ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Kkr Vs Srh; ಐಪಿಎಲ್ ಫೈನಲ್ ಪಂದ್ಯದ ದಿಕ್ಕನ್ನೇ ಬದಲಾಯಿಸಬಲ್ಲ 5 ಆಟಗಾರರು; ಇವರ ಮೇಲೆ ಎಲ್ಲರ ಕಣ್ಣು

KKR vs SRH; ಐಪಿಎಲ್ ಫೈನಲ್ ಪಂದ್ಯದ ದಿಕ್ಕನ್ನೇ ಬದಲಾಯಿಸಬಲ್ಲ 5 ಆಟಗಾರರು; ಇವರ ಮೇಲೆ ಎಲ್ಲರ ಕಣ್ಣು

  • ಐಪಿಎಲ್ 2024ರ ಫೈನಲ್‌ ಪಂದ್ಯವು ರೋಚಕತೆ ಮೂಡಿಸಿದೆ. ಕೋಲ್ಕತಾ ನೈಟ್‌ ರೈಡರ್ಸ್‌ ಹಾಗೂ ಸನ್‌ರೈಸರ್ಸ್ ಹೈದರಾಬಾದ್ ತಂಡಗಳು ಪ್ರಶಸ್ತಿ ಗೆಲ್ಲುವ ಗುರಿ ಹೊಂದಿವೆ. ಉಭಯ ತಂಡಗಳಲ್ಲೂ ಬಲಿಷ್ಠ ಆಟಗಾರರಿದ್ದಾರೆ. ಹಾಗಿದ್ದರೆ, ತಂಡಕ್ಕೆ ಕಪ್‌ ಗೆಲ್ಲಬಲ್ಲ ಆ ಐದು ಆಟಗಾರರು ಯಾರು? ಪಂದ್ಯ ದಿಕ್ಕನ್ನು ಏಕಾಂಗಿಯಾಗಿ ಬದಲಾಯಿಸಬಲ್ಲ ಸಾಮರ್ಥ್ಯ ಯಾರಿಗಿದೆ ನೋಡೋಣ.

ಕೋಲ್ಕತಾ ನೈಟ್ ರೈಡರ್ಸ್ ತಂಡದ ಯಶಸ್ಸಿನಲ್ಲಿ ಸುನಿಲ್ ನರೈನ್ ಪಾತ್ರ ಪ್ರಮುಖವಾಗಿದೆ. ನರೈನ್ ಈ ಋತುವಿನಲ್ಲಿ ಬ್ಯಾಟ್ ಮತ್ತು ಬಾಲ್‌ ಎರಡರಲ್ಲೂ ಉತ್ತಮ ಫಾರ್ಮ್‌ನಲ್ಲಿದ್ದಾರೆ. ಬೌಲಿಂಗ್‌ಗಿಂತ ಇವರ ಸ್ಫೋಟಕ ಬ್ಯಾಟಿಂಗ್‌ ಗಮನ ಸೆಳೆದಿದೆ. ಕೆಕೆಆರ್ ಪರ ಓಪನಿಂಗ್ ಮಾಡುವ ನರೈನ್ 13 ಪಂದ್ಯಗಳಲ್ಲಿ 179.85ರ ಸ್ಟ್ರೈಕ್ ರೇ‌ಟ್‌ನಲ್ಲಿ 482 ರನ್ ಗಳಿಸಿದ್ದಾರೆ. ಇದರಲ್ಲಿ ಮೂರು ಅರ್ಧಶತಕಗಳು ಹಾಗೂ ಒಂದು ಶತಕ ಸೇರಿದೆ. ಇದೇ ವೇಳೆ ಬೌಲಿಂಗ್‌ನಲ್ಲೂ 17 ವಿಕೆಟ್ ಕಬಳಿಸಿದ್ದಾರೆ. ಇವರ ಆಲ್‌ರೌಂಡ್‌ ಆಟ ಪಂದ್ಯದ ದಿಕ್ಕನ್ನೇ ಬದಲಾಯಿಸಬಹುದು.
icon

(1 / 5)

