ಮಯಾಂಕ್ ಯಾದವ್-ನಿತೀಶ್ ರೆಡ್ಡಿ ಕಣಕ್ಕಿಳಿಸಿ ವಿಶಿಷ್ಟ ದಾಖಲೆ ಬರೆದ ಭಾರತ; ಪಾಕಿಸ್ತಾನದ ರೆಕಾರ್ಡ್ ಬ್ರೇಕ್
- ಗ್ವಾಲಿಯರ್‌ನಲ್ಲಿ ನಡೆದ ಬಾಂಗ್ಲಾದೇಶ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಭಾರತೀಯ ಕ್ರಿಕೆಟ್ ತಂಡ ಸುಲಭ ಜಯ ಸಾಧಿಸಿತು. ಪಂದ್ಯದ ಮೂಲಕ ನಿತೀಶ್ ರೆಡ್ಡಿ ಮತ್ತು ಮಯಾಂಕ್ ಯಾದವ್ ಟೀಮ್ ಇಂಡಿಯಾ ಪಾದಾರ್ಪಣೆ ಮಾಡಿದರು. ಇದರೊಂದಿಗೆ ಅವರು ವಿಶಿಷ್ಠ ದಾಖಲೆ ಬರೆದಿದ್ದಾರೆ.
- ಗ್ವಾಲಿಯರ್‌ನಲ್ಲಿ ನಡೆದ ಬಾಂಗ್ಲಾದೇಶ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಭಾರತೀಯ ಕ್ರಿಕೆಟ್ ತಂಡ ಸುಲಭ ಜಯ ಸಾಧಿಸಿತು. ಪಂದ್ಯದ ಮೂಲಕ ನಿತೀಶ್ ರೆಡ್ಡಿ ಮತ್ತು ಮಯಾಂಕ್ ಯಾದವ್ ಟೀಮ್ ಇಂಡಿಯಾ ಪಾದಾರ್ಪಣೆ ಮಾಡಿದರು. ಇದರೊಂದಿಗೆ ಅವರು ವಿಶಿಷ್ಠ ದಾಖಲೆ ಬರೆದಿದ್ದಾರೆ.
(1 / 5)
ಗ್ವಾಲಿಯರ್‌ನಲ್ಲಿ ಭಾನುವಾರ ನಡೆದ ಬಾಂಗ್ಲಾದೇಶ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಮಯಾಂಕ್ ಯಾದವ್ ಮತ್ತು ನಿತೀಶ್ ರೆಡ್ಡಿ ಭಾರತ ತಂಡದ ಪರ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದರು. ಭಾರತ ತಂಡವು ಈ ಇಬ್ಬರು ಯುವ ಕ್ರಿಕೆಟಿಗರನ್ನು ಕಣಕ್ಕಿಳಿಸುವ ಮೂಲಕ ವಿಶೇಷ ದಾಖಲೆಯನ್ನು ಮಾಡಿತು. ಇದೇ ವೇಳೆ ಟೀಮ್ ಇಂಡಿಯಾ ಪಾಕಿಸ್ತಾನವನ್ನು ಹಿಂದಿಕ್ಕಿತು.(BCCI)
(2 / 5)
ನಿತೀಶ್ ರೆಡ್ಡಿ ಭಾರತ ತಂಡದ 116ನೇ ಟಿ20 ಕ್ರಿಕೆಟ್ ಆಟಗಾರ ಎನಿಸಿಕೊಂಡರು. ಇದೇ ವೇಳೆ ವೇಗಿ ಮಯಾಂಕ್ ಯಾದವ್ ಭಾರತದ 117ನೇ ಟಿ20 ಆಟಗಾರ ಎನಿಸಿಕೊಂಡಿದ್ದಾರೆ. ಇಬ್ಬರು ಕ್ರಿಕೆಟಿಗರು ಒಟ್ಟಿಗೆ ಪದಾರ್ಪಣೆ ಮಾಡಿದ ನಂತರ, ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್ ಆಡಿದ ಭಾರತೀರ ಸಂಖ್ಯೆ ಅತ್ಯಧಿಕವಾಗಿದೆ. ಅಂದರೆ, ಭಾರತವು ಇಲ್ಲಿಯವರೆಗೆ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಆಟಗಾರರನ್ನು ಕಣಕ್ಕಿಳಿಸಿದೆ.(PTI)
(3 / 5)
ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಪಾಕಿಸ್ತಾನದ ದಾಖಲೆಯನ್ನು ಭಾರತ ಮುರಿದಿದೆ. ಪಾಕಿಸ್ತಾನ ಪರ ಒಟ್ಟು 116 ಕ್ರಿಕೆಟಿಗರು ಟಿ20 ಪಂದ್ಯಗಳನ್ನಾಡಿದ್ದಾರೆ. ಆಸ್ಟ್ರೇಲಿಯಾ ಪರ ಒಟ್ಟು 111 ಆಟಗಾರರು ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್ ಆಡಿದ್ದಾರೆ. ಶ್ರೀಲಂಕಾ ಪರ 108 ಆಟಗಾರರು ಹಾಗೂ ಇಂಗ್ಲೆಂಡ್ ಜರ್ಸಿಯಲ್ಲಿ 104 ಆಟಗಾರರು ಟಿ20 ಆಡಿದ್ದಾರೆ.(BCCI)
(4 / 5)
ಚೊಚ್ಚಲ ಪಂದ್ಯದಲ್ಲಿ ನಿತೀಶ್ ರೆಡ್ಡಿ ಎರಡು ಓವರ್‌ಗಳನ್ನು ಎಸೆದು 17 ರನ್ ಬಿಟ್ಟುಕೊಟ್ಟರು. ಆದರೆ ಅವರು ಯಾವುದೇ ವಿಕೆಟ್ ಪಡೆಯಲಿಲ್ಲ. ಬ್ಯಾಟಿಂಗ್‌ನಲ್ಲಿ ನಿತೀಶ್ 15 ಎಸೆತಗಳಲ್ಲಿ 16 ರನ್ ಗಳಿಸಿ ಔಟಾಗದೆ ಉಳಿದರು. ಇದರಲ್ಲಿ 1 ಸಿಕ್ಸರ್ ಕೂಡಾ ಸೇರಿದೆ.(AFP)
ಇತರ ಗ್ಯಾಲರಿಗಳು