ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Ipl 2025 Retention: ಆರ್​ಸಿಬಿ ಸೇರಿದಂತೆ 10 ತಂಡಗಳು ಉಳಿಸಿಕೊಳ್ಳುವ ಆಟಗಾರರ ಸಂಪೂರ್ಣ ಪಟ್ಟಿ ಹೀಗಿದೆ

IPL 2025 Retention: ಆರ್​ಸಿಬಿ ಸೇರಿದಂತೆ 10 ತಂಡಗಳು ಉಳಿಸಿಕೊಳ್ಳುವ ಆಟಗಾರರ ಸಂಪೂರ್ಣ ಪಟ್ಟಿ ಹೀಗಿದೆ

  • IPL 2025 Retention: ಪ್ರತಿ ಫ್ರಾಂಚೈಸಿ ನಾಲ್ವರು ಆಟಗಾರರನ್ನು ಉಳಿಸಿಕೊಳ್ಳುವ ನಿಯಮ ಜಾರಿಗೆ ತರಲು ಬಿಸಿಸಿಐ ಚಿಂತಿಸುತ್ತಿದೆ. ಈ ನಿಯಮದಂತೆ ಯಾವ ತಂಡ, ಯಾರನ್ನು ಉಳಿಸಿಕೊಳ್ಳೋ ಸಾಧ್ಯತೆ ಇದೆ ಎಂಬುದನ್ನು ನೋಡೋಣ.

ಐಪಿಎಲ್ 2024 ಮುಗಿದಿದೆ. ಕೊಲ್ಕತ್ತಾ ನೈಟ್ ರೈಡರ್ಸ್ ತಂಡ 3ನೇ ಬಾರಿಗೆ ಐಪಿಎಲ್ ಕಿರೀಟ ಮುಡಿಗೇರಿಸಿಕೊಂಡಿದೆ. ಬಿಸಿಸಿಐ 3+1 ರಿಟೆನ್ಶನ್ ನಿಯಮದ ಆಧಾರದಲ್ಲಿ ಆಟಗಾರರನ್ನು ಉಳಿಸಿಕೊಳ್ಳಲು ಯೋಚಿಸಿದೆ. ಈ ಬೆನ್ನಲ್ಲೇ ಯಾವ ತಂಡ ಎಷ್ಟು ಆಟಗಾರರನ್ನು ಉಳಿಸಿಕೊಳ್ಳಲಿದೆ, ಫ್ರಾಂಚೈಸಿ ಯಾರಿಗೆಲ್ಲಾ ಗೇಟ್​ಪಾಸ್ ನೀಡಲಿವೆ ಎಂಬುದರ ವಿವರ ಇಲ್ಲಿದೆ.
icon

(1 / 11)

ಐಪಿಎಲ್ 2024 ಮುಗಿದಿದೆ. ಕೊಲ್ಕತ್ತಾ ನೈಟ್ ರೈಡರ್ಸ್ ತಂಡ 3ನೇ ಬಾರಿಗೆ ಐಪಿಎಲ್ ಕಿರೀಟ ಮುಡಿಗೇರಿಸಿಕೊಂಡಿದೆ. ಬಿಸಿಸಿಐ 3+1 ರಿಟೆನ್ಶನ್ ನಿಯಮದ ಆಧಾರದಲ್ಲಿ ಆಟಗಾರರನ್ನು ಉಳಿಸಿಕೊಳ್ಳಲು ಯೋಚಿಸಿದೆ. ಈ ಬೆನ್ನಲ್ಲೇ ಯಾವ ತಂಡ ಎಷ್ಟು ಆಟಗಾರರನ್ನು ಉಳಿಸಿಕೊಳ್ಳಲಿದೆ, ಫ್ರಾಂಚೈಸಿ ಯಾರಿಗೆಲ್ಲಾ ಗೇಟ್​ಪಾಸ್ ನೀಡಲಿವೆ ಎಂಬುದರ ವಿವರ ಇಲ್ಲಿದೆ.

