ಅಂದು ವೈರಿಗಳಂತಿದ್ದ ಈ ಇಬ್ಬರು ಇಂದು ಆತ್ಮೀಯರು; ವಿರಾಟ್ ಕೊಹ್ಲಿ ಹಾಸ್ಯಕ್ಕೆ ನಕ್ಕು ಸುಸ್ತಾದ ಗೌತಮ್ ಗಂಭೀರ್ -Photos-cricket news virat kohli gautam gambhir smiles during practice session ahead of first test india vs bangladesh jra ,ಫೋಟೋ ಗ್ಯಾಲರಿ ಸುದ್ದಿ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಅಂದು ವೈರಿಗಳಂತಿದ್ದ ಈ ಇಬ್ಬರು ಇಂದು ಆತ್ಮೀಯರು; ವಿರಾಟ್ ಕೊಹ್ಲಿ ಹಾಸ್ಯಕ್ಕೆ ನಕ್ಕು ಸುಸ್ತಾದ ಗೌತಮ್ ಗಂಭೀರ್ -Photos

ಅಂದು ವೈರಿಗಳಂತಿದ್ದ ಈ ಇಬ್ಬರು ಇಂದು ಆತ್ಮೀಯರು; ವಿರಾಟ್ ಕೊಹ್ಲಿ ಹಾಸ್ಯಕ್ಕೆ ನಕ್ಕು ಸುಸ್ತಾದ ಗೌತಮ್ ಗಂಭೀರ್ -Photos

  • ಹಿಂದೆ ಶತ್ರುಗಳಂತೆ ನಡೆದುಕೊಳ್ಳುತ್ತಿದ್ದ ವಿರಾಟ್ ಕೊಹ್ಲಿ ಮತ್ತು ಗೌತಮ್ ಗಂಭೀರ್, ಈಗ ಆತ್ಮೀಯ ಸ್ನೇಹಿತರಾಗಿದ್ದಾರೆ. ಗೌತಿ ಭಾರತ ತಂಡದ ಮುಖ್ಯ ಕೋಚ್‌ ಆದಾಗಿಂದ ಇಬ್ಬರ ನಡುವೆ ಉತ್ತಮ ಬಾಂಧವ್ಯ ಕಾಣುತ್ತಿದೆ. ಇಗೀಗ ಭಾರತ ಮತ್ತು ಬಾಂಗ್ಲಾದೇಶ ನಡುವಿನ ಟೆಸ್ಟ್ ಸರಣಿಗೂ ಮುನ್ನ ತರಬೇತಿ ಅವಧಿಯಲ್ಲಿ ಇವರ ಫ್ರೆಂಡ್‌ಶಿಪ್‌ ಕ್ಯಾಮೆರಾ ಕಾಣ್ಣುಗಳಲ್ಲಿ ಸೆರೆಯಾಗಿದೆ.

ಭಾರತ ಕ್ರಿಕೆಟ್‌ ತಂಡದ ಆಟಗಾರ ವಿರಾಟ್ ಕೊಹ್ಲಿ ಹಾಗೂ ಕೋಚ್‌ ಗೌತಮ್ ಗಂಭೀರ್ ಹೀಗೆ ಪರಸ್ಪರ ನಗುತ್ತಾ ಮಾತನಾಡುತ್ತಿದ್ದಾರೆ ಎಂಬುದನ್ನು ನಂಬೋದು ಕಷ್ಟ. ಆದರೆ, ಇದು ವಾಸ್ತವ. ದೆಹಲಿಯವರಾದ ಈ ಇಬ್ಬರು ಪರಸ್ಪರ ಶತ್ರುಗಳಂತಿದ್ದರು. ಆದರೆ, ಗಂಭೀರ್ ಭಾರತ ತಂಡದ ಮುಖ್ಯ ಕೋಚ್ ಆದ ನಂತರ ವಿರಾಟ್ ಅವರೊಂದಿಗೆ ಆತ್ಮೀಯತೆಯಿಂದ ಇದ್ದಾರೆ. ಅದಕ್ಕೆ ಈ ಫೋಟೋಗಳು ಸಾಕ್ಷಿ. ಈ ಫೋಟೋಸ್‌ ನೋಡಿದರೆ, ಇವರಿಬ್ಬರು ಹಿಂದೆ ಮೈದಾನದಲ್ಲೇ ಜಗಳವಾಡಿದ್ದರು ಎಂಬುದು ಮರೆತೇ ಹೋಗುತ್ತದೆ.
icon

(1 / 7)