ಕೋಲ್ಕತಾ ನೈಟ್ ರೈಡರ್ಸ್ ತಂಡದ ಯಶಸ್ಸಿನಲ್ಲಿ ಸುನಿಲ್ ನರೈನ್ ಪಾತ್ರ ಪ್ರಮುಖವಾಗಿದೆ. ನರೈನ್ ಈ ಋತುವಿನಲ್ಲಿ ಬ್ಯಾಟ್ ಮತ್ತು ಬಾಲ್‌ ಎರಡರಲ್ಲೂ ಉತ್ತಮ ಫಾರ್ಮ್‌ನಲ್ಲಿದ್ದಾರೆ. ಬೌಲಿಂಗ್‌ಗಿಂತ ಇವರ ಸ್ಫೋಟಕ ಬ್ಯಾಟಿಂಗ್‌ ಗಮನ ಸೆಳೆದಿದೆ. ಕೆಕೆಆರ್ ಪರ ಓಪನಿಂಗ್ ಮಾಡುವ ನರೈನ್ 13 ಪಂದ್ಯಗಳಲ್ಲಿ 179.85ರ ಸ್ಟ್ರೈಕ್ ರೇ‌ಟ್‌ನಲ್ಲಿ 482 ರನ್ ಗಳಿಸಿದ್ದಾರೆ. ಇದರಲ್ಲಿ ಮೂರು ಅರ್ಧಶತಕಗಳು ಹಾಗೂ ಒಂದು ಶತಕ ಸೇರಿದೆ. ಇದೇ ವೇಳೆ ಬೌಲಿಂಗ್‌ನಲ್ಲೂ 17 ವಿಕೆಟ್ ಕಬಳಿಸಿದ್ದಾರೆ. ಇವರ ಆಲ್‌ರೌಂಡ್‌ ಆಟ ಪಂದ್ಯದ ದಿಕ್ಕನ್ನೇ ಬದಲಾಯಿಸಬಹುದು.(PTI)

ಸನ್‌ರೈಸರ್ಸ್ ಹೈದರಾಬಾದ್‌ ತಂಡದ ಆರಂಭಿಕ ಆಟಗಾರ ಟ್ರಾವಿಸ್ ಹೆಡ್, ಟೂರ್ನಿಯಲ್ಲಿ ಪ್ರಚಂಡ ಫಾರ್ಮ್‌ನಲ್ಲಿದ್ದಾರೆ. ಹೈದರಾಬಾದ್ ಬೃಹತ್‌ ಮೊತ್ತ ಕಲೆಹಾಕುವಲ್ಲಿ ಇವರ ಪಾತ್ರ ನಿರ್ಣಾಯಕವಾಗಿದೆ. ನಿರ್ಣಾಯಕ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡುವುದು ಇವರ ಅಭ್ಯಾಸ. ಕಳೆದ ಬಾರಿ ಏಕದಿನ ವಿಶ್ವಕಪ್‌ನಲ್ಲಿ ಇದೇ ಸಂಪ್ರದಾಯ ಮುಂದುವರೆಸಿದ್ದರು. ಈಗಾಗಲೇ ಟೂರ್ನಿಯಲ್ಲಿ 14 ಪಂದ್ಯಗಳಲ್ಲಿ ಆಡಿ 567 ರನ್ ಗಳಿಸಿದ್ದಾರೆ. 192.20ರ  ಸ್ಟ್ರೈಕ್ ರೇಟ್ ಕಾಯ್ದುಕೊಂಡು ನಾಲ್ಕು ಅರ್ಧಶತಕ ಹಾಗೂ ಒಂದು ಶತಕ ಬಾರಿಸಿದ್ದಾರೆ.
icon

(2 / 5)

