ಕಿವೀಸ್ ಗೆಲುವಿನೊಂದಿಗೆ ಪಾಕ್, ಅಫ್ಘಾನ್ ವಿಶ್ವಕಪ್‌ನಿಂದ ಬಹುತೇಕ ಹೊರಕ್ಕೆ; ಹೀಗಿದೆ ಅಂಕಪಟ್ಟಿ
- World Cup 2023 Points Table: ಭಾರತ, ದಕ್ಷಿಣ ಆಫ್ರಿಕಾ ಮತ್ತು ಆಸ್ಟ್ರೇಲಿಯಾ ತಂಡಗಳು ಈಗಾಗಲೇ ಅಧಿಕೃತವಾಗಿ ಸೆಮಿಫೈನಲ್ ಟಿಕೆಟ್ ಪಡೆದುಕೊಂಡಿವೆ. ನಾಲ್ಕನೇ ತಂಡವಾಗಿ ನಾಕೌಟ್ ಬಾಗಿಲು ಬಡಿದ ತಂಡ ಯಾವುದು ಎಂಬುದಕ್ಕೆ ಕೊನೆಗೂ ಸ್ಪಷ್ಟ ಸುಳಿವು ಸಿಕ್ಕಿದೆ.
- World Cup 2023 Points Table: ಭಾರತ, ದಕ್ಷಿಣ ಆಫ್ರಿಕಾ ಮತ್ತು ಆಸ್ಟ್ರೇಲಿಯಾ ತಂಡಗಳು ಈಗಾಗಲೇ ಅಧಿಕೃತವಾಗಿ ಸೆಮಿಫೈನಲ್ ಟಿಕೆಟ್ ಪಡೆದುಕೊಂಡಿವೆ. ನಾಲ್ಕನೇ ತಂಡವಾಗಿ ನಾಕೌಟ್ ಬಾಗಿಲು ಬಡಿದ ತಂಡ ಯಾವುದು ಎಂಬುದಕ್ಕೆ ಕೊನೆಗೂ ಸ್ಪಷ್ಟ ಸುಳಿವು ಸಿಕ್ಕಿದೆ.
(1 / 6)
ನ್ಯೂಜಿಲ್ಯಾಂಡ್ ತಂಡವು ತನ್ನ ಕೊನೆಯ ಲೀಗ್ ಪಂದ್ಯದಲ್ಲಿ ಶ್ರೀಲಂಕಾವನ್ನು ದೊಡ್ಡ ಅಂತರದಿಂದ ಸೋಲಿಸುವ ಮೂಲಕ ಸೆಮಿಫೈನಲ್ ಅವಕಾಶವನ್ನು ಹಿಗ್ಗಿಸಿಕೊಂಡಿದೆ. ಆ ಮೂಲಕ ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನ ತಂಡಗಳ ಆಸೆ ಬಹುತೇಕ ಕಮರಿದೆ. ಗೆಲುವಿನೊಂದಿಗೆ ಅಂಕಗಳೊಂದಿಗೆ ಕಿವೀಸ್ ನೆಟ್ ರನ್ ರೇಟ್ ಕೂಡಾ ಹೆಚ್ಚಿಸಿದೆ. ಇದೀಗ ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನ ತಮ್ಮ ಕೊನೆಯ ಪಂದ್ಯಗಳನ್ನು ಗೆದ್ದರೂ, ನ್ಯೂಜಿಲ್ಯಾಂಡ್ ತಂಡವನ್ನು ಐದನೇ ಸ್ಥಾನಕ್ಕೆ ತಳ್ಳುವುದು ಸುಲಭವಲ್ಲ. ಕಿವೀಸ್ 9 ಪಂದ್ಯಗಳಲ್ಲಿ 10 ಅಂಕಗಳೊಂದಿಗೆ ಲೀಗ್ ಹಂತವನ್ನು ಮುಗಿಸಿತು. ಸದ್ಯ ತಂಡವು ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲದೆ. ಕಿವೀಸ್ ನಿವ್ವಳ ರನ್-ರೇಟ್ +0.743(PTI)
(2 / 6)
ಶ್ರೀಲಂಕಾ ತಂಡವು ವಿಶ್ವಕಪ್ 2023ರಲ್ಲಿ ಆಡಿದ 9 ಪಂದ್ಯಗಳಲ್ಲಿ 4 ಅಂಕಗಳೊಂದಿಗೆ ಅಭಿಯಾನಿ ಮುಗಿಸಿತು. ಕುಸಾಲ್ ಮೆಂಡಿಸ್ ಬಳಗವು ಲೀಗ್ ಅಂಕಪಟ್ಟಿಯಲ್ಲಿ ಸದ್ಯ 9ನೇ ಸ್ಥಾನದಲ್ಲಿದ್ದಾರೆ. ಒಂದು ವೇಳೆ ನೆದರ್ಲೆಂಡ್ಸ್ ತನ್ನ ಕೊನೆಯ ಪಂದ್ಯವನ್ನು ಗೆದ್ದರೆ, ಶ್ರೀಲಂಕಾ ಕೊನೆಯ ಸ್ಥಾನಕ್ಕೆ ತೃಪ್ತಿ ಪಡೆಯಬೇಕಾಗಬಹುದು. ಲಂಕಾ ನಿವ್ವಳ ರನ್-ರೇಟ್ -1.419.(PTI)
