ಆರೆಂಜ್​ ಕ್ಯಾಪ್ ರೇಸ್​ಗೆ ಜಿಗಿದ ರಿಷಭ್ ಪಂತ್-ಸಾಯಿ ಸುದರ್ಶನ್; ಪರ್ಪಲ್ ಕ್ಯಾಪ್ ಪೈಪೋಟಿಗೆ ಇಳಿದ ಕುಲ್ದೀಪ್ ಯಾದವ್
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಆರೆಂಜ್​ ಕ್ಯಾಪ್ ರೇಸ್​ಗೆ ಜಿಗಿದ ರಿಷಭ್ ಪಂತ್-ಸಾಯಿ ಸುದರ್ಶನ್; ಪರ್ಪಲ್ ಕ್ಯಾಪ್ ಪೈಪೋಟಿಗೆ ಇಳಿದ ಕುಲ್ದೀಪ್ ಯಾದವ್

ಆರೆಂಜ್​ ಕ್ಯಾಪ್ ರೇಸ್​ಗೆ ಜಿಗಿದ ರಿಷಭ್ ಪಂತ್-ಸಾಯಿ ಸುದರ್ಶನ್; ಪರ್ಪಲ್ ಕ್ಯಾಪ್ ಪೈಪೋಟಿಗೆ ಇಳಿದ ಕುಲ್ದೀಪ್ ಯಾದವ್

  • IPL 2024 Orange Cap And Purple Cap: ಐಪಿಎಲ್​ನಲ್ಲಿ ಆರೆಂಜ್ ಕ್ಯಾಪ್ ಮತ್ತು ಪರ್ಪಲ್ ಕ್ಯಾಪ್​ಗೆ ತೀವ್ರ ಪೈಪೋಟಿ ಏರ್ಪಟ್ಟಿದೆ. ಆರೆಂಜ್ ಕ್ಯಾಪ್​ಗಾಗಿ ಪ್ರಮುಖರೇ ರೇಸ್​​ಗಿಳಿದಿದ್ದು, ವಿರಾಟ್ ಕೊಹ್ಲಿ ಅಗ್ರಸ್ಥಾನಕ್ಕೆ ಕುತ್ತು ಬರುತ್ತಿದೆ. ಅತ್ಯಧಿಕ ವಿಕೆಟ್ ಪಡೆದವರ ಪಟ್ಟಿಯಲ್ಲಿ ಜಸ್ಪ್ರೀತ್ ಬುಮ್ರಾ ಸ್ಥಾನವೂ ಅಲುಗಾಡುತ್ತಿದೆ.

ಐಪಿಎಲ್​​ನ 40ನೇ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ವಿರುದ್ಧ ಸಿಡಿದೆದ್ದ ಡೆಲ್ಲಿ ಕ್ಯಾಪಿಟಲ್ಸ್ ನಾಯಕ ರಿಷಭ್ ಪಂತ್, 204ರ ಸ್ಟ್ರೈಕ್​ರೇಟ್​ನಲ್ಲಿ 88 ರನ್ ಸಿಡಿಸಿ ಆರೆಂಜ್ ಕ್ಯಾಪ್​ ರೇಸ್​ಗೆ ಧುಮುಕಿದ್ದಾರೆ. ಈ ಪಂದ್ಯದಲ್ಲಿ 4 ರನ್​ಗಳ ರೋಚಕ ಗೆಲುವು ಸಾಧಿಸಿದ ಡೆಲ್ಲಿ, ಪ್ಲೇಆಫ್​ ರೇಸ್​ನಲ್ಲಿ ಇನ್ನೂ ಜೀವಂತವಾಗಿದೆ. ಆರೆಂಜ್​ ಕ್ಯಾಪ್​ ಮತ್ತು ಪರ್ಪಲ್​ ಕ್ಯಾಪ್​ಗೆ ಯಾರೆಲ್ಲಾ ಪೈಪೋಟಿ ನೀಡುತ್ತಿದ್ದಾರೆ ಎಂಬುದನ್ನು ಈ ಮುಂದೆ ನೋಡೋಣ.
icon

(1 / 7)