ಸನ್‌ರೈಸರ್ಸ್ ಹೈದರಾಬಾದ್‌ ತಂಡದ ಆರಂಭಿಕ ಆಟಗಾರ ಟ್ರಾವಿಸ್ ಹೆಡ್, ಟೂರ್ನಿಯಲ್ಲಿ ಪ್ರಚಂಡ ಫಾರ್ಮ್‌ನಲ್ಲಿದ್ದಾರೆ. ಹೈದರಾಬಾದ್ ಬೃಹತ್‌ ಮೊತ್ತ ಕಲೆಹಾಕುವಲ್ಲಿ ಇವರ ಪಾತ್ರ ನಿರ್ಣಾಯಕವಾಗಿದೆ. ನಿರ್ಣಾಯಕ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡುವುದು ಇವರ ಅಭ್ಯಾಸ. ಕಳೆದ ಬಾರಿ ಏಕದಿನ ವಿಶ್ವಕಪ್‌ನಲ್ಲಿ ಇದೇ ಸಂಪ್ರದಾಯ ಮುಂದುವರೆಸಿದ್ದರು. ಈಗಾಗಲೇ ಟೂರ್ನಿಯಲ್ಲಿ 14 ಪಂದ್ಯಗಳಲ್ಲಿ ಆಡಿ 567 ರನ್ ಗಳಿಸಿದ್ದಾರೆ. 192.20ರ  ಸ್ಟ್ರೈಕ್ ರೇಟ್ ಕಾಯ್ದುಕೊಂಡು ನಾಲ್ಕು ಅರ್ಧಶತಕ ಹಾಗೂ ಒಂದು ಶತಕ ಬಾರಿಸಿದ್ದಾರೆ.(AFP)

ಸನ್‌ರೈಸರ್ಸ್‌ ಆರಂಭಿಕ ಆಟಗಾರ ಅಭಿಷೇಕ್ ಶರ್ಮಾ ಕೂಡ ಸ್ಫೋಟಕ ಓಪನರ್‌ ಆಗಿ ಗಮನ ಸೆಳೆದಿದ್ದಾರೆ. ಟೂರ್ನಿಯಲ್ಲಿ ಅತಿ ಹೆಚ್ಚು ಸಿಕ್ಸರ್‌ ಸಿಡಿಸಿ ಅಬ್ಬರಿಸಿದ್ದಾರೆ. ಹೆಡ್ ಜೊತೆಗೂಡಿ ವಿನಾಶಕಾರಿ ಮನಸ್ಥಿತಿಯಲ್ಲಿ ತಂಡಕ್ಕೆ ಆರಂಭ ಕೊಡುತ್ತಿದ್ದಾರೆ. ಈ ಎರಡು ವಿಕೆಟ್‌ಗಳನ್ನು ಬೇಗನೆ ಕಿತ್ತರೆ ಕೆಕೆಆರ್ ತಂಡ ಮೇಲುಗೈ ಸಾಧಿಸುತ್ತದೆ. ಅಭಿಷೇಕ್ 15 ಪಂದ್ಯಗಳಲ್ಲಿ 207.76ರ ಸ್ಟ್ರೈಕ್ ರೇಟ್‌ನಲ್ಲಿ 482 ರನ್ ಗಳಿಸಿದ್ದಾರೆ. ಇದರಲ್ಲಿ ಮೂರು ಅರ್ಧಶತಕಗಳು ಸೇರಿವೆ. ಎರಡನೇ ಕ್ವಾಲಿಫೈಯರ್ ಪಂದ್ಯದಲ್ಲಿ ಬೌಲಿಂಗ್‌ನಲ್ಲಿ ಅಬ್ಬರಿಸಿದ ಎರಡು ಪ್ರಮುಖ ವಿಕೆಟ್ ಪಡೆದರು. ಇದೀಗ ಫೈನಲ್‌ ಪಂದ್ಯ ಕೂಡಾ ಇದೇ ಚೆಪಾಕ್‌ ಮೈದಾನದಲ್ಲಿ ನಡೆಯುತ್ತಿದೆ. ಹೀಗಾಗಿ ಬ್ಯಾಟಿಂಗ್‌ ಹಾಗೂ ಬೌಲಿಂಗ್‌ ಎರಡರಲ್ಲೂ ಇವರು ಮಿಂಚಲಿದ್ದಾರೆ.
icon

(3 / 5)

