ಪೊಲೀಸರೊಂದಿಗೆ ಘರ್ಷಣೆ, ಬೆಂಗಳೂರು ನೈಸ್-ಹೊಸೂರು ರಸ್ತೆಯಲ್ಲಿ 16 ಚಕ್ರದ ಟ್ರಕ್ ಬಿಟ್ಟೋದ ಚಾಲಕ; ಆಮೇಲೆ ಏನಾಯ್ತು?
ಕನ್ನಡ ಸುದ್ದಿ  /  ಕರ್ನಾಟಕ  /  ಪೊಲೀಸರೊಂದಿಗೆ ಘರ್ಷಣೆ, ಬೆಂಗಳೂರು ನೈಸ್-ಹೊಸೂರು ರಸ್ತೆಯಲ್ಲಿ 16 ಚಕ್ರದ ಟ್ರಕ್ ಬಿಟ್ಟೋದ ಚಾಲಕ; ಆಮೇಲೆ ಏನಾಯ್ತು?

ಪೊಲೀಸರೊಂದಿಗೆ ಘರ್ಷಣೆ, ಬೆಂಗಳೂರು ನೈಸ್-ಹೊಸೂರು ರಸ್ತೆಯಲ್ಲಿ 16 ಚಕ್ರದ ಟ್ರಕ್ ಬಿಟ್ಟೋದ ಚಾಲಕ; ಆಮೇಲೆ ಏನಾಯ್ತು?

Bengaluru traffic: ಪೊಲೀಸರೊಂದಿಗೆ ಘರ್ಷಣೆ ನಡೆಸಿದ ಕಾರಣ ಬೆಂಗಳೂರು ನೈಸ್-ಹೊಸೂರು ರಸ್ತೆಯಲ್ಲಿ ಚಾಲಕ 16 ಚಕ್ರದ ಟ್ರಕ್​ವೊಂದನ್ನು ಬಿಟ್ಟು ಹೋಗಿದ್ದಾರೆ. ಆಮೇಲೆ ಏನಾಯ್ತು? ಇಲ್ಲಿದೆ ವಿವರ.

ಪೊಲೀಸರೊಂದಿಗೆ ಘರ್ಷಣೆ, ಬೆಂಗಳೂರು ನೈಸ್-ಹೊಸೂರು ರಸ್ತೆಯಲ್ಲಿ 16 ಚಕ್ರದ ಟ್ರಕ್ ಬಿಟ್ಟೋದ ಚಾಲಕ
ಪೊಲೀಸರೊಂದಿಗೆ ಘರ್ಷಣೆ, ಬೆಂಗಳೂರು ನೈಸ್-ಹೊಸೂರು ರಸ್ತೆಯಲ್ಲಿ 16 ಚಕ್ರದ ಟ್ರಕ್ ಬಿಟ್ಟೋದ ಚಾಲಕ

ಬೆಂಗಳೂರು: ಇಲ್ಲಿನ ನೈಸ್-ಹೊಸೂರು ರಸ್ತೆಯ ವೈಟ್ ಫೆದರ್ ಕನ್ವೆನ್ಷನ್ ಸೆಂಟರ್ ಬಳಿ ಬುಧವಾರ ಸಂಜೆ (ಡಿಸೆಂಬರ್​ 18) ನಾಗಾಲ್ಯಾಂಡ್​​​​ ರಿಜಿಸ್ಟ್ರೇಷನ್ 16 ಚಕ್ರಗಳ ಟ್ರಕ್​ವೊಂದನ್ನು ಚಾಲಕ ರಸ್ತೆ ಮಧ್ಯದಲ್ಲಿ ಬಿಟ್ಟು ಹೋದ ಕಾರಣ ಪ್ರಯಾಣಿಕರು ಒಂದು ಗಂಟೆಗೂ ಹೆಚ್ಚು ಕಾಲ ಸಂಚಾರದಲ್ಲಿ ಸಿಲುಕಿ ಹೈರಾಣಾಗಿದ್ದಾರೆ. ಸಂಜೆ 4.30 ರಿಂದ ರಾತ್ರಿ 8 ರವರೆಗೆ ಭಾರಿ ವಾಹನಗಳಿಗೆ ನಿರ್ಬಂಧ ಹೇರಲಾಗಿದೆ. ಹೀಗಾಗಿ ಟ್ರಕ್ ಅನ್ನು ಬೆಂಗಳೂರು ಪ್ರವೇಶಿಸದಂತೆ ನಿರ್ಬಂಧಿಸಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ನಿರ್ಬಂಧ ಹೇರಿದ್ದು ಮತ್ತು ಸ್ಥಳದಲ್ಲೇ 2,000 ರೂಪಾಯಿಗಳ ದಂಡ ವಿಧಿಸಲಾಯಿತು. ಆದರೆ ಇದರಿಂದ ಹತಾಶನಾದ ಚಾಲಕ, ಟ್ರಕ್ ಅನ್ನು ರಸ್ತೆಯಲ್ಲಿ ಬಿಟ್ಟು ಕೀ ತೆಗೆದುಕೊಂಡು ಪರಾರಿಯಾಗುವುದಕ್ಕೂ ಮುನ್ನ ಪೊಲೀಸ್ ಅಧಿಕಾರಿಗಳೊಂದಿಗೆ ವಾದ ನಡೆಸಿದ್ದಾನೆ ಎಂದು ವರದಿಯಾಗಿದೆ. ಟ್ರಕ್ ಅನ್ನು ನಡು ರಸ್ತೆಯಲ್ಲಿ ಬಿಟ್ಟು ಹೋಗಿದ್ದ ಕಾರಣ ಹಿಂದಿದ್ದ ವಾಹನಗಳು ಹೋಗಲು ದಾರಿ ಇಲ್ಲದೆ ಪರದಾಡಿದವು. ಪೊಲೀಸ್ ಸಿಬ್ಬಂದಿ ಟ್ರಕ್ ತೆರವುಗೊಳಿಸಲು ದೊಡ್ಡ ಸವಾಲು ಎದುರಿಸುವಂತಾಯಿತು.

