ಎಸ್ಆರ್ಹೆಚ್ ವಿರುದ್ಧ ಪವರ್ಪ್ಲೇನಲ್ಲಿ 3 ವಿಕೆಟ್ ಪಡೆದು 5 ದಾಖಲೆ ನಿರ್ಮಿಸಿದ ಟ್ರೆಂಟ್ ಬೋಲ್ಟ್
- Trent Boult Records : ಐಪಿಎಲ್-2024 ಕ್ವಾಲಿಫೈಯರ್ ಪಂದ್ಯದಲ್ಲಿ ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಪವರ್ಪ್ಲೇನಲ್ಲಿ 3 ವಿಕೆಟ್ ಪಡೆದ ರಾಜಸ್ಥಾನ್ ರಾಯಲ್ಸ್ ವೇಗಿ ಟ್ರೆಂಟ್ ಬೋಲ್ಟ್ ಐದು ದಾಖಲೆ ಬರೆದಿದ್ದಾರೆ.
- Trent Boult Records : ಐಪಿಎಲ್-2024 ಕ್ವಾಲಿಫೈಯರ್ ಪಂದ್ಯದಲ್ಲಿ ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಪವರ್ಪ್ಲೇನಲ್ಲಿ 3 ವಿಕೆಟ್ ಪಡೆದ ರಾಜಸ್ಥಾನ್ ರಾಯಲ್ಸ್ ವೇಗಿ ಟ್ರೆಂಟ್ ಬೋಲ್ಟ್ ಐದು ದಾಖಲೆ ಬರೆದಿದ್ದಾರೆ.
(1 / 8)
17ನೇ ಆವೃತ್ತಿಯ ಐಪಿಎಲ್ನ ಎರಡನೇ ಪ್ಲೇಆಫ್ ಪಂದ್ಯದಲ್ಲಿ ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಪವರ್ಪ್ಲೇನಲ್ಲಿ ಮೂರು ವಿಕೆಟ್ ಪಡೆಯುವ ಮೂಲಕ ರಾಜಸ್ಥಾನ್ ರಾಯಲ್ಸ್ ಬೌಲರ್ ಟ್ರೆಂಟ್ ಬೋಲ್ಟ್ ದಾಖಲೆ ಬರೆದಿದ್ದಾರೆ.(PTI)
(2 / 8)
ಐಪಿಎಲ್ ಆವೃತ್ತಿಯೊಂದರ ಪವರ್ಪ್ಲೇನಲ್ಲಿ ಅತ್ಯಧಿಕ ವಿಕೆಟ್ ಪಡೆದ ಬೌಲರ್ ಎನಿಸಿದ್ದಾರೆ. ಅಭಿಷೇಕ್ ಶರ್ಮಾ ಅವರನ್ನು ಔಟ್ ಮಾಡಿದ ಬಳಿಕ ಈ ಸಾಧನೆ ಮಾಡಿದರು. 2024ರಲ್ಲಿ ಮೊದಲ ಓವರ್ನಲ್ಲೇ 7 ವಿಕೆಟ್ ಪಡೆದಿದ್ದಾರೆ. (ANI)
(3 / 8)
ಬೋಲ್ಟ್ 2020ರಲ್ಲಿ 8, 2023ರಲ್ಲಿ 7, 2022ರಲ್ಲಿ 6 ವಿಕೆಟ್ಗಳನ್ನು ಇನ್ನಿಂಗ್ಸ್ನ ಆರಂಭಿಕ ಓವರ್ನಲ್ಲೇ ಪಡೆದಿದ್ದಾರೆ. ಭುವನೇಶ್ವರ್ (2016) ಮತ್ತು ಸಿರಾಜ್ (2023) ತಲಾ 6 ವಿಕೆಟ್ ಪಡೆದಿದ್ದಾರೆ.(PTI)
(4 / 8)
