ಅತ್ಯಧಿಕ ಪ್ರೊಟೀನ್ ಅಂಶವಿರುವ ವೆಜ್ ಬ್ರೇಕ್‌ಫಾಸ್ಟ್ ರೆಸಿಪಿಗಳಿವು; ಇದನ್ನು ತಿಂದ್ರೆ ತೂಕ ಹೆಚ್ಚುತ್ತೆ ಅನ್ನೋ ಚಿಂತೆ ಖಂಡಿತ ಬೇಡ
- ಬೆಳಗಿನ ಉಪಾಹಾರವನ್ನು ಎಂದಿಗೂ ತ್ಯಜಿಸಬಾರದು, ಇದರಿಂದ ಆರೋಗ್ಯ ಸಮಸ್ಯೆಗಳು ಉಂಟಾಗುತ್ತವೆ ಎನ್ನುತ್ತಾರೆ. ಆದರೆ ಬೆಳಗಿನ ಪ್ರೊಟೀನ್ ಸಮೃದ್ಧ ಉಪಾಹಾರವನ್ನು ಸೇವಿಸುವುದರಿಂದ ಆರೋಗ್ಯಕ್ಕೂ ಉತ್ತಮ, ತೂಕ ಇಳಿಕೆಗೂ ಸಹಕಾರಿ. ಅತ್ಯಧಿಕ ಪ್ರೊಟೀನ್ ಸಮೃದ್ಧ ಭಾರತೀಯ ಶೈಲಿಯ ಕೆಲವು ಉಪಾಹಾರ ರೆಸಿಪಿಗಳು ಇಲ್ಲಿವೆ.
- ಬೆಳಗಿನ ಉಪಾಹಾರವನ್ನು ಎಂದಿಗೂ ತ್ಯಜಿಸಬಾರದು, ಇದರಿಂದ ಆರೋಗ್ಯ ಸಮಸ್ಯೆಗಳು ಉಂಟಾಗುತ್ತವೆ ಎನ್ನುತ್ತಾರೆ. ಆದರೆ ಬೆಳಗಿನ ಪ್ರೊಟೀನ್ ಸಮೃದ್ಧ ಉಪಾಹಾರವನ್ನು ಸೇವಿಸುವುದರಿಂದ ಆರೋಗ್ಯಕ್ಕೂ ಉತ್ತಮ, ತೂಕ ಇಳಿಕೆಗೂ ಸಹಕಾರಿ. ಅತ್ಯಧಿಕ ಪ್ರೊಟೀನ್ ಸಮೃದ್ಧ ಭಾರತೀಯ ಶೈಲಿಯ ಕೆಲವು ಉಪಾಹಾರ ರೆಸಿಪಿಗಳು ಇಲ್ಲಿವೆ.
(1 / 8)
ಭಾರತೀಯ ಸಸ್ಯಹಾರಿ ಬ್ರೇಕ್‌ಫಾಸ್ಟ್‌ಗಳ ಪಟ್ಟಿಯಲ್ಲಿ ಹಲವು ಪ್ರೊಟೀನ್ ಸಮೃದ್ಧ ರೆಸಿಪಿಗಳಿವೆ. ನಾನು ಪ್ರತಿನಿತ್ಯ ಇದನ್ನು ಸೇವಿಸುತ್ತೇವೆ. ಆದರೂ ಇದರಲ್ಲಿ ಪ್ರೊಟೀನ್ ಅಂಶಗಳ ಬಗ್ಗೆ ನಮಗೆ ತಿಳಿದಿರುವುದಿಲ್ಲ. ಹಾಗಾದರೆ ಅಧಿಕ ಪ್ರೊಟೀನ್ ಅಂಶವಿರುವ ಭಾರತೀಯ ಸಸ್ಯಹಾರಿ ಬ್ರೇಕ್‌ಫಾಸ್ಟ್ ರೆಸಿಪಿಗಳು ಯಾವುವು ನೋಡಿ.
(2 / 8)
ಪನೀರ್ ಬುರ್ಜಿ: ಪನೀರ್ ಇಷ್ಟಪಡದೇ ಇರುವವರು ಕಡಿಮೆ. ಮಾಂಸಾಹಾರಿಗಳು ಮೊಟ್ಟೆಯ ಬುರ್ಜಿಯನ್ನು ತಿನ್ನುವಂತೆ ಸಸ್ಯಾಹಾರಿಗಳು ಪನೀರ್ ಬುರ್ಜಿ ತಿನ್ನಬಹುದು. ಇದು ಆರೋಗ್ಯಕ್ಕೂ ಉತ್ತಮ, ಪ್ರೊಟೀನ್ ಅಂಶ ದೇಹವನ್ನು ಸೇರುವಂತೆ ಮಾಡುತ್ತದೆ. ತರಕಾರಿ, ಮಸಾಲೆ ಪದಾರ್ಥಗಳನ್ನು ಸೇರಿಸಿ ತಯಾರಿಸುವ ಪನೀರ್ ಬುರ್ಜಿ ಟೇಸ್ಟ್ ಕೂಡ ಸೂಪರ್ ಆಗಿರುತ್ತೆ.