ಮತ್ತೊಂದು ಕೀಲಿ ಪಡೆದು ಟ್ರಕ್ ಸಾಗಿಸಿದ ಪೊಲೀಸರು

ಟ್ರಾಫಿಕ್ ಪೊಲೀಸರು ಇತರ ಟ್ರಕ್ ಚಾಲಕರ ನೆರವು ಪಡೆದು ವಾಹನ ಸಂಚಾರಕ್ಕೆ ದಾರಿ ಮಾಡಿಕೊಟ್ಟರು. ಬಿಟ್ಟು ಹೋದ ಟ್ರಕ್​​ನಂತಹದ್ದೇ ಟ್ರಕ್​​ನಿಂದ ಕೀಲಿ ಎರವಲು ಪಡೆದ ಪೊಲೀಸರು, ಟ್ರಕ್​ ಅನ್ನು ಸ್ಟಾರ್ಟ್ ಮಾಡಿ ಅದನ್ನು ರಸ್ತೆ ಬದಿಗೆ ಸಾಗಿಸುವಲ್ಲಿ ಯಶಸ್ವಿ ಆದರು. ಬಳಿಕ ಆ ಟ್ರಕ್​ ಅನ್ನು ಎಲೆಕ್ಟ್ರಾನಿಕ್ಸ್ ಸಿಟಿ ಸಂಚಾರ ಪೊಲೀಸ್ ಠಾಣೆಯ ಬಳಿಗೆ ಸ್ಥಳಾಂತರಿಸಲಾಯಿತು. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ನೆಟ್ಟಿಗರು ಪೊಲೀಸರ ವಿರುದ್ಧವೇ ಕಿಡಿಕಾರಿದ್ದಾರೆ.

ಸಂಚಾರ ಪೊಲೀಸರು ದೈಹಿಕವಾಗಿ ಹಲ್ಲೆ ನಡೆಸಿದ್ದಾರೆ ಎಂಬ ಆರೋಪಿಸಿ ತಪ್ಪಿತಸ್ಥ ಚಾಲಕನನ್ನು ಬೆಂಬಲಿಸಿ ಇತರ ಟ್ರಕ್ ಚಾಲಕರು ಪ್ರತಿಭಟನೆ ನಡೆಸಿದ್ದಾರೆ ಎಂಬ ವದಂತಿ ಇದೆ. ಆದರೆ ಅಧಿಕಾರಿಗಳು ತಳ್ಳಿಹಾಕಿದ್ದಾರೆ. 'ಬಾಡಿ ಕ್ಯಾಮೆರಾ ದೃಶ್ಯಾವಳಿಗಳು ಅಂತಹ ಯಾವುದೇ ಘಟನೆ ನಡೆದಿಲ್ಲ. ಇದು ಇತರ ಚಾಲಕರು ಸಹ ಯಾವುದೇ ಪ್ರತಿಭಟನೆ ನಡೆಸಿಲ್ಲ ಎನ್ನುವುದನ್ನು ದೃಢಪಡಿಸುತ್ತದೆ' ಎಂದು ಉಪ ಪೊಲೀಸ್ ಆಯುಕ್ತ (ಸಂಚಾರ ದಕ್ಷಿಣ) ಶಿವ ಪ್ರಕಾಶ್ ದೇವರಾಜು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಡಿಯೋ ಇಲ್ಲಿದೆ ನೋಡಿ

ಟ್ರಕ್ ಚಾಲಕನ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ. ರಾತ್ರಿ 8 ಗಂಟೆ ಸುಮಾರಿಗೆ ಸಂಭವಿಸಿದ ಈ ಘಟನೆ ಹೆದ್ದಾರಿಯಲ್ಲಿ ಭಾರೀ ಸಂಚಾರ ದಟ್ಟಣೆಗೆ ಕಾರಣವಾಯಿತು.  ಹೀಗಾಗಿ ಸಂಚಾರ ಪೊಲೀಸರು ದಟ್ಟಣೆ ಕಡಿಮೆ ಮಾಡಲು ಹರಸಾಹಸ ಪಡುವಂತಾಯಿತು. ಅಧಿಕಾರಿಗಳು ಚಾಲಕನ ಪತ್ತೆಗೆ ಬಲೆ ಬೀಸಿದ್ದಾರೆ.

Whats_app_banner