ಸನ್‌ರೈಸರ್ಸ್‌ ಆರಂಭಿಕ ಆಟಗಾರ ಅಭಿಷೇಕ್ ಶರ್ಮಾ ಕೂಡ ಸ್ಫೋಟಕ ಓಪನರ್‌ ಆಗಿ ಗಮನ ಸೆಳೆದಿದ್ದಾರೆ. ಟೂರ್ನಿಯಲ್ಲಿ ಅತಿ ಹೆಚ್ಚು ಸಿಕ್ಸರ್‌ ಸಿಡಿಸಿ ಅಬ್ಬರಿಸಿದ್ದಾರೆ. ಹೆಡ್ ಜೊತೆಗೂಡಿ ವಿನಾಶಕಾರಿ ಮನಸ್ಥಿತಿಯಲ್ಲಿ ತಂಡಕ್ಕೆ ಆರಂಭ ಕೊಡುತ್ತಿದ್ದಾರೆ. ಈ ಎರಡು ವಿಕೆಟ್‌ಗಳನ್ನು ಬೇಗನೆ ಕಿತ್ತರೆ ಕೆಕೆಆರ್ ತಂಡ ಮೇಲುಗೈ ಸಾಧಿಸುತ್ತದೆ. ಅಭಿಷೇಕ್ 15 ಪಂದ್ಯಗಳಲ್ಲಿ 207.76ರ ಸ್ಟ್ರೈಕ್ ರೇಟ್‌ನಲ್ಲಿ 482 ರನ್ ಗಳಿಸಿದ್ದಾರೆ. ಇದರಲ್ಲಿ ಮೂರು ಅರ್ಧಶತಕಗಳು ಸೇರಿವೆ. ಎರಡನೇ ಕ್ವಾಲಿಫೈಯರ್ ಪಂದ್ಯದಲ್ಲಿ ಬೌಲಿಂಗ್‌ನಲ್ಲಿ ಅಬ್ಬರಿಸಿದ ಎರಡು ಪ್ರಮುಖ ವಿಕೆಟ್ ಪಡೆದರು. ಇದೀಗ ಫೈನಲ್‌ ಪಂದ್ಯ ಕೂಡಾ ಇದೇ ಚೆಪಾಕ್‌ ಮೈದಾನದಲ್ಲಿ ನಡೆಯುತ್ತಿದೆ. ಹೀಗಾಗಿ ಬ್ಯಾಟಿಂಗ್‌ ಹಾಗೂ ಬೌಲಿಂಗ್‌ ಎರಡರಲ್ಲೂ ಇವರು ಮಿಂಚಲಿದ್ದಾರೆ.(AFP)

ಕೆಕೆಆರ್‌ ಸ್ಪಿನ್ನರ್‌ ವರುಣ್ ಚಕ್ರವರ್ತಿ ಈ ಬಾರಿ ತಂಡದ ಪರ ಅತಿ ಹೆಚ್ಚು ವಿಕೆಟ್‌ ಕಬಳಿಸಿದ ಬೌಲರ್. ಈಗಾಗಲೇ 14 ಪಂದ್ಯಗಳಲ್ಲಿ 20 ವಿಕೆಟ್ ಪಡೆದಿದ್ದಾರೆ. ತಂಡದ ನಾಯಕ ಶ್ರೇಯಸ್ ಅಯ್ಯರ್‌ಗೆ ಇವರ ಮೇಲೆ ಭಾರಿ ನಿರೀಕ್ಷೆಗಳಿವೆ. ಎದುರಾಳಿ ತಂಡದ ಬ್ಯಾಟಿಂಗ್ ಕ್ರಮಾಂಕಕ್ಕೆ ಅಡ್ಡಿಯಾಗಲು ಚೆಪಾಕ್ ಪಿಚ್‌ ಇವರಿಗೆ ನೆರವಾಗಲಿದೆ.
icon

(4 / 5)

