Ganesha Idols; ಮೈಸೂರು ಕಲಾವಿದರ ಕಲ್ಪನೆಯಲ್ಲಿ ಮೂಡಿ ಬಂದ ಗಣಪತಿಯ ವೈವಿಧ್ಯಮಯ ರೂಪ, ಆಕರ್ಷಕ ಗಣೇಶ ವಿಗ್ರಹ ಚಿತ್ರನೋಟ-ganesha chaturthi diverse imaginations mysore artists unique attractive ganesha idols ganesha festival photos rgs ,ಫೋಟೋ ಗ್ಯಾಲರಿ ಸುದ್ದಿ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Ganesha Idols; ಮೈಸೂರು ಕಲಾವಿದರ ಕಲ್ಪನೆಯಲ್ಲಿ ಮೂಡಿ ಬಂದ ಗಣಪತಿಯ ವೈವಿಧ್ಯಮಯ ರೂಪ, ಆಕರ್ಷಕ ಗಣೇಶ ವಿಗ್ರಹ ಚಿತ್ರನೋಟ

Ganesha Idols; ಮೈಸೂರು ಕಲಾವಿದರ ಕಲ್ಪನೆಯಲ್ಲಿ ಮೂಡಿ ಬಂದ ಗಣಪತಿಯ ವೈವಿಧ್ಯಮಯ ರೂಪ, ಆಕರ್ಷಕ ಗಣೇಶ ವಿಗ್ರಹ ಚಿತ್ರನೋಟ

Attractive Ganesha Idols; ಮೈಸೂರು ಕೂಡ ಗಣೇಶ ಹಬ್ಬದ ಸಂಭ್ರಮ ಸಡಗರದಲ್ಲಿದೆ. ಕಲಾವಿದರು ಗಣೇಶನ ವಿಗ್ರಹ ನಿರ್ಮಿಸುವಲ್ಲಿ ತಮ್ಮದೇ ಆದ ಕಲ್ಪನೆಗೆ ಇಂಬು ನೀಡಿದ್ದು, ಆಶಯ ಆಧಾರಿತ ಗಣೇಶ ಕಲಾಕೃತಿಗಳನ್ನು ರಚಿಸಿ ಗಮನಸೆಳೆದಿದ್ದಾರೆ. ಇಲ್ಲಿ ಮೈಸೂರಿನ ಕಲಾವಿದ ರೇವಣ್ಣ, ಮೂರ್ತಿ ತಯಾರಕ ಮಂಜುನಾಥ್‌ ನಿರ್ಮಿಸಿದ ವಿಗ್ರಹ ಚಿತ್ರನೋಟವಿದೆ. (ವರದಿ- ರಂಗಸ್ವಾಮಿ, ಮೈಸೂರು)

ಮೈಸೂರಿನ ಮೂರ್ತಿ ತಯಾರಕ ಮಂಜುನಾಥ್ ಅವರು ತಯಾರಿಸಿದ ಮಲೆಮಹದೇಶ್ವರ ಸ್ವಾಮಿ ಗಣಪತಿ (ಎಡ ಚಿತ್ರ), ಕಲಾವಿದ ರೇವಣ್ಣ ಅವರು ರಚಿಸಿದ ಗಣಪತಿಯ ಜೊತೆಗೆ ಪ್ರಧಾನಿ ಮೋದಿ ಮೂರ್ತಿ (ಬಲ ಚಿತ್ರ)
icon

(1 / 8)

ಮಂತ್ರಾಲಯದ ರಾಘವೇಂದ್ರಸ್ವಾಮಿಯನ್ನು ಹೋಲುವ ಗಣಪತಿ, ಮಲೆಮಹದೇಶ್ವರಸ್ವಾಮಿಯನ್ನು ಗಣಪತಿ ಮೂರ್ತಿಗಳನ್ನು ಮೂರ್ತಿ ತಯಾರಕ ಮಂಜುನಾಥ್ ನಿರ್ಮಿಸಿದ್ದಾರೆ. 
icon

(2 / 8)

ಮೂರ್ತಿ ತಯಾರಿಕೆಯಲ್ಲಿ ತೊಡಗಿರುವ ಮಂಜುನಾಥ್‌ (ಎಡಚಿತ್ರ). ಅಯೋಧ್ಯೆ ರಾಮನನ್ನು ನೆನಪಿಸುವ ಗಣಪತಿ (ಬಲ ಚಿತ್ರ)
icon

(3 / 8)

ಹಲವು ಬಗೆಯ ಗಣಪತಿ ಮೂರ್ತಿಗಳನ್ನು ತಯಾರಿಸಿರುವ ಮಂಜುನಾಥ್ ಮತ್ತು ತಂಡ.
icon

(4 / 8)

ಹಲವು ಬಗೆಯ ಗಣಪತಿ ಮೂರ್ತಿಗಳನ್ನು ತಯಾರಿಸಿರುವ ಮಂಜುನಾಥ್ ಮತ್ತು ತಂಡ.

