ದೀಪಾವಳಿ ಸಂಭ್ರಮ; ಪುತ್ತೂರು ಪರ್ಪುಂಜ ರಾಮಜಾಲು ಶ್ರೀ ಬ್ರಹ್ಮಬೈದೆರ್ಕಳ ಗರಡಿಯಲ್ಲಿ ಬಲಿಯೇಂದ್ರ ಪೂಜೆ, ಏನಿದು; ಇಲ್ಲಿದೆ ವಿವರಣೆ, ಚಿತ್ರನೋಟ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ದೀಪಾವಳಿ ಸಂಭ್ರಮ; ಪುತ್ತೂರು ಪರ್ಪುಂಜ ರಾಮಜಾಲು ಶ್ರೀ ಬ್ರಹ್ಮಬೈದೆರ್ಕಳ ಗರಡಿಯಲ್ಲಿ ಬಲಿಯೇಂದ್ರ ಪೂಜೆ, ಏನಿದು; ಇಲ್ಲಿದೆ ವಿವರಣೆ, ಚಿತ್ರನೋಟ

ದೀಪಾವಳಿ ಸಂಭ್ರಮ; ಪುತ್ತೂರು ಪರ್ಪುಂಜ ರಾಮಜಾಲು ಶ್ರೀ ಬ್ರಹ್ಮಬೈದೆರ್ಕಳ ಗರಡಿಯಲ್ಲಿ ಬಲಿಯೇಂದ್ರ ಪೂಜೆ, ಏನಿದು; ಇಲ್ಲಿದೆ ವಿವರಣೆ, ಚಿತ್ರನೋಟ

ದೀಪಾವಳಿ ಹಬ್ಬದ ಪ್ರಯುಕ್ತ ಪುತ್ತೂರು ಸಮೀಪದ ಪರ್ಪುಂಜ ರಾಮಜಾಲು ಶ್ರೀ ಬ್ರಹ್ಮಬೈದೆರ್ಕಳ ಗರಡಿಯಲ್ಲಿ ಬಲಿಯೇಂದ್ರ ಪೂಜೆ ನೆರವೇರಿತು. ಏನಿದು ಬಲೀಂದ್ರ ಪೂಜೆ, ಇದರ ವಿವರಣೆ ಮತ್ತು ಚಿತ್ರನೋಟ ಇಲ್ಲಿದೆ.

ದೀಪಾವಳಿ ಸಂಭ್ರಮ; ಪುತ್ತೂರು ಸಮೀಪದ ಪರ್ಪುಂಜ ರಾಮಜಾಲು  ಶ್ರೀ ಬ್ರಹ್ಮಬೈದೆರ್ಕಳ ಗರಡಿಯಲ್ಲಿ ಬಲಿಪಾಡ್ಯದ ದಿನವಾದ ಇಂದು (ನವೆಂಬರ್ 2) ಬಲಿಯೇಂದ್ರ (ಬಲೀಂದ್ರ) ಪೂಜೆ ನೆರವೇರಿತು. ಈ ಕಾರ್ಯಕ್ರಮದ ಚಿತ್ರನೋಟ ಮತ್ತು ಪೂಜೆಯ ವಿಶೇಷ ವಿವರ ಇಲ್ಲಿದೆ.
icon

(1 / 7)

ಪರ್ಪುಂಜ ರಾಮಜಾಲು ಶ್ರೀ ಬ್ರಹ್ಮಬೈದೆರ್ಕಳ ಗರಡಿಯಲ್ಲಿ ನಡೆದ ಬಲೀಂದ್ರ ಪೂಜೆಯ ಮೂರು ವಿಭಿನ್ನ ನೋಟ
icon

(2 / 7)

