New Year 2025: ಹೊಸ ವರ್ಷಕ್ಕೆ ಮಾಡಿ ಹೊಸ ಸಂಕಲ್ಪ; ಆರೋಗ್ಯ ಭಾಗ್ಯಕ್ಕೆ ಆಹಾರದಲ್ಲಿ ಈ 10 ಶಿಸ್ತು ಅನುದಿನವಿರಲಿ
- ಹೊಸ ವರ್ಷಕ್ಕೆ ಹೊಸ ಜೀವನ ಆರಂಭಿಸಬೇಕೆಂದು ಬಯಸುವವರು ಹೆಚ್ಚು. ನಿತ್ಯ ಕೆಲಸ-ಕಾರ್ಯವೆಂದು ಆಹಾರ ಮತ್ತು ಆರೋಗ್ಯದತ್ತ ಗಮನ ಹರಿಸಲು ಹಲವರು ಹೆಣಗಾಡುತ್ತಾರೆ. ಆಹಾರ ಸೇವನೆಯಲ್ಲಿ ಶಿಸ್ತು ಅನುಸರಿಸಲಾಗದೆ, ಜೀವನಶೈಲಿಯಲ್ಲಿ ವ್ಯತ್ಯಾಸಗಳಾಗುತ್ತವೆ. ಆದರೆ, ಹೊಸ ವರ್ಷದಲ್ಲಿ ಹೊಸದಾಗಿ ಸಂಕಲ್ಪ ಮಾಡಿ ಆಹಾರ ಸೇವನೆಯಲ್ಲಿ ಶಿಸ್ತು ಅನುಸರಿಸಲು ಒಂದು ಒಳ್ಳೆಯ ಅವಕಾಶ.
- ಹೊಸ ವರ್ಷಕ್ಕೆ ಹೊಸ ಜೀವನ ಆರಂಭಿಸಬೇಕೆಂದು ಬಯಸುವವರು ಹೆಚ್ಚು. ನಿತ್ಯ ಕೆಲಸ-ಕಾರ್ಯವೆಂದು ಆಹಾರ ಮತ್ತು ಆರೋಗ್ಯದತ್ತ ಗಮನ ಹರಿಸಲು ಹಲವರು ಹೆಣಗಾಡುತ್ತಾರೆ. ಆಹಾರ ಸೇವನೆಯಲ್ಲಿ ಶಿಸ್ತು ಅನುಸರಿಸಲಾಗದೆ, ಜೀವನಶೈಲಿಯಲ್ಲಿ ವ್ಯತ್ಯಾಸಗಳಾಗುತ್ತವೆ. ಆದರೆ, ಹೊಸ ವರ್ಷದಲ್ಲಿ ಹೊಸದಾಗಿ ಸಂಕಲ್ಪ ಮಾಡಿ ಆಹಾರ ಸೇವನೆಯಲ್ಲಿ ಶಿಸ್ತು ಅನುಸರಿಸಲು ಒಂದು ಒಳ್ಳೆಯ ಅವಕಾಶ.
(1 / 11)
ತಿನ್ನುವ ಆಹಾರವನ್ನು ಆರೋಗ್ಯಕರವಾಗಿ ತಿನ್ನಬೇಕು. ಹೊತ್ತು ಹೊತ್ತಿಗೆ ಸಮರ್ಪಕವಾಗಿ ಈದು ಸಾಧ್ಯವಾಗದಿದ್ದರೆ ಆರೋಗ್ಯ ಹದಹಗೆಡುತ್ತದೆ. ಅದಕ್ಕೆ ಅವಕಾಶ ಸಿಗದಂತೆ ಎಚ್ಚರ ವಹಿಸಬೇಕು. ಹೊಸ ವರ್ಷದ ಆರಂಭಕ್ಕೂ ಆಹಾರಕ್ಕೆ ಸಂಬಂಧಿಸಿದಂತೆ ಈ ನಿರ್ಣಯಗಳನ್ನು ತೆಗೆದುಕೊಳ್ಳಬಹುದು.
