ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಕ್ರಿಕೆಟ್ ಹಿನ್ನೆಲೆಯುಳ್ಳ ಅತ್ಯುತ್ತಮ ತೆಲುಗು ಸಿನಿಮಾಗಳ ಒಂದು ನೋಟ; ಯಾವ ಚಿತ್ರ, ಯಾವ ಓಟಿಟಿಯಲ್ಲಿ ಲಭ್ಯ?

ಕ್ರಿಕೆಟ್ ಹಿನ್ನೆಲೆಯುಳ್ಳ ಅತ್ಯುತ್ತಮ ತೆಲುಗು ಸಿನಿಮಾಗಳ ಒಂದು ನೋಟ; ಯಾವ ಚಿತ್ರ, ಯಾವ ಓಟಿಟಿಯಲ್ಲಿ ಲಭ್ಯ?

Cricket Backdrop Telugu Movies: ಟಿ20 ವಿಶ್ವಕಪ್​​ 2024ನಲ್ಲಿ ಟೀಮ್ ಇಂಡಿಯಾ ಫೈನಲ್ ಪ್ರವೇಶಿಸಿದೆ. ಜೂನ್ 29ರ ಶನಿವಾರ ಫೈನಲ್​ನಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು ಎದುರಿಸಲಿದೆ. ಅದಕ್ಕೂ ಮುನ್ನ ಒಟಿಟಿಯಲ್ಲಿ ಕ್ರಿಕೆಟ್ ಹಿನ್ನೆಲೆಯುಳ್ಳ ತೆಲುಗು ಸಿನಿಮಾಗಳ ಒಂದು ನೋಟ ಇಲ್ಲಿದೆ.

ನ್ಯೂಚುರಲ್ ಸ್ಟಾರ್ ನಾನಿ ಅವರ ತೆಲುಗು ಚಿತ್ರ  ಜರ್ಸಿ ಅಮೆಜಾನ್ ಪ್ರೈಮ್​ ಒಟಿಟಿಯಲ್ಲಿ ಪ್ರಸಾರವಾಗುತ್ತಿದೆ. ಇದು ತಮ್ಮ ಮಗನಿಗೆ ನೀಡಿದ ಭರವಸೆಗಾಗಿ 30 ವರ್ಷಗಳ ನಂತರ ಕ್ರಿಕೆಟ್​ಗೆ ಮರಳಿದ ತಂದೆಯ ಕಥೆಯಾಗಿದೆ. ನಿರ್ದೇಶಕ ಗೌತಮ್ ತಿನ್ನನುರಿ.
icon

(1 / 5)

ಐಶ್ವರ್ಯ ರಾಜೇಶ್ ಅವರು ಮುಖ್ಯ ಪಾತ್ರದಲ್ಲಿ ನಟಿಸಿರುವ  ಕೌಸಲ್ಯಾ ಕೃಷ್ಣಮೂರ್ತಿ ಚಿತ್ರವು ಪ್ರೇಕ್ಷಕರ ಮೆಚ್ಚುಗೆ ಪಡೆಯುವಲ್ಲಿ ಯಶಸ್ವಿಯಾಗಿತ್ತು. ಈ ಚಿತ್ರವು ಸನ್ಸ್ ನೆಕ್ಸ್ಟ್ ಒಟಿಟಿಯಲ್ಲಿ ಲಭ್ಯವಿದೆ. ಹಳ್ಳಿಯ ಯುವತಿಯೊಬ್ಬಳು ರಾಷ್ಟ್ರೀಯ ಕ್ರಿಕೆಟ್ ತಂಡದ ಪರ ಆಡುವ ತನ್ನ ಕನಸನ್ನು ಹೇಗೆ ಈಡೇರಿಸಿದಳು ಎಂಬುದು ಈ ಚಿತ್ರದ ಕಥೆಯಾಗಿದೆ.
icon

(2 / 5)

ಕ್ರಿಕೆಟ್ ಹಿನ್ನೆಲೆಯನ್ನು ಹೊಂದಿರುವ ನಾಗ ಚೈತನ್ಯ ಮಜಿಲಿಯನ್ನು ಡಿಸ್ನಿ ಪ್ಲಸ್ ಹಾಟ್​ಸ್ಟಾರ್ ಮತ್ತು ಅಮೆಜಾನ್ ಪ್ರೈಮ್​ನಲ್ಲಿ ವೀಕ್ಷಿಸಬಹುದು. ಮಜಿಲಿ ಕ್ರಿಕೆಟಿಗನ ವೈಯಕ್ತಿಕ ಜೀವನದ ಏರಿಳಿತಗಳನ್ನು ಆಧರಿಸಿದ ಭಾವನಾತ್ಮಕ ಕಥೆಯಾಗಿದೆ. ಇದರಲ್ಲಿ ಸಮಂತಾ ಮತ್ತು ದಿವ್ಯಾಂಶ್ ಕೌಶಿಕ್ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. 
icon

(3 / 5)

ಸುಮಂತ್ ಮುಖ್ಯ ಪಾತ್ರದಲ್ಲಿ ನಟಿಸಿದ ಮೋಹನ ಕೃಷ್ಣ ಇಂದ್ರಗಂಟಿ ನಿರ್ದೇಶನದ ಗೋಲ್ಕೊಂಡ ಹೈಸ್ಕೂಲ್ ಅದ್ಭುತ ಯಶಸ್ಸು ಕಂಡಿತು. ಕ್ರಿಕೆಟ್ ಟೂರ್ನಿಯಲ್ಲಿ ಕೋಚ್​ ತನ್ನ ಶಾಲಾ ತಂಡವನ್ನು ಹೇಗೆ ವಿಜೇತನನ್ನಾಗಿ ಮಾಡಿದರು ಎಂಬುದೇ ಈ ಚಿತ್ರದ ಕಥೆಯಾಗಿದೆ. ಈ ಚಿತ್ರವು ಝೀ 5 ಒಟಿಟಿಯಲ್ಲಿ ಬಿಡುಗಡೆಯಾಗಿದೆ.
icon

(4 / 5)

ಡಿಯರ್ ಕಾಮ್ರೇಡ್, ಧೋನಿ, ವಸಂತಂ ಮತ್ತು ಕ್ರಿಕೆಟ್ ಹಿನ್ನೆಲೆಯಲ್ಲಿ ತೆಲುಗಿನಲ್ಲಿ ಬಂದ ಇತರ ಕೆಲವು ಚಿತ್ರಗಳು ತೆಲುಗು ಪ್ರೇಕ್ಷಕರನ್ನು ರಂಜಿಸಿವೆ. 
icon

(5 / 5)

ಇತರ ಗ್ಯಾಲರಿಗಳು