ಕನ್ನಡದ ಸೂಪರ್ ಹಿಟ್ ಕಾದಂಬರಿ ಶರಪಂಜರ ಈಗ ಇಟಲಿಗೆ ಭಾಷಾಂತರ; ಮಂಡ್ಯ ಸಾಹಿತ್ಯ ಸಮ್ಮೇಳನದಲ್ಲಿ ತ್ರಿವೇಣಿ ಕಾದಂಬರಿ ಬಿಡುಗಡೆ
ಕನ್ನಡದಲ್ಲಿ ಒಂದು ಕಾಲಕ್ಕೆ ಭಾರೀ ಸಂಚಲನ ಮೂಡಿಸಿದ್ದ ತ್ರಿವೇಣಿ ಅವರ ಶರಪಂಜರ ಕಾದಂಬರಿ ಈಗ ಇಟಲಿ ಭಾಷೆಗೆ ಅನುವಾದಗೊಂಡಿದೆ. ಇಟಲಿಯಲ್ಲಿ ಕಾದಂಬರಿ ಹೆಸರೇನು ಇಲ್ಲಿದೆ ವಿವರ.
ಮಂಡ್ಯ: ಕನ್ನಡ ಸಾಹಿತ್ಯ ಲೋಕದಲ್ಲಿ ಒಂದು ಕಾಲಕ್ಕೆ ಸಂಚಲನ ಮೂಡಿಸಿದ್ದ ಪ್ರಸಿದ್ದ ಕಾದಂಬರಿಗಾರ್ತಿ ತ್ರಿವೇಣಿ ಅವರ ಶರಪಂಜರ ಕಾದಂಬರಿ ಈಗ ಇಟಲಿ ಭಾಷೆಗೆ ಭಾಷಾಂತರಗೊಂಡಿದೆ. ಕನ್ನಡದ ಲೇಖಕರೊಬ್ಬರು ಸಿನೆಮಾವೂ ಆಗಿ ಜನಪ್ರಿಯವಾಗಿದ್ದ ಶರಪಂಜರ ಕಾದಂಬರಿಯನ್ನು ಇಟಲಿ ಭಾಷೆಗೆ ಅನುವಾದ ಮಾಡಿದ್ದಾರೆ. ಇಟಲಿ ಭಾಷೆಯನ್ನು ಶರಪಂಜರ ಕಾದಂಬರಿ ಟೈಟಲ್ ಲಾ ಗಬಿಯಾ ಡಿ ಫ್ರೆಕ್ಕೆ( La Gabbia Di Frecce) ಅಡಿ ತರಲಾಗಿದೆ. ಮಂಡ್ಯದಲ್ಲಿ ಶುಕ್ರವಾರ ಆರಂಭಗೊಂಡ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಈ ಕಾದಂಬರಿ ಬಿಡುಗಡೆಯಾಯಿತು. ಸಿಎಂ ಸಿದ್ದರಾಮಯ್ಯ ಅವರು ಶರಪಂಜರ ಇಟಲಿ ಕಾದಂಬರಿಯನ್ನು ಅನಾವರಣಗೊಳಿಸಿ ವಿವರಗಳನ್ನು ಲೇಖಕರಿಂದ ಪಡೆದುಕೊಂಡರು.
ಮಂಡ್ಯ ಜಿಲ್ಲೆಯವರೇ ಆದ ಲೇಖಕಿ ದಿವಂಗತ ತ್ರಿವೇಣಿ ಅವರ ಕನ್ನಡದ ಶ್ರೇಷ್ಠ ಕಾದಂಬರಿಗಳಲ್ಲಿ ಒಂದಾದ ಮೈಸೂರಿನಿಂದ ಇಟಾಲಿಯನ್ ಭಾಷೆಗೆ ಅನುವಾದಿಸಿರುವ 'ಶರಪಂಜರ' ಶುಕ್ರವಾರ ಮಂಡ್ಯದಲ್ಲಿ ನಡೆಯುತ್ತಿರುವ 87ನೇ ಕನ್ನಡ ಸಾಹಿತ್ಯ ಸಮ್ಮೇಳನದ ಉದ್ಘಾಟನಾ ಸಮಾರಂಭದಲ್ಲಿ ಬಿಡುಗಡೆಯಾಯಿತು.
