ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಅಫ್ಘಾನಿಸ್ತಾನ ಐತಿಹಾಸಿಕ ಗೆಲುವಿಗೆ ಅಫ್ಘನ್ ಬೀದಿಗಳಲ್ಲಿ ಸಂಭ್ರಮಾಚರಣೆ; ಆಟಗಾರರ ಕಣ್ಣಂಚಲ್ಲಿ ಖುಷಿಯ ಧಾರೆ -Photo

ಅಫ್ಘಾನಿಸ್ತಾನ ಐತಿಹಾಸಿಕ ಗೆಲುವಿಗೆ ಅಫ್ಘನ್ ಬೀದಿಗಳಲ್ಲಿ ಸಂಭ್ರಮಾಚರಣೆ; ಆಟಗಾರರ ಕಣ್ಣಂಚಲ್ಲಿ ಖುಷಿಯ ಧಾರೆ -Photo

  • ಅಫ್ಘಾನಿಸ್ತಾನ ಕ್ರಿಕೆಟ್‌ ತಂಡವು ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಟಿ20 ವಿಶ್ವಕಪ್ ಸೆಮಿಫೈನಲ್‌ ಪ್ರವೇಶಿಸಿದೆ. ಸೂಪರ್ 8 ಪಂದ್ಯದಲ್ಲಿ ಬಾಂಗ್ಲಾದೇಶವನ್ನು ಸೋಲಿಸಿದ ತಂಡವು, ಬಲಿಷ್ಠ ಆಸ್ಟ್ರೇಲಿಯಾ ತಂಡವನ್ನು ಕೂಡಾ ಟೂರ್ನಿಯಿಂದ ಹೊರಹಾಕಿತು. ಜಾಗತಿಕ ಕ್ರಿಕೆಟ್‌ನಲಿ ಅಪ್ಘನ್‌ ತಂಡದ ಐತಿಹಾಸಿಕ ಗೆಲುವನ್ನು ಇಡೀ ದೇಶವೇ ಸಂಭ್ರಮಿಸುತ್ತಿದೆ.

ಟೂರ್ನಿಯಲ್ಲಿ ನ್ಯೂಜಿಲ್ಯಾಂಡ್ ಮತ್ತು ಆಸ್ಟ್ರೇಲಿಯಾದಂಥ ಬಲಿಷ್ಟ ತಂಡಗಳನ್ನು ಮಣಿಸಿದ ಅಫ್ಘಾನಿಸ್ತಾನ, ಇಂದು ಅಫ್ಘಾನಿಸ್ತಾನ ವಿರುದ್ಧ ರೋಚಕ ಜಯ ಸಾಧಿಸಿತು. ಇದರೊಂದಿಗೆ ಈ ಬಾರಿಯ ವಿಶ್ವಕಪ್‌ ಸೆಮಿಫೈನಲ್ ಪ್ರವೇಶಿಸಿತು. ಐಸಿಸಿ ಟೂರ್ನಿಯಲ್ಲಿ ಸೆಮೀಸ್‌ ಹಂತಕ್ಕೆ ಅಫ್ಘನ್‌ ಪ್ರವೇಸಿಸಿದ್ದು ಇದು ಮೊದಲ ಸಲ. ಹೀಗಾಗಿ ದೇಶಕ್ಕೆ ಇದು ಐತಿಹಾಸಿಕ ಕ್ಷಣ.
icon

(1 / 9)

ಟೂರ್ನಿಯಲ್ಲಿ ನ್ಯೂಜಿಲ್ಯಾಂಡ್ ಮತ್ತು ಆಸ್ಟ್ರೇಲಿಯಾದಂಥ ಬಲಿಷ್ಟ ತಂಡಗಳನ್ನು ಮಣಿಸಿದ ಅಫ್ಘಾನಿಸ್ತಾನ, ಇಂದು ಅಫ್ಘಾನಿಸ್ತಾನ ವಿರುದ್ಧ ರೋಚಕ ಜಯ ಸಾಧಿಸಿತು. ಇದರೊಂದಿಗೆ ಈ ಬಾರಿಯ ವಿಶ್ವಕಪ್‌ ಸೆಮಿಫೈನಲ್ ಪ್ರವೇಶಿಸಿತು. ಐಸಿಸಿ ಟೂರ್ನಿಯಲ್ಲಿ ಸೆಮೀಸ್‌ ಹಂತಕ್ಕೆ ಅಫ್ಘನ್‌ ಪ್ರವೇಸಿಸಿದ್ದು ಇದು ಮೊದಲ ಸಲ. ಹೀಗಾಗಿ ದೇಶಕ್ಕೆ ಇದು ಐತಿಹಾಸಿಕ ಕ್ಷಣ.(PTI)