ಐಪಿಎಲ್​​ನ 40ನೇ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ವಿರುದ್ಧ ಸಿಡಿದೆದ್ದ ಡೆಲ್ಲಿ ಕ್ಯಾಪಿಟಲ್ಸ್ ನಾಯಕ ರಿಷಭ್ ಪಂತ್, 204ರ ಸ್ಟ್ರೈಕ್​ರೇಟ್​ನಲ್ಲಿ 88 ರನ್ ಸಿಡಿಸಿ ಆರೆಂಜ್ ಕ್ಯಾಪ್​ ರೇಸ್​ಗೆ ಧುಮುಕಿದ್ದಾರೆ. ಈ ಪಂದ್ಯದಲ್ಲಿ 4 ರನ್​ಗಳ ರೋಚಕ ಗೆಲುವು ಸಾಧಿಸಿದ ಡೆಲ್ಲಿ, ಪ್ಲೇಆಫ್​ ರೇಸ್​ನಲ್ಲಿ ಇನ್ನೂ ಜೀವಂತವಾಗಿದೆ. ಆರೆಂಜ್​ ಕ್ಯಾಪ್​ ಮತ್ತು ಪರ್ಪಲ್​ ಕ್ಯಾಪ್​ಗೆ ಯಾರೆಲ್ಲಾ ಪೈಪೋಟಿ ನೀಡುತ್ತಿದ್ದಾರೆ ಎಂಬುದನ್ನು ಈ ಮುಂದೆ ನೋಡೋಣ.

ಡೆಲ್ಲಿ ಕ್ಯಾಪಿಟಲ್ಸ್ ನಾಯಕ ರಿಷಭ್ ಪಂತ್ ಕೇವಲ 43 ಎಸೆತಗಳಲ್ಲಿ 88 ರನ್ ಗಳಿಸಿದರು. ಇದರ ಪರಿಣಾಮವಾಗಿ ಆರೆಂಜ್ ಕ್ಯಾಪ್​ ಹೋರಾಟದಲ್ಲಿ ಟ್ರಾವಿಸ್ ಹೆಡ್ ಮತ್ತು ರಿಯಾನ್ ಪರಾಗ್ ನಂತರ 3ನೇ ಸ್ಥಾನಕ್ಕೇರಿದ್ದು, 9 ಪಂದ್ಯಗಳ ಬಳಿಕ 342 ರನ್ ಗಳಿಸಿದ್ದಾರೆ. ಪಟ್ಟಿಯಲ್ಲಿ ಋತುರಾಜ್ 2ನೇ ಸ್ಥಾನದಲ್ಲಿದ್ದು, 8 ಪಂದ್ಯಗಳಲ್ಲಿ 349 ರನ್ ಗಳಿಸಿದ್ದಾರೆ.
icon

(2 / 7)

ಡೆಲ್ಲಿ ಕ್ಯಾಪಿಟಲ್ಸ್ ನಾಯಕ ರಿಷಭ್ ಪಂತ್ ಕೇವಲ 43 ಎಸೆತಗಳಲ್ಲಿ 88 ರನ್ ಗಳಿಸಿದರು. ಇದರ ಪರಿಣಾಮವಾಗಿ ಆರೆಂಜ್ ಕ್ಯಾಪ್​ ಹೋರಾಟದಲ್ಲಿ ಟ್ರಾವಿಸ್ ಹೆಡ್ ಮತ್ತು ರಿಯಾನ್ ಪರಾಗ್ ನಂತರ 3ನೇ ಸ್ಥಾನಕ್ಕೇರಿದ್ದು, 9 ಪಂದ್ಯಗಳ ಬಳಿಕ 342 ರನ್ ಗಳಿಸಿದ್ದಾರೆ. ಪಟ್ಟಿಯಲ್ಲಿ ಋತುರಾಜ್ 2ನೇ ಸ್ಥಾನದಲ್ಲಿದ್ದು, 8 ಪಂದ್ಯಗಳಲ್ಲಿ 349 ರನ್ ಗಳಿಸಿದ್ದಾರೆ.(AFP)

ಆರೆಂಜ್ ಕ್ಯಾಪ್ ರೇಸ್​ನಲ್ಲಿ ಗುಜರಾತ್ ಟೈಟಾನ್ಸ್​ನ ಸಾಯಿ ಸುದರ್ಶನ್ 4ನೇ ಸ್ಥಾನಕ್ಕೆ ಏರಿದ್ದಾರೆ. 9 ಪಂದ್ಯಗಳ ಅಂತ್ಯದಲ್ಲಿ 334 ರನ್ ಗಳಿಸಿದ್ದಾರೆ. ಡೆಲ್ಲಿ ವಿರುದ್ಧದ ಪಂದ್ಯದಲ್ಲಿ ಕೇವಲ 39 ಎಸೆತಗಳಲ್ಲಿ 65 ರನ್ ಗಳಿಸಿದ್ದಾರೆ.
icon