(3 / 8)
ಗೋಧಿ ನುಚ್ಚು, ಪನೀರ್ ಉಪ್ಪಿಟ್ಟು: ಗೋಧಿನುಚ್ಚಿನಿಂದ ಮಾಡಿದ ಪಾಯಸವನ್ನು ನೀವು ತಿಂದಿರಬಹುದು. ಆದರೆ ಇದರಿಂದ ರುಚಿಯಾದ ಉಪ್ಪಿಟ್ಟು ತಯಾರಿಸಬಹುದು. ಗೋಧಿನುಚ್ಚು, ಪನೀರ್, ಬಟಾಣಿಕಾಳು, ತರಕಾರಿ ಸೇರಿಸಿ ತಯಾರಿಸುವ ಈ ಉಪ್ಪಿಟ್ಟಿನ ರುಚಿಯನ್ನು ತಿಂದೇ ನೋಡಬೇಕು.
(4 / 8)
ಪನೀರ್ ಹೆಸರುಬೇಳೆ ದೋಸೆ: ಹೆಸರುಬೇಳೆಯಲ್ಲಿ ಪ್ರೊಟೀನ್ ಸಾಕಷ್ಟು ಹೇರಳವಾಗಿರುತ್ತದೆ. ಇದರೊಂದಿಗೆ ಪನೀರ್ ತುರಿದು ಹಾಕಿ ತಯಾರಿಸುವ ದೋಸೆ ಆರೋಗ್ಯಕ್ಕೆ ಬಹಳ ಉತ್ತಮ.
(5 / 8)
ಓಟ್ಸ್ ಅವಲಕ್ಕಿ: ಓಟ್ಸ್ ಅವಲಕ್ಕಿ ಅಧಿಕ ಪ್ರೊಟೀನ್ ಅಂಶವಿರುವ ಬೆಳಗಿನ ಉಪಾಹಾರವಾಗಿದೆ. ಇದನ್ನು 15 ನಿಮಿಷದಲ್ಲಿ ತಯಾರಿಸಬಹುದು. ಕ್ಯಾರೆಟ್, ಬೀನ್ಸ್, ಬಟಾಣಿಕಾಳು ಹಾಕಿ ತಯಾರಿಸುವ ಈ ತಿಂಡಿ ಆರೋಗ್ಯಕ್ಕೂ ಉತ್ತಮ, ತೂಕ ಇಳಿಕೆಗೂ ಸಹಕಾರಿ.
(6 / 8)
ಚಟ್‌ಪಟ್ ಇಂಡಿಯನ್ ಸಲಾಡ್: ಮೊಳಕೆ ಬರಿಸಿದ ಹೆಸರುಕಾಳು, ಕಾಬೂಲ್ ಕಡಲೆ, ಟೊಮೆಟೊ, ಈರುಳ್ಳಿ, ಹಸಿಮೆಣಸು ಇವನ್ನೆಲ್ಲಾ ಕೊಚ್ಚಿ ಹಾಕಿ ತಯಾರಿಸಿದ ಚಟ್‌ಪಟ್ ಚಾಟ್ ಉತ್ತಮ ಬೆಳಗಿನ ಉಪಾಹಾರ. ಇದನ್ನು ನಿಮ್ಮ ಡಯೆಟ್ ಕ್ರಮದಲ್ಲಿ ಸೇರಿಸುವುದು ಉತ್ತಮ.
(7 / 8)
ಬಾಳೆಹಣ್ಣು ಪೀನಟ್ ಬಟರ್ ಟೋಸ್ಟ್: ಇದು ಹೈ ಪ್ರೊಟೀನ್ ಬ್ರೇಕ್‌ಫಾಸ್ಟ್. ಇದನ್ನು ಸುಲಭವಾಗಿ ತಯಾರಿಸಬಹುದಾಗಿದ್ದು, ಮಿಲೇನಿಯಲ್ ಜಮಾನದ ಮಂದಿಗೆ ಇದು ಅಚ್ಚುಮೆಚ್ಚಿನ ಬ್ರೇಕ್‌ಫಾಸ್ಟ್ ಕೂಡ ಹೌದು.
ಇತರ ಗ್ಯಾಲರಿಗಳು