ಕಾದಂಬರಿಯನ್ನು ಕನ್ನಡಗಿರೇ ಆಗಿರುವ ಹಲವು ವರ್ಷಗಳ ಇಟಲಿಯಲ್ಲಿದ್ದ ಜಯಮೂರ್ತಿ ಅನುವಾದಿಸಿದ್ದಾರೆ. ಮೈಸೂರಿನಲ್ಲಿ ಹುಟ್ಟಿ ಬೆಳೆದ 77 ವರ್ಷ ವಯಸ್ಸಿನ ಜಯಮೂರ್ತಿ ಅವರಿಗೆ ಭಾಷಾಂತರ ಕಲೆ ಸಿದ್ದಿಸಿದೆ. ನಂತರ 1984 ರಲ್ಲಿ ಇಟಲಿಗೆ ತೆರಳಿದರು
ಅದರಲ್ಲೂ ಕನ್ನಡದ ಕೃತಿಗಳು ಇಟಲಿಗೂ ಸಿಗಬೇಕು ಎನ್ನುವುದು ಅವರ ಆಶಯ, ಇದಕ್ಕಾಗಿ ಈ ಹಿಂದೆ ಅವರು ಗಾಯತ್ರಿ ಮೂರ್ತಿಯವರ ‘ಹಂಬಲ’ ಕಾದಂಬರಿಯನ್ನು ಮತ್ತು ಸುಧಾ ಮೂರ್ತಿಯವರ ‘ಡಾಲರ್ ಸೊಸೆ’ ಅನ್ನು ಇಟಾಲಿಯನ್ ಭಾಷೆಗೆ ಅನುವಾದಿಸಿದ್ದಾರೆ. ಎರಡು ವರ್ಷದ ಹಿಂದೆ ಶರಪಂಜರ ಕಾದಂಬರಿ ಅನುವಾದ ಆರಂಭಿಸಿ ಈಗ ಮುಗಿಸಿ ತ್ರಿವೇಣಿ ಅವರ ತವರು ಜಿಲ್ಲೆಯ ಸಮ್ಮೇಳನದಲ್ಲಿ ಬಿಡುಗಡೆ ಮಾಡಿರುವುದು ವಿಶೇಷ.
‘ಶರಪಂಜರ’ ಎನ್ನುವ ಕಾದಂಬರಿ ಮೊದಲು 1962 ರಲ್ಲಿ ಪ್ರಕಟಿಸಲಾಯಿತು. ತ್ರಿವೇಣಿ ಅವರ ಈ ಕಾದಂಬರಿ ಅದೇ ಶೀರ್ಷಿಕೆಯೊಂದಿಗೆ ಚಲನಚಿತ್ರವಾಗಿ ಹೊರ ಬಂದಿತು. ಹಲವಾರು ಪ್ರಶಸ್ತಿಗಳನ್ನು ಶರಪಂಜರ ಚಿತ್ರಕ್ಕೆ ಬಂದಿವೆ.
ನಿಜಕ್ಕೂ ನಮ್ಮ ಕುಟುಂಬಕ್ಕೆ ಹೆಮ್ಮೆಯ ಕ್ಷಣ. ಇದು ಯಾವುದೇ ಯುರೋಪಿಯನ್ ಭಾಷೆಗೆ ಅನುವಾದಿಸಲ್ಪಟ್ಟ ತ್ರಿವೇಣಿ ಅವರ ಮೊದಲ ಕಾದಂಬರಿ ಎಂದು ತ್ರಿವೇಣಿ ಅವರ ಪುತ್ರಿ ಹಾಗೂ ತ್ರಿವೇಣಿ ಶಂಕರ್ ಸಾಹಿತ್ಯ ಪ್ರತಿಷ್ಠಾನದ ಮುಖ್ಯಸ್ಥೆ ಮೀರಾ ಅವರ ಸಂತಸದ ನುಡಿ.
