ಧದ ಪಂದ್ಯದ ಮೊದಲ ಎಸೆತದಲ್ಲಿ ವಿಕೆಟ್ ಪಡೆದಿದ್ದರು. ಅಮೆರಿಕ ವಿರುದ್ಧದ ಪಂದ್ಯದ ಮೊದಲ ಎಸೆತದಲ್ಲಿ ವಿಕೆಟ್ ಪಡೆದ ಮೊದಲ ಬ್ಯಾಟ್ಸ್​ಮನ್​​ ಎಂಬ ಹೆಗ್ಗಳಿಕೆಗೆ ಪಾತ್ರರಾದರು.
icon

(6 / 6)

ಇತರ ಗ್ಯಾಲರಿಗಳು