ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಸ್ಮೃತಿ ಮಂಧಾನ ಸತತ 2ನೇ ಸೆಂಚುರಿ; ಮಿಥಾಲಿ ರಾಜ್ ಶತಕಗಳ ದಾಖಲೆ ಸರಿಗಟ್ಟಿದ ಆರ್​ಸಿಬಿ ಕ್ಯಾಪ್ಟನ್

ಸ್ಮೃತಿ ಮಂಧಾನ ಸತತ 2ನೇ ಸೆಂಚುರಿ; ಮಿಥಾಲಿ ರಾಜ್ ಶತಕಗಳ ದಾಖಲೆ ಸರಿಗಟ್ಟಿದ ಆರ್​ಸಿಬಿ ಕ್ಯಾಪ್ಟನ್

  • Smriti Mandhana: ಸೌತ್ ಆಫ್ರಿಕಾ ಬೌಲರ್​​ಗಳಿಗೆ ಬೆಂಡೆತ್ತಿದ ಸ್ಮೃತಿ ಮಂಧಾನ ಅವರು ಮಹಿಳಾ ಏಕದಿನ ಕ್ರಿಕೆಟ್​ನಲ್ಲಿ 7 ಶತಕ ಪೂರೈಸಿ ಮಿಥಾಲಿ ರಾಜ್ ದಾಖಲೆ ಸರಿಗಟ್ಟಿದ್ದಾರೆ.

ದಕ್ಷಿಣ ಆಫ್ರಿಕಾ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲೂ ಅಮೋಘ ಶತಕ ಸಿಡಿಸಿದ ಸ್ಮೃತಿ ಮಂಧಾನ, ದಿಗ್ಗಜ ಆಟಗಾರ್ತಿ ಮಿಥಾಲಿ ರಾಜ್ ಅವರ ಶತಕಗಳ ದಾಖಲೆ ಸರಿಗಟ್ಟಿದ್ದಾರೆ.
icon

(1 / 5)

ದಕ್ಷಿಣ ಆಫ್ರಿಕಾ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲೂ ಅಮೋಘ ಶತಕ ಸಿಡಿಸಿದ ಸ್ಮೃತಿ ಮಂಧಾನ, ದಿಗ್ಗಜ ಆಟಗಾರ್ತಿ ಮಿಥಾಲಿ ರಾಜ್ ಅವರ ಶತಕಗಳ ದಾಖಲೆ ಸರಿಗಟ್ಟಿದ್ದಾರೆ.(BCCI Women X)

ಬೆಂಗಳೂರಿನ ಚಿನ್ನಸ್ವಾಮಿ ಮೈದಾನದಲ್ಲಿ ನಡೆದ ಮೊದಲ ಎರಡು ಪಂದ್ಯಗಳಲ್ಲೂ ಸ್ಮೃತಿ ಮಂಧಾನ ಸತತ ಸೆಂಚುರಿ ಬಾರಿಸಿದ್ದಾರೆ. ಆ ಮೂಲಕ ಭಾರತ ಮಹಿಳಾ ತಂಡದ ಪರ ಅತ್ಯಧಿಕ ಶತಕ ಸಿಡಿಸಿದವರ ಪಟ್ಟಿಯಲ್ಲಿ ಜಂಟಿಯಾಗಿ ಅಗ್ರಸ್ಥಾನ ಪಡೆದಿದ್ದಾರೆ.
icon

(2 / 5)

ಬೆಂಗಳೂರಿನ ಚಿನ್ನಸ್ವಾಮಿ ಮೈದಾನದಲ್ಲಿ ನಡೆದ ಮೊದಲ ಎರಡು ಪಂದ್ಯಗಳಲ್ಲೂ ಸ್ಮೃತಿ ಮಂಧಾನ ಸತತ ಸೆಂಚುರಿ ಬಾರಿಸಿದ್ದಾರೆ. ಆ ಮೂಲಕ ಭಾರತ ಮಹಿಳಾ ತಂಡದ ಪರ ಅತ್ಯಧಿಕ ಶತಕ ಸಿಡಿಸಿದವರ ಪಟ್ಟಿಯಲ್ಲಿ ಜಂಟಿಯಾಗಿ ಅಗ್ರಸ್ಥಾನ ಪಡೆದಿದ್ದಾರೆ.(PTI)

