ಕೆಕೆಆರ್ ಮಾಜಿ ನಾಯಕ ಶ್ರೇಯಸ್ ಅಯ್ಯರ್‌ಗೆ ಮುಂಬೈ ತಂಡದ ನಾಯಕತ್ವ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಕೆಕೆಆರ್ ಮಾಜಿ ನಾಯಕ ಶ್ರೇಯಸ್ ಅಯ್ಯರ್‌ಗೆ ಮುಂಬೈ ತಂಡದ ನಾಯಕತ್ವ

ಕೆಕೆಆರ್ ಮಾಜಿ ನಾಯಕ ಶ್ರೇಯಸ್ ಅಯ್ಯರ್‌ಗೆ ಮುಂಬೈ ತಂಡದ ನಾಯಕತ್ವ

  • ಐಪಿಎಲ್‌ 2024ರ ಆವೃತ್ತಿಯಲ್ಲಿ ಕೆಕೆಆರ್‌ ತಂಡವನ್ನು ಚಾಂಪಿಯನ್‌ ಪಟ್ಟದತ್ತ ಮುನ್ನಡೆಸಿದ್ದ ಶ್ರೇಯಸ್‌ ಅಯ್ಯರ್‌, ಈ ಬಾರಿ ಮುಂಬೈ ತಂಡದ ನಾಯಕತ್ವದ ಜವಾಬ್ದಾರಿ ಪಡೆದಿದ್ದಾರೆ. ಆದರೆ, ಇದು ಐಪಿಎಲ್‌ನಲ್ಲಿ ಅಲ್ಲ. ಸೈಯದ್‌ ಮುಷ್ತಾಕ್‌ ಅಲಿ ಟ್ರೋಫಿಯಲ್ಲಿ ಮುಂಬೈ ರಾಷ್ಟ್ರೀಯ ತಂಡಕ್ಕೆ ಅಯ್ಯರ್‌ ನಾಯಕನಾಗಿ ಆಯ್ಕೆಯಾಗಿದ್ದಾರೆ.

ಟಿ20 ಕ್ರಿಕೆಟ್‌ನಲ್ಲಿ ನಾಯಕನಾಗಿ ಶ್ರೇಯಸ್ ಅಯ್ಯರ್ ತಾನು ಚತುರ ಎಂಬುದನ್ನು ಸಾಬೀತುಪಡಿಸಿದ್ದಾರೆ. ಐಪಿಎಲ್‌ನಲ್ಲಿ ಅವರು ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕರಾಗಿದ್ದರು. ಆ ಬಳಿಕ ಕಳೆದ ಆವೃತ್ತಿಯಲ್ಲಿ ನಾಯಕನಾಗಿ ಕೋಲ್ಕತಾ ನೈಟ್ ರೈಡರ್ಸ್ ತಂಡವನ್ನು ಐಪಿಎಲ್ ಟ್ರೋಫಿಯತ್ತ ಮುನ್ನಡೆಸಿದರು. ಇದೀಗ ಐಪಿಎಲ್ 2025ರ ಮೆಗಾ ಹರಾಜಿಗೆ ದಿನಗಣನೆ ಆರಂಭವಾಗಿದೆ. ಅದಕ್ಕೂ ಮುನ್ನ ನೈಟ್ ರೈಡರ್ಸ್ ತಂಡವು ಶ್ರೇಯಸ್ ಅಯ್ಯರ್ ಅವರನ್ನು ತಂಡದಿಂದ ಬಿಡುಗಡೆ ಮಾಡಿದೆ. ಆದರೆ, ಅಯ್ಯರ್‌ಗೆ ಶುಭಸುದ್ದಿ ಸಿಕ್ಕಿದೆ.
icon

(1 / 6)

ಐಪಿಎಲ್ 2025 ಆರಂಭವಾಗುವ ಮೊದಲು, ಶ್ರೇಯಸ್ ಮತ್ತೆ ಟಿ20 ಕ್ರಿಕೆಟ್‌ನಲ್ಲಿ ತಮ್ಮ ನಾಯಕತ್ವದ ಕೌಶಲ್ಯವನ್ನು ಪ್ರದರ್ಶಿಸುವ ಅವಕಾಶ ಪಡೆದಿದ್ದಾರೆ. ಈ ಬಾರಿ ತಮ್ಮ ರಾಜ್ಯ ತಂಡ ಮುಂಬೈ ಟಿ 20 ತಂಡವನ್ನು ಮುನ್ನಡೆಸಲಿದ್ದಾರೆ. ಅದು ಸೈಯದ್‌ ಮುಷ್ತಾಕ್‌ ಅಲಿ ಟ್ರೋಫಿಯಲ್ಲಿ.
icon

(2 / 6)

