IPL 2024: ಆರ್‌ಸಿಬಿ ಮುಂದಿನ ಪಂದ್ಯ ಯಾವಾಗ, ಯಾರ ವಿರುದ್ಧ? ಅಹಮದಾಬಾದ್‌ಗೆ ರಾಯಲ್‌ ಚಾಲೆಂಜರ್ಸ್‌ ಪಯಣ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Ipl 2024: ಆರ್‌ಸಿಬಿ ಮುಂದಿನ ಪಂದ್ಯ ಯಾವಾಗ, ಯಾರ ವಿರುದ್ಧ? ಅಹಮದಾಬಾದ್‌ಗೆ ರಾಯಲ್‌ ಚಾಲೆಂಜರ್ಸ್‌ ಪಯಣ

IPL 2024: ಆರ್‌ಸಿಬಿ ಮುಂದಿನ ಪಂದ್ಯ ಯಾವಾಗ, ಯಾರ ವಿರುದ್ಧ? ಅಹಮದಾಬಾದ್‌ಗೆ ರಾಯಲ್‌ ಚಾಲೆಂಜರ್ಸ್‌ ಪಯಣ

  • ಸಿಎಸ್‌ಕೆ ವಿರುದ್ಧದ ಭರ್ಜರಿಯಾಗಿ ಗೆದ್ದ ಆರ್‌ಸಿಬಿ ಐಪಿಎಲ್‌ 2024ರ ಪ್ಲೇಆಫ್‌ಗೆ ಪ್ರವೇಶಿಸಿದೆ. ಇದರೊಂದಿಗೆ ಸಿಎಸ್‌ಕೆ ಮಾತ್ರವಲ್ಲದೆ ಲಕ್ನೋ ಸೂಪರ್‌ ಜೈಂಟ್ಸ್‌ ಹಾಗೂ ಡೆಲ್ಲಿ ಕ್ಯಾಪಿಟಲ್ಸ್‌ ಕೂಡಾ ಟೂರ್ನಿಯಿಂದ ಹೊರಬಿದ್ದಿದೆ. ಸದ್ಯ ನಾಲ್ಕು ತಂಡಗಳು ಮಾತ್ರ ಟೂರ್ನಿಯಲ್ಲಿ ಉಳಿದಿದೆ. ಹಾಗಿದ್ದರೆ ಆರ್‌ಸಿಬಿಯ ಮುಂದಿನ ಪಂದ್ಯ ಯಾವಾಗ ಎಂಬುದನ್ನು ನೋಡೋಣ.

ಆರ್‌ಸಿಬಿ ತಂಡದ ಮುಂದಿನ ಪಂದ್ಯ ಮೇ 22ರ ಬುಧವಾರ ನಡೆಯಲಿದೆ. ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯುವ ಎಲಿಮನೇಟರ್‌ ಪಂದ್ಯದಲ್ಲಿ ಆರ್‌ಸಿಬಿ ಆಡಲಿದೆ. ಆದರೆ, ಆರ್‌ಸಿಬಿಯ ಎದುರಾಳಿ ತಂಡ ಯಾವುದು ಎಂಬುದು ಇನ್ನಷ್ಟೇ ನಿರ್ಧಾರವಾಗಬೇಕಿದೆ.
icon

(1 / 6)

(AFP)

ಸದ್ಯ ಅಂಕಪಟ್ಟಿಯಲ್ಲಿ ಆರ್‌ಸಿಬಿಯು ನಾಲ್ಕನೇ ಸ್ಥಾನದಲ್ಲಿದೆ. ಎಲಿಮನೇಟರ್‌ ಪಂದ್ಯದಲ್ಲಿ ಅಂಕಪಟ್ಟಿಯ ಮೂರನೇ ಸ್ಥಾನಿಯನ್ನು ಆರ್‌ಸಿಬಿ ಎದುರಿಸಲಿದೆ. ರಾಜಸ್ಥಾನ್‌ ರಾಯಲ್ಸ್‌ ಅಥವಾ ಸನ್‌ರೈಸರ್ಸ್‌ ಹೈದರಾಬಾದ್‌ ತಂಡಗಳು ಆರ್‌ಸಿಬಿಗೆ ಎದುರಾಳಿಯಾಗಿ ಸಿಗಲಿದೆ.
icon