ದೀಪಾವಳಿಯ ಮೂರನೇ ದಿನ ಬಲಿಯೇಂದ್ರ ಮರಕ್ಕೆ ವಿಶೇಷ ಪೂಜೆ ಸಲ್ಲಿಸುವುದು ವಾಡಿಕೆ. ಪುತ್ತೂರು ತಾಲೂಕಿನ ಇತಿಹಾಸ ಪ್ರಸಿದ್ಧ ಪರ್ಪುಂಜ ರಾಮಜಾಲು ಶ್ರೀ ಬ್ರಹ್ಮಬೈದರ್ಕಳ ಗರಡಿಯಲ್ಲಿ ಕೂಡ ಬಲಿಯೇಂದ್ರ ಪೂಜೆ ನಡೆಯಿತು. ಹಾಲೆಮರದ ಕಂಬವನ್ನು ನೆಟ್ಟು ಅದರ ಮೇಲೆ ಹಣತೆ ಬೆಳಗಿದರು. ಇದು ಬಲೀಂದ್ರನನ್ನು ಸಂಕೇತಿಸುತ್ತಿದ್ದು, ಬಲೀಂದ್ರ ಗಿಡ ಎಂದು ಕರೆಯಲಾಗುತ್ತದೆ. ಇದರ ಮುಂದೆ ನಿಂತು ತುಳು ಬಾಷೆಯಲ್ಲಿ ಕೂ... ಕೂ... ಬಲೀಂದ್ರಾ (ಬಲೀಂದ್ರನನ್ನು ಕೂಗಿ ಕರೆಯುವ ಕ್ರಮ) ಎಂದು ಕೂಗಿ ಕರೆಯುತ್ತಾರೆ. ಪೂಜೆಗೆ ಚೆಂಡು ಹೂವು, ಸೇವಂತಿಗೆ, ಪಾದೆ ಹೂವು, ಹಿಂಗಾರ ಬೇಕು. 
icon

(3 / 7)

ಕರ್ಗಲ್‌ಲ್ ಕಾಯ್ಪೋನಗ, ಬೊಲ್‌ಕಲ್‌ಲ್ ಪೂ ಪೋನಗ, ಉಪ್ಪು ಕರ್ಪೂರ ಆನಗ, ಜಾಲ್ ಪಾದೆ ಆನಗ, ಉರ್ದು ಮದ್ದೋಲಿ ಆನಗ, ಗೊಡ್ಡೆರ್ಮೆ ಗೋಣೆ ಆನಗ, ಎರು ದಡ್ಡೆ ಆನಗ, ನೆಕ್ಕಿದಡಿಟ್ ಆಟ ಆನಗ, ತುಂಬೆದಡಿಟ್ ಕೂಟ ಆನಗ, ದೆಂಬೆಲ್‌ಗ್ ಪಾಂಪು ಪಾಡ್‌ನಗ, ಅಲೆಟ್ಟ್ ಬೊಲ್ನೆಯಿ ಮುರ್ಕುನಗ, ದಂಟದಜ್ಜಿ ಮದ್ಮಲಾನಗ, ಗುರ್ಗುಂಜಿದ ಕಲೆ ಮಾಜಿನಗ ಒರಬತ್ತ್ ಪೋ... ಬಲಿಯೇಂದ್ರ... ಕೂ... ಕೂ... ಕೂ... (ಕಗ್ಗಲ್ಲು ಕಾಯಿಕೊಡುವಾಗ, ಬೆಳ್ಗಲ್ಲು ಹೂಬಿಡುವಾಗ... ನಿನ್ನ ಊರು, ನಿನ್ನ ಸೀಮೆ ಆಳಿಕೊಂಡು ಬಾ... ಬಲೀಂದ್ರ ಎಂದು ಕೂಗಿ ಕರೆಯುವ ಕ್ರಮ ಇದು)
icon

(4 / 7)

ಪರ್ಪುಂಜ ರಾಮಜಾಲು ಶ್ರೀ ಬ್ರಹ್ಮಬೈದೆರ್ಕಳ ಗರಡಿಯಲ್ಲಿ ವರ್ಷಂಪ್ರತಿ ನಡೆಯುವ ಬಲೀಂದ್ರ ಪೂಜೆಯಲ್ಲಿ ಗರಡಿ ಸುತ್ತ ಮುತ್ತಲಿನ ನಿವಾಸಿಗಳು ಸಂಭ್ರಮದಿಂದ ಪಾಲ್ಗೊಂಡರು.
icon