ಭಾರತ ಕ್ರಿಕೆಟ್‌ ತಂಡದ ಆಟಗಾರ ವಿರಾಟ್ ಕೊಹ್ಲಿ ಹಾಗೂ ಕೋಚ್‌ ಗೌತಮ್ ಗಂಭೀರ್ ಹೀಗೆ ಪರಸ್ಪರ ನಗುತ್ತಾ ಮಾತನಾಡುತ್ತಿದ್ದಾರೆ ಎಂಬುದನ್ನು ನಂಬೋದು ಕಷ್ಟ. ಆದರೆ, ಇದು ವಾಸ್ತವ. ದೆಹಲಿಯವರಾದ ಈ ಇಬ್ಬರು ಪರಸ್ಪರ ಶತ್ರುಗಳಂತಿದ್ದರು. ಆದರೆ, ಗಂಭೀರ್ ಭಾರತ ತಂಡದ ಮುಖ್ಯ ಕೋಚ್ ಆದ ನಂತರ ವಿರಾಟ್ ಅವರೊಂದಿಗೆ ಆತ್ಮೀಯತೆಯಿಂದ ಇದ್ದಾರೆ. ಅದಕ್ಕೆ ಈ ಫೋಟೋಗಳು ಸಾಕ್ಷಿ. ಈ ಫೋಟೋಸ್‌ ನೋಡಿದರೆ, ಇವರಿಬ್ಬರು ಹಿಂದೆ ಮೈದಾನದಲ್ಲೇ ಜಗಳವಾಡಿದ್ದರು ಎಂಬುದು ಮರೆತೇ ಹೋಗುತ್ತದೆ.(PTI)

ಕೊಹ್ಲಿ ಮತ್ತು ಗಂಭೀರ್ ನಡುವೆ ವೈರತ್ವವಿದೆ ಎಂದೇ ಹೇಳಲಾಗಿತ್ತು. ಆದರೆ ಈಗ ಅವರಿಬ್ಬರೂ ಈ ರೀತಿ ನಗುತ್ತಿರುವುದು ಅಭಿಮಾನಿಗಳಿಗೆ ಸಂತೋಷವನ್ನುಂಟು ಮಾಡಿದೆ. ಬಾಂಗ್ಲಾದೇಶ ವಿರುದ್ಧದ ಟೆಸ್ಟ್‌ ಪಂದ್ಯಕ್ಕೂ ಮುನ್ನ ಈ ಸನ್ನಿವೇಶ ಸೃಷ್ಟಿಯಾಗಿದೆ. ಮುಖ್ಯ ಆಯ್ಕೆದಾರ ಅಜಿತ್ ಅಗರ್ಕರ್ ಕೂಡ ಅವರ ನಡುವೆ ಬಂದು ಸಂತೋಷವನ್ನು ಹಂಚಿಕೊಂಡರು.
icon

(2 / 7)

ಕೊಹ್ಲಿ ಮತ್ತು ಗಂಭೀರ್ ನಡುವೆ ವೈರತ್ವವಿದೆ ಎಂದೇ ಹೇಳಲಾಗಿತ್ತು. ಆದರೆ ಈಗ ಅವರಿಬ್ಬರೂ ಈ ರೀತಿ ನಗುತ್ತಿರುವುದು ಅಭಿಮಾನಿಗಳಿಗೆ ಸಂತೋಷವನ್ನುಂಟು ಮಾಡಿದೆ. ಬಾಂಗ್ಲಾದೇಶ ವಿರುದ್ಧದ ಟೆಸ್ಟ್‌ ಪಂದ್ಯಕ್ಕೂ ಮುನ್ನ ಈ ಸನ್ನಿವೇಶ ಸೃಷ್ಟಿಯಾಗಿದೆ. ಮುಖ್ಯ ಆಯ್ಕೆದಾರ ಅಜಿತ್ ಅಗರ್ಕರ್ ಕೂಡ ಅವರ ನಡುವೆ ಬಂದು ಸಂತೋಷವನ್ನು ಹಂಚಿಕೊಂಡರು.(PTI)

ಬೇರೆಯವರೊಂದಿಗೆ ಏನೇ ತಮಾಷೆ ಮಾಡಿದರೂ, ವಿರಾಟ್ ಮತ್ತು ಗಂಭೀರ್‌ ಯಾವುತ್ತೂ ಗಂಭೀರವಾಗಿ ಕಾಣುತ್ತಿದ್ದರು. ಆದರೆ, ಈ ಫೋಟೋ ನೋಡಿ. ಗಂಭೀರ್ ಈ ರೀತಿ ಗಹಗಹಿಸಿ ನಗುತ್ತಿದ್ದಾರೆ.
icon

(3 / 7)

ಬೇರೆಯವರೊಂದಿಗೆ ಏನೇ ತಮಾಷೆ ಮಾಡಿದರೂ, ವಿರಾಟ್ ಮತ್ತು ಗಂಭೀರ್‌ ಯಾವುತ್ತೂ ಗಂಭೀರವಾಗಿ ಕಾಣುತ್ತಿದ್ದರು. ಆದರೆ, ಈ ಫೋಟೋ ನೋಡಿ. ಗಂಭೀರ್ ಈ ರೀತಿ ಗಹಗಹಿಸಿ ನಗುತ್ತಿದ್ದಾರೆ.(PTI)

