Top 10 Kannada Songs: ಟ್ರೆಂಡಿಂಗ್‌ನಲ್ಲಿರುವ ಟಾಪ್ 10 ಕನ್ನಡ ಸಿನಿಮಾ ಹಾಡುಗಳಿವು; ಮಾಯಾವಿಯಿಂದ ಅಪರಂಜಿ ಚಿನ್ನವೋ ತನಕ
Top 10 Kannada Songs: ಈ ವಾರದ ಟಾಪ್ 10 ಕನ್ನಡ ಹಾಡುಗಳಲ್ಲಿ ಹೊಸ ಸಿನಿಮಾದ ಹಾಡುಗಳು ಮಾತ್ರವಲ್ಲದೆ ಹಳೆಯ ಕನ್ನಡ ಚಲನಚಿತ್ರಗೀತೆಗಳು ಸ್ಥಾನ ಪಡೆದಿವೆ. ಮಾಯಾವಿ, ದ್ವಾಪರ, ನಿನ್ನಿಂದಲೇ, ನೀರಲ್ಲಿ ಸಣ್ಣ, ಹೇ ಗಗನ, ಪರವಶವಾದೆನು, ಡೋಂಟ್ ವರಿ ಬೇಬಿ ಚಿನ್ನಮ್ಮ ಮುಂತಾದ ಹಾಡುಗಳು ಟಾಪ್ ಲಿಸ್ಟ್‌ನಲ್ಲಿವೆ.
Top 10 Kannada Songs: ಕನ್ನಡ ಹಾಡುಗಳನ್ನು ಕೇಳುವ ದೊಡ್ಡ ವರ್ಗವೇ ಇದೆ. ಕಾಲೇಜಿಗೆ ಹೋಗುವ ತರುಣ, ತರುಣಿಯರಿಗೆ, ಉದ್ಯೋಗಕ್ಕೆ ಹೋಗುವಾಗ, ಬಸ್‌ನಲ್ಲಿ ಹೋಗುವಾಗ, ಕಾರಿನಲ್ಲಿ ಹೋಗುವಾಗ ಎಲ್ಲೆಲ್ಲೂ ಕನ್ನಡ ಗಾನಾ ಕೇಳುತ್ತ ಇರುತ್ತದೆ. ಕೆಲವರು ಯೂಟ್ಯೂಬ್‌ನಲ್ಲಿ ತಮ್ಮ ನೆಚ್ಚಿನ ಹಾಡುಗಳನ್ನು ಕೇಳುತ್ತ ಇರಬಹುದು. ಇನ್ನು ಕೆಲವರು ಆಪಲ್ ಮ್ಯೂಸಿಕ್, ಗಾನಾ, ಜಿಯೋ ಸಾವನ್ ಇತ್ಯಾದಿ ಸಂಗೀತ ಆಪ್‌ಗಳಲ್ಲಿ ಹಾಡುಗಳನ್ನು ಕೇಳುತ್ತಾ ಇರಬಹುದು. ವಿವಿಧ ತಾಣಗಳನ್ನು ಆಧರಿಸಿ ಹೇಳುವುದಾದರೆ ಸದ್ಯ ಹಲವು ಹಾಡುಗಳು ಟ್ರೆಂಡಿಂಗ್‌ನಲ್ಲಿವೆ. ಅಂತಹ ಹತ್ತು ಹಾಡುಗಳ ವಿವರ ಇಲ್ಲಿದೆ.