(2 / 11)
ಹೈಡ್ರೇಟೆಡ್ ಆಗಿರಿ: ಎಲ್ಲಾ ರೀತಿಯ ಆಹಾರ ಕ್ರಮ ಅನುಸರಿಸಿ ದಿನವಿಡೀ ಸಾಕಷ್ಟು ಪ್ರಮಾಣದಲ್ಲಿ ನೀರು ಕುಡಿಯದಿದ್ದರೆ ಆರೋಗ್ಯದ ಮೇಲೆ ಪ್ರಭಾವ ಬೀರುತ್ತದೆ. ಹೀಗಾಗಿ ದಿನವಿಡೀ ಸಾಕಷ್ಟು ನೀರು ಕುಡಿಯಿರಿ. ಹೊರಗಡೆ ಹೋಗುವಾಗ ನೀರಿನ ಬಾಟಲಿ ಜೊತೆಗಿರಲಿ.
(3 / 11)
ಆಹಾರ ಸೇವನೆಗೆ ಸಮಯ-ವೇಳಾಪಟ್ಟಿ ನಿಗದಿ: ಈ ವಿಷಯದಲ್ಲಿ ಹೆಚ್ಚು ನಿರ್ಲಕ್ಷ್ಯ ಮಾಡಲಾಗುತ್ತದೆ. ಆದರೆ, ಇದು ಹೆಚ್ಚು ಎಚ್ಚರಿಕೆಯಿಂದ ಮಾಡಬೇಕಾದ ಕೆಲಸ. ಬೆಳಗ್ಗಿನ ಉಪಾಹಾರ ಹೊಟ್ಟೆ ತುಂಬಾ ಮಾಡಿ. ಅದಕ್ಕೆ ಸೂಕ್ತ ಸಮಯ ನಿಗದಿಪಡಿಸಿ. ಮಧ್ಯಾಹ್ನದ ಊಟದಲ್ಲೂ ಪೌಷ್ಠಿಕಾಂಶ ಇರಲಿ. ರಾತ್ರಿಯ ಊಟಕ್ಕೆ ಮಿತಿ ಇರಲಿ. ಮೂರೂ ಹೊತ್ತಿನ ಸೇವನೆಗೆ ಒಂದು ನಿರ್ದಿಷ್ಠ ಸಮಯ ನಿಗದಿಪಡಿಸಿ.
(4 / 11)
ಗಮನವಿಟ್ಟು ತಿನ್ನಿ: ಆಹಾರ ಸೇವನೆಯು ನಿಮ್ಮ ದಿನಚರಿಯ ಪ್ರಮುಖ ಭಾಗವೆಂದು ಪರಿಗಣಿಸಿ. ಊಟದೊಂದಿಗೆ ಬೇರೆ ಕೆಲಸ, ಮೊಬೈಲ್, ಟಿವಿ ನೋಡುವುದನ್ನು ತಪ್ಪಿಸಿ. ಮೊಬೈಲ್‌ಲ್ಲಿ ಮಾತನಾಡುವುದು ಬೇಡ. ಆಹಾರ ಸೇವನೆ ಮೇಲೆ ಸಂಪೂರ್ಣ ಗಮನ ಹರಿಸಿ.
(5 / 11)
ಸಿಹಿ ಸೇವನೆ ಕಡಿಮೆ ಮಾಡಿ: ಹೆಚ್ಚು ಸಕ್ಕರೆ ತಿನ್ನುವುದು ನಿಮ್ಮ ಶಕ್ತಿಯ ಮಟ್ಟ ಮತ್ತು ನಿದ್ರೆಯ ಮೇಲೆ ಪರಿಣಾಮ ಬೀರಬಹುದು. ಸಕ್ಕರೆ ಆರೋಗ್ಯಕ್ಕೆ ಅಷ್ಟೊಂದು ಒಳ್ಳೆಯದಲ್ಲ. ಸಿಹಿ ಪದಾರ್ಥಗಳ ಹೆಚ್ಚು ಸೇವನೆ ಮಾಡಿದರೂ ಶಕ್ತಿಯ ಮಟ್ಟ ಕುಂದುತ್ತದೆ.