ಬಾಂಗ್ಲಾದೇಶವನ್ನು ಎಂಟು ರನ್‌ಗಳಿಂದ ಸೋಲಿಸಿದ ನಂತರ ಅಫ್ಘಾನಿಸ್ತಾನ ತಂಡದ ಆಟಗಾರರು ಭಾವುಕರಾದರು. ನಾಯಕ ರಶೀದ್‌ ಖಾನ್‌ ಸೇರಿದಂತೆ ಹಲವು ಆಟಗಾರರ ಕಣ್ಣಲ್ಲಿ ನೀರು ಜಿನುಗಿತು. ಡಗೌಟ್‌ನಲ್ಲಿ ಕುಳಿತಿದ್ದ ರಹಮಾನುಲ್ಲಾ ಗುರ್ಬಾಜ್‌ ಖುಷಿಯಿಂದ ಬಿಕ್ಕಿ ಬಿಕ್ಕಿ ಕಣ್ಣಲ್ಲಿ ಖುಷಿಯ ಧಾರೆ ಹರಿಸಿದರು. ನಾಯಕ ರಶೀದ್ ಖಾನ್, ತಂಡದ ಸಹ ಆಟಗಾರ ಗುಲ್ಬದಿನ್ ನೈಬ್ ಅವರನ್ನು ಅಪ್ಪಿಕೊಂಡು ಸಂಭ್ರಮಿಸಿದರು.
icon

(2 / 9)

ಬಾಂಗ್ಲಾದೇಶವನ್ನು ಎಂಟು ರನ್‌ಗಳಿಂದ ಸೋಲಿಸಿದ ನಂತರ ಅಫ್ಘಾನಿಸ್ತಾನ ತಂಡದ ಆಟಗಾರರು ಭಾವುಕರಾದರು. ನಾಯಕ ರಶೀದ್‌ ಖಾನ್‌ ಸೇರಿದಂತೆ ಹಲವು ಆಟಗಾರರ ಕಣ್ಣಲ್ಲಿ ನೀರು ಜಿನುಗಿತು. ಡಗೌಟ್‌ನಲ್ಲಿ ಕುಳಿತಿದ್ದ ರಹಮಾನುಲ್ಲಾ ಗುರ್ಬಾಜ್‌ ಖುಷಿಯಿಂದ ಬಿಕ್ಕಿ ಬಿಕ್ಕಿ ಕಣ್ಣಲ್ಲಿ ಖುಷಿಯ ಧಾರೆ ಹರಿಸಿದರು. ನಾಯಕ ರಶೀದ್ ಖಾನ್, ತಂಡದ ಸಹ ಆಟಗಾರ ಗುಲ್ಬದಿನ್ ನೈಬ್ ಅವರನ್ನು ಅಪ್ಪಿಕೊಂಡು ಸಂಭ್ರಮಿಸಿದರು.(AP)

ಖುಷಿಯಿಂದ ಕಣ್ಣಲ್ಲಿ ನೀರು ಸುರಿಸಿ ಸಹ ಆಟಗಾರನನ್ನು ತಬ್ಬಿಕೊಂಡಿರುವ ನಾಯಕ ರಶೀದ್‌ ಖಾನ್
icon

(3 / 9)

ಖುಷಿಯಿಂದ ಕಣ್ಣಲ್ಲಿ ನೀರು ಸುರಿಸಿ ಸಹ ಆಟಗಾರನನ್ನು ತಬ್ಬಿಕೊಂಡಿರುವ ನಾಯಕ ರಶೀದ್‌ ಖಾನ್(X)

ತಮ್ಮ ದೇಶ ಗೆಲ್ಲುತ್ತಿದ್ದಂತೆಯೇ ಸಾವಿರಾರು ಸಂಖ್ಯೆಯಲ್ಲಿ ಅಫ್ಘಾನಿಸ್ತಾನ ಬೀದಿ ಬೀದಿಗಳಲ್ಲಿ ಜನರು ಸಂಭ್ರಮಾಚರಣೆ ನಡೆಸುತ್ತಿದ್ದಾರೆ. ಅಫ್ಘಾನಿಸ್ತಾನದ ಕ್ರಿಕೆಟ್ ಅಭಿಮಾನಿಗಳು ತಮ್ಮ ತಂಡದ ವಿಜಯವನ್ನು ಅಫ್ಘಾನಿಸ್ತಾನದ ಪೂರ್ವದ ಖೋಸ್ಟ್ ಪ್ರಾಂತ್ಯದ ನಗರದಲ್ಲಿ ಸಂಭ್ರಮಾಚರಿಸಿದರು.
icon

(4 / 9)

ತಮ್ಮ ದೇಶ ಗೆಲ್ಲುತ್ತಿದ್ದಂತೆಯೇ ಸಾವಿರಾರು ಸಂಖ್ಯೆಯಲ್ಲಿ ಅಫ್ಘಾನಿಸ್ತಾನ ಬೀದಿ ಬೀದಿಗಳಲ್ಲಿ ಜನರು ಸಂಭ್ರಮಾಚರಣೆ ನಡೆಸುತ್ತಿದ್ದಾರೆ. ಅಫ್ಘಾನಿಸ್ತಾನದ ಕ್ರಿಕೆಟ್ ಅಭಿಮಾನಿಗಳು ತಮ್ಮ ತಂಡದ ವಿಜಯವನ್ನು ಅಫ್ಘಾನಿಸ್ತಾನದ ಪೂರ್ವದ ಖೋಸ್ಟ್ ಪ್ರಾಂತ್ಯದ ನಗರದಲ್ಲಿ ಸಂಭ್ರಮಾಚರಿಸಿದರು.(AP)

