Healthy Foods in Winter: ಚಳಿಗಾಲದಲ್ಲಿ ಈ ಆಹಾರಗಳನ್ನು ಸೇವಿಸಬೇಕು; ಏಕೆಂದರೆ...
- Healthy Foods in Winter: ಚಳಿಗಾಲದಲ್ಲಿ ರೋಗನಿರೋಧಕ ಶಕ್ತಿ ಬಹಳ ಮುಖ್ಯ. ಇದನ್ನು ಹೆಚ್ಚಿಸಬೇಕಾದರೆ ನಮ್ಮ ಆಹಾರ ಕ್ರಮದಲ್ಲಿ ಒಂದಿಷ್ಟು ಬದಲಾವಣೆ ಮಾಡಿಕೊಳ್ಳಬೇಕು. ಚಳಿಗಾಲದಲ್ಲಿ ರೋಗ ರುಜಿನಗಳಿಗೆ ತುತ್ತಾಗದೆ ಆರೋಗ್ಯವಾಗಿ ಇರಬೇಕು ಎನ್ನುತ್ತಾರೆ ಪೌಷ್ಟಿಕತಜ್ಞರು.
- Healthy Foods in Winter: ಚಳಿಗಾಲದಲ್ಲಿ ರೋಗನಿರೋಧಕ ಶಕ್ತಿ ಬಹಳ ಮುಖ್ಯ. ಇದನ್ನು ಹೆಚ್ಚಿಸಬೇಕಾದರೆ ನಮ್ಮ ಆಹಾರ ಕ್ರಮದಲ್ಲಿ ಒಂದಿಷ್ಟು ಬದಲಾವಣೆ ಮಾಡಿಕೊಳ್ಳಬೇಕು. ಚಳಿಗಾಲದಲ್ಲಿ ರೋಗ ರುಜಿನಗಳಿಗೆ ತುತ್ತಾಗದೆ ಆರೋಗ್ಯವಾಗಿ ಇರಬೇಕು ಎನ್ನುತ್ತಾರೆ ಪೌಷ್ಟಿಕತಜ್ಞರು.
(1 / 6)
ಚಳಿಗಾಲದಲ್ಲಿಯೂ ರೋಗಗಳು ಕಾಡುತ್ತಲೇ ಇರುತ್ತವೆ. ಈ ರೋಗಗಳಿಂದ ರಕ್ಷಿಸಲು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವುದು ಅವಶ್ಯಕ. ಅದರಲ್ಲೂ ಹವಾಮಾನದಲ್ಲಿ ಬದಲಾವಣೆ, ತಾಪಮಾನ ಏರುಪೇರಾಗುವುದರಿಂದ ಹೆಚ್ಚಿನ ಸಮಸ್ಯೆಗಳಾಗುವ ಸಾಧ್ಯತೆ ಇದೆ. ಹೀಗಾಗಿ, ಈ ಸಮಯದಲ್ಲಿ ನೀವು ಆರೋಗ್ಯವಾಗಿರುವುದು ಮತ್ತು ಫಿಟ್ ಆಗಿರುವುದು ಬಹಳ ಮುಖ್ಯ.(Unsplash)
(2 / 6)
ಮನೆಯಲ್ಲಿ ತಯಾರಿಸಿದ ಬೆಣ್ಣೆಯು ನಿಮ್ಮ ಒಟ್ಟಾರೆ ಜೀರ್ಣಕ್ರಿಯೆಯ ಪ್ರಕ್ರಿಯೆಯನ್ನು ಸುಧಾರಿಸುತ್ತದೆ.(Unsplash)
(3 / 6)
ಮೊಳಕೆ ಕಾಳುಗಳು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇವು ನಿಮ್ಮ ಕಿಡ್ನಿಯಲ್ಲಿ ಕಲ್ಲುಗಳು ಹುಟ್ಟಿಕೊಳ್ಳುವುದನ್ನು ತಡೆಯುತ್ತವೆ. ಇದಲ್ಲದೆ, ಚಳಿಗಾಲದಲ್ಲಿ ಚರ್ಮ ಮತ್ತು ನೆತ್ತಿಯನ್ನು ತೇವಾಂಶದಿಂದ ಇರಿಸಲು ಮತ್ತು ಪೋಷಣೆಯಲ್ಲಿ ಕೂಡಾ ಅವು ಪ್ರಮುಖ ಪಾತ್ರವಹಿಸುತ್ತವೆ.(Unsplash)
(4 / 6)
ಎಳ್ಳು: ಇದು ಕಣ್ಣು, ಚರ್ಮ ಮತ್ತು ಮೂಳೆಗಳಿಗೆ ತುಂಬಾ ಒಳ್ಳೆಯದು. ಇವುಗಳನ್ನು ನಿಮ್ಮ ಆಹಾರದಲ್ಲಿ ಸೇರಿಸುವುದರಿಂದ ನೀವು ಆರೋಗ್ಯವಾಗಿರುತ್ತೀರಿ. ಇದು ನಿಮ್ಮ ರೋಗನಿರೋಧಕ ಶಕ್ತಿಯನ್ನು ಸಹ ಹೆಚ್ಚಿಸುತ್ತದೆ.(Unsplash)
(5 / 6)
ರಾಗಿ ಸೇರಿದಂತೆ ವಿವಿಧ ಧಾನ್ಯಗಳಲ್ಲಿ ಖನಿಜ ಮತ್ತು ಫೈಬರ್ ಅಂಶ ಸಮೃದ್ಧವಾಗಿರುತ್ತವೆ. ಹಾಗಾಗಿಯೇ ಇವುಗಳನ್ನು ತಪ್ಪದೇ ತಿನ್ನಲು ವೈದ್ಯರು ಸಲಹೆ ನೀಡುತ್ತಾರೆ. ಇದು ಕೀಲು ನೋವಿಗೆ ತುಂಬಾ ಒಳ್ಳೆಯದು.(Unsplash)
ಇತರ ಗ್ಯಾಲರಿಗಳು