(3 / 6)
ನ್ಯೂಜಿಲ್ಯಾಂಡ್ ದೊಡ್ಡ ಅಂತರದಿಂದ ಗೆದ್ದಿದ್ದರಿಂದ ಪಾಕಿಸ್ತಾನಕ್ಕೆ ನಿರಾಶೆಯಾಗಿದೆ. ಸದ್ಯ ಪಾಕಿಸ್ತಾನ 8 ಪಂದ್ಯಗಳಿಂದ 8 ಅಂಕಗಳೊಂದಿಗೆ ಲೀಗ್ ಅಂಕಪಟ್ಟಿಯಲ್ಲಿ 5ನೇ ಸ್ಥಾನದಲ್ಲಿದೆ. ತಂಡದ ನೆಟ್ ರನ್ ರೇಟ್ +0.036 ಅಂಕ. ಒಂದು ವೇಳೆ ತಂಡವು ಕೊನೆಯ ಪಂದ್ಯದಲ್ಲಿ ಸರಿಸುಮಾರು 300 ರನ್‌ಗಳ ಅಂತರದಿಂದ ಗೆದ್ದರೆ ಮಾತ್ರ, ನಾಲ್ಕನೇ ತಂಡವಾಗಿ ಸೆಮಿಫೈನಲ್‌ಗೆ ಲಗ್ಗೆ ಹಾಕಬಹುದು.(PTI)
(4 / 6)
ನ್ಯೂಜಿಲ್ಯಾಂಡ್ ಗೆಲುವಿನೊಂದಿಗೆ ಅಫ್ಘಾನಿಸ್ತಾನ ಕೂಡಾ ಸೆಮಿಫೈನಲ್ ರೇಸ್‌ನಿಂದ ಬಹುತೇಕ ಹೊರಗುಳಿದಿದೆ. ಸದ್ಯ ಅಫ್ಘಾನಿಸ್ತಾನ 8 ಪಂದ್ಯಗಳಲ್ಲಿ 8 ಅಂಕ ಕಲೆಹಾಕುವ ಮೂಲಕ ಲೀಗ್ ಅಂಕಪಟ್ಟಿಯಲ್ಲಿ ಆರನೇ ಸ್ಥಾನದಲ್ಲಿದೆ. ನೆಟ್ ರನ್-ರೇಟ್ 0.338 ಆಗಿದೆ.(ANI)
(5 / 6)
ಎಲ್ಲಾ 8 ಪಂದ್ಯಗಳನ್ನು ಗೆದ್ದ 16 ಅಂಕ ಕಲೆಹಾಕಿರುವ ಟೀಮ್ ಇಂಡಿಯಾ ಎಂದಿನಂತೆ ಲೀಗ್ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಭಾರತದ ನಿವ್ವಳ ರನ್-ರೇಟ್ +2.456 ಆಗಿದೆ. ದಕ್ಷಿಣ ಆಫ್ರಿಕಾ 8 ಪಂದ್ಯಗಳಿಂದ 12 ಅಂಕಗಳೊಂದಿಗೆ ಲೀಗ್ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. ಹರಿಣಗಳ ನೆಟ್ ರನ್-ರೇಟ್ +1.376. ಆಸ್ಟ್ರೇಲಿಯಾ ಕೂಡ 8 ಪಂದ್ಯಗಳಿಂದ 12 ಅಂಕ ಕಲೆಹಾಕಿದೆ. ಕಾಂಗರೂಗಳು ಲೀಗ್ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ. ಆಸ್ಟ್ರೇಲಿಯಾದ ನಿವ್ವಳ ರನ್-ರೇಟ್ +0.861.(PTI)
(6 / 6)
ಶ್ರೀಲಂಕಾ ಜೊತೆಗೆ ಇಂಗ್ಲೆಂಡ್, ಬಾಂಗ್ಲಾದೇಶ ಮತ್ತು ನೆದರ್ಲೆಂಡ್ಸ್ ತಂಡಗಳು ಕೂಡಾ ಈಗಾಗಲೇ ವಿಶ್ವಕಪ್ 2023ರಿಂದ ನಿರ್ಗಮಿಸಿವೆ. ಇಂಗ್ಲೆಂಡ್ 8 ಪಂದ್ಯಗಳಿಂದ 4 ಅಂಕಗಳೊಂದಿಗೆ ಲೀಗ್ ಪಟ್ಟಿಯಲ್ಲಿ 7ನೇ ಸ್ಥಾನದಲ್ಲಿದೆ. ಬಾಂಗ್ಲಾದೇಶ ಕೂಡ 8 ಪಂದ್ಯಗಳಲ್ಲಿ 4 ಅಂಕ ಕಲೆಹಾಕಿ ಅಂಕಪಟ್ಟಿಯಲ್ಲಿ 8ನೇ ಸ್ಥಾನದಲ್ಲಿದೆ. 8 ಪಂದ್ಯಗಳಿಂದ 4 ಅಂಕಗಳೊಂದಿಗೆ ನೆದರ್ಲೆಂಡ್ಸ್ ಲೀಗ್ ಪಟ್ಟಿಯಲ್ಲಿ 10 ನೇ ಸ್ಥಾನದಲ್ಲಿದೆ.(ANI)
ಇತರ ಗ್ಯಾಲರಿಗಳು