ಕೋಲ್ಕತಾ ನೈಟ್ ರೈಡರ್ಸ್ ನಾಯಕ ಶ್ರೇಯಸ್ ಅಯ್ಯರ್ ಮುಂಬರುವ ಋತುವಿನಲ್ಲಿ ಟೀಮ್ ಮ್ಯಾನೇಜ್ಮೆಂಟ್ ಉಳಿಸಿಕೊಳ್ಳಲು ಬಯಸುವ ನಾಲ್ಕು ಆಟಗಾರರಲ್ಲಿ ಒಬ್ಬರು. ಅಲ್ಲದೆ, ರಿಂಕು ಸಿಂಗ್, ಸುನಿಲ್ ನರೈನ್, ಆಂಡ್ರೆ ರಸೆಲ್ ಕೂಡ ಈ ಪಟ್ಟಿಯಲ್ಲಿದ್ದಾರೆ. ಆದರೆ ರಿಂಕು ಸಿಂಗ್​ ಮತ್ತು ವೆಂಕಟೇಶ್​ ಅಯ್ಯರ್​ ಇಬ್ಬರಲ್ಲಿ ಒಬ್ಬರನ್ನು ಉಳಿಸಿಕೊಳ್ಳೋ ನಿರೀಕ್ಷೆ ಇದೆ.
icon

(2 / 11)

ಕೋಲ್ಕತಾ ನೈಟ್ ರೈಡರ್ಸ್ ನಾಯಕ ಶ್ರೇಯಸ್ ಅಯ್ಯರ್ ಮುಂಬರುವ ಋತುವಿನಲ್ಲಿ ಟೀಮ್ ಮ್ಯಾನೇಜ್ಮೆಂಟ್ ಉಳಿಸಿಕೊಳ್ಳಲು ಬಯಸುವ ನಾಲ್ಕು ಆಟಗಾರರಲ್ಲಿ ಒಬ್ಬರು. ಅಲ್ಲದೆ, ರಿಂಕು ಸಿಂಗ್, ಸುನಿಲ್ ನರೈನ್, ಆಂಡ್ರೆ ರಸೆಲ್ ಕೂಡ ಈ ಪಟ್ಟಿಯಲ್ಲಿದ್ದಾರೆ. ಆದರೆ ರಿಂಕು ಸಿಂಗ್​ ಮತ್ತು ವೆಂಕಟೇಶ್​ ಅಯ್ಯರ್​ ಇಬ್ಬರಲ್ಲಿ ಒಬ್ಬರನ್ನು ಉಳಿಸಿಕೊಳ್ಳೋ ನಿರೀಕ್ಷೆ ಇದೆ.(ANI)

ದುಬಾರಿ ಆಟಗಾರ ಪ್ಯಾಟ್ ಕಮಿನ್ಸ್ ಉಳಿಸಿಕೊಳ್ಳಲು ಸನ್​ರೈಸರ್ಸ್ ಹೈದರಾಬಾದ್ ಬಯಸಿದೆ. ಅಭಿಷೇಕ್ ಶರ್ಮಾ ಮತ್ತು ನಿತೀಶ್ ರೆಡ್ಡಿ ಕೂಡ ಸೇರಿದ್ದಾರೆ. ಹಾಗೆಯೇ ಭುವನೇಶ್ವರ್ ಕುಮಾರ್​ ಮತ್ತು ಟಿ ನಟರಾಜನ್ ಇಬ್ಬರನ್ನೂ ಉಳಿಸಿಕೊಳ್ಳೋಕೆ ಲೆಕ್ಕಾಚಾರದಲ್ಲಿದೆ. ಯಾರಿಗೆ ಲಕ್ ಕುದುರುತ್ತದೆ ಎಂಬುದನ್ನು ಕಾದುನೋಡಬೇಕಿದೆ. 
icon

(3 / 11)

ದುಬಾರಿ ಆಟಗಾರ ಪ್ಯಾಟ್ ಕಮಿನ್ಸ್ ಉಳಿಸಿಕೊಳ್ಳಲು ಸನ್​ರೈಸರ್ಸ್ ಹೈದರಾಬಾದ್ ಬಯಸಿದೆ. ಅಭಿಷೇಕ್ ಶರ್ಮಾ ಮತ್ತು ನಿತೀಶ್ ರೆಡ್ಡಿ ಕೂಡ ಸೇರಿದ್ದಾರೆ. ಹಾಗೆಯೇ ಭುವನೇಶ್ವರ್ ಕುಮಾರ್​ ಮತ್ತು ಟಿ ನಟರಾಜನ್ ಇಬ್ಬರನ್ನೂ ಉಳಿಸಿಕೊಳ್ಳೋಕೆ ಲೆಕ್ಕಾಚಾರದಲ್ಲಿದೆ. ಯಾರಿಗೆ ಲಕ್ ಕುದುರುತ್ತದೆ ಎಂಬುದನ್ನು ಕಾದುನೋಡಬೇಕಿದೆ. (AFP)

