iPhone SE 4: ಮಧ್ಯಮ ವರ್ಗದವರೂ ಖರೀದಿಸಬಹುದು ಐಫೋನ್ ಎಸ್ಇ 4; ಭಾರತದಲ್ಲಿ ಆಪಲ್ ಫೋನ್ ಬೆಲೆ ಎಷ್ಟು?
- ಸದ್ಯ ಭಾರತದಲ್ಲಿ ಐಫೋನ್ ಎಸ್ಇ 4 ಭಾರಿ ಚರ್ಚೆಯಲ್ಲಿದೆ. ಮಧ್ಯಮ ವರ್ಗದವರ ಕೈಗೆಟಕುವ ಬೆಲೆಯು ಆಪಲ್ ಫೋನ್ ಖರೀದಿಗೆ ಜನರು ಸಿದ್ಧತೆ ನಡೆಸುತ್ತಿದ್ದಾರೆ. ಭಾರತದಲ್ಲಿ ಈಗಾಗಲೇ ಇರುವ ಮಧ್ಯಮ ಶ್ರೇಣಿಯ ಸ್ಮಾರ್ಟ್‌ಫೋನ್ ಮಾರುಕಟ್ಟೆಗೆ ಸ್ಪರ್ಧಿಯಾಗಿ ಐಫೋನ್ ಬರುತ್ತಿದೆ. ಇದರ ಬೆಲೆ ಕುರಿತು ನೋಡೋಣ.
- ಸದ್ಯ ಭಾರತದಲ್ಲಿ ಐಫೋನ್ ಎಸ್ಇ 4 ಭಾರಿ ಚರ್ಚೆಯಲ್ಲಿದೆ. ಮಧ್ಯಮ ವರ್ಗದವರ ಕೈಗೆಟಕುವ ಬೆಲೆಯು ಆಪಲ್ ಫೋನ್ ಖರೀದಿಗೆ ಜನರು ಸಿದ್ಧತೆ ನಡೆಸುತ್ತಿದ್ದಾರೆ. ಭಾರತದಲ್ಲಿ ಈಗಾಗಲೇ ಇರುವ ಮಧ್ಯಮ ಶ್ರೇಣಿಯ ಸ್ಮಾರ್ಟ್‌ಫೋನ್ ಮಾರುಕಟ್ಟೆಗೆ ಸ್ಪರ್ಧಿಯಾಗಿ ಐಫೋನ್ ಬರುತ್ತಿದೆ. ಇದರ ಬೆಲೆ ಕುರಿತು ನೋಡೋಣ.
(1 / 5)
ಇತ್ತೀಚೆಗೆ ನಡೆದ ಆಪಲ್ ಗ್ಲೋಟೈಮ್ ಈವೆಂಟ್ 2024ರಲ್ಲಿ ಹೊಸ ಐಫೋನ್ 16 ಸೀರೀಸ್ ಬಿಡುಗಡೆಯಾಯ್ತು. ಆ ನಂತರ ಐಫೋನ್ ಎಸ್ಇ 4 ಈಗ ಹೆಚ್ಚು ನಿರೀಕ್ಷೆ ಮೂಡಿಸಿದೆ. ಐಫೋನ್ ಎಸ್ಇ ಮಾದರಿಯು ಈಗ ಬಹಳ ಸಮಯದ ನಂತರ ಅಪ್ಡೇಟ್ ಆಗಿ ಬರಿತ್ತಿದೆ. ಇದು 2022ರಲ್ಲಿ ಬಿಡುಗಡೆಯಾದ ಐಫೋನ್ ಎಸ್ಇ 3ರ ಅಪ್ಡೇಟ್ ಆಗಿರಲಿದೆ.(AppleTrack)
(2 / 5)
ಐಫೋನ್ ಎಸ್ಇ 4 ಬಿಡುಗಡೆಯಾದರೆ, ಸದ್ಯಕ್ಕೆ ಆಪಲ್ ಸ್ಟೋರ್‌ನಲ್ಲಿ ಅತ್ಯಂತ ಕೈಗೆಟುಕುವ ಫೋನ್ ಆಗಲಿದೆ. ಈ ಹಿಂದೆ ಐಫೋನ್ ಎಸ್ಇ 3 ಅನ್ನು 43,900 ರೂ.ಗಳ ಆರಂಭಿಕ ಬೆಲೆಯಲ್ಲಿ ಬಿಡುಗಡೆ ಮಾಡಲಾಗಿತ್ತು. ವರದಿಗಳ ಪ್ರಕಾರ, ಐಫೋನ್ ಎಸ್ಇ 4 ಕೂಡ ಇದೇ ರೀತಿಯ ಬೆಲೆ ಹೊಂದಿರಲಿದೆ. ಏನೇ ಆದರೂ 50,000 ರೂ.ಗಿಂತ ಕಡಿಮೆ ಬೆಲೆಯನ್ನು ಹೊಂದಿರಲಿದೆ.
