IPL Expensive Players: ಐಪಿಎಲ್ ಚರಿತ್ರೆಯಲ್ಲಿ ಕೋಟಿ ಕೋಟಿ ಲೂಟಿ ಮಾಡಿದ 10 ದುಬಾರಿ ಆಟಗಾರರು ಇವರು
Most Expensive Players in IPL History: ಐಪಿಎಲ್ 2024ರ ಮಿನಿ ಹರಾಜು ಮುಕ್ತಾಯಗೊಂಡಿದೆ. ಆಸೀಸ್ ವೇಗಿ ಮಿಚೆಲ್ ಸ್ಟಾರ್ಕ್ (24.75 ಕೋಟಿ ರೂ.) ಐಪಿಎಲ್ ಇತಿಹಾಸದಲ್ಲಿ ಅತ್ಯಂತ ದುಬಾರಿ ಆಟಗಾರ ಎಂಬ ದಾಖಲೆ ನಿರ್ಮಿಸಿದ್ದಾರೆ. ಐಪಿಎಲ್ ಇತಿಹಾಸದಲ್ಲಿ ಟಾಪ್-10 ಅತ್ಯಂತ ದುಬಾರಿ ಆಟಗಾರರು ಯಾರು? ಇಲ್ಲಿದೆ ಪಟ್ಟಿ.
(1 / 11)
ಐಪಿಎಲ್ 2024ಕ್ಕೆ ಆಸ್ಟ್ರೇಲಿಯಾದ ಸ್ಟಾರ್ ವೇಗಿ ಮಿಚೆಲ್ ಸ್ಟಾರ್ಕ್ ದುಬಾರಿ ಆಟಗಾರನಾಗಿ ಕಣಕ್ಕಿಳಿಯಲಿದ್ದಾರೆ. ಕೋಲ್ಕತ್ತಾ ನೈಟ್ ರೈಡರ್ಸ್ ತಂಡವು 24.75 ಕೋಟಿಗೆ ಖರೀದಿಸಿದೆ. ಸ್ಟಾರ್ಕ್ ಐಪಿಎಲ್ ಇತಿಹಾಸದಲ್ಲಿ ಅತ್ಯಮೂಲ್ಯ ಆಟಗಾರನಾಗಿ ಇತಿಹಾಸ ನಿರ್ಮಿಸಿದ್ದಾರೆ.(PTI)
(2 / 11)
2024ರ ಐಪಿಎಲ್ಗೆ ನಡೆದ ಹರಾಜಿನಲ್ಲಿ ಆಸ್ಟ್ರೇಲಿಯಾದ ನಾಯಕ ಪ್ಯಾಟ್ ಕಮಿನ್ಸ್ ಅವರನ್ನು ಸನ್‌ರೈಸರ್ಸ್ ಹೈದರಾಬಾದ್ ತಂಡವು ರೂ.20.50 ಕೋಟಿಗೆ ಸ್ವಾಧೀನಪಡಿಸಿಕೊಂಡಿದೆ. ಐಪಿಎಲ್‌ನಲ್ಲಿ 20 ಕೋಟಿ ಗಡಿ ದಾಟಿದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಕಮಿನ್ಸ್ ಪಾತ್ರರಾಗಿದ್ದಾರೆ.(PTI)
(3 / 11)
ಡಿಸೆಂಬರ್ 2022ರ ಹರಾಜಿನಲ್ಲಿ 2023ರ ಐಪಿಎಲ್ ಸೀಸನ್‌ಗಾಗಿ ಇಂಗ್ಲೆಂಡ್ ಆಲ್‌ರೌಂಡರ್ ಸ್ಯಾಮ್ ಕರನ್ ಅವರನ್ನು ಪಂಜಾಬ್ ಕಿಂಗ್ಸ್ ಫ್ರಾಂಚೈಸಿ 18.5 ಕೋಟಿಗೆ ಖರೀದಿಸಿತು. ಅತಿ ಹೆಚ್ಚು ಬೆಲೆ ಪಡೆದ 3ನೇ ಆಟಗಾರ ಎನಿಸಿದ್ದಾರೆ.(AFP)
(4 / 11)
ಆಸ್ಟ್ರೇಲಿಯಾದ ಯುವ ಆಲ್‌ರೌಂಡರ್ ಕ್ಯಾಮರೂನ್ ಗ್ರೀನ್ ಅವರನ್ನು 2023ರ ಋತುವಿಗೆ 17.5 ಕೋಟಿ ರೂಪಾಯಿ ನೀಡಿ ಮುಂಬೈ ಇಂಡಿಯನ್ಸ್ ಖರೀದಿಸಿತ್ತು. ಇದೀಗ ಅವರನ್ನು ಅಷ್ಟೇ ಮೊತ್ತಕ್ಕೆ ಆರ್ಸಿಬಿ ಟ್ರೇಡ್ ಮಾಡಿಕೊಂಡಿದೆ.(PTI)