ಪಂಜಾಬ್ ಕಿಂಗ್ಸ್ ತಂಡದಲ್ಲಿ ಸಾಕಷ್ಟು ಬದಲಾವಣೆಯಾಗುವ ಸಾಧ್ಯತೆ ಇದೆ. 18.50 ಕೋಟಿ ಒಡೆಯ ಸ್ಯಾಮ್ ಕರನ್, ನಾಯಕ ಶಿಖರ್ ಧವನ್​ರನ್ನೂ ಕೈಬಿಡುವುದು ಖಚಿತವಾಗಿದೆ. ಶಶಾಂಕ್ ಸಿಂಗ್ ಮತ್ತು ಅಶುತೋಷ್ ಶರ್ಮಾ ಅವರನ್ನು ಬಿಡಲು ನಿರ್ಧರಿಸಿದೆ.
icon

(4 / 11)

ಪಂಜಾಬ್ ಕಿಂಗ್ಸ್ ತಂಡದಲ್ಲಿ ಸಾಕಷ್ಟು ಬದಲಾವಣೆಯಾಗುವ ಸಾಧ್ಯತೆ ಇದೆ. 18.50 ಕೋಟಿ ಒಡೆಯ ಸ್ಯಾಮ್ ಕರನ್, ನಾಯಕ ಶಿಖರ್ ಧವನ್​ರನ್ನೂ ಕೈಬಿಡುವುದು ಖಚಿತವಾಗಿದೆ. ಶಶಾಂಕ್ ಸಿಂಗ್ ಮತ್ತು ಅಶುತೋಷ್ ಶರ್ಮಾ ಅವರನ್ನು ಬಿಡಲು ನಿರ್ಧರಿಸಿದೆ.(ANI)

ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರಾಟ್ ಕೊಹ್ಲಿ ಕೈಬಿಡುವ ಮಾತೇ ಇಲ್ಲ. ಅವರೊಂದಿಗೆ ರಜತ್ ಪಾಟೀದಾರ್, ವಿಲ್ ಜಾಕ್ಸ್ ಮತ್ತು ಮೊಹಮ್ಮದ್ ಸಿರಾಜ್ ಉಳಿಸಿಕೊಳ್ಳುವ ಸಾಧ್ಯತೆ ಇದೆ. ಆದರೆ, ನಾಯಕ ಫಾಫ್ ಡು ಪ್ಲೆಸಿಸ್, ದುಬಾರಿ ಆಟಗಾರ ಕ್ಯಾಮರೂನ್ ಗ್ರೀನ್ ಸಹ ಆಕ್ಷನ್​ಗೆ ಬರಬಹುದು,
icon

(5 / 11)

ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರಾಟ್ ಕೊಹ್ಲಿ ಕೈಬಿಡುವ ಮಾತೇ ಇಲ್ಲ. ಅವರೊಂದಿಗೆ ರಜತ್ ಪಾಟೀದಾರ್, ವಿಲ್ ಜಾಕ್ಸ್ ಮತ್ತು ಮೊಹಮ್ಮದ್ ಸಿರಾಜ್ ಉಳಿಸಿಕೊಳ್ಳುವ ಸಾಧ್ಯತೆ ಇದೆ. ಆದರೆ, ನಾಯಕ ಫಾಫ್ ಡು ಪ್ಲೆಸಿಸ್, ದುಬಾರಿ ಆಟಗಾರ ಕ್ಯಾಮರೂನ್ ಗ್ರೀನ್ ಸಹ ಆಕ್ಷನ್​ಗೆ ಬರಬಹುದು,(AFP)