ಎರಡನೇ ಏಕದಿನ ಪಂದ್ಯದಲ್ಲಿ 120 ಎಸೆತಗಳಲ್ಲಿ 18 ಬೌಂಡರಿ, 2 ಸಿಕ್ಸರ್​ ಸಹಿತ 136 ರನ್ ಗಳಿಸಿದ್ದಾರೆ. ಮೊದಲ ಏಕದಿನ ಪಂದ್ಯದಲ್ಲಿ 127 ಎಸೆತಗಳಲ್ಲಿ 12 ಬೌಂಡರಿ, 1 ಸಿಕ್ಸರ್ ಸಹಿತ 117 ರನ್ ಗಳಿಸಿದ್ದರು.
icon

(3 / 5)

ಎರಡನೇ ಏಕದಿನ ಪಂದ್ಯದಲ್ಲಿ 120 ಎಸೆತಗಳಲ್ಲಿ 18 ಬೌಂಡರಿ, 2 ಸಿಕ್ಸರ್​ ಸಹಿತ 136 ರನ್ ಗಳಿಸಿದ್ದಾರೆ. ಮೊದಲ ಏಕದಿನ ಪಂದ್ಯದಲ್ಲಿ 127 ಎಸೆತಗಳಲ್ಲಿ 12 ಬೌಂಡರಿ, 1 ಸಿಕ್ಸರ್ ಸಹಿತ 117 ರನ್ ಗಳಿಸಿದ್ದರು.(PTI)

ಸೌತ್ ಆಫ್ರಿಕಾ ಬೌಲರ್​​ಗಳಿಗೆ ಬೆಂಡೆತ್ತಿದ ಸ್ಮೃತಿ, ಮಹಿಳಾ ಏಕದಿನ ಕ್ರಿಕೆಟ್​ನಲ್ಲಿ 7 ಶತಕ ಪೂರೈಸಿ ಮಿಥಾಲಿ ರಾಜ್ ದಾಖಲೆ ಸರಿಗಟ್ಟಿದ್ದಾರೆ. ಮಿಥಾಲಿ ಕೂಡ ಅಷ್ಟೇ ಶತಕ ಬಾರಿಸಿದ ದಾಖಲೆ ಹೊಂದಿದ್ದಾರೆ.
icon

(4 / 5)

ಸೌತ್ ಆಫ್ರಿಕಾ ಬೌಲರ್​​ಗಳಿಗೆ ಬೆಂಡೆತ್ತಿದ ಸ್ಮೃತಿ, ಮಹಿಳಾ ಏಕದಿನ ಕ್ರಿಕೆಟ್​ನಲ್ಲಿ 7 ಶತಕ ಪೂರೈಸಿ ಮಿಥಾಲಿ ರಾಜ್ ದಾಖಲೆ ಸರಿಗಟ್ಟಿದ್ದಾರೆ. ಮಿಥಾಲಿ ಕೂಡ ಅಷ್ಟೇ ಶತಕ ಬಾರಿಸಿದ ದಾಖಲೆ ಹೊಂದಿದ್ದಾರೆ.

ಸ್ಮೃತಿ ಮಂಧಾನ 84 ಏಕದಿನ ಪಂದ್ಯಗಳಲ್ಲಿ 7 ಸೆಂಚುರಿ ಸಿಡಿಸಿದರೆ, ಮಿಥಾಲಿ 232 ಏಕದಿನಗಳಲ್ಲಿ 7 ಶತಕ ಬಾರಿಸಿದ್ದಾರೆ. ಶೀಘ್ರದಲ್ಲೇ ಮಿಥಾಲಿ ದಾಖಲೆಯನ್ನು ಸ್ಮೃತಿ ಮುರಿಯಲಿದ್ದಾರೆ.
icon

(5 / 5)

ಸ್ಮೃತಿ ಮಂಧಾನ 84 ಏಕದಿನ ಪಂದ್ಯಗಳಲ್ಲಿ 7 ಸೆಂಚುರಿ ಸಿಡಿಸಿದರೆ, ಮಿಥಾಲಿ 232 ಏಕದಿನಗಳಲ್ಲಿ 7 ಶತಕ ಬಾರಿಸಿದ್ದಾರೆ. ಶೀಘ್ರದಲ್ಲೇ ಮಿಥಾಲಿ ದಾಖಲೆಯನ್ನು ಸ್ಮೃತಿ ಮುರಿಯಲಿದ್ದಾರೆ.(PTI)


ಇತರ ಗ್ಯಾಲರಿಗಳು