Year in Review 2022: ಈ ವರ್ಷ ತೆರೆಗೆ ಬಂದ ಬಯೋಪಿಕ್‌ಗಳಿವು; ಸ್ಯಾಂಡಲ್‌ವುಡ್‌ ಕಡೆಯಿಂದಲೂ ಒಂದಿದೆ...
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Year In Review 2022: ಈ ವರ್ಷ ತೆರೆಗೆ ಬಂದ ಬಯೋಪಿಕ್‌ಗಳಿವು; ಸ್ಯಾಂಡಲ್‌ವುಡ್‌ ಕಡೆಯಿಂದಲೂ ಒಂದಿದೆ...

Year in Review 2022: ಈ ವರ್ಷ ತೆರೆಗೆ ಬಂದ ಬಯೋಪಿಕ್‌ಗಳಿವು; ಸ್ಯಾಂಡಲ್‌ವುಡ್‌ ಕಡೆಯಿಂದಲೂ ಒಂದಿದೆ...

  • Indian Biopic Movies List 2022: ಭಾರತೀಯ ಸಿನಿಮಾರಂಗದಲ್ಲಿ ಬಯೋಪಿಕ್‌ ಸಿನಿಮಾಗಳು ಮಾಡಿದ ಮೋಡಿ ಅಷ್ಟಿಷ್ಟಲ್ಲ. ಅದರಲ್ಲೂ ಬಾಲಿವುಡ್‌ನಲ್ಲಿ ನಿಜ ಜೀವನ ಆಧರಿತ ಸಿನಿಮಾಗಳು ಸಾಕಷ್ಟು ಬಂದಿವೆ. ಅದೇ ರೀತಿ ಸೌತ್‌ನಲ್ಲಿಯೂ ಅಂಥ ಹಲವು ಪ್ರಯೋಗಗಳು ಆಗಿವೆ. ಕನ್ನಡದಲ್ಲಿ ಈ ವರ್ಷ ಉದ್ಯಮಿ ವಿಜಯ ಸಂಕೇಶ್ವರ ಅವರ ಸಾಧನೆ ಹಿಂದಿನ ಶ್ರಮವನ್ನು ತೋರಿಸಲು ‘ವಿಜಯಾನಂದ’ ಸಿನಿಮಾ ಬಿಡುಗಡೆ ಆಗಿತ್ತು. ಹಾಗಾದರೆ ಈ ವರ್ಷ ರಿಲೀಸ್‌ ಆದ ಬಯೋಪಿಕ್‌ಗಳು ಯಾವವು.. ಇಲ್ಲಿದೆ ಕ್ವಿಕ್‌ ರೌಂಡಪ್‌..

ಈ ಸಲ ಮೋಡಿ ಮಾಡಿದ ಬಯೋಪಿಕ್‌ಗಳಿವು…
icon

(1 / 8)

ಈ ಸಲ ಮೋಡಿ ಮಾಡಿದ ಬಯೋಪಿಕ್‌ಗಳಿವು…

ಝುಂಡ್:‌ ಅಮಿತಾಬ್ ಬಚ್ಚನ್ ಅಭಿನಯದ 'ಝುಂಡ್' ಸಿನಿಮಾ ಈ ವರ್ಷ ತೆರೆಕಂಡಿತ್ತು. ಚಿತ್ರದಲ್ಲಿ ಅಮಿತಾಬ್ ನಿಜ ಜೀವನದಲ್ಲಿ ಫುಟ್ಬಾಲ್ ಕೋಚ್ ಆಗಿದ್ದ ವಿಜಯ್ ಬರ್ಸೆ ಪಾತ್ರವನ್ನು ನಿರ್ವಹಿಸಿದ್ದರು.
icon

(2 / 8)

ರನ್‌ವೇ 34: ಬಾಲಿವುಡ್‌ ನಟ ಅಜಯ್ ದೇವಗನ್ ನಟಿಸಿದ 'ರನ್‌ವೇ 34' ಸಿನಿಮಾ ಕ್ಯಾಪ್ಟನ್‌ ವಿಕ್ರಾಂತ್‌ ಖನ್ನಾ ಅವರ ಹಿನ್ನೆಲೆಯಲ್ಲಿ ಮೂಡಿಬಂದ ಚಿತ್ರವಾಗಿತ್ತು.   
icon