ಐಪಿಎಲ್ ಇತಿಹಾಸದಲ್ಲೇ ಆರಂಭಿಕ ಓವರ್ನಲ್ಲೇ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎಂಬ ಹೆಗ್ಗಳಿಕೆಗೂ ಬೋಲ್ಟ್ ಪಾತ್ರರಾಗಿದ್ದಾರೆ. ಬೋಲ್ಟ್ 29 ವಿಕೆಟ್ ಪಡೆದು ಅಗ್ರಸ್ಥಾನದಲ್ಲಿದ್ದರೆ, ಭುವೇಶ್ವರ್ ಕುಮಾರ್ 27, ಪ್ರವೀಣ್ ಕುಮಾರ್ 15, ದೀಪಕ್ ಚಹರ್ 13, ಸಂದೀಪ್ ಶರ್ಮಾ 13 ವಿಕೆಟ್ ಪಡೆದು ನಂತರದ ಸ್ಥಾನದಲ್ಲಿದ್ದಾರೆ.(PTI)
(5 / 8)
2024ರ ಐಪಿಎಲ್ನ ಪವರ್ಪ್ಲೇನಲ್ಲಿ ಅತ್ಯಧಿಕ ಬ್ಯಾಟರ್ಗಳನ್ನು ಔಟ್ ಮಾಡಿದ ದಾಖಲೆಯನ್ನೂ ಬೋಲ್ಟ್ ತನ್ನ ಹೆಸರಿಗೆ ಬರೆದುಕೊಂಡಿದ್ದಾರೆ. ಪವರ್ಪ್ಲೇನಲ್ಲಿ12 ವಿಕೆಟ್ ಪಡೆದಿದ್ದಾರೆ. ಭುವನೇಶ್ವರ್ ಕುಮಾರ್ 10, ಮಿಚೆಲ್ ಸ್ಟಾರ್ಕ್ 9, ವೈಭವ್ ಅರೋರಾ ಮತ್ತು ಖಲೀಲ್ ಅಹ್ಮದ್ ತಲಾ 8 ವಿಕೆಟ್ಗಳನ್ನು ಪವರ್ಪ್ಲೇನಲ್ಲಿ ಪಡೆದಿದ್ದಾರೆ.(IPL-X)
(6 / 8)
ಟ್ರೆಂಟ್ ಬೋಲ್ಟ್ ಟಿ20 ಕ್ರಿಕೆಟ್ ಇತಿಹಾಸದಲ್ಲಿ ಮತ್ತೊಂದು ದಾಖಲೆ ಬರೆದಿದ್ದಾರೆ. ಚುಟುಕು ಕ್ರಿಕೆಟ್ನಲ್ಲಿ (ಅಂತಾರಾಷ್ಟ್ರೀಯ ಮತ್ತು ಫ್ರಾಂಚೈಸಿ ಲೀಗ್ ಸೇರಿ) ಪವರ್ಪ್ಲೇನಲ್ಲೇ 100 ವಿಕೆಟ್ ಪಡೆದ ಮೂರನೇ ಬೌಲರ್ ಎನಿಸಿದ್ದಾರೆ. ಡೇವಿಡ್ ವಿಲ್ಲಿ 128 (ಇಂಗ್ಲೆಂಡ್), ಭುವನೇಶ್ವರ್ ಕುಮಾರ್ 118 (ಭಾರತ), ಟ್ರೆಂಟ್ ಬೋಲ್ಟ್ 101 (ನ್ಯೂಜಿಲೆಂಡ್) ಅಗ್ರ ಮೂರು ಸ್ಥಾನದಲ್ಲಿದ್ದಾರೆ.(IPL - X)
(7 / 8)
ಐಪಿಎಲ್ನಲ್ಲಿ ಬೋಲ್ಟ್ ಮತ್ತೊಂದು ಇತಿಹಾಸ ಸೃಷ್ಟಿಸಿದ್ದಾರೆ. ಪವರ್ ಪ್ಲೇನಲ್ಲಿ ಅತ್ಯಧಿಕ ವಿಕೆಟ್ ಪಡೆದ 2ನೇ ಬೌಲರ್ ಎನಿಸಿದ್ದಾರೆ. ಭುವನೇಶ್ವರ್ 71 ವಿಕೆಟ್ ಉರುಳಿಸಿ ಮೊದಲ ಸ್ಥಾನ ಪಡೆದಿದ್ದಾರೆ. ಎಸ್ಆರ್ಹೆಚ್ ವಿರುದ್ಧ ಪವರ್ಪ್ಲೇನಲ್ಲಿ 3 ವಿಕೆಟ್ ಪಡೆದು ಎರಡನೇ ಸ್ಥಾನ ಪಡೆದಿದ್ದಾರೆ.(AP)
ಇತರ ಗ್ಯಾಲರಿಗಳು