Ginger Lemon Juice; ಖಾಲಿ ಹೊಟ್ಟೆಗೆ ಶುಂಠಿ-ಲಿಂಬೆ ರಸ ಕುಡಿದರೆ ಎದೆಯುರಿ, ಅಜೀರ್ಣ ಎಲ್ಲವೂ ಮಾಯ-health tips morning boost health benefits of ginger and lemon juice on an empty stomach uks ,ಫೋಟೋ ಗ್ಯಾಲರಿ ಸುದ್ದಿ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Ginger Lemon Juice; ಖಾಲಿ ಹೊಟ್ಟೆಗೆ ಶುಂಠಿ-ಲಿಂಬೆ ರಸ ಕುಡಿದರೆ ಎದೆಯುರಿ, ಅಜೀರ್ಣ ಎಲ್ಲವೂ ಮಾಯ

Ginger Lemon Juice; ಖಾಲಿ ಹೊಟ್ಟೆಗೆ ಶುಂಠಿ-ಲಿಂಬೆ ರಸ ಕುಡಿದರೆ ಎದೆಯುರಿ, ಅಜೀರ್ಣ ಎಲ್ಲವೂ ಮಾಯ

Ginger Lemon Juice Health Benefits; ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಶುಂಠಿ ರಸವನ್ನು ಕುಡಿಯುವುದರಿಂದ ಹಲವಾರು ಪ್ರಯೋಜನಗಳಿವೆ ಎನ್ನುತ್ತಾರೆ ಆಹಾರ ತಜ್ಞರು. ಇದು ಅಜೀರ್ಣದ ಅಸ್ವಸ್ಥತೆ ಮತ್ತು ಮಧುಮೇಹದಂತಹ ಸಮಸ್ಯೆಗಳನ್ನು ಕಡಿಮೆ ಮಾಡುತ್ತದೆ ಎಂಬುದು ಅಧ್ಯಯನಗಳಲ್ಲಿ ಕಂಡುಬಂದಿದೆ.

ನಿತ್ಯ ಶುಂಠಿ ಮತ್ತು ಲಿಂಬೆ ಹಣ್ಣಿನ ಜ್ಯೂಸ್ ಖಾಲಿ ಹೊಟ್ಟೆಗೆ ಕುಡಿದರೆ, ಹಲವಾರು ರೋಗ ಸಮಸ್ಯೆಗಳನ್ನು ದೂರ ಮಾಡಬಹುದು. ಇದು ಮಧುಮೇಹದಿಂದ ಹಿಡಿದು ಅಜೀರ್ಣದವರೆಗೆ ಎಲ್ಲವನ್ನೂ ನಿಯಂತ್ರಿಸುತ್ತದೆ. ಈಗ ಶುಂಠಿ ಜ್ಯೂಸ್ ಮಾಡುವುದು ಹೇಗೆ ಎಂದು ನೋಡೋಣ.
icon

(1 / 7)

ಶುಂಠಿ ಮತ್ತು ನಿಂಬೆ ರಸದ ಮಿಶ್ರಣಕ್ಕೆ ಸ್ವಲ್ಪ ಮೆಣಸು ಮತ್ತು ಸ್ವಲ್ಪ ಜೇನುತುಪ್ಪವನ್ನು ಸೇರಿಸಿ. ನೀವು ಈ ಮಿಶ್ರಣವನ್ನು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿಯಬಹುದು. ಹೀಗೆ ಮಾಡುವುದರಿಂದ ಆಗಬಹುದಾದ ಪ್ರಯೋಜನಗಳನ್ನು ಗಮನಿಸೋಣ.
icon

(2 / 7)

ಸ್ನಾಯು ನೋವು: ಶುಂಠಿ ರಸದಲ್ಲಿ ಜಿಂಜರಾಲ್ ಅಂಶವಿದೆ. ಸ್ನಾಯು ನೋವಿನಿಂದ ಬಳಲುತ್ತಿರುವವರು ಈ ಮಿಶ್ರಣವನ್ನು ನಿಯತವಾಗಿ ಕುಡಿಯುವುದರಿಂದ ಸ್ನಾಯು ನೋವಿನ ಸಮಸ್ಯೆ ಕಡಿಮೆಯಾಗುತ್ತದೆ ಎನ್ನುತ್ತಾರೆ ಪರಿಣತರು.
icon