(2 / 6)

ಮೇ 19ರಂದು ಲೀಗ್‌ ಹಂತದ ಕೊನೆಯ ಎರಡು ಪಂದ್ಯಗಳು ನಡೆಯುತ್ತಿವೆ. ಈ ಪಂದ್ಯದ ಬಳಿಕ ಅಂಕಪಟ್ಟಿ ಅಂತಿಮವಾಗಲಿದೆ. ಸದ್ಯದ ಲೆಕ್ಕಾಚಾರದ ಪ್ರಕಾರ ಎಸ್‌ಆರ್‌ಎಚ್‌ ಮೂರನೇ ಸ್ಥಾನದಲ್ಲಿದೆ. ಆದರೆ, ಇಂದಿನ ಪಂದ್ಯದಲ್ಲಿ ರಾಜಸ್ಥಾನ ಸೋತು ಹೈದರಾಬಾದ್‌ ಗೆದ್ದರೆ, ಸ್ಥಾನಪಟಲ್ಲಟವಾಗಲಿದೆ. ಆಗ ರಾಜಸ್ಥಾನವನ್ನು ಆರ್‌ಸಿಬಿ ಎದುರಿಸಬೇಕಾಗುತ್ತದೆ.
icon

(3 / 6)

ಶನಿವಾರ ಪಂದ್ಯದಲ್ಲಿ ಸಿಎಸ್‌ಕೆ ವಿರುದ್ಧ ಗೆದ್ದ ಆರ್‌ಸಿಬಿ ನಾಲ್ಕನೇ ತಂಡವಾಗಿ ಪ್ಲೇಆಫ್‌ ಪ್ರವೇಶಿಸಿತು ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಆರ್‌ಸಿಬಿ 20 ಓವರ್‌​​ಗಳಲ್ಲಿ 5 ವಿಕೆಟ್ ನಷ್ಟಕ್ಕೆ 218 ರನ್ ಗಳಿಸಿತು. ಗೆಲುವಿಗೆ 219 ರನ್‌ಗ​ಳ ಗುರಿ ಬೆನ್ನಟ್ಟಿದ ಸಿಎಸ್‌​ಕೆ 20 ಓವರ್‌​​ಗಳಲ್ಲಿ 7 ವಿಕೆಟ್ ಕಳೆದುಕೊಂಡು 191 ರನ್ ಮಾತ್ರವೇ ಗಳಿಸಿತು. ಇದರೊಂದಿಗೆ ಆರ್‌ಸಿಬಿ 27 ರನ್‌ಗಳಿಂದ ಗೆದ್ದಿತು.
icon

(4 / 6)

ಎಲಿಮನೇಟರ್‌ ಪಂದ್ಯದಲ್ಲಿ ಆರ್‌ಸಿಬಿ ಗೆದ್ದರೆ, ಮೇ 24ರಂದು ನಡೆಯುವ ಎರಡನೇ ಕ್ವಾಲಿಫೈಯರ್‌ಗೆ ಪ್ರವೇಶಿಸುತ್ತದೆ. ಅಲ್ಲಿಯೂ ಗೆದ್ದರೆ ಮಾತ್ರ ಫೈನಲ್‌ಗೆ ಲಗ್ಗೆ ಇಡಲಿದೆ. ಮೇ 26ರ ಭಾನುವಾರ ಚೆಪಾಕ್‌ ಮೈದಾನದಲ್ಲಿ ಫೈನಲ್‌ ಪಂದ್ಯ ನಡೆಯಲಿದೆ. 
icon

(5 / 6)

ಕ್ವಾಲಿಫೈಯರ್‌ 1 ಮತ್ತು ಎಲಿಮನೇಟರ್‌ ಪಂದ್ಯಗಳು ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದರೆ, ಕ್ವಾಲಿಫೈಯರ್‌ 2 ಹಾಗೂ ಫೈನಲ್‌ ಪಂದ್ಯ ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ನಡೆಯಲಿದೆ.
icon

(6 / 6)

(AP)

ಇತರ ಗ್ಯಾಲರಿಗಳು