 ರಾಜಸ್ಥಾನ್ ರಾಯಲ್ಸ್ ಉಳಿಸಿಕೊಳ್ಳಲು ಬಯಸುವ ನಾಲ್ಕು ಆಟಗಾರರಲ್ಲಿ ಸಂಜು ಸ್ಯಾಮ್ಸನ್ ಒಬ್ಬರು. ಜೋಸ್ ಬಟ್ಲರ್, ಟ್ರೆಂಟ್ ಬೌಲ್ಟ್​ ಈ ಪಟ್ಟಿಯಲ್ಲಿರಬಹುದು. ಆದರೆ ಯಶಸ್ವಿ ಜೈಸ್ವಾಲ್ ಅಥವಾ ರಿಯಾನ್ ಪರಾಗ್ ಅವರಲ್ಲಿ ಒಬ್ಬರನ್ನೆ ರಿಟೈನ್ ಮಾಡಿಕೊಳ್ಳುವ ನಿರೀಕ್ಷೆ ಇದೆ. ಆದರೆ ತಂಡದ ಯುಜ್ವೇಂದ್ರ ಚಹಲ್​ರನ್ನೂ ಕೈಬಿಡಬಹುದು.
icon

(6 / 11)

 ರಾಜಸ್ಥಾನ್ ರಾಯಲ್ಸ್ ಉಳಿಸಿಕೊಳ್ಳಲು ಬಯಸುವ ನಾಲ್ಕು ಆಟಗಾರರಲ್ಲಿ ಸಂಜು ಸ್ಯಾಮ್ಸನ್ ಒಬ್ಬರು. ಜೋಸ್ ಬಟ್ಲರ್, ಟ್ರೆಂಟ್ ಬೌಲ್ಟ್​ ಈ ಪಟ್ಟಿಯಲ್ಲಿರಬಹುದು. ಆದರೆ ಯಶಸ್ವಿ ಜೈಸ್ವಾಲ್ ಅಥವಾ ರಿಯಾನ್ ಪರಾಗ್ ಅವರಲ್ಲಿ ಒಬ್ಬರನ್ನೆ ರಿಟೈನ್ ಮಾಡಿಕೊಳ್ಳುವ ನಿರೀಕ್ಷೆ ಇದೆ. ಆದರೆ ತಂಡದ ಯುಜ್ವೇಂದ್ರ ಚಹಲ್​ರನ್ನೂ ಕೈಬಿಡಬಹುದು.(AFP)

ಎಲ್​ಎಸ್​ಜಿ ಮಾಲೀಕ ಸಂಜೀವ್ ಗೋಯೆಂಕಾ ಮತ್ತು ಕೆಎಲ್ ರಾಹುಲ್ ನಡುವೆ ಸಂಬಂಧ ಸರಿಯಿಲ್ಲ ಎಂದು ತಿಳಿದು ಬಂದಿದೆ. ಹಾಗಾಗಿ ರಾಹುಲ್ ಕೈಬಿಡಲು ಫ್ರಾಂಚೈಸಿ ಚಿಂತಿಸಿದೆ. ನಿಕೋಲಸ್ ಪೂರನ್ ಮುಂದಿನ ಋತುವಿಗೂ ತಂಡದಲ್ಲಿರಬಹುದು, ಮಾರ್ಕಸ್ ಸ್ಟೊಯ್ನಿಸ್ ಮತ್ತು ಮಯಾಂಕ್ ಯಾದವ್ ಕೂಡ ತಂಡದಲ್ಲೇ ಉಳಿಯಬಹುದು.
icon

(7 / 11)

ಎಲ್​ಎಸ್​ಜಿ ಮಾಲೀಕ ಸಂಜೀವ್ ಗೋಯೆಂಕಾ ಮತ್ತು ಕೆಎಲ್ ರಾಹುಲ್ ನಡುವೆ ಸಂಬಂಧ ಸರಿಯಿಲ್ಲ ಎಂದು ತಿಳಿದು ಬಂದಿದೆ. ಹಾಗಾಗಿ ರಾಹುಲ್ ಕೈಬಿಡಲು ಫ್ರಾಂಚೈಸಿ ಚಿಂತಿಸಿದೆ. ನಿಕೋಲಸ್ ಪೂರನ್ ಮುಂದಿನ ಋತುವಿಗೂ ತಂಡದಲ್ಲಿರಬಹುದು, ಮಾರ್ಕಸ್ ಸ್ಟೊಯ್ನಿಸ್ ಮತ್ತು ಮಯಾಂಕ್ ಯಾದವ್ ಕೂಡ ತಂಡದಲ್ಲೇ ಉಳಿಯಬಹುದು.(AFP)