ಚೆನ್ನೈನ ಚೆಪಾಕ್‌ ಮೈದಾನದಲ್ಲಿ ಅಭ್ಯಾಸ ಸಮಯದಲ್ಲಿ ಈ ದೃಶ್ಯಗಳು ಕಂಡುಬಂದಿದೆ. ಎಲ್ಲಾ ಕ್ಯಾಮೆರಾಗಳು ಈ ಇಬ್ಬರನ್ನೇ ಜೂಮ್‌ ಹಾಕುತ್ತಿವೆ.
icon

(4 / 7)

ಚೆನ್ನೈನ ಚೆಪಾಕ್‌ ಮೈದಾನದಲ್ಲಿ ಅಭ್ಯಾಸ ಸಮಯದಲ್ಲಿ ಈ ದೃಶ್ಯಗಳು ಕಂಡುಬಂದಿದೆ. ಎಲ್ಲಾ ಕ್ಯಾಮೆರಾಗಳು ಈ ಇಬ್ಬರನ್ನೇ ಜೂಮ್‌ ಹಾಕುತ್ತಿವೆ.(PTI)

ಇವರಿಬ್ಬರು ಈ ಹಿಂದೆ ಐಪಿಎಲ್‌ ಸಮಯದಲ್ಲಿ ಜಗಳವಾಡಿದ್ದರು. ಆದಾಗ್ಯೂ, ಈ ವರ್ಷದ ಐಪಿಎಲ್ ವೇಳೆ ನಡೆದ ಆರ್‌ಸಿಬಿ ಹಾಗೂ ಕೆಕೆಆರ್‌ ನಡುವಿನ ಪಂದ್ಯದ ವೇಳೆ ಇಬ್ಬರೂ ಜೊತೆಯಾದರು. ಈಗ ಟೀಮ್ ಇಂಡಿಯಾ ಶಿಬಿರದಲ್ಲಿ ಸ್ನೇಹಿತರಾಗಿದ್ದಾರೆ.
icon

(5 / 7)

ಇವರಿಬ್ಬರು ಈ ಹಿಂದೆ ಐಪಿಎಲ್‌ ಸಮಯದಲ್ಲಿ ಜಗಳವಾಡಿದ್ದರು. ಆದಾಗ್ಯೂ, ಈ ವರ್ಷದ ಐಪಿಎಲ್ ವೇಳೆ ನಡೆದ ಆರ್‌ಸಿಬಿ ಹಾಗೂ ಕೆಕೆಆರ್‌ ನಡುವಿನ ಪಂದ್ಯದ ವೇಳೆ ಇಬ್ಬರೂ ಜೊತೆಯಾದರು. ಈಗ ಟೀಮ್ ಇಂಡಿಯಾ ಶಿಬಿರದಲ್ಲಿ ಸ್ನೇಹಿತರಾಗಿದ್ದಾರೆ.(PTI)

ಗೌತಿ ಹಾಗೂ ವಿರಾಟ್‌ ಹಾಸ್ಯಲೋಕಕ್ಕೆ ನಾಯಕ ರೋಹಿತ್ ಶರ್ಮಾ ಕೂಡ ಎಂಟ್ರಿಕೊಟ್ಟಿದ್ದಾರೆ. ಅವರ ನಗೆ ಪಾರ್ಟಿಯಲ್ಲಿ ಸೇರಿಕೊಂಡಿದ್ದಾರೆ
icon

(6 / 7)

ಗೌತಿ ಹಾಗೂ ವಿರಾಟ್‌ ಹಾಸ್ಯಲೋಕಕ್ಕೆ ನಾಯಕ ರೋಹಿತ್ ಶರ್ಮಾ ಕೂಡ ಎಂಟ್ರಿಕೊಟ್ಟಿದ್ದಾರೆ. ಅವರ ನಗೆ ಪಾರ್ಟಿಯಲ್ಲಿ ಸೇರಿಕೊಂಡಿದ್ದಾರೆ(PTI)

ಬಾಂಗ್ಲಾದೇಶ ವಿರುದ್ಧದ ಮೊದಲ ಟೆಸ್ಟ್ ಪಂದ್ಯವು ಸೆಪ್ಟೆಂಬರ್ 19ರ ಗುರುವಾರ ಆರಂಭವಾಗಲಿದ್ದು, ಭಾರತ ತಂಡವು ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ತೀವ್ರ ಅಭ್ಯಾಸ ನಡೆಸುತ್ತಿದೆ.
icon

(7 / 7)

ಬಾಂಗ್ಲಾದೇಶ ವಿರುದ್ಧದ ಮೊದಲ ಟೆಸ್ಟ್ ಪಂದ್ಯವು ಸೆಪ್ಟೆಂಬರ್ 19ರ ಗುರುವಾರ ಆರಂಭವಾಗಲಿದ್ದು, ಭಾರತ ತಂಡವು ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ತೀವ್ರ ಅಭ್ಯಾಸ ನಡೆಸುತ್ತಿದೆ.(PTI)


ಇತರ ಗ್ಯಾಲರಿಗಳು