(3 / 8)

ಮೇಜರ್:‌ 'ಮೇಜರ್' ಚಿತ್ರದಲ್ಲಿ ನಟ ಅಡಿವಿ ಶೇಷ ದಿವಂಗತ ಮೇಜರ್ ಸಂದೀಪ್ ಉನ್ನಿಕೃಷ್ಣನ್ ಪಾತ್ರವನ್ನು ನಿರ್ವಹಿಸಿದ್ದರು. ಈ ಸಿನಿಮಾ ನೋಡುಗರಿಂದಲೂ ಮೆಚ್ಚುಗೆ ಗಳಿಸಿತ್ತು.  
icon

(4 / 8)

ಶಭಾಷ್‌ ಮಿಥು: ಕ್ರಿಕೆಟರ್‌ ಮಿಥಾಲಿ ರಾಜ್‌ ಅವರ ಜೀವನ ಆಧರಿಸಿ ಮೂಡಿ ಬಂದ ಸಿನಿಮಾ 'ಶಭಾಷ್ ಮಿಥು'. ಈ ಚಿತ್ರದಲ್ಲಿ ಮಿಥಾಲಿ ರಾಜ್‌ ಪಾತ್ರದಲ್ಲಿ ತಾಪ್ಸೀ ಪನ್ನು ಮುಖ್ಯಭೂಮಿಕೆಯಲ್ಲಿದ್ದರು.  
icon

(5 / 8)

ವಿಜಯಾನಂದ: ರಿಶಿಕಾ ಶರ್ಮಾ ನಿರ್ದೇಶನದ ವಿಜಯಾನಂದ ಸಿನಿಮಾ ಕನ್ನಡದ ಮೊದಲ ಬಯೋಪಿಕ್‌ ಎನಿಸಿಕೊಂಡಿದೆ. ವಿಜಯ ಸಂಕೇಶ್ವರ ಅವರ ಜೀವನ ಆಧರಿಸಿ ನಿರ್ಮಾಣವಾದ ಈ ಸಿನಿಮಾ ಇತ್ತೀಚೆಗಷ್ಟೇ ಬಿಡುಗಡೆಯಾಗಿತ್ತು.
icon

(6 / 8)

ರಾಕೆಟ್ರಿ ದಿ ನಂಬಿ ಎಫೆಕ್ಟ್‌: ಆರ್‌ ಮಾಧವನ್‌ ನಟಿಸಿ ನಿರ್ದೇಶಿಸಿದ 'ರಾಕೆಟ್ರಿ: ದಿ ನಂಬಿ ಎಫೆಕ್ಟ್' ಸಿನಿಮಾ ವಿಜ್ಞಾನಿ ನಂಬಿ ನಾರಾಯಣ್ ಅವರ ಜೀವನದ ಸುತ್ತ ಹೆಣೆದ ಕಥೆಯಾಗಿತ್ತು. ಹಲವು ಭಾಷೆಗಳಲ್ಲಿ ಈ ಸಿನಿಮಾ ಮೂಡಿಬಂದಿತ್ತು.  
icon

(7 / 8)

ಗಂಗೂಬಾಯಿ ಕಥೈವಾಡಿ: ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ 'ಗಂಗೂಬಾಯಿ ಕಥೈವಾಡಿ' ಸಿನಿಮಾ ಈ ವರ್ಷ ಬಿಡುಗಡೆಯಾಗಿತ್ತು. ಆಲಿಯಾ ಭಟ್ ಮುಖ್ಯಭೂಮಿಕೆಯಲ್ಲಿ ವೇಶ್ಯೆ ಪಾತ್ರದಲ್ಲಿ ನಟಿಸಿದ್ದರು.  
icon

(8 / 8)

ಇತರ ಗ್ಯಾಲರಿಗಳು