Lakshana Serial Actress: ಕಿರುತೆರೆ ನಟಿ ವಿಜಯಲಕ್ಷ್ಮಿಯ 'ಲಕ್ಷಣ'ವಾದ ಫೋಟೋಗಳು
- ಕಲರ್ಸ್ ಕನ್ನಡದಲ್ಲಿ ಪ್ರತಿದಿನ ರಾತ್ರಿ ಪ್ರಸಾರವಾಗುತ್ತಿರುವ 'ಲಕ್ಷಣ' ಧಾರಾವಾಹಿಯ ಈ ನಟಿ ಹೆಸರು ವಿಜಯಲಕ್ಷ್ಮಿ. ತಾವು ನಟಿಸುತ್ತಿರುವ ಧಾರಾವಾಹಿ ಹೆಸರಿನಷ್ಟೇ ನೋಡಲು ಲಕ್ಷಣವಾಗಿರುವ ವಿಜಯಲಕ್ಷ್ಮಿಯ ಕೆಲವೊಂದು ಸುಂದರ ಫೋಟೋಗಳು ಇಲ್ಲಿವೆ.
- ಕಲರ್ಸ್ ಕನ್ನಡದಲ್ಲಿ ಪ್ರತಿದಿನ ರಾತ್ರಿ ಪ್ರಸಾರವಾಗುತ್ತಿರುವ 'ಲಕ್ಷಣ' ಧಾರಾವಾಹಿಯ ಈ ನಟಿ ಹೆಸರು ವಿಜಯಲಕ್ಷ್ಮಿ. ತಾವು ನಟಿಸುತ್ತಿರುವ ಧಾರಾವಾಹಿ ಹೆಸರಿನಷ್ಟೇ ನೋಡಲು ಲಕ್ಷಣವಾಗಿರುವ ವಿಜಯಲಕ್ಷ್ಮಿಯ ಕೆಲವೊಂದು ಸುಂದರ ಫೋಟೋಗಳು ಇಲ್ಲಿವೆ.
(2 / 9)
ಬಾಲ್ಯದಲ್ಲೇ ನಟನೆಯಲ್ಲಿ ಆಸಕ್ತಿ ಇದ್ದ ವಿಜಯಲಕ್ಷ್ಮಿ ಬೆಂಗಳೂರಿನಲ್ಲಿ ಸ್ನಾತಕೋತ್ತರ ಪದವಿ ಮಾಡುತ್ತಲೇ ಅನೇಕ ಆಡಿಷನ್‌ಗಳಲ್ಲಿ ಭಾಗವಹಿಸಿದ್ದರು.
(4 / 9)
ವಿಜಯಲಕ್ಷ್ಮಿ ರಂಗಭೂಮಿ ಕಲಾವಿದೆ ಕೂಡಾ. ಕಾಲೇಜಿನಲ್ಲಿರುವಾಗಲೇ ಅನೇಕ ನಾಟಕಗಳಲ್ಲಿ ಅಭಿನಯಿಸಿದ ಅನುಭವ ಇದೆ. ಆದ್ದರಿಂದ ಮೊದಲ ಧಾರಾವಾಹಿಯಲ್ಲಿ ನಟನೆ ವಿಚಾರದಲ್ಲಿ ಅವರಿಗೆ ಕಷ್ಟ ಎನಿಸಿಲ್ಲ.
(5 / 9)
ವಿಜಯಲಕ್ಷ್ಮಿ ನಟನೆಗೆ ಬರುವುದು ಮನೆಯಲ್ಲಿ ಸ್ವಲ್ಪವೂ ಇಷ್ಟವಿರಲಿಲ್ಲವಂತೆ. ಆದರೆ ಏನಾದರೂ ಸಾಧಿಸುವ ಹಂಬಲದಿಂದ ಮನೆಯವರ ಒಪ್ಪಿಗೆ ಪಡೆದು ಈ ಕ್ಷೇತ್ರಕ್ಕೆ ಕಾಲಿಟ್ಟಿದ್ದಾರೆ.
(6 / 9)
ಮೊದಲ ಧಾರಾವಾಹಿಯಲ್ಲಿ ಈ ಕೃಷ್ಣ ಸುಂದರಿ ಕಿರುತೆರೆ ಪ್ರಿಯರ ಮನ ಗೆದ್ದಿದ್ದಾರೆ. ವಿಜಯಲಕ್ಷ್ಮಿ ಹೊರಗೆ ಹೋದಾಗ ಜನರು ಅವರನ್ನು ಗುರುತಿಸಿ ಮಾತನಾಡಿಸುವುದು ಅವರಿಗೆ ಖುಷಿ ನೀಡಿದೆಯಂತೆ.
(7 / 9)
ಲಕ್ಷಣ ಧಾರಾವಾಹಿಯಲ್ಲಿ ಹೆಚ್ಚಾಗಿ ಸೀರೆ, ಕುರ್ತಾದಲ್ಲಿ ಕಾಣಿಸಿಕೊಳ್ಳುವ ವಿಜಯಲಕ್ಷ್ಮಿ ಮಾಡ್ರನ್ ಡ್ರೆಸ್‌ನಲ್ಲಿ ಇನ್ನೂ ಸುಂದರವಾಗಿ ಕಾಣುತ್ತಾರೆ.
(8 / 9)
ಧಾರಾವಾಹಿ, ಸಿನಿಮಾಗಳಲ್ಲಿ ಅವಕಾಶ ದೊರೆತರೆ ಇದೇ ಕ್ಷೇತ್ರದಲ್ಲಿ ಮುಂದುವರೆಯುತ್ತೇನೆ. ಇಲ್ಲವಾದರೆ ಕೆಲಸ ಮಾಡುತ್ತೇನೆ ಎನ್ನುತ್ತಾರೆ ವಿಜಯಲಕ್ಷ್ಮಿ
ಇತರ ಗ್ಯಾಲರಿಗಳು