ಋರಾಜ್ ಗಾಯಕ್ವಾಡ್, ರವೀಂದ್ರ ಜಡೇಜಾ, ಮತೀಶಾ ಪತರಾಣ ಮತ್ತು ಶಿವಂ ದುಬೆ ಅವರನ್ನು ಚೆನ್ನೈ ಸೂಪರ್ ಕಿಂಗ್ಸ್ ಉಳಿಸಿಕೊಳ್ಳಲು ಬಯಸಿದೆ. ಧೋನಿ ಅವರಿಗೆ ಇದೇ ಕೊನೆಯ ಐಪಿಎಲ್ ಎಂದು ಹೇಳಬಹುದು.
icon

(8 / 11)

ಋರಾಜ್ ಗಾಯಕ್ವಾಡ್, ರವೀಂದ್ರ ಜಡೇಜಾ, ಮತೀಶಾ ಪತರಾಣ ಮತ್ತು ಶಿವಂ ದುಬೆ ಅವರನ್ನು ಚೆನ್ನೈ ಸೂಪರ್ ಕಿಂಗ್ಸ್ ಉಳಿಸಿಕೊಳ್ಳಲು ಬಯಸಿದೆ. ಧೋನಿ ಅವರಿಗೆ ಇದೇ ಕೊನೆಯ ಐಪಿಎಲ್ ಎಂದು ಹೇಳಬಹುದು.(AFP)

ಗುಜರಾತ್ ಟೈಟಾನ್ಸ್ ಶುಭ್ಮನ್ ಗಿಲ್, ಸಾಯಿ ಸುದರ್ಶನ್, ರಶೀದ್ ಖಾನ್ ಮತ್ತು ಮೊಹಮ್ಮದ್ ಶಮಿ ಅವರನ್ನು ಉಳಿಸಿಕೊಳ್ಳಲು ನೋಡುತ್ತಿದೆ. ಅಲ್ಲದೆ, ಡೇವಿಡ್ ಮಿಲ್ಲರ್​​ ಅವರನ್ನೂ ರಿಟೈನ್ ಮಾಡಿಕೊಳ್ಳಲು ಚಿಂತಿಸುತ್ತಿದೆ. ಆದರೆ ಅವರನ್ನು ಉಳಿಸಿಕೊಳ್ಳಬೇಕೆಂದರೆ ಯಾರನ್ನು ಕೈಬಿಡಬೇಕು ಎಂಬ ಗೊಂದಲ ತಂಡದಲ್ಲಿ ಕಾಡುತ್ತಿದೆ.
icon

(9 / 11)

ಗುಜರಾತ್ ಟೈಟಾನ್ಸ್ ಶುಭ್ಮನ್ ಗಿಲ್, ಸಾಯಿ ಸುದರ್ಶನ್, ರಶೀದ್ ಖಾನ್ ಮತ್ತು ಮೊಹಮ್ಮದ್ ಶಮಿ ಅವರನ್ನು ಉಳಿಸಿಕೊಳ್ಳಲು ನೋಡುತ್ತಿದೆ. ಅಲ್ಲದೆ, ಡೇವಿಡ್ ಮಿಲ್ಲರ್​​ ಅವರನ್ನೂ ರಿಟೈನ್ ಮಾಡಿಕೊಳ್ಳಲು ಚಿಂತಿಸುತ್ತಿದೆ. ಆದರೆ ಅವರನ್ನು ಉಳಿಸಿಕೊಳ್ಳಬೇಕೆಂದರೆ ಯಾರನ್ನು ಕೈಬಿಡಬೇಕು ಎಂಬ ಗೊಂದಲ ತಂಡದಲ್ಲಿ ಕಾಡುತ್ತಿದೆ.(PTI)