ಮೈಸೂರಿನ ಕಲಾವಿದ ರೇವಣ್ಣ ಕೂಡ ಇದೇ ಸಾಲಿಗೆ ಸೇರುತ್ತಾರೆ. ಗೌರಿ-ಗಣೇಶ ಹಬ್ಬದ ಪ್ರಯುಕ್ತ ರೇವಣ್ಣ ಅವರ ಕಲ್ಪನೆಯಲ್ಲಿ  ಮೂಡಿ ಬಂದಿರುವ ಗಣಪತಿ ಮೂರ್ತಿಗಳು‌ ಕಣ್ಮನ ಸೆಳೆಯುತ್ತಿವೆ. 
icon

(5 / 8)

ಕುಲ ಕಸುಬು ಕುಂಬಾರಿಕೆಯನ್ನೇ ಬದುಕಿಗೆ ಆಸರೆ ಮಾಡಿಕೊಂಡಿರುವ ಕಲಾವಿದ ರೇವಣ್ಣ ಗೌರಿ ಗಣೇಶರ ಮೂರ್ತಿಗಳನ್ನು ತಯಾರಿಸುವುದರಲ್ಲಿ ಪರಿಣಿತರು. ಪ್ರತಿ ವರ್ಷವೂ ಗಣಪತಿ ಹಬ್ಬದ ಸಂದರ್ಭದಲ್ಲಿ ಭಿನ್ನ ವಿಭಿನ್ನವಾದ ಗಣಪತಿ ಮೂರ್ತಿಗಳನ್ನು ತಯಾರಿಸಿ ಗಮನಸೆಳೆದಿದ್ದಾರೆ. 
icon

(6 / 8)

ಗಣಪತಿ ಜೊತೆಗೆ ಪ್ರಧಾನಿ ನರೇಂದ್ರಮೋದಿ, ಮೈಸೂರು-ಕೊಡಗು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಇರುವ ಮಾದರಿಯನ್ನು ನಿರ್ಮಿಸಲಾಗಿದ್ದು ಗಮನ ಸೆಳೆಯುತ್ತಿದೆ. 
icon

(7 / 8)

ಬಾಲರಾಮನ ಮೂರ್ತಿ ಕೆತ್ತನೆ ಮಾಡಿದ ಹೆಸರಾಂತ ಶಿಲ್ಪಿ ಅರುಣ್ ಯೋಗಿರಾಜ್ ಇರುವ ಮಾದರಿಯ ಮೂರ್ತಿಗಳು, ಇತ್ತೀಚೆಗೆ ಮೇಘಾಲಯದ ರಾಜ್ಯಪಾಲರಾಗಿ ನೇಮಕಗೊಂಡಿರುವ ಸಿ ಹೆಚ್ ವಿಜಯಶಂಕರ್, ಪ್ರಧಾನಿ ನರೇಂದ್ರ ಮೋದಿ ಹಾಗು ಗಣಪತಿ ಒಟ್ಟಿಗೆ ಇರುವ ಮೂರ್ತಿಗಳ ಜೊತೆಗೆ, ಕಾಂತಾರ ಚಲನಚಿತ್ರದ ಅತ್ಯದ್ಭುತ ಅಭಿನಯಕ್ಕಾಗಿ ರಾಷ್ಟ್ರ ಪ್ರಶಸ್ತಿಗೆ ಭಾಜನವಾಗಿರುವ ಖ್ಯಾತ ನಟ ರಿಷಬ್ ಶೆಟ್ಟಿಯೊಟ್ಟಿಗೆ ಗಣಪತಿ ಇರುವ ಮೂರ್ತಿಗಳು ನೋಡುಗರ ಮನ ಸೂರೆಗೊಳ್ಳುತ್ತಿವೆ.
icon

(8 / 8)

ಇತರ ಗ್ಯಾಲರಿಗಳು