(3 / 5)
ವರದಿಗಳು ಹಾಗೂ ಸೋರಿಕೆಯಾಗಿರುವ ಮಾಹಿತಿ ಪ್ರಕಾರ, ಐಫೋನ್ ಎಸ್ಇ 4 ಎಲ್ಲಾ ಹೊಸ ವೈಶಿಷ್ಟ್ಯಗಳೊಂದಿಗೆ ಬರಲಿದೆ. ವಿಶೇಷವಾಗಿ ಆಪಲ್ ಇಂಟೆಲಿಜೆನ್ಸ್‌ನೊಂದಿಗೆ ನಿಮಗೆ ಮೌಲ್ಯಯುತ ಖರೀದಿಯಾಗಲಿದೆ ಎಂದು ಸೂಚಿಸುತ್ತದೆ. ಅಂದಾಜು 45,000 ರೂಪಾಯಿಯ ಫೋನ್, ಎಐ ತಂತ್ರಜ್ಞಾನದ ಜಗತ್ತಿಗೆ ಪ್ರವೇಶ ಒದಗಿಸಬಹುದು.(Ming-Chi Kuo)
(4 / 5)
ಐಫೋನ್ ಎಸ್ಇ ಫೋನ್, ಯುಎಸ್‌ಬಿ-ಸಿ ಪೋರ್ಟ್ ಮತ್ತು ಆಕ್ಷನ್ ಬಟನ್ ಕೂಡಾ ಪಡೆಯುತ್ತದೆ. ಈ ಮಾದರಿಯು ಮುಂಬರುವ ಐಫೋನ್ 16ನ ವಿನ್ಯಾಸ ಭಾಷೆಯನ್ನು ಅಳವಡಿಸಿಕೊಳ್ಳುವ ಸಾಧ್ಯತೆಯಿದೆ ಎಂದು ವರದಿಗಳು ಸೂಚಿಸಿವೆ. ಫೇಸ್ ಐಡಿಯೊಂದಿಗೆ ಒಎಲ್ಇಡಿ ಡಿಸ್ಪ್ಲೇ ಹೊಂದಿರಲಿದೆ.(X.com/MajinBuOfficial)
(5 / 5)
ಕಂಪನಿ ಬಹಿರಂಗಪಡಿಸಿದಂತೆ, ಆಪಲ್ ಇಂಟೆಲಿಜೆನ್ಸ್ ಕಾರ್ಯನಿರ್ವಹಿಸಲು ಕನಿಷ್ಠ 8 ಜಿಬಿ RAM ಅಗತ್ಯವಿದೆ. ಐಫೋನ್ ಎಸ್ಇ 4 ಆಪಲ್ ಇಂಟೆಲಿಜೆನ್ಸ್ ಪಡೆದರೆ ಅದು 8 ಜಿಬಿ RAM ಅನ್ನು ಸಹ ಪಡೆಯುತ್ತದೆ. ಹೊಸ ವಿನ್ಯಾಸ, ಶಕ್ತಿಯುತ ಚಿಪ್ಸೆಟ್, ಒಎಲ್ಇಡಿ ಡಿಸ್ಪ್ಲೇ ಮತ್ತು ಸುಧಾರಿತ ಆಪಲ್ ಇಂಟೆಲಿಜೆನ್ಸ್ ವೈಶಿಷ್ಟ್ಯಗಳೊಂದಿಗೆ, ಐಫೋನ್ ಎಸ್ಇ 4 ಖರೀದಿದಾರರ ಆಯ್ಕೆಯಾಗಬಹುದು. ಅಲ್ಲದೆ ಕಡಿಮೆ ಬೆಲೆಯಿಂದಾಗಿ ಮಧ್ಯಮ ವರ್ಗದವರ ಆಯ್ಕೆಯಾಗಬಹುದು. (IceUniverse)
ಇತರ ಗ್ಯಾಲರಿಗಳು