ಮುಂಬರುವ ಸೈಯದ್ ಮುಷ್ತಾಕ್ ಅಲಿ ಟಿ20 ಟ್ರೋಫಿಯಲ್ಲಿ ಶ್ರೇಯಸ್ ಅಯ್ಯರ್ ಮುಂಬೈ ತಂಡವನ್ನು ಮುನ್ನಡೆಸಲಿದ್ದಾರೆ. ಇದರೊಂದಿಗೆ ಅನುಭವಿ ಆಟಗಾರ ಅಜಿಂಕ್ಯಾ ರಹಾನೆ ಅಯ್ಯರ್‌ ನಾಯಕತ್ವದಡಿ ಆಡಲಿದ್ದಾರೆ. ಮುಂಬೈ ಕ್ರಿಕೆಟ್ ಅಸೋಸಿಯೇಷನ್‌ನ ಹಿರಿಯ ತಂಡದ ಆಯ್ಕೆದಾರರು ರಾಷ್ಟ್ರೀಯ ಟ20 ಪಂದ್ಯಾವಳಿಗೆ ತಂಡವನ್ನು ಆಯ್ಕೆ ಮಾಡಿದ್ದು, ಶ್ರೇಯಸ್ ಅವರನ್ನು ನಾಯಕನಾಗಿ ಆಯ್ಕೆ ಮಾಡಲಾಯಿತು. ಪ್ರಸ್ತುತ ನಡೆಯುತ್ತಿರುವ ರಣಜಿ ಟ್ರೋಫಿಯಲ್ಲಿ ಮುಂಬೈ ತಂಡವನ್ನು ಮುನ್ನಡೆಸುತ್ತಿರುವ ಅಜಿಂಕ್ಯ ರಹಾನೆ ಕೂಡಾ ತಂಡಕ್ಕೆ‌ ಆಯ್ಕೆಯಾಗಿದ್ದಾರೆ.
icon

(3 / 6)

ವೈಯಕ್ತಿಕ ಕಾರಣಗಳಿಂದಾಗಿ ಸೂರ್ಯಕುಮಾರ್ ಯಾದವ್ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯ ಮೊದಲ ಕೆಲವು ಪಂದ್ಯಗಳಿಂದ ಹೊರಗುಳಿಯಲಿದ್ದಾರೆ. ಪಂದ್ಯಾವಳಿಯ ಕೊನೆಯ ಪಂದ್ಯಗಳಲ್ಲಿ ಅವರು ಮುಂಬೈ ಪರ ಆಡಬಹುದು. ಟೀಮ್ ಇಂಡಿಯಾದ ಟಿ20 ನಾಯಕ ಸದ್ಯ ತಮ್ಮ ಸಹೋದರಿಯ ಮದುವೆ ಕಾರ್ಯಕ್ರಮದಲ್ಲಿ ನಿರತರಾಗಿದ್ದಾರೆ. 
icon

(4 / 6)

ವೈಯಕ್ತಿಕ ಕಾರಣಗಳಿಂದಾಗಿ ಸೂರ್ಯಕುಮಾರ್ ಯಾದವ್ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯ ಮೊದಲ ಕೆಲವು ಪಂದ್ಯಗಳಿಂದ ಹೊರಗುಳಿಯಲಿದ್ದಾರೆ. ಪಂದ್ಯಾವಳಿಯ ಕೊನೆಯ ಪಂದ್ಯಗಳಲ್ಲಿ ಅವರು ಮುಂಬೈ ಪರ ಆಡಬಹುದು. ಟೀಮ್ ಇಂಡಿಯಾದ ಟಿ20 ನಾಯಕ ಸದ್ಯ ತಮ್ಮ ಸಹೋದರಿಯ ಮದುವೆ ಕಾರ್ಯಕ್ರಮದಲ್ಲಿ ನಿರತರಾಗಿದ್ದಾರೆ. (AFP)

ಮುಂಬೈ ರಣಜಿ ತಂಡದಿಂದ ಪೃಥ್ವಿ ಶಾ ಅವರನ್ನು ಕೈಬಿಡಲಾಗಿತ್ತು. ಆದರೆ ಅವರನ್ನು ಮುಷ್ತಾಕ್ ಅಲ್ ಟ್ರೋಫಿಗೆ ತಂಡದಲ್ಲಿ ಸೇರಿಸಲಾಗಿದೆ. ಸ್ಟಾರ್ ಆಲ್‌ರೌಂಡರ್ ಶಿವಂ ದುಬೆ ಗಾಯದಿಂದಾಗಿ ಹೊರಗುಳಿದಿದ್ದಾರೆ. ಇದೇ ವೇಳೆ ಮುಶೀರ್ ಖಾನ್ ಮತ್ತು ತುಷಾರ್ ದೇಶಪಾಂಡೆ ಗಾಯಗಳಿಂದ ಚೇತರಿಸಿಕೊಂಡಿಲ್ಲ.
icon

(5 / 6)

ಮುಂಬೈ ಇಂಡಿಯನ್ಸ್ ತಂಡ: ಶ್ರೇಯಸ್ ಅಯ್ಯರ್ (ನಾಯಕ), ಪೃಥ್ವಿ ಶಾ, ಅಂಕಿಶ್ ರಘುವಂಶಿ, ಜೇ ಬಿಸ್ತಾ, ಅಜಿಂಕ್ಯ ರಹಾನೆ, ಸಿದ್ದೇಶ್ ಲಾಡ್, ಸೂರ್ಯಾಂಶ್ ಶೇಜ್, ಸಾಯಿರಾಜ್ ಪಾಟೀಲ್, ಹಾರ್ದಿಕ್ ತಾಮೋರ್ (ವಿಕೆಟ್ ಕೀಪರ್), ಆಕಾಶ್ ಆನಂದ್ (ವಿಕೆಟ್ ಕೀಪರ್), ಶಮ್ಸ್ ಮುಲಾನಿ, ಹಿಮಾಂಶು ಸಿಂಗ್, ತನುಷ್ ಕೋಟ್ಯಾನ್, ಶಾರ್ದೂಲ್ ಠಾಕೂರ್, ಮೋಹಿತ್ ಅವಸ್ಥಿ, ರಾಯ್ಸ್ಟನ್ ಡಯಾಸ್, ಜುನೈದ್ ಖಾನ್. ಚಿತ್ರ ಕೃಪೆ: ಬಿಸಿಸಿಐ.
icon

(6 / 6)

ಇತರ ಗ್ಯಾಲರಿಗಳು