ಕೆಕೆಆರ್‌ ಸ್ಪಿನ್ನರ್‌ ವರುಣ್ ಚಕ್ರವರ್ತಿ ಈ ಬಾರಿ ತಂಡದ ಪರ ಅತಿ ಹೆಚ್ಚು ವಿಕೆಟ್‌ ಕಬಳಿಸಿದ ಬೌಲರ್. ಈಗಾಗಲೇ 14 ಪಂದ್ಯಗಳಲ್ಲಿ 20 ವಿಕೆಟ್ ಪಡೆದಿದ್ದಾರೆ. ತಂಡದ ನಾಯಕ ಶ್ರೇಯಸ್ ಅಯ್ಯರ್‌ಗೆ ಇವರ ಮೇಲೆ ಭಾರಿ ನಿರೀಕ್ಷೆಗಳಿವೆ. ಎದುರಾಳಿ ತಂಡದ ಬ್ಯಾಟಿಂಗ್ ಕ್ರಮಾಂಕಕ್ಕೆ ಅಡ್ಡಿಯಾಗಲು ಚೆಪಾಕ್ ಪಿಚ್‌ ಇವರಿಗೆ ನೆರವಾಗಲಿದೆ.(PTI)

ಐಪಿಎಲ್‌ನ ಅತ್ಯಂತ ದುಬಾರಿ ಆಟಗಾರ ಮಿಚೆಲ್ ಸ್ಟಾರ್ಕ್,  ಲೀಗ್ ಹಂತದಲ್ಲಿ ಗಮನ ಸೆಳೆಯಲು ಸಾಧ್ಯವಾಗಲಿಲ್ಲ. ಆದರೆ ನಿರ್ಣಾಯಕ ಪಂದ್ಯದಲ್ಲಿ ಮಿಂಚುವ ಸ್ಟಾರ್ಕ್ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಹೈದರಾಬಾದ್ ಬ್ಯಾಟಿಂಗ್ ಕ್ರಮಾಂಕಕ್ಕೆ ಮಾರಕವಾದರು. ಪವರ್ ಪ್ಲೇನಲ್ಲಿ ಪ್ರಮುಖ 3 ವಿಕೆಟ್ ಪಡೆದರು. ಪರಿಣಾಮ ಹೈದರಾಬಾದ್ ತಂಡ ಪಂದ್ಯದಲ್ಲಿ ಸೋತಿತು. ಹೊಸ ಚೆಂಡಿನೊಂದಿಗೆ ಸ್ಟಾರ್ಕ್ ಅವರಿಂದ ನಿರ್ಣಾಯಕ ಪ್ರದರ್ಶನವನ್ನು ತಂಡ ನಿರೀಕ್ಷಿಸುತ್ತಿದೆ.
icon

(5 / 5)

ಐಪಿಎಲ್‌ನ ಅತ್ಯಂತ ದುಬಾರಿ ಆಟಗಾರ ಮಿಚೆಲ್ ಸ್ಟಾರ್ಕ್,  ಲೀಗ್ ಹಂತದಲ್ಲಿ ಗಮನ ಸೆಳೆಯಲು ಸಾಧ್ಯವಾಗಲಿಲ್ಲ. ಆದರೆ ನಿರ್ಣಾಯಕ ಪಂದ್ಯದಲ್ಲಿ ಮಿಂಚುವ ಸ್ಟಾರ್ಕ್ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಹೈದರಾಬಾದ್ ಬ್ಯಾಟಿಂಗ್ ಕ್ರಮಾಂಕಕ್ಕೆ ಮಾರಕವಾದರು. ಪವರ್ ಪ್ಲೇನಲ್ಲಿ ಪ್ರಮುಖ 3 ವಿಕೆಟ್ ಪಡೆದರು. ಪರಿಣಾಮ ಹೈದರಾಬಾದ್ ತಂಡ ಪಂದ್ಯದಲ್ಲಿ ಸೋತಿತು. ಹೊಸ ಚೆಂಡಿನೊಂದಿಗೆ ಸ್ಟಾರ್ಕ್ ಅವರಿಂದ ನಿರ್ಣಾಯಕ ಪ್ರದರ್ಶನವನ್ನು ತಂಡ ನಿರೀಕ್ಷಿಸುತ್ತಿದೆ.(AFP)


ಟಿ20 ವರ್ಲ್ಡ್‌ಕಪ್ 2024

ಇತರ ಗ್ಯಾಲರಿಗಳು