(6 / 11)
ಹೊರಗಿನ ಆಹಾರ ಬೇಡ, ಮನೆಯಲ್ಲೇ ಅಡುಗೆ ಮಾಡಿ. ಮನೆಯಲ್ಲಿ ಅಡುಗೆ ಮಾಡುವುದರಿಂದ ಹಣ ಉಳಿಸುವ ಜೊತೆಗೆ ಆರೋಗ್ಯಕರ ಆಹಾರ ಸೇವಿಸಬಹುದು. ಹೊರಗಡೆ ತಿನ್ನುವ ಆಹಾರ ಬಾಯಿಗೆ ರುಚಿಸಬಹುದು. ಆದರೆ, ಆರೋಗ್ಯ ಹದಗೆಡಬಹುದು.
(7 / 11)
ಆಲ್ಕೋಹಾಲ್ ಬೇಡ: ಮದ್ಯ ಸೇವನೆ ಆರೋಗ್ಯಕ್ಕೆ ಹಾನಿಕರ. ಈ ಅಭ್ಯಾಸವು ನಿಮ್ಮ ಒಟ್ಟಾರೆ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಹೀಗಾಗಿ ಮದ್ಯ ಸೇವನೆಯನ್ನು ಕಡಿಮೆ ಮಾಡಿ.
(8 / 11)
ಹೊಸ ಹೊಸ ಆಹಾರ ಸೇವನೆ ಪ್ರಯತ್ನಿಸಿ: ನಿತ್ಯ ಒಂದೇ ವಿಧದ ಆಹಾರ ದೇಹಕ್ಕೆ ಸಾಲುವುದಿಲ್ಲ. ಸಾಕಷ್ಟು ವಿಧದ ಆಹಾರ ಹೊಟ್ಟೆ ಸೇರಲಿ. ಸಸ್ಯಾಹಾರ ಹಾಗೂ ಮಾಂಸಾಹಾರಗಳಲ್ಲಿ ವೈವಿಧ್ಯತೆ ಇವೆ. ಅವುಗಳನ್ನು ಪ್ರಯತ್ನಿಸಿ.
(9 / 11)
ಆಹಾರ ವ್ಯರ್ಥ ಮಾಡುವುದಿಲ್ಲ: ಆಹಾರ ಸೇವನೆಯಲ್ಲಿ ಶಿಸ್ತು ಮುಖ್ಯ. ಹೊಟ್ಟೆ ಸೇರಬೇಕಾದ ಆಹಾರವನ್ನು ಕಸದ ಬುಟ್ಟಿ ಸೇರಿಸುವುದು ತಪ್ಪು. ನಿಮ್ಮ ಹೊಟ್ಟೆಯ ಸಾಮರ್ಥಯಕ್ಕೆ ಬೇಕಾದಷ್ಟೇ ಆಹಾರವನ್ನು ಬಡಿಸಿಕೊಂಡು ಸೇವಿಸಿ. ಮನೆಗೆ ತಂದ ಯಾವುದೇ ಆಹಾರವನ್ನು ವ್ಯರ್ಥವಾಗಲು ಬಿಡುವುದಿಲ್ಲ ಎಂಬ ನಿರ್ಣಯಕ್ಕೆ ಬನ್ನಿ.
(10 / 11)
ವಾರದ ಯೋಜನೆ ರೂಪಿಸಿ: ನಿತ್ಯ ಒಂದೇ ರೀತಿಯ ಆಹಾರ ಬೇಡ. ಆರೋಗ್ಯವಾಗಿಲು ದೇಹ ಸಮತೋಲನದಲ್ಲಿರಬೇಕು. ವಿಟಮಿನ್, ಪ್ರೊಟೀನ್, ಜೀವಸತ್ಯ, ಕ್ಯಾಲರಿಗಳು ಎಲ್ಲವೂ ಬೇಕು. ಇದನ್ನು ಯೋಜಿಸಿ ದಿನನಿತ್ಯ ತರಹೇವಾರಿ ಆಹಾರಗಳನ್ನು ಸೇವಿಸಿ. ಒಂದು ವಾರಕ್ಕೆ ಭಿನ್ನ ಆಹಾರ ಪದ್ಧತಿ ಯೋಜಿಸಿದರೆ, ಅದನ್ನು ಮುಂದಿನ ವಾರಕ್ಕೆ ಪುನರಾವರ್ತಿಸಬಹುದು.
ಇತರ ಗ್ಯಾಲರಿಗಳು