Ganesh Chaturthi Rangoli Designs: ಸುಂದರ ರಂಗೋಲಿ ಮೂಲಕ ಗಣೇಶನನ್ನು ಸ್ವಾಗತಿಸಿ, ರಂಗೋಲಿಯಲ್ಲಿ ಗಣೇಶನ ಪ್ರಭಾವಳಿ ನೋಡಿ!
- ಗಣೇಶ ಚತುರ್ಥಿಯಂದು ಅಥವಾ ಇತರೆ ದಿನಗಳಂದು ರಂಗೋಲಿಯಲ್ಲಿ ಗಣೇಶನ ಮೂಡಿಸಲು ಬಹುತೇಕರು ಬಯಸುತ್ತಾರೆ. ಮನೆಗೆ ಗಣೇಶನನ್ನು ಸ್ವಾಗತಿಸಲು ಸುಂದರವಾದ ಗಣೇಶನ ಬಿಡಿಸಲು ಬಯಸುವವರು ಈ ಮುಂದಿನ ಚಿತ್ರಮಾಹಿತಿಗಳಿಂದ ಒಂದಿಷ್ಟು ಐಡಿಯಾ ಪಡೆಯಬಹುದು.
- ಗಣೇಶ ಚತುರ್ಥಿಯಂದು ಅಥವಾ ಇತರೆ ದಿನಗಳಂದು ರಂಗೋಲಿಯಲ್ಲಿ ಗಣೇಶನ ಮೂಡಿಸಲು ಬಹುತೇಕರು ಬಯಸುತ್ತಾರೆ. ಮನೆಗೆ ಗಣೇಶನನ್ನು ಸ್ವಾಗತಿಸಲು ಸುಂದರವಾದ ಗಣೇಶನ ಬಿಡಿಸಲು ಬಯಸುವವರು ಈ ಮುಂದಿನ ಚಿತ್ರಮಾಹಿತಿಗಳಿಂದ ಒಂದಿಷ್ಟು ಐಡಿಯಾ ಪಡೆಯಬಹುದು.
(1 / 7)
ಯಾವುದೇ ಹಬ್ಬ ಹರಿದಿನವಿರಲಿ ಅಥವಾ ಹಬ್ಬವಿಲ್ಲವಾದರೂ ಮನೆಯ ಮುಂದೊಂದು ರಂಗೋಲಿ ಹಾಕುವುದು ಒಳ್ಳೆಯದು. ವಿಶೇಷವಾಗಿ ಹಬ್ಬದಂದು ಮನೆ ಮತ್ತು ಪೂಜಾ ಸ್ಥಳದ ಮುಖ್ಯ ದ್ವಾರದಲ್ಲಿ ರಂಗೋಲಿಯ ಚಿತ್ತಾರ ಬಿಡಿಸುವುದು ಮಂಗಳಕರ. ಈ ಬಾರಿ ಆಗಸ್ಟ್ 31ರಂದು ದೇಶದೆಲ್ಲಡೆ ಗಣೇಶ ಚತುರ್ಥಿ ಹಬ್ಬವಿದ್ದು, ಮನೆಯ ಮುಖ್ಯ ಧ್ವಾರದಲ್ಲಿ ಮತ್ತು ದೇವರ ಕೋಣೆಯ ಮುಂದೆ ಸುಂದರವಾದ ಗಣೇಶನ ರಂಗೋಲಿ ಬಿಡಿಸಬಹುದು.
(2 / 7)
ಗಣೇಶ ಚತುರ್ಥಿ ಹಬ್ಬದ ಮುಗಿದ ಬಳಿಕ ಪೊರಕೆಯಲ್ಲಿ ರಂಗೋಲಿ ಗುಡಿಸುವ ತಪ್ಪನ್ನು ಯಾವತ್ತೂ ಮಾಡಬೇಡಿ. ಬಟ್ಟೆಯಿಂದ ರಂಗೋಲಿ ಉಜ್ಜಿ, ಬಳಿಕ ಅದನ್ನು ನದಿಗೆ ಎಸೆಯಿರಿ.
(3 / 7)
ಇಂತಹ ಸುಂದರವಾದ ರಂಗೋಲಿ ಬಿಡಿಸಿ ಮನೆಗೆ ಗಣೇಶನನ್ನು ಸ್ವಾಗತಿಸಿ. ಯೂಟ್ಯೂಬ್ ಇತ್ಯಾದಿಗಳನ್ನು ನೋಡಿಯೂ ಸುಂದರವಾದ ಗಣೇಶನ ರಂಗೋಲಿ ಚಿತ್ತಾರ ಮೂಡಿಸುವುದನ್ನು ಕಲಿಯಬಹುದು.
(4 / 7)
ಅಕ್ಕಿ ಪುಡಿ, ರಂಗೋಲಿ ಹುಡಿ ಅಥವಾ ಬಣ್ಣವನ್ನು ಬಳಸಿ ರಂಗೋಲಿ ಬಿಡಿಸಬಹುಉದ. ಹೂವು, ಎಲೆಗಳು, ಅಕ್ಕಿ, ಅರಶಿನ ಮತ್ತು ಮಸಾಲೆಯನ್ನು ಬಳಸಿ ರಂಗೋಲಿ ಬಿಡಿಸಬಹುದು.
(5 / 7)
ಸುಂದರವಾದ ಹೂವುಗಳ ರಂಗೋಲಿಯನ್ನು ಬಿಡಿಸಿ. ನಡುವೆ ಗಣೇಶನ ಪುಟ್ಟ ಆಕಾರವನ್ನು ಬಿಡಿಸಿ. ಸುಂದರ ಬಣ್ಣಗಳ ಜತೆ ಗಣೇಶನು ಸುಂದರವಾಗಿ ಕಾಣಿಸುತ್ತಾನೆ.
(6 / 7)
ಬಣ್ಣದ ಸುಂದರ ರಂಗೋಲಿ ಬಿಡಿಸಲು ಸೂಕ್ತವಾದ ಸ್ಥಳವನ್ನು ಆಯ್ಕೆ ಮಾಡಬೇಕು. ಗಾಳಿ ಹೆಚ್ಚು ಬೀಸದ ಸ್ಥಳಗಳನ್ನು ಆಯೆ ಮಾಡಿ. ಬಣ್ಣದ ಪುಡಿಗಳು ಗಾಳಿಗೆ ಹಾರುವ ಅಪಾಯ ಇರುತ್ತದೆ. ಹೀಗಾಗಿ, ಸೂಕ್ತ ಸ್ಥಳ ನೋಡಿಕೊಂಡು ಬಣ್ಣದ ರಂಗೋಲಿ ಬಿಡಿಸಿ.
ಇತರ ಗ್ಯಾಲರಿಗಳು