ಭಾರತ ವಿರುದ್ಧ ಗೆದ್ದ ರೆಕಾರ್ಡ್ ಹೊಂದಿದೆ ಬಾಂಗ್ಲಾದೇಶ; ಹೀಗಿದೆ ಮುಖಾಮುಖಿ ದಾಖಲೆ, ಹೆಚ್ಚು ರನ್ ಹಾಗೂ ವಿಕೆಟ್ ಪಡೆದವರ ವಿವರ
- ಟಿ20 ವಿಶ್ವಕಪ್ ಟೂರ್ನಿಯಲ್ಲಿ ಜೂನ್ 22ರ ಶನಿವಾರ ಆಂಟಿಗುವಾದ ಸರ್ ವಿವಿಯನ್ ರಿಚರ್ಡ್ಸ್ ಕ್ರೀಡಾಂಗಣದಲ್ಲಿ ಭಾರತ ಮತ್ತು ಬಾಂಗ್ಲಾದೇಶ ತಂಡಗಳ ನಡುವೆ ಸೂಪರ್ 8 ಪಂದ್ಯ ನಡೆಯುತ್ತಿದೆ. ಈಗಾಗಲೇ ಅಫ್ಘಾನಿಸ್ತಾನ ವಿರುದ್ಧದ ಮೊದಲ ಪಂದ್ಯದಲ್ಲಿ ಗೆದ್ದ ಭಾರತವು, ಸತತ ಎರಡನೇ ಪಂದ್ಯ ಗೆದ್ದು ಸೆಮಿಫೈನಲ್‌ಗೆ ಲಗ್ಗೆ ಹಾಕುವ ವಿಶ್ವಾಸದಲ್ಲಿದೆ.

(1 / 6)
ಈಗಾಗಲೇ ಆಸ್ಟ್ರೇಲಿಯಾ ವಿರುದ್ಧದ ಮೊದಲ ಸೂಪರ್ 8 ಮುಖಾಮುಖಿಯಲ್ಲಿ ಸೋತ ಬಾಂಗ್ಲಾದೇಶ, ಟೂರ್ನಿಯಿಂದ ಎಲಿಮನೇಟ್ ಆಗದಿರಲು ಭಾರತದ ವಿರುದ್ಧ ಗೆಲ್ಲಲೇಬೇಕಾಗಿದೆ. ಸೋತರೆ ಟಟೂರ್ನಿಯಿಂದ ಹೊರಬೀಳಲಿದೆ. (AP)
(2 / 6)
ಉದ್ಘಾಟನಾ ಆವೃತ್ತಿಯ ಟಿ20 ವಿಶ್ವಕಪ್‌ನಲ್ಲಿ ಚಾಂಪಿಯನ್ ಆಗಿರುವ ಭಾರತಕ್ಕೆ, ಬಾಂಗ್ಲಾದೇಶವು ಕೆಲವೊಮ್ಮೆ ಶಾಕ್ ಕೊಟ್ಟಿದೆ. ಆದರೂ, ಬಾಂಗ್ಲಾದೇಶದ ವಿರುದ್ಧ ಭಾರತ ಉತ್ತಮ ಗೆಲುವಿನ ದಾಖಲೆ ಹೊಂದಿದೆ. ಟಿ20 ಸ್ವರೂಪದಲ್ಲಿ ಉಭಯ ತಂಡಗಳ ಹೆಡ್ ಟು ಹೆಡ್ ದಾಖಲೆ ನೋಡೋಣ.(AP)
(3 / 6)
ಟಿ20 ಸ್ವರೂಪದಲ್ಲಿ ಈವರೆಗೆ ಉಭಯ ತಂಡಗಳು ಒಟ್ಟು 13 ಬಾರಿ ಮುಖಾಮುಖಿಯಾಗಿವೆ. ಅದರಲ್ಲಿ ಭಾರತವು ಟಿ20 ವಿಶ್ವಕಪ್‌ನಲ್ಲಿನ ನಾಲ್ಕು ಪಂದ್ಯ ಸೇರಿದಂತೆ 12 ಪಂದ್ಯಗಳಲ್ಲಿ ಗೆದ್ದಿದೆ. ಅತ್ತ ಬಾಂಗ್ಲಾದೇಶವು 2019ರಲ್ಲಿ ಭಾರತದಲ್ಲಿ ನಡೆದ ದ್ವಿಪಕ್ಷೀಯ ಸರಣಿಯಲ್ಲಿ ಒಂದರಲ್ಲಿ ಗೆದ್ದಿತ್ತು.(AP)
(4 / 6)
ಬಾರ್ಬಡೋಸ್‌ನ ಸರ್ ವಿವಿಯನ್ ರಿಚರ್ಡ್ಸ್ ಸ್ಟೇಡಿಯಂನಲ್ಲಿ ಭಾರತ ಮತ್ತು ಬಾಂಗ್ಲಾದೇಶ ತಂಡಗಳು ಈವರೆಗೆ ಆಡಿಲ್ಲ. ಇದೇ ಮೊದಲ ಬಾರಿಗೆ ಇಲ್ಲಿ ಆಡಲು ಸಜ್ಜಾಗಿವೆ. (PTI)
(5 / 6)
ಉಭಯ ತಂಡಗಳ ಮುಖಾಮುಖಿ ಸಮಯದಲ್ಲಿ ಹೆಚ್ಚು ರನ್ ಕಲೆ ಹಾಕಿದ ದಾಖಲೆ ರೋಹಿತ್ ಶರ್ಮಾ ಹೆಸರಲ್ಲಿದೆ. 12 ಟಿ20 ಪಂದ್ಯಗಳಲ್ಲಿ ಅವರು 454 ರನ್ ಪೇರಿಸಿದ್ದಾರೆ. (AP)
ಇತರ ಗ್ಯಾಲರಿಗಳು