(5 / 7)

ಭಾರತದ ಉದ್ದಗಲಕ್ಕೂ ದೀಪಾವಳಿ ಹಬ್ಬದ ಸಂಭ್ರಮ ಮೂರು ದಿನ. ಇಂದು ಕೊನೆಯ ದಿನ. ಪಾಡ್ಯ ಅಥವಾ ಬಲಿಪಾಡ್ಯದ ದಿನ. ಈ ದಿನ ರಾಜ ಬಲೀಂದ್ರ (ಬಲಿಯೇಂದ್ರ) ನನ್ನು ಪೂಜಿಸುವ ಪದ್ಧತಿ ತುಳುನಾಡಿನಲ್ಲಿದೆ. ಸದ್ಗುಣ ಶೀಲ ರಾಜ ಬಲೀಂದ್ರ, ತನ್ನ ಪ್ರಜೆಗಳನ್ನು ಚೆನ್ನಾಗಿ ನೋಡಿಕೊಂಡಿದ್ದ. ಆದರೆ ಆತನ ಸುತ್ತಮುತ್ತ ಇದ್ದ ಜನ ರಾಕ್ಷಸ ಪ್ರವೃತ್ತಿಯವರಾಗಿದ್ದು ಅವರಿಂದಾಗಿ ಜನರಿಗೆ ಸಮಸ್ಯೆ ಇತ್ತು. ಆಗ ಮಹಾವಿಷ್ಣು ದೇವರು ವಾಮನ ರೂಪದಲ್ಲಿ ಬಂದು ದುಷ್ಟ ಸಂಹಾರಕ್ಕೆ ಮುಂದಾದ. ಆಗ ದೇವರಿಗೆ ಮೊದಲು ಎದುರಾದ ಸಮಸ್ಯೆ ಬಲೀಂದ್ರ. ವಾಮನ ರೂಪದಲ್ಲಿ ಬಂದ ವಿಷ್ಣು ದೇವರು, ಆತನ ಬಳಿ ಮೂರು ಹೆಜ್ಜೆ ಊರುವಷ್ಟು ಜಾಗ ದಾನ ನೀಡುವಂತೆ ಕೇಳುತ್ತಾನೆ.
icon

(6 / 7)

ಆತ ದಾನಿಯಾದ ಕಾರಣ, ಕೇವಲ ಮೂರು ಹೆಜ್ಜೆ ಇಡುವಷ್ಟು ಜಾಗ ತಾನ ಎಂದು ಒಪ್ಪಿಕೊಂಡು ಬಿಡುತ್ತಾನೆ. ವಾಮನ ರೂಪಿ ಮಹಾವಿಷ್ಣು ಬೃಹದಾಕಾರ ಬೆಳೆದು ಎರಡು ಹೆಜ್ಜೆಯಲ್ಲಿ ಎಲ್ಲವನ್ನೂ ಅಳೆದ ಮೂರನೇ ಹೆಜ್ಜೆ ಎಲ್ಲಿಡಬೇಕು ಎಂದು ಕೇಳಿದಾಗ ಬಲೀಂದ್ರ ತನ್ನ ತಲೆಯನ್ನು ತೋರಿಸುತ್ತಾನೆ. ಅದರ ಮೇಲೆ ಮಹಾವಿಷ್ಣು ಪಾದ ಇಟ್ಟ ಕೂಡಲೇ ಬಲೀಂದ್ರ ಪಾತಾಳಕ್ಕೆ ಹೋಗುತ್ತಾನೆ. ಹೀಗೆ ಪಾತಾಳಕ್ಕೆ ಹೋದ ಬಲೀಂದ್ರನನ್ನು ವರ್ಷಕ್ಕೆ ಒಂದು ಭೂಮಿಗೆ ಕರೆದು ಸತ್ಕರಿಸಿ ಕಳುಹಿಸುವ ಪದ್ಧತಿ ಬಲೀಂದ್ರ ಪೂಜೆ.  
icon

(7 / 7)

ಇತರ ಗ್ಯಾಲರಿಗಳು