(3 / 7)

ಆರೆಂಜ್ ಕ್ಯಾಪ್ ರೇಸ್​ನಲ್ಲಿ ಗುಜರಾತ್ ಟೈಟಾನ್ಸ್​ನ ಸಾಯಿ ಸುದರ್ಶನ್ 4ನೇ ಸ್ಥಾನಕ್ಕೆ ಏರಿದ್ದಾರೆ. 9 ಪಂದ್ಯಗಳ ಅಂತ್ಯದಲ್ಲಿ 334 ರನ್ ಗಳಿಸಿದ್ದಾರೆ. ಡೆಲ್ಲಿ ವಿರುದ್ಧದ ಪಂದ್ಯದಲ್ಲಿ ಕೇವಲ 39 ಎಸೆತಗಳಲ್ಲಿ 65 ರನ್ ಗಳಿಸಿದ್ದಾರೆ.(AFP)

ಗುಜರಾತ್ ಟೈಟಾನ್ಸ್ ನಾಯಕ ಶುಭ್ಮನ್ ಗಿಲ್ ಕೇವಲ ಆರು ರನ್ ಗಳಿಸಿದರು. ಪರಿಣಾಮವಾಗಿ ಅವರು ಆರೆಂಜ್ ಕ್ಯಾಪ್​ ಓಟದಲ್ಲಿ ಬಹಳ ಹಿಂದೆ ಬಿದ್ದರು. ಗಿಲ್ 9 ಪಂದ್ಯಗಳಲ್ಲಿ 304 ರನ್ ಗಳಿಸಿ 9ನೇ ಸ್ಥಾನಕ್ಕೆ ಕುಸಿದಿದ್ದಾರೆ.
icon

(4 / 7)

ಗುಜರಾತ್ ಟೈಟಾನ್ಸ್ ನಾಯಕ ಶುಭ್ಮನ್ ಗಿಲ್ ಕೇವಲ ಆರು ರನ್ ಗಳಿಸಿದರು. ಪರಿಣಾಮವಾಗಿ ಅವರು ಆರೆಂಜ್ ಕ್ಯಾಪ್​ ಓಟದಲ್ಲಿ ಬಹಳ ಹಿಂದೆ ಬಿದ್ದರು. ಗಿಲ್ 9 ಪಂದ್ಯಗಳಲ್ಲಿ 304 ರನ್ ಗಳಿಸಿ 9ನೇ ಸ್ಥಾನಕ್ಕೆ ಕುಸಿದಿದ್ದಾರೆ.(PTI)

ಆರೆಂಜ್ ಕ್ಯಾಪ್ ರೇಸ್​​ನಲ್ಲಿ ವಿರಾಟ್ ಕೊಹ್ಲಿ ಇನ್ನೂ ಅಗ್ರಸ್ಥಾನದಲ್ಲಿದ್ದಾರೆ. 8 ಪಂದ್ಯಗಳಲ್ಲಿ 379 ರನ್ ಗಳಿಸಿದ್ದಾರೆ. ತಮ್ಮ ತಂಡವು ಕೆಟ್ಟದಾಗಿ ಆಡಿದರೂ, ವಿರಾಟ್ ಕೊಹ್ಲಿ ಆರೆಂಜ್ ಕ್ಯಾಪ್ ಅನ್ನು ತಮ್ಮ ಬಳಿ ಇಟ್ಟುಕೊಂಡಿದ್ದಾರೆ.
icon

(5 / 7)

ಆರೆಂಜ್ ಕ್ಯಾಪ್ ರೇಸ್​​ನಲ್ಲಿ ವಿರಾಟ್ ಕೊಹ್ಲಿ ಇನ್ನೂ ಅಗ್ರಸ್ಥಾನದಲ್ಲಿದ್ದಾರೆ. 8 ಪಂದ್ಯಗಳಲ್ಲಿ 379 ರನ್ ಗಳಿಸಿದ್ದಾರೆ. ತಮ್ಮ ತಂಡವು ಕೆಟ್ಟದಾಗಿ ಆಡಿದರೂ, ವಿರಾಟ್ ಕೊಹ್ಲಿ ಆರೆಂಜ್ ಕ್ಯಾಪ್ ಅನ್ನು ತಮ್ಮ ಬಳಿ ಇಟ್ಟುಕೊಂಡಿದ್ದಾರೆ.(ANI)

