Snoring: ರಾತ್ರಿ ಗೊರಕೆ ಹೊಡೆಯುತ್ತೀರಾ? ನಿಮ್ಮ ಸಮಸ್ಯೆಗೆ 9 ಪರಿಹಾರಗಳು ಇಲ್ಲಿವೆ
- Tips To Stop Snoring: ನಿಮಗೂ ರಾತ್ರಿ ಮಲಗುವಾಗ ಗೊರಕೆ ಹೊಡೆಯುವ ಅಭ್ಯಾಸ ಇದೆಯಾ? ನಿಮ್ಮ ಗೊರಕೆಯಿಂದ ನಿಮ್ಮ ಪಕ್ಕ ಮಲಗುವವರಿಗೆ ತೊಂದರೆ ಆಗ್ತಾ ಇದೆಯಾ? ಚಿಂತಿಸಬೇಡಿ. ಗೊರಕೆ ಹೊಡೆಯುವುದನ್ನು ತಪ್ಪಿಸಿ ಚೆನ್ನಾಗಿ ನಿದ್ರೆ ಮಾಡಲು ಈ ಕೆಳಗಿನ ಟಿಪ್ಸ್ ಅನುಸರಿಸಿ..
- Tips To Stop Snoring: ನಿಮಗೂ ರಾತ್ರಿ ಮಲಗುವಾಗ ಗೊರಕೆ ಹೊಡೆಯುವ ಅಭ್ಯಾಸ ಇದೆಯಾ? ನಿಮ್ಮ ಗೊರಕೆಯಿಂದ ನಿಮ್ಮ ಪಕ್ಕ ಮಲಗುವವರಿಗೆ ತೊಂದರೆ ಆಗ್ತಾ ಇದೆಯಾ? ಚಿಂತಿಸಬೇಡಿ. ಗೊರಕೆ ಹೊಡೆಯುವುದನ್ನು ತಪ್ಪಿಸಿ ಚೆನ್ನಾಗಿ ನಿದ್ರೆ ಮಾಡಲು ಈ ಕೆಳಗಿನ ಟಿಪ್ಸ್ ಅನುಸರಿಸಿ..
(1 / 9)
ಮಲಗುವ ಭಂಗಿ: ನೀವು ಯಾವ ಭಂಗಿಯಲ್ಲಿ ಮಲಗುತ್ತೀರಿ ಎಂಬುದು ಕೂಡ ಗೊರಕೆ ಹೊಡೆಯುವುದಕ್ಕೆ ಕಾರಣವಾಗುತ್ತದೆ. ಗೊರಕೆ ತಪ್ಪಿಸಲು ನೀವು ಈ ಚಿತ್ರದಲ್ಲಿ ತೋರಿಸಿದಂತೆ ಲ್ಯಾಟರಲ್ ಪೊಸಿಶನ್ನಲ್ಲಿ (lateral position) ಮಲಗಿ. ಅಂದರೆ ಒಂದು ಬದಿ ತಿರುಗಿ ಮಲಗುವುದು.
(2 / 9)
ಮೂಗಿನ ಪಟ್ಟಿ: ಗೊರಕೆ ಹೊಡೆಯುವುದನ್ನು ತಪ್ಪಿಸಲು ಮಾರುಕಟ್ಟೆಯಲ್ಲಿ ಮೂಗಿನ ಪಟ್ಟಿ (Nasal Strip) ಲಭ್ಯವಿದೆ. ಇದನ್ನು ಮೂಗಿನ ಮೇಲೆ ಹಾಕಿಕೊಂಡು ಮಲಗಿ.
(3 / 9)
ಸ್ಟೀಮಿಂಗ್: ಪ್ರತಿ ರಾತ್ರಿ ಮಲಗುವ ಮುನ್ನ ಹಬೆ ತೆಗೆದುಕೊಳ್ಳುವುದರಿಂದ (Steaming) ಉಸಿರಾಟ ಸರಾಗವಾಗಿ ಆಗುತ್ತದೆ. ಇದರಿಂದ ಗೊರಕೆ ಹೊಡೆಯುವುದನ್ನು ತಪ್ಪಿಸಬಹುದಾಗಿದೆ.