ಡೆಲ್ಲಿ ಕ್ಯಾಪಿಟಲ್ಸ್ ಉಳಿಸಿಕೊಳ್ಳಲು ಬಯಸುವ ಪಟ್ಟಿಯಲ್ಲಿ ರಿಷಭ್ ಪಂತ್ ಮೊದಲ ಹೆಸರು. ಕುಲ್ದೀಪ್ ಯಾದವ್ ಅವರನ್ನು ಉಳಿಸಿಕೊಳ್ಳಲು ಬಯಸುತ್ತದೆ. ಜೇಕ್ ಫ್ರೇಸರ್ ಮೆಕ್​ಗುರ್ಕ್​ ಮತ್ತು ಟ್ರಿಸ್ಟಾನ್ ಸ್ಟಬ್ಸ್ ಅವರನ್ನೂ ರಿಟೈನ್​ ಮಾಡಿಕೊಳ್ಳುವ ನಿರೀಕ್ಷೆ ಇದೆ.
icon

(10 / 11)

ಡೆಲ್ಲಿ ಕ್ಯಾಪಿಟಲ್ಸ್ ಉಳಿಸಿಕೊಳ್ಳಲು ಬಯಸುವ ಪಟ್ಟಿಯಲ್ಲಿ ರಿಷಭ್ ಪಂತ್ ಮೊದಲ ಹೆಸರು. ಕುಲ್ದೀಪ್ ಯಾದವ್ ಅವರನ್ನು ಉಳಿಸಿಕೊಳ್ಳಲು ಬಯಸುತ್ತದೆ. ಜೇಕ್ ಫ್ರೇಸರ್ ಮೆಕ್​ಗುರ್ಕ್​ ಮತ್ತು ಟ್ರಿಸ್ಟಾನ್ ಸ್ಟಬ್ಸ್ ಅವರನ್ನೂ ರಿಟೈನ್​ ಮಾಡಿಕೊಳ್ಳುವ ನಿರೀಕ್ಷೆ ಇದೆ.(PTI)

ಉಳಿಸಿಕೊಳ್ಳುವ ಬಗ್ಗೆ ದೊಡ್ಡ ಪ್ರಶ್ನೆ ಮುಂಬೈ ಇಂಡಿಯನ್ಸ್ ಬಗ್ಗೆ. ರೋಹಿತ್ ಶರ್ಮಾ ಮುಂದಿನ ಋತುವಿನಲ್ಲಿ ಮುಂಬೈ ಪರ ಆಡಲಿದ್ದಾರೆಯೇ? ಅದು ಈಗ ದೊಡ್ಡ ಪ್ರಶ್ನೆ. ಆದಾಗ್ಯೂ, ರೋಹಿತ್ ಅವರನ್ನು ಉಳಿಸಿಕೊಳ್ಳಲು ಬಯಸಿದೆ. ಹಾರ್ದಿಕ್ ಪಾಂಡ್ಯ, ಜಸ್ಪ್ರೀತ್ ಬುಮ್ರಾ ಮತ್ತು ಸೂರ್ಯಕುಮಾರ್ ಯಾದವ್ ಅವರು ಸಹ ತಂಡದಲ್ಲಿರಬಹುದು.
icon

(11 / 11)

ಉಳಿಸಿಕೊಳ್ಳುವ ಬಗ್ಗೆ ದೊಡ್ಡ ಪ್ರಶ್ನೆ ಮುಂಬೈ ಇಂಡಿಯನ್ಸ್ ಬಗ್ಗೆ. ರೋಹಿತ್ ಶರ್ಮಾ ಮುಂದಿನ ಋತುವಿನಲ್ಲಿ ಮುಂಬೈ ಪರ ಆಡಲಿದ್ದಾರೆಯೇ? ಅದು ಈಗ ದೊಡ್ಡ ಪ್ರಶ್ನೆ. ಆದಾಗ್ಯೂ, ರೋಹಿತ್ ಅವರನ್ನು ಉಳಿಸಿಕೊಳ್ಳಲು ಬಯಸಿದೆ. ಹಾರ್ದಿಕ್ ಪಾಂಡ್ಯ, ಜಸ್ಪ್ರೀತ್ ಬುಮ್ರಾ ಮತ್ತು ಸೂರ್ಯಕುಮಾರ್ ಯಾದವ್ ಅವರು ಸಹ ತಂಡದಲ್ಲಿರಬಹುದು.(AFP)


ಟಿ20 ವರ್ಲ್ಡ್‌ಕಪ್ 2024

ಇತರ ಗ್ಯಾಲರಿಗಳು