ಮತ್ತೊಂದೆಡೆ ಪರ್ಪಲ್​ ಕ್ಯಾಪ್​ಗಾಗಿ ದೊಡ್ಡ ಪೈಪೋಟಿ ಸ್ಪರ್ಧೆ ಏರ್ಪಟ್ಟಿದೆ. 4 ಓವರ್​​ಗಳಲ್ಲಿ 29 ರನ್ ನೀಡಿ 2 ವಿಕೆಟ್ ಪಡೆದ ಕುಲ್ದೀಪ್ ಯಾದವ್, ಪರ್ಪಲ್ ಕ್ಯಾಪ್​ ಓಟದಲ್ಲಿ ನಾಲ್ಕನೇ ಸ್ಥಾನಕ್ಕೆ ಏರಿದರು. 6 ಪಂದ್ಯಗಳಲ್ಲಿ ಅವರು 12 ವಿಕೆಟ್ ಪಡೆದಿದ್ದಾರೆ.
icon

(6 / 7)

ಮತ್ತೊಂದೆಡೆ ಪರ್ಪಲ್​ ಕ್ಯಾಪ್​ಗಾಗಿ ದೊಡ್ಡ ಪೈಪೋಟಿ ಸ್ಪರ್ಧೆ ಏರ್ಪಟ್ಟಿದೆ. 4 ಓವರ್​​ಗಳಲ್ಲಿ 29 ರನ್ ನೀಡಿ 2 ವಿಕೆಟ್ ಪಡೆದ ಕುಲ್ದೀಪ್ ಯಾದವ್, ಪರ್ಪಲ್ ಕ್ಯಾಪ್​ ಓಟದಲ್ಲಿ ನಾಲ್ಕನೇ ಸ್ಥಾನಕ್ಕೆ ಏರಿದರು. 6 ಪಂದ್ಯಗಳಲ್ಲಿ ಅವರು 12 ವಿಕೆಟ್ ಪಡೆದಿದ್ದಾರೆ.(ANI )

ಜಸ್ಪ್ರೀತ್ ಬುಮ್ರಾ ನಂ.1 ಸ್ಥಾನದಲ್ಲಿದ್ದಾರೆ. ಯಜುವೇಂದ್ರ ಚಹಲ್ ಮತ್ತು ಹರ್ಷಲ್ ಪಟೇಲ್ ಈ ಪಟ್ಟಿಯಲ್ಲಿ ಎರಡು ಮತ್ತು ಮೂರನೇ ಸ್ಥಾನದಲ್ಲಿದ್ದಾರೆ. ಅಗ್ರಸ್ಥಾನದಲ್ಲಿರುವ ಮೂವರು ತಲಾ 13 ವಿಕೆಟ್ ಪಡೆದಿದ್ದಾರೆ. ಮುಸ್ತಾಫಿಜುರ್ ರೆಹಮಾನ್ ಐದನೇ ಸ್ಥಾನದಲ್ಲಿದ್ದಾರೆ.
icon

(7 / 7)

ಜಸ್ಪ್ರೀತ್ ಬುಮ್ರಾ ನಂ.1 ಸ್ಥಾನದಲ್ಲಿದ್ದಾರೆ. ಯಜುವೇಂದ್ರ ಚಹಲ್ ಮತ್ತು ಹರ್ಷಲ್ ಪಟೇಲ್ ಈ ಪಟ್ಟಿಯಲ್ಲಿ ಎರಡು ಮತ್ತು ಮೂರನೇ ಸ್ಥಾನದಲ್ಲಿದ್ದಾರೆ. ಅಗ್ರಸ್ಥಾನದಲ್ಲಿರುವ ಮೂವರು ತಲಾ 13 ವಿಕೆಟ್ ಪಡೆದಿದ್ದಾರೆ. ಮುಸ್ತಾಫಿಜುರ್ ರೆಹಮಾನ್ ಐದನೇ ಸ್ಥಾನದಲ್ಲಿದ್ದಾರೆ.(AFP)


ಇತರ ಗ್ಯಾಲರಿಗಳು