(5 / 11)
ಇಂಗ್ಲೆಂಡ್ ಸ್ಟಾರ್ ಆಲ್ ರೌಂಡರ್ ಬೆನ್ ಸ್ಟೋಕ್ಸ್ ಅವರನ್ನು 2023ರ ಐಪಿಎಲ್ಗೆ ಚೆನ್ನೈ ಸೂಪರ್ ಕಿಂಗ್ಸ್ 16.25 ಕೋಟಿ ರೂಪಾಯಿಗೆ ಖರೀದಿಸಿತ್ತು. ಇದೀಗ ಅವರನ್ನು ತಂಡದಿಂದ ಕೈಬಿಟ್ಟಿದೆ.(ANI)
(6 / 11)
ದಕ್ಷಿಣ ಆಫ್ರಿಕಾದ ಆಲ್‌ರೌಂಡರ್ ಕ್ರಿಸ್ ಮಾರಿಸ್ ಅವರನ್ನು ರಾಜಸ್ಥಾನ ರಾಯಲ್ಸ್ ಫ್ರಾಂಚೈಸಿ ಐಪಿಎಲ್ 2021 ಸೀಸನ್‌ಗೆ 16.25 ಕೋಟಿ ನೀಡಿ ಖರೀದಿಸಿತ್ತು.
(7 / 11)
ವೆಸ್ಟ್ ಇಂಡೀಸ್ ಸ್ಫೋಟಕ ಆಟಗಾರ ನಿಕೋಲಸ್ ಪೂರನ್ ಅವರನ್ನು 2023ರ ಐಪಿಎಲ್ ಸೀಸನ್‌ಗಾಗಿ ಲಕ್ನೋ ಸೂಪರ್‌ಜೈಂಟ್ಸ್ ತಂಡವು 16 ಕೋಟಿ ರೂಪಾಯಿಗೆ ತೆಗೆದುಕೊಂಡಿದೆ.(AFP)
(8 / 11)
2015ರ ಐಪಿಎಲ್ ಆವೃತ್ತಿಗಾಗಿ ನಡೆದ ಹರಾಜಿನಲ್ಲಿ ಭಾರತದ ಆಲ್‌ರೌಂಡರ್ ಯುವರಾಜ್ ಸಿಂಗ್ ಅವರನ್ನು ಡೆಲ್ಲಿ ಡೇರ್‌ಡೆವಿಲ್ಸ್ (ಡೆಲ್ಲಿ ಕ್ಯಾಪಿಟಲ್ಸ್) ಫ್ರಾಂಚೈಸಿ 16 ಕೋಟಿ ರೂಪಾಯಿಗೆ ಖರೀದಿಸಿತು. ಭಾರತದ ಪರ ಅಧಿಕ ಮೊತ್ತ ಪಡೆದ ಆಟಗಾರ ಎನಿಸಿದ್ದಾರೆ.
(9 / 11)
2020ರ ಹರಾಜಿನಲ್ಲಿ ಆಸ್ಟ್ರೇಲಿಯಾದ ಆಲ್‌ರೌಂಡರ್ ಪ್ಯಾಟ್ ಕಮಿನ್ಸ್ ಅವರನ್ನು ಕೋಲ್ಕತ್ತಾ ನೈಟ್ ರೈಡರ್ಸ್ 15.50 ಕೋಟಿ ರೂಪಾಯಿಗೆ ತೆಗೆದುಕೊಂಡಿತು. ಅವರು ಎರಡು ಬಾರಿ ದುಬಾರಿ ಆಟಗಾರ ಎನಿಸಿದ್ದಾರೆ.(ICC Twitter)
(10 / 11)
2022ರ ಆವೃತ್ತಿಯ ಮೆಗಾ ಹರಾಜಿನಲ್ಲಿ ಭಾರತದ ಸ್ಟಾರ್ ವಿಕೆಟ್-ಕೀಪರ್ ಬ್ಯಾಟ್ಸ್‌ಮನ್ ಇಶಾನ್ ಕಿಶನ್ ಅವರನ್ನು ಮುಂಬೈ ಇಂಡಿಯನ್ಸ್ 15.25 ಕೋಟಿಗೆ ಡೀಲ್ ಕುದುರಿಸಿತ್ತು. ದುಬಾರಿ ಆಟಗಾರರ ಈ ಪಟ್ಟಿಯಲ್ಲಿ 10ನೇ ಸ್ಥಾನದಲ್ಲಿದ್ದಾರೆ.(PTI)
ಇತರ ಗ್ಯಾಲರಿಗಳು