ತ್ರಿವೇಣಿ ಎಂಬ ಹೆಸರಿನಿಂದಲೇ ಪ್ರಸಿದ್ದರಾದ ಅವರ ನಿಜನಾಮ ಅನುಸೂಯ ಶಂಕರ್. ಕನ್ನಡದ ಕಣ್ವ ಬಿ.ಎಂ.ಶ್ರೀಯವರ ಸೋದರನ ಪುತ್ರಿ. ಅವರು ಕನ್ನಡದ ಪ್ರಮುಖ ಲೇಖಕಿಯರಲ್ಲಿ ಪ್ರಮುಖ ಹೆಸರು. 1928 ರ ಸೆಪ್ಟಂಬರ್ 1 ರಂದು ಮೈಸೂರಿನಲ್ಲಿ ಇವರು ಜನಿಸಿದರು. ಮಂಡ್ಯದಲ್ಲಿ ಪ್ರೌಢಶಿಕ್ಷಣ ಹಾಗೂ ಕಾಲೇಜು ಶಿಕ್ಷಣ ಮೈಸೂರಿನಲ್ಲಿ ಪಡೆದರು. 1947ರಲ್ಲಿ ಮಹಾರಾಜ ಕಾಲೇಜಿನಿಂದ ಮನ:ಶಾಸ್ತ್ರದಲ್ಲಿ ಚಿನ್ನದ ಪದಕದೊಂದಿಗೆ ಬಿ.ಎ.ಪದವಿ ಪೂರೈಸಿದರು.
ಸ್ತ್ರೀಯರು ಹೆಚ್ಚಾಗಿ ಬರೆಯಲು ಹಿಂಜರಿಯುತ್ತಿದ್ದ ಕಾಲದಲ್ಲಿಯೇ ಬರವಣಿಗೆ ಶುರು ಮಾಡಿ ಕೆಲವೇ ವರ್ಷಗಳಲ್ಲಿ ಭಾರೀ ಜನಪ್ರಿಯತೆಯನ್ನು ಪಡೆದುಕೊಂಡರು ತ್ರಿವೇಣಿ. ತ್ರಿವೇಣಿಯವರ ಮೊದಲನೇ ಕಾದಂಬರಿ ಪ್ರಕಟವಾಗಿದ್ದು 1953 ರಲ್ಲಿ. ಹತ್ತು ವರ್ಷಗಳಲ್ಲಿ ಅವರು ಪ್ರಕಟಿಸಿದ್ದು ಇಪ್ಪತ್ತು ಕಾದಂಬರಿಗಳನ್ನು.,ಹೂವು ಹಣ್ಣು, ಅಪಸ್ವರ, ಅಪಜಯ, ಸೋತುಗೆದ್ದವಳು, ಬೆಕ್ಕಿನಕಣ್ಣು, ಶರಪಂಜರ, ದೂರದ ಬೆಟ್ಟ, ಅಪಜಯ, ಕಂಕಣ, ಮುಚ್ಚಿದ ಬಾಗಿಲು, ಬಾನು ಬೆಳಗಿತು, ಅವಳ ಮನೆ, ವಸಂತಗಾನದಿಂದ ಹಿಡಿದು ಬೆಳ್ಳಿಮೋಡ ಅವರ ಪ್ರಮುಖ ಕಾದಂಬರಿ, ಬೆಳ್ಳಿಮೋಡ, ಶರಪಂಜರ, ಹಣ್ಣಲೆ ಚಿಗುರಿದಾಗ ಕಾದಂಬರಿಗಳು ಚಲನಚಿತ್ರವಾಗಿಯೂ ಗಮನ ಸೆಳೆದಿವೆ.