ಆರ್‌ಸಿಬಿ ವಿರುದ್ಧ ಗೆದ್ದು ತವರಿನಲ್ಲಿ ವಿಶೇಷ ಅರ್ಧಶತಕ ಬಾರಿಸಿದ ಕೆಕೆಆರ್; ಐಪಿಎಲ್‌ನಲ್ಲಿ ಈ ಸಾಧನೆ ಮಾಡಿದ ಎರಡನೇ ತಂಡ
- KKR vs RCB: ಈಡನ್ ಗಾರ್ಡನ್ಸ್ ಮೈದಾನದಲ್ಲಿ ಕೋಲ್ಕತಾ ನೈಟ್ ರೈಡರ್ಸ್ ತಂಡವು ಏಪ್ರಿಲ್ 21ರ 85ನೇ ಐಪಿಎಲ್ ಪಂದ್ಯ ಆಡಿತು. ಆರ್‌ಸಿಬಿ ವಿರುದ್ಧ ರೋಚಕ ಗೆಲುವಿನೊಂದಿಗೆ ವಿಶಿಷ್ಟ ದಾಖಲೆಯನ್ನು ತನ್ನದಾಗಿಸಿತು. ಐಪಿಎಲ್ ಇತಿಹಾಸದಲ್ಲಿ ತವರು ನೆಲದಲ್ಲಿ 50 ಪಂದ್ಯಗಳನ್ನು ಗೆದ್ದ ಎರಡನೇ ತಂಡ ಎಂಬ ಹೆಗ್ಗಳಿಕೆಗೆ ಕೆಕೆಆರ್ ಪಾತ್ರವಾಗಿದೆ.

(1 / 5)
ಕೋಲ್ಕತಾ ನೈಟ್ ರೈಡರ್ಸ್ ತಂಡವು ಈಡನ್ ಗಾರ್ಡನ್ಸ್ ಮೈದಾನದಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಭರ್ಜರಿ ಜಯ ಸಾಧಿಸಿತು. ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಕೇವಲ 1 ರನ್‌ಗಳಿಂದ ಜಯಭೇರಿ ಬಾರಿಸಿತು. ಕೊನೆಯ ಎಸೆತದಲ್ಲಿ ಲಾಕಿ ಫರ್ಗ್ಯುಸನ್ ರನೌಟ್ ಆಗುವ ಮೂಲಕ ತಂಡ ಸೋಲೊಪ್ಪಿತು.(AFP)
(2 / 5)
ಕೋಲ್ಕತಾ ನೈಟ್ ರೈಡರ್ಸ್ ತವರು ನೆಲದಲ್ಲಿ 85ನೇ ಐಪಿಎಲ್ ಪಂದ್ಯವನ್ನು ಆಡಿತು. ಈಡನ್ ಗಾರ್ಡನ್ಸ್‌ನಲ್ಲಿ ಆರಗ್ಸಿಬಿ ವಿರುದ್ಧದ ಗೆಲುವಿನೊಂದಿಗೆ, ತಂಡವು ವಿಶಿಷ್ಟ ಪೂರ್ವನಿದರ್ಶನ ಸ್ಥಾಪಿಸಿದೆ. ಐಪಿಎಲ್ ಇತಿಹಾಸದಲ್ಲಿ ತವರು ನೆಲದಲ್ಲಿ 50 ಪಂದ್ಯಗಳನ್ನು ಗೆದ್ದ ಎರಡನೇ ತಂಡ ಎಂಬ ಹೆಗ್ಗಳಿಕೆಗೆ ಕೆಕೆಆರ್ ಪಾತ್ರವಾಗಿದೆ. ಇದಕ್ಕೂ ಮುನ್ನ ಮುಂಬೈ ಇಂಡಿಯನ್ಸ್ ವಾಂಖೆಡೆಯಲ್ಲಿ 50 ಐಪಿಎಲ್ ಪಂದ್ಯಗಳನ್ನು ಗೆದ್ದಿದೆ.(ANI)
(3 / 5)
ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ಕೋಲ್ಕತ್ತಾ 6 ವಿಕೆಟ್ ನಷ್ಟಕ್ಕೆ 222 ರನ್ ಗಳಿಸಿತು.(PTI)
(4 / 5)
ಇದಕ್ಕೆ ಪ್ರತಿಯಾಗಿ ಆರ್‌ಸಿಬಿ ಪರ ವಿರಾಟ್ ಕೊಹ್ಲಿ ಮತ್ತು ಫಾಫ್ ಡು ಪ್ಲೆಸಿಸ್ ಉತ್ತರಿಸಲು ವಿಫಲರಾದರು. ಆದರೆ ವಿಲ್ ಜಾಕ್ಸ್ (32 ಎಸೆತಗಳಲ್ಲಿ 55 ರನ್) ಮತ್ತು ರಜತ್ ಪಾಟೀದಾರ್ (23 ಎಸೆತಗಳಲ್ಲಿ 52 ರನ್) ಬೆಂಗಳೂರು ತಂಡವನ್ನು ಬಹುತೇಕ ಗೆಲುವಿನತ್ತ ಕೊಂಡೊಯ್ದರು. ಕೊನೆಯ ಓವರ್ನಲ್ಲಿ ಸ್ಟಾರ್ಕ್ ಎಸೆತಗಳಲ್ಲಿ ಕರಣ್ ಶರ್ಮಾ ಮೂರು ಸಿಕ್ಸರ್ ಸಿಡಿಸಿದರು. ಅವರು ಔಟಾದ ನಂತರ, ಕೊನೆಯ ಎಸೆತದಲ್ಲಿ ತಂಡಕ್ಕೆ 3 ರನ್ ಅವಶ್ಯಕತೆಯಿತ್ತು. ಲಾಕಿ ಫರ್ಗುಸನ್ ಎರಡನೇ ರನ್ ಓಡುವ ವೇಳೆ ಔಟಾದರು.(PTI)
ಇತರ ಗ್ಯಾಲರಿಗಳು