ಕತ್ತರಿ ಮೊಂಡಾಗಿದ್ಯಾ, ಪಾತ್ರೆ ತಳ ಸೀದು ಹೋಯ್ತಾ, ಡೈ ಹಚ್ಚುವಾಗ ಕೈಗಳು ಕಪ್ಪಾಗ್ತಿದ್ಯಾ; ಇವೆಲ್ಲದಕ್ಕೂ ಮನೆಯಲ್ಲೇ ಇದೆ ಪರಿಹಾರ
ಯಾವುದೇ ಕೆಲಸ ಆದರೂ ಬೇಗ ಮುಗಿಸಿ ರೆಸ್ಟ್ ಮಾಡೋಣ ಅನ್ನೋದು ಎಲ್ಲಾ ಮಹಿಳೆಯರ ಆಂಬೋಣ. ಅದು ಗೃಹಿಣಿ ಆಗಿರಲಿ, ಕೆಲಸಕ್ಕೆ ಹೋಗುವವರಾಗಲಿ. ನಿಮ್ಮ ಪ್ರತಿದಿನದ ಕೆಲಸಗಳನ್ನು ಸುಲಭ ಮಾಡಲು ಇಲ್ಲಿ ಕೆಲವೊಂದು ಟಿಪ್ಸ್ ಇವೆ.
(1 / 8)
ಕತ್ತರಿಸಿದ ನಿಂಬೆ ಹೋಳುಗಳನ್ನು ವೇಸ್ಟ್ ಮಾಡುವ ಬದಲಿಗೆ ಅದಕ್ಕೆ ಲವಂಗಗಳನ್ನು ಚುಚ್ಚಿ ಇಟ್ಟರೆ ಸಣ್ಣ ಸಣ್ಣ ಸೊಳ್ಳೆಗಳು ಬರುವುದಿಲ್ಲ. ಅಥವಾ ನಿಂಬೆ ಹೋಳುಗಳಿಗೆ ಬೇಕಿಂಗ್ ಸೋಡಾ ಹಾಕಿ ರೆಫ್ರಿಜರೆಟರ್‌ನಲ್ಲಿಟ್ಟರೆ ಒಳಗಿನ ದುರ್ವಾಸನೆ ಹೋಗುತ್ತದೆ.
(2 / 8)
ಹೇರ್ ಡೈ ಹಚ್ಚುವಾಗ ಗ್ಲೌಸ್ ಹಾಕಿದರೂ ಒಮ್ಮೊಮ್ಮೆ ಕೈ ಕಪ್ಪಾಗುತ್ತವೆ. ಇದನ್ನು ತಡೆಯಲು ಮೊದಲು ಕೈಗಳಿಗೆ ವ್ಯಾಸಲಿನ್ ಹಚ್ಚಿಕೊಂಡು ನಂತರ ಗ್ಲೌಸ್ ಹಾಕಿದರೆ ಕೈ ಸ್ವಚ್ಛವಾಗಿರುತ್ತವೆ
(3 / 8)
ಆರೆಂಜ್ ಜ್ಯೂಸ್ ಮಾಡೋಕೆ ಮಿಕ್ಸಿ ಅಥವಾ ಜ್ಯೂಸರ್ ಅವಶ್ಯಕತೆಯಿಲ್ಲ. ಕಿತ್ತಳೆ ಹಣ್ಣನ್ನು ಕತ್ತರಿಸಿ ಈ ವಿಸ್ಕರನ್ನು ಮಧ್ಯದಲ್ಲಿಟ್ಟು ಪ್ರೆಸ್ ಮಾಡುತ್ತಾ ತಿರುವಿದರೆ ಸಾಕು.
(4 / 8)
ಸ್ವಲ್ಪ ಉಳಿಸಿರುವ ಟೂತ್ ಪೇಸ್ಟನ್ನು ಟ್ಯೂಬನ್ನು ನೀರಿನಲ್ಲಿ ನೆನೆಹಾಕಿ ನಂತರ ಆ ನೀರನ್ನು ಸಿಂಕ್ ತೊಳೆಯಲು ಬಳಸಬಹುದು, ಟ್ಯೂಬನ್ನು ತುದಿಯಲ್ಲಿ ಕತ್ತರಿಸಿ ಟೇಪ್ ಮೂಲಕ ನಲ್ಲಿಗೆ ಫಿಕ್ಸ್ ಮಾಡಿದರೆ ನೀರಿನ ರಭಸವನ್ನೂ ತಡೆಯಬಹುದು
(5 / 8)
ತಳ ಹಿಡಿದ ಪಾತ್ರೆಯನ್ನು ಸುಲಭವಾಗಿ ಕ್ಲೀನ್ ಮಾಡಲು ಟಿಪ್ಸ್ ಒಂದು ಚಮಚ ಡಿಶ್ ವಾಶ್ ಪುಡಿ, ಸ್ವಲ್ಪ ನೀರು ಹಾಕಿ ಸಣ್ಣ ಉರಿಯಲ್ಲಿ 5 ನಿಮಿಷ ಕುದಿಸಿ. ನಂತರ ನೀರು ತೆಗೆದು ಉಪ್ಪು, ಬೇಕಿಂಗ್_ ಸೋಡಾ ಹರಡಿ ಸ್ವಲ್ಪ ಸಮಯದ ನಂತರ ಸ್ಕ್ರಬ್ಬರ್‌ನಿಂದ ಉಜ್ಜಿ.
(6 / 8)
ಮೊಂಡಾದ ಕತ್ತರಿಯನ್ನು ಸಾಣೆ ಹಿಡಿಸಲು ಮಾರ್ಕೆಟ್‌ವರೆಗೂ ಹೋಗಬೇಕಿಲ್ಲ. ಖಾಲಿ ಆದ ಮಾತ್ರೆ ಶೀಟ್‌ಗಳನ್ನು ಕತ್ತರಿಯಲ್ಲಿ ಒಂದೆರಡು ನಿಮಿಷ ಕತ್ತರಿಸಿದರೆ ಸಾಕು, ಕತ್ತರಿ ಹರಿತವಾಗುತ್ತದೆ.
(7 / 8)
ಕುಕ್ಕರ್ ಸೀಟಿ ಬಂದ ನಂತರ ಅದನ್ನು ಬೇಗ ತೆಗೆಯುವ ಸಂದರ್ಭವಿದ್ದರೆ ಹೀಗೆ ಮಾಡಿ. ಕುಕ್ಕರ್ ಮೇಲೆ ಒಂದು ಕಿಚನ್ ಟವೆಲ್ ಇಟ್ಟು ಸ್ವಲ್ಪ ನೀರು ಚಿಮುಕಿಸಿ. ಸಿಂಕ್ ಇಲ್ಲದವರು ಹೀಗೆ ಮಾಡಿದರೆ ಬಹಳ ಹೊತ್ತು ಕಾಯುವ ಅವಶ್ಯಕತೆಯಿಲ್ಲ.
ಇತರ ಗ್ಯಾಲರಿಗಳು