ಪೂರ್ವದ ಖೋಸ್ಟ್ ಪ್ರಾಂತ್ಯದ ನಗರದಲ್ಲಿ ಅಭಿಮಾನಿಗಳ ಸಂಭ್ರಮ.
icon

(5 / 9)

ಪೂರ್ವದ ಖೋಸ್ಟ್ ಪ್ರಾಂತ್ಯದ ನಗರದಲ್ಲಿ ಅಭಿಮಾನಿಗಳ ಸಂಭ್ರಮ.(AP)

ಅಫ್ಘಾನಿಸ್ತಾನ ತಂಡದ ನಾಯಕ ರಶೀದ್ ಖಾನ್ ಅವರು ತಮ್ಮ ಜೀವನದ ಬಹುಮಖ್ಯ ಕನಸು ನನಸಾದ ಭಾವನೆ ಇದು ಎಂದು ಹೇಳಿದ್ದಾರೆ. 
icon

(6 / 9)

ಅಫ್ಘಾನಿಸ್ತಾನ ತಂಡದ ನಾಯಕ ರಶೀದ್ ಖಾನ್ ಅವರು ತಮ್ಮ ಜೀವನದ ಬಹುಮಖ್ಯ ಕನಸು ನನಸಾದ ಭಾವನೆ ಇದು ಎಂದು ಹೇಳಿದ್ದಾರೆ. (AP)

ಪಂದ್ಯದ ಬಳಿಕ ಆಟಗಾರರು ಮೈದಾನದಲ್ಲಿ ಸಂಭ್ರಮಿಸಿದ ಬಳಿಕ, ತಂಡದ ಬಸ್‌ನಲ್ಲಿಯೂ ಸಂಭ್ರಮಾಚರಣೆ ನಡೆಸಿದರು. ಅತ್ತ ದೇಶದಲ್ಲಿ ಅಭಿಮಾನಿಗಳು ಪ್ರಮುಖ ನಗರಗಳ ಬೀದಿಯಲ್ಲಿ ಖುಷಿ ಆಚರಿಸಿದರು.
icon

(7 / 9)

ಪಂದ್ಯದ ಬಳಿಕ ಆಟಗಾರರು ಮೈದಾನದಲ್ಲಿ ಸಂಭ್ರಮಿಸಿದ ಬಳಿಕ, ತಂಡದ ಬಸ್‌ನಲ್ಲಿಯೂ ಸಂಭ್ರಮಾಚರಣೆ ನಡೆಸಿದರು. ಅತ್ತ ದೇಶದಲ್ಲಿ ಅಭಿಮಾನಿಗಳು ಪ್ರಮುಖ ನಗರಗಳ ಬೀದಿಯಲ್ಲಿ ಖುಷಿ ಆಚರಿಸಿದರು.(AP)

ಅಫ್ಘಾನಿಸ್ತಾನ ತಂಡವು ಸೆಮಿಫೈನಲ್‌ನಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು ಎದುರಿಸಲಿದೆ.
icon

(8 / 9)

ಅಫ್ಘಾನಿಸ್ತಾನ ತಂಡವು ಸೆಮಿಫೈನಲ್‌ನಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು ಎದುರಿಸಲಿದೆ.(X)

ಅಫ್ಘಾನಿಸ್ತಾನದ ವಿಜಯವನ್ನು ಜಾಗತಿಕ ಕ್ರಿಕೆಟ್‌ ದಿಗ್ಗಜರು ಕೊಂಡಾಡಿದ್ದಾರೆ. ಕ್ರಿಕೆಟ್‌ ದೇವರು ಸಚಿನ್‌ ತೆಂಡೂಲ್ಕರ್‌ ಸೇರಿದಂತೆ ಹಲವರು ಅಭಿನಂದಿಸಿದ್ದಾರೆ.
icon

(9 / 9)

ಅಫ್ಘಾನಿಸ್ತಾನದ ವಿಜಯವನ್ನು ಜಾಗತಿಕ ಕ್ರಿಕೆಟ್‌ ದಿಗ್ಗಜರು ಕೊಂಡಾಡಿದ್ದಾರೆ. ಕ್ರಿಕೆಟ್‌ ದೇವರು ಸಚಿನ್‌ ತೆಂಡೂಲ್ಕರ್‌ ಸೇರಿದಂತೆ ಹಲವರು ಅಭಿನಂದಿಸಿದ್ದಾರೆ.(X)


ಇತರ ಗ್ಯಾಲರಿಗಳು