Bajaj Pulsar N150: ಪಲ್ಸರ್ ಬೈಕ್ ಈಗ ಇನ್ನಷ್ಟು ಆಕ್ರಮಣಕಾರಿ, ಹೊಸ ಬಜಾಜ್ ಪಲ್ಸರ್ ಎನ್150 ಆಗಮನ, ಇಲ್ಲಿದೆ ಡಿಟೈಲ್ಸ್
- Bajaj Pulsar N150: ಬಜಾಜ್ ಪಲ್ಸರ್ ಪ್ರಿಯರಿಗೆ ಇಷ್ಟವಾಗುವಂತೆ ಪಲ್ಸರ್ ಪಿ150ಯ ಎಂಜಿನ್‌ನಲ್ಲಿಯೇ ಹೆಚ್ಚು ಅಗ್ರೇಸಿವ್ ಆಗಿರುವ ಬೈಕನ್ನು ಪರಿಚಯಿಸಿದೆ. ನೂತನ ಪಲ್ಸರ್ ಎನ್150 ಕುರಿತು ಹೆಚ್ಚಿನ ವಿವರ ಇಲ್ಲಿದೆ.
- Bajaj Pulsar N150: ಬಜಾಜ್ ಪಲ್ಸರ್ ಪ್ರಿಯರಿಗೆ ಇಷ್ಟವಾಗುವಂತೆ ಪಲ್ಸರ್ ಪಿ150ಯ ಎಂಜಿನ್‌ನಲ್ಲಿಯೇ ಹೆಚ್ಚು ಅಗ್ರೇಸಿವ್ ಆಗಿರುವ ಬೈಕನ್ನು ಪರಿಚಯಿಸಿದೆ. ನೂತನ ಪಲ್ಸರ್ ಎನ್150 ಕುರಿತು ಹೆಚ್ಚಿನ ವಿವರ ಇಲ್ಲಿದೆ.
(1 / 9)
ಬಜಾಜ್ ಕಂಪನಿಯು ತನ್ನ ಪಲ್ಸರ್ ಸರಣಿಯ ಬೈಕ್‌ಗಳನ್ನು ಹೆಚ್ಚಿಸುತ್ತಿದೆ. ಹೊಸ ತಲೆಮಾರಿನ ಪಲ್ಸರ್ ಬೈಕ್‌ಗಳನ್ನು ಪರಿಚಯಿಸುತ್ತಿದೆ. ಕಂಪನಿಯು ಮೊದಲು N250 ಮತ್ತು F250 ಬೈಕ್‌ಗಳನ್ನು ಪರಿಚಯಿಸಿತ್ತು. ಬಳಿಕ ಕಳೆದ ವರ್ಷ N160 ಪರಿಚಯಿಸಿತ್ತು. ಇದೀಗ ಕಂಪನಿಯು ಹೊಸ ಪಲ್ಸರ್ N150 ಪರಿಚಯಿಸಿದೆ.
(2 / 9)
ನೂತನ ಬೈಕ್‌ನ ವಿನ್ಯಾಸದಲ್ಲಿ ಮಾತ್ರ ಬದಲಾವಣೆಯಾಗಿದೆ. ಎಂಜಿನ್ ಈ ಹಿಂದಿನ ಪಲ್ಸರ್ P150ನಲ್ಲಿರುವುದೇ ಆಗಿದೆ. ಆದರೆ, ಇವೆರಡು ಬೈಕ್‌ಗಳ ನಡುವೆ ಮೊದಲ ನೋಟಕ್ಕೆ ಹಲವು ವ್ಯತ್ಯಾಸಗಳನ್ನು ಗುರುತಿಸಬಹುದು.
(3 / 9)
ಇದು ಸಿಂಗಲ್ ಪೀಸ್ ಸೀಟ್‌ನೊಂದಿಗೆ ಆಗಮಿಸಿದೆ. ದೂರ ಪ್ರಯಾಣ ಮಾಡಲು, ಸುತ್ತಾಟ ನಡೆಸಲು ಬಯಸುವವರಿಗೆ ಹೆಚ್ಚಿನ ಸ್ಥಳಾವಕಾಶ ನೀಡುತ್ತದೆ.
(4 / 9)
ಇತರೆ ಪಲ್ಸರ್‌ಗಳಿಂದ ಪಡೆದ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಇದೆ. ಕಂಪನಿಯು ಇದನ್ನು ಇನ್ಫಿನಿಟಿ ಡಿಸ್ಪ್ಲೇ ಕನ್ಸೋಲ್ ಎಂದು ಕರೆದಿದೆ. ಅನಲಾಗ್ ಟ್ಯಾಕೋಮೀಟರ್ ಇದರಲ್ಲಿದೆ. ಗಿಯರ್ ಸ್ಥಾನ ಸೂಚಕ ಇತ್ಯಾದಿಗಳನ್ನು ಡಿಸ್‌ಪ್ಲೇಯಲ್ಲಿ ನೋಡಬಹುದು.
(5 / 9)
ಇದು ಮುಂಭಾಗದಲ್ಲಿ ಟೆಲಿಸ್ಕೋಪಿಕ್ ಫೋರ್ಕ್‌ಗಳಿಂದ ಮತ್ತು ಹಿಂಭಾಗದಲ್ಲಿ ಮೊನೊಶಾಕ್ ಹೊಂದಿದೆ. ಬ್ರೇಕಿಂಗ್‌ಗಾಗಿ ಮುಂಭಾಗದಲ್ಲಿ ಡಿಸ್ಕ್ ಮತ್ತು ಹಿಂಭಾಗದಲ್ಲಿ ಡ್ರಮ್ ಬ್ರೇಕ್ ಇದೆ.
(6 / 9)
ಬೈಕ್‌ಗೆ ಸದೃಢ ಲುಕ್ ನೀಡುವ ಇಂಧನ ಟ್ಯಾಂಕ್ ಇದೆ. ಇದು 14 ಲೀಟರ್ ಪೆಟ್ರೊಲ್ ತುಂಬಿಡುವ ಸಾಮರ್ಥ್ಯ ಇದೆ. ಇದು ಪ್ರತಿಲೀಟರ್‌ಗೆ 45-50 ಕಿ.ಮೀ. ಮೈಲೇಜ್ ನೀಡಲಿದೆ
(7 / 9)
ಬಜಾಜ್ ಆಟೋ 17-ಇಂಚಿನ ಅಲಾಯ್ ವೀಲ್‌ಗಳನ್ನು ಹೊಂದಿದೆ. ಟ್ಯೂಬ್‌ಲೆಸ್ ಟೈರ್‌ಗಳನ್ನು ಹೊಂದಿದೆ. ಮುಂಭಾಗದಲ್ಲಿ 90/90 17 ಟೈರ್ ಮತ್ತು ಹಿಂಭಾಗದಲ್ಲಿ 120/80 17 ಟೈರಿದೆ.
(8 / 9)
149.68 cc, ನಾಲ್ಕು-ಸ್ಟ್ರೋಕ್, ಸಿಂಗಲ್-ಸಿಲಿಂಡರ್-FI, ಏರ್-ಕೂಲ್ಡ್ ಎಂಜಿನ್ ಹೊಂದಿದೆ. ಇದು 8,500 ಆವರ್ತನಕ್ಕೆ 14.3 ಬಿಎಚ್‌ಪಿ ಮತ್ತು 6,000 ಆವರ್ತನಕ್ಕೆ 13.5 ಎನ್‌ಎಂ ಟಾರ್ಕ್ ಒದಗಿಸುತ್ತದೆ.
ಇತರ ಗ್ಯಾಲರಿಗಳು