(4 / 9)
ಆ್ಯಂಡಿ ಸ್ನೋರಿಂಗ್ ಮೌತ್ಪೀಸ್ (Anti-Snoring Mouthpiece): ಇದು ಗೊರಕೆಯನ್ನು ನಿವಾರಿಸಲು ಇರುವ ಸಾಧನವಾಗಿದೆ. ಇದರಲ್ಲಿ 2 ವಿಧ ಇದೆ. ಒಂದನ್ನು ಮಲಗುವಾಗ ನಿಮ್ಮ ದಂತ (ಹಲ್ಲು)ಕ್ಕೆ ಫಿಕ್ಸ್ ಮಾಡಬೇಕು, ಇನ್ನೊಂದನ್ನು ನಿಮ್ಮ ನಾಲಗೆಗೆ ಫಿಕ್ಸ್ ಮಾಡಬೇಕು. ಈ ಎರಡರ ಪೈಕಿ ನಿಮಗೆ ಬೇಕಾದದ್ದನ್ನು ಆಯ್ಕೆ ಮಾಡಿಕೊಳ್ಳಬಹುದು.
(5 / 9)
ತೂಕ ಇಳಿಸಿ: ಅಧಿಕ ತೂಕ ಹೊಂದಿರುವ ಜನರು ಹೆಚ್ಚು ಗೊರಕೆ ಹೊಡೆಯುತ್ತಾರೆ. ಅಧಿಕ ತೂಕ ಹೊಂದಿರುವವರ ಕತ್ತಿನ ಸುತ್ತ ಹೆಚ್ಚುವರಿ ಕೊಬ್ಬು ಸಂಗ್ರಹವಾಗುತ್ತದೆ. ಇದು ಅವರ ಶ್ವಾಸನಾಳಗಳನ್ನು ಕಿರಿದಾಗಿಸುತ್ತದೆ ಮತ್ತು ಗೊರಕೆಗೆ ಕಾರಣವಾಗುತ್ತದೆ. ಹೀಗಾಗಿ ತೂಕವನ್ನು ಇಳಿಸಿಕೊಳ್ಳಿ.
(6 / 9)
ವಿಶ್ರಾಂತಿ: ನಿಮ್ಮ ಗೊರಕೆಗೆ ಆಯಾಸವೇ ಕಾರಣವಾಗಿರಬಹುದು. ಅದಕ್ಕಾಗಿಯೇ ನೀವು ಪ್ರತಿ ದಿನ ಕೆಲಸದ ಒತ್ತಡದ ನಡುವೆ ವಿಶ್ರಾಂತಿ ತೆಗೆದುಕೊಳ್ಳಬೇಕು ಹಾಗೂ ರಾತ್ರಿ ನಿದ್ದೆಯ ಅವಧಿ ಕಡಿಮೆ ಮಾಡಬಾರದು.
(7 / 9)
ಧೂಮಪಾನ-ಮದ್ಯಪಾನ ತ್ಯಜಿಸಿ: ಪ್ರತಿನಿತ್ಯ, ಅದರಲ್ಲಿಯೂ ಮಲಗುವ ಮುನ್ನ ಮದ್ಯಪಾನ ಹಾಗೂ ಧೂಮಪಾನ ಮಾಡುವುದು ನಿಮ್ಮ ಗೊರಕೆಗೆ ಕಾರಣವಾಗಬಹುದು. ಹೀಗಾಗಿ ಇದನ್ನು ತ್ಯಜಿಸಿ ಬಿಡಿ.
(8 / 9)
ಶುಂಠಿ - ಜೇನುತುಪ್ಪದ ಟೀ: ಗೊರಕೆ ಸಮಸ್ಯೆಯಿಂದ ಮುಕ್ತಿ ಪಡೆಯಲು ದಿನಕ್ಕೆರಡು ಬಾರಿ ಶುಂಠಿ ಮತ್ತು ಜೇನುತುಪ್ಪದ ಟೀ ಕುಡಿಯಿರಿ.
ಇತರ ಗ್ಯಾಲರಿಗಳು