ಐಪಿಎಲ್‌ನಲ್ಲಿ ಯುಜ್ವೇಂದ್ರ ಚಹಾಲ್ ವಿಕೆಟ್‌ಗಳ ದ್ವಿಶತಕ; ವಿಶೇಷ ಮೈಲಿಗಲ್ಲು ತಲುಪಿದ ಮೊದಲ ಹಾಗೂ ಏಕೈಕ ಬೌಲರ್
- ಐಪಿಎಲ್‌ನಲ್ಲಿ ರಾಜಸ್ಥಾನ್ ರಾಯಲ್ಸ್ ಸ್ಪಿನ್ನರ್ ಯುಜ್ವೇಂದ್ರ ಚಹಾಲ್ ಮಹತ್ವದ ಮೈಲಿಗಲ್ಲು ತಲುಪಿದ್ದಾರೆ. ಇದರೊಂದಿಗೆ ಇಂಡಿಯನ್ ಪ್ರೀಮಿಯರ್ ಲೀಗ್ ಇತಿಹಾಸದಲ್ಲೇ ಈ ಸಾಧನೆ ಮಾಡಿದ ಏಕೈಕ ಆಟಗಾರ ಎಂಬ ದಾಖಲೆ ನಿರ್ಮಿಸಿದ್ದಾರೆ. ಜೈಪುರದಲ್ಲಿ ನಡೆದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಯೂಜಿ ಈ ಸಾಧನೆ ಮಾಡಿದ್ದಾರೆ.

(1 / 6)
ಐಪಿಎಲ್ 2024ರ 38ನೇ ಪಂದ್ಯದಲ್ಲಿ, ಇಂದು (ಏಪ್ರಿಲ್ 22) ರಾಜಸ್ಥಾನ್ ರಾಯಲ್ಸ್ ಹಾಗೂ ಮುಂಬೈ ಇಂಡಿಯನ್ಸ್ ತಂಡಗಳು ಎದುರಾಗುತ್ತಿವೆ. ಪಂದ್ಯದಲ್ಲಿ ಆರ್‌ಆರ್ ಸ್ಪಿನ್ನರ್ ಯುಜ್ವೇಂದ್ರ ಚಹಾಲ್, 200ನೇ ಐಪಿಎಲ್ ವಿಕೆಟ್ ಕಬಳಿಸಿದ್ದಾರೆ. ಆ ಮೂಲಕ ಮಿಲಿಯನ್ ಡಾಲರ್ ಟೂರ್ನಿಯಲ್ಲಿ ಈ ಮೈಲುಗಲ್ಲು ತಲುಪಿದ ಮೊದಲ ಆಟಗಾರ ಎನಿಸಿಕೊಂಡಿದ್ದಾರೆ.(AP)
(2 / 6)
ಮುಂಬೈ ಇನ್ನಿಂಗ್ಸ್‌ನ 8ನೇ ಓವರ್ ಎಸೆದ ಚಹಾಲ್, ಓವರ್‌ನ 3ನೇ ಎಸೆತದಲ್ಲಿ ಮೊಹಮ್ಮದ್ ನಬಿ ವಿಕೆಟ್ ಕಬಳಿಸಿದರು. 200ನೇ ವಿಕೆಟ್ ಪಡೆದು ಮೈದಾನದಲ್ಲಿ ಮಂಡಿಯೂರಿ ಸಂಭ್ರಮಿಸಿದರು. ಅವರಿಗೆ ತಂಡದ ಸಹ ಆಟಗಾರರು ಅಭಿನಂದಿಸಿದರು.(AFP)
(3 / 6)
ಇದುವರೆಗೂ ಐಪಿಎಲ್‌ನಲ್ಲಿ 200ವಿಕೆಟ್ ಯಾರೂ ಕಬಳಿಸಿಲ್ಲ. ಇದೀಗ ಈ ಸಾಧನೆ ಚಹಾಲ್ ಮಾಡಿದ್ದಾರೆ. ಇವರನ್ನು ಹೊರತುಪಡಿಸಿದರೆ, ಸಿಎಸ್‌ಕೆ ತಂಡದ ಮಾಜಿ ಆಟಗಾರ ಡೇರನ್ ಬ್ರಾವೋ 183 ವಿಕೆಟ್ ಪಡೆದಿದ್ದಾರೆ. ಅವರು ಅತಿ ಹೆಚ್ಚು ವಿಕೆಟ್ ಕಬಳಿಸಿದವರ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ.(AP)
(4 / 6)
2013ರಿಂದ ಐಪಿಎಲ್‌ನಲ್ಲಿ ಆಡುತ್ತಿರುವ ಯೂಜಿ, ಈವರೆಗೆ ಮೂರು ತಂಡಗಳನ್ನು ಪ್ರತಿನಿಧಿಸಿದ್ದಾರೆ. ಆರಂಭದಲ್ಲಿ ಮುಂಬೈ ಪರ ಆಡುತ್ತಿದ್ದ ಅವರು, ಆ ಬಳಿಕ ಸುದೀರ್ಘ ವರ್ಷಗಳ ಕಾಲ ಆರ್‌ಸಿಬಿ ತಂಡದ ಪ್ರಮುಖ ಸ್ಪಿನ್ನರ್ ಆಗಿದ್ದರು. (AP)
(5 / 6)
ಈ ಹಿಂದೆ ವೇಗವಾಗಿ 150 ವಿಕೆಟ್‌ಗಳ ಮೈಲಿಗಲ್ಲು ತಲುಪಿದ ದಾಖಲೆ ಲಸಿತ್ ಮಲಿಂಗಾ ಹೆಸರಲ್ಲಿತ್ತು. ಅದಾದ ಬಳಿಕ ಯಾರೂ 200ರ ಸಮೀಪ ಬಂದಿರಲಿಲ್ಲ. (AP)
ಇತರ ಗ್ಯಾಲರಿಗಳು