Assam Floods 2024: ಅಸ್ಸಾಂನಲ್ಲಿ ಭೀಕರ ಪ್ರವಾಹ, ಲಕ್ಷಾಂತರ ಮಂದಿ ಬದುಕು ಅತಂತ್ರ, ಹೆಚ್ಚಿದ ಸಾವು
- Assam News ಈಶಾನ್ಯ ರಾಜ್ಯಗಳಲ್ಲಿ ಮಳೆ, ಪ್ರವಾಹದ ಅಬ್ಬರ ಜೋರಾಗಿದೆ. ಅದರಲ್ಲೂ ಅಸ್ಸಾಂನಲ್ಲಿ ಪ್ರತಿವರ್ಷದಂತೆ ಈ ಬಾರಿಯೂ ಪ್ರವಾಹ ಲಕ್ಷಾಂತರ ಮಂದಿಯನ್ನು ಅತಂತ್ರ ಸ್ಥಿತಿಗೆ ದೂಡಿದೆ.
- Assam News ಈಶಾನ್ಯ ರಾಜ್ಯಗಳಲ್ಲಿ ಮಳೆ, ಪ್ರವಾಹದ ಅಬ್ಬರ ಜೋರಾಗಿದೆ. ಅದರಲ್ಲೂ ಅಸ್ಸಾಂನಲ್ಲಿ ಪ್ರತಿವರ್ಷದಂತೆ ಈ ಬಾರಿಯೂ ಪ್ರವಾಹ ಲಕ್ಷಾಂತರ ಮಂದಿಯನ್ನು ಅತಂತ್ರ ಸ್ಥಿತಿಗೆ ದೂಡಿದೆ.
(1 / 10)
ಅಸ್ಸಾಂನಲ್ಲಿ ಈ ಬಾರಿಯೂ ಪ್ರವಾಹ ಪರಿಸ್ಥಿತಿ ಮಿತಿ ಮೀರಿದ್ದು ಹಲವು ಜಿಲ್ಲೆಗಳಲ್ಲಿ ಜನರನ್ನು ರಕ್ಷಿಸಲಾಗುತ್ತಿದೆ.
(2 / 10)
ಭಾರೀ ಮಳೆಯಿಂದಾಗಿ ಸೃಷ್ಟಿಯಾಗಿರುವ ಪ್ರವಾಹದಿಂದ 11.5 ಲಕ್ಷ ಮಂದಿ ನಿರಾಶ್ರಿತರಾಗಿದ್ದು ಅವರನ್ನು ಸುರಕ್ಷಿತ ಸ್ಥಳಗಳಿಗೆ ರವಾನಿಸಲಾಗಿದೆ.
(3 / 10)
ಪ್ರವಾಹದಿಂದ ಕಾಜಿರಂಗ ವನ್ಯಧಾಮಕ್ಕೂ ಹಲವು ಕಡೆ ನೀರು ನುಗ್ಗಿದೆ. ಇದರಿಂದ ಘೇಂಡಾ ಮೃಗಗಳೂ ಸಂಕಷ್ಟಕ್ಕೆ ಸಿಲುಕಿವೆ.
(4 / 10)
ಅಸ್ಸಾಂನ ಬಹುತೇಕ ಭಾಗಗಳಲ್ಲಿ ಇದೇ ಸನ್ನಿವೇಶ.ಮನೆ, ಜಮೀನುಗಳು ಜಲಾವೃತಗೊಂಡಿರುವುದರಿಂದ ಜನ ಕೃತಕ ಸೇತುವೆ ನಿರ್ಮಿಸಿಕೊಂಡು ಜೀವನ ನಡೆಸುವಂತಾಗಿದೆ.
(5 / 10)
ಪಕ್ಕದಲ್ಲಿಯೇ ಹರಿಯುವ ಬ್ರಹ್ಮಪುತ್ರ ನದಿ. ಅದರ ಸಮೀಪದಲ್ಲಿಯೇ ಮನೆ,. ಪ್ರವಾಹದಿಂದ ಮುಳುಗಿದ ಮನೆಯಿಂದ ಕೆಲವು ವಸ್ತು ತಂದು ತಾತ್ಕಾಲಿಕ ನೆಲೆಗೆ ಮುಂದಾದ ತಾಯಿ. ಆಕೆಗೆ ಸಾಥ್ ನೀಡಿದ ಮಗ, ಇದು ಅಸ್ಸಾಂನ ನೈಜ ಕಥೆ
(6 / 10)
ಅಸ್ಸಾಂನಲ್ಲಿ ಭಾರೀ ಮಳೆಯಿಂದ ಹಲವು ನದಿಗಳು ಏಕಕಾಲಕ್ಕೆ ಉಕ್ಕಿ ಹರಿಯುತ್ತಿವೆ. ಇದರಿಂದ ನದಿ ಪಾತ್ರ ಮನೆಗಳನ್ನೂ ನೀರು ಬಿಟ್ಟಿಲ್ಲ. ದೋಣಿ ಸಹಕಾರದಿಂದ ಹೊರಟ ದಂಪತಿ.
(7 / 10)
ಬಿಸಿಲಾದರೇನೂ ಮಳೆಯಾದರೇನು ಬದುಕ ಬಂಡಿ ಸಾಗಬೇಕು ಎನ್ನುವಂತೆ ಅಸ್ಸಾಂನಲ್ಲಿ ಮಳೆಯಿಂದ ಬೆಳೆ ನಷ್ಟವಾದರೂ ಕಷ್ಟದಲ್ಲಿಯೇ ಅದನ್ನು ಸಾಗಿಸಿದ ರೈತರು.
(8 / 10)
ಮಳೆಯಿಂದ ಹಾನಿಗೆ ಒಳಗಾಗಿರುವ ಹಲವು ಭಾಗಗಳಿಗೆ ಭೇಟಿ ನೀಡಿ ಪರಿಹಾರಕ್ಕೆ ಸೂಚನೆ ನೀಡಿದ ಅಸ್ಸಾಂ ಮುಖ್ಯಮಂತ್ರಿ ಹಿಮಂತ್ ಬಿಸ್ವಾ ಶರ್ಮ.
(9 / 10)
ಅಸ್ಸಾಂನಲ್ಲಿ ಮುಖ್ಯವಾಗಿ ಬ್ರಹ್ಮಪುತ್ರ ನದಿ ಪ್ರವಾಹವೇ ಅನಾಹುತಕಾರಿ. ಈ ಬಾರಿ ಪ್ರವಾಹಕ್ಕೆ 48 ಮಂದಿ ಪ್ರಾಣ ಕಳೆದುಕೊಂಡ ಮಾಹಿತಿಯಿದೆ. ಪ್ರವಾಹ ಇನ್ನೂ ತಗ್ಗಿಲ್ಲ.
ಇತರ ಗ್ಯಾಲರಿಗಳು