(3 / 7)

ಶುಂಠಿ ಮತ್ತು ನಿಂಬೆ ಚಯಾಪಚಯ ಕ್ರಿಯೆಯಲ್ಲಿ ಸಹಾಯ ಮಾಡುತ್ತದೆ. ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಈ ಜ್ಯೂಸ್ ಕುಡಿಯುವುದರಿಂದ ಹೊಟ್ಟೆಯ ಸಮಸ್ಯೆ ಕಡಿಮೆಯಾಗುತ್ತದೆ. ಅಲ್ಲದೆ ಎದೆಯುರಿ ಸಮಸ್ಯೆಯನ್ನು ಕಡಿಮೆ ಮಾಡಲು ಶುಂಠಿ ರಸ ಚೆನ್ನಾಗಿ ಕೆಲಸ ಮಾಡುತ್ತದೆ ಎಂದು ಆಹಾರ ತಜ್ಞರು ಹೇಳುತ್ತಾರೆ.
icon

(4 / 7)

ವಾಕರಿಕೆ ಅನುಭವಕ್ಕೂ ಈ ಶುಂಠಿ-ನಿಂಬೆ ರಸದ ಸಂಯೋಜನೆಯು ಪರಿಹಾರವನ್ನು ನೀಡುತ್ತದೆ. ನಿಮಗೆ ಆಗಾಗ್ಗೆ ಈ ಸಮಸ್ಯೆ ಇದ್ದರೆ, ಈ ಜ್ಯೂಸ್‌ ಅನ್ನು ಪ್ರತಿದಿನ ತೆಗೆದುಕೊಳ್ಳಬಹುದು. ಇದರಿಂದ ಈ ಸಮಸ್ಯೆ ಕಡಿಮೆಯಾಗುತ್ತದೆ ಎನ್ನುತ್ತಾರೆ ಪರಿಣತರು.
icon

(5 / 7)

ಅಧಿಕ ರಕ್ತದೊತ್ತಡ ಮತ್ತು ಮಧುಮೇಹದ ಸಮಸ್ಯೆಗಳನ್ನು ಕಡಿಮೆ ಮಾಡಲು ಶುಂಠಿ ರಸವು ತುಂಬಾ ಉಪಯುಕ್ತವಾಗಿದೆ. ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಈ ರಸವನ್ನು ಕುಡಿಯುವುದರಿಂದ ಮಧುಮೇಹ ಮತ್ತು ರಕ್ತದೊತ್ತಡ ಕಡಿಮೆಯಾಗುತ್ತದೆ. ಇದರಿಂದ ಹೃದಯ ಆರೋಗ್ಯಕರವಾಗಿರುತ್ತದೆ.
icon

(6 / 7)

ದೇಹದಲ್ಲಿ ಸಂಗ್ರಹವಾಗಿರುವ ವಿಷ ಅಥವಾ ಕಲ್ಮಶಗಳು ಸರಿಯಾಗಿ ದೇಹದಿಂದ ಹೊರಬರುವುದಿಲ್ಲ. ಹೀಗಾಗಿ ಅನೇಕ ಜನರು ಬೆಳಿಗ್ಗೆ ಎದ್ದಾಗ ಆಲಸ್ಯವನ್ನು ಅನುಭವಿಸುತ್ತಾರೆ. ಅಂತಹ ಸಂದರ್ಭಗಳಲ್ಲಿ ಶುಂಠಿ ರಸವು ಉತ್ತಮ ಡಿಟಾಕ್ಸ್ ಪಾನೀಯವಾಗಿ ಕಾರ್ಯನಿರ್ವಹಿಸುತ್ತದೆ. ಇದು ದೇಹವನ್ನು ಶುದ್ಧೀಕರಿಸಲು, ಲವಲವಿಕೆ ಮೂಡಿಸಲು ಸಹಾಯ ಮಾಡುತ್ತದೆ. ಆದಾಗ್ಯೂ, ಇಂತಹ ವಿಷಯಗಳಲ್ಲಿ ಆರೋಗ್ಯ ಪರಿಣತರ ಸಲಹೆ ಪಡೆದುಕೊಂಡು ಮುಂದುವರಿಯಿರಿ. 
icon

(7 / 7)

ಇತರ ಗ್ಯಾಲರಿಗಳು