ಟ್ರೆಂಡಿಂಗ್‌ನಲ್ಲಿರುವ ಟಾಪ್ 10 ಕನ್ನಡ ಹಾಡುಗಳು
1. ಮಾಯಾವಿ ಹಾಡು
ಭೂಮಿ 2024 ಆಲ್ಬಂನ ಮಾಯಾವಿ ಹಾಡು ಟಾಪ್ 1ರಲ್ಲಿದೆ. ಸಂಜಿತ್ ಹೆಗ್ಡೆ ಹಾಗೂ ಸೋನು ನಿಗಮ್ ಈ ಇಬ್ಬರ ಕಂಠದಲ್ಲಿ ಮೂಡಿ ಬಂದ ಈ ಮೆಲೋಡಿ ಹಾಡು ಟ್ರೆಂಡಿಂಗ್‌ನಲ್ಲಿದೆ. ಮಾಯಾವಿ ಹಾಡಿನ ಲಿರಿಕ್ಸ್ ಕೂಡ ಸಾಕಷ್ಟು ಜನರಿಗೆ ಇಷ್ಟವಾಗಿದೆ. "ಮಾಯಾವಿ ಮಿನುಗು ನೀನು , ಮುಂಜಾನೆ ಬಿಸಿಲು ನೀನು, ಸಾಲದಿರೋ ಹಾಡು ನೀನು, ಬೇಕೆನಿಸೋ ಸಂಜೆ ನೀನು, ಮಾತಲ್ಲೇ ಮಿಂಚು ತಂದ ನನ್ನೋಳು ಈ ಮಾಯಾವಿ, ಚಂದ್ರನ್ನೇ ಜುಮ್ಕಿ ಮಾಡಿ ಇಟ್ಕೊಂಡಿದ್ಲು ಹಾಯಾಗಿ" ಎಂಬ ಹಾಡು ಕನ್ನಡ ಸಂಗೀತ ಪ್ರಿಯರ ಗಮನ ಸೆಳೆದಿದೆ. ಮಾಯಾವಿ ಹಾಡಿನ ಲಿರಿಕ್ಸ್ ಇಲ್ಲಿದೆ.
2. ದ್ವಾಪರ ದಾಟುತ
ಕೃಷ್ಣಂ ಪ್ರಣಯ ಸಖಿ ಸಿನಿಮಾದ ದ್ವಾಪರ ದಾಟುತ ಹಾಡು ಈಗಲೂ ಟ್ರೆಂಡಿಂಗ್‌ನಲ್ಲಿ ಇರುವುದು ಅಚ್ಚರಿಯಲ್ಲ. "ದ್ವಾಪರ ದಾಟುತ ನನ್ನನೇ ನೋಡಲು, ನನ್ನನೇ ಸೇರಲು ಬಂದ ರಾಧಿಕೆ, ಹಾಡಲಿ ಹಾಡಲು ಮಾತಲಿ ಹೇಳಲು, ಸಾಧ್ಯವೇ ಇಲ್ಲದ ರಾಗ ಮಾಲಿಕೆ. ಸಖಿ ಸಖಿ ನನ್ನ ರೂಪಸಿ ಸಖಿ ಸಖಿ ನಿನ್ನ ಮೋಹಿಸಿ ನೀನೇ ನನ್ನ ಪ್ರೇಯಸಿ, ಜೇನ ದನಿಯೋಳೆ ಮೀನ ಕಣ್ಣೋಳೆ ಸೊಬಗೆ ಮೈತುಂಬಿದೆ ಹಂಸ ನಡೆಯೋಳೆ ಎದೆಗೆ ಇಳಿದೋಳೆ ಜೀವ ಝಲ್ ಎಂದಿದೆ" ಎಂಬ ಅಚ್ಚಕನ್ನಡದ ಸಾಹಿತ್ಯದ ಈ ಹಾಡು ಈಗಲೂ ಭಾರತ ಮಾತ್ರವಲ್ಲದೆ ವಿದೇಶದಲ್ಲಿರುವ ಕನ್ನಡಿಗರ ಕಿವಿ ಇಂಪಾಗಿಸುತ್ತಿದೆ. ಈ ಹಾಡು ಸದ್ಯ ಟಾಪ್ 2ನಲ್ಲಿದೆ.
3. ನಿನ್ನಿಂದಲೇ
ಪುನೀತ್ ರಾಜ್‌ಕುಮಾರ್ ಅಭಿಮಾನಿಗಳು ಈಗಲೂ "ನಿನ್ನಿಂದಲೇ" ಹಾಡಿನ ನಿನಾದದಲ್ಲಿ ಮೈಮರೆಯುತ್ತಿರುವುದಕ್ಕೆ ಸಾಕ್ಷಿಯೆಂಬಂತೆ ನಿನ್ನಿಂದಲೇ ಹಾಡು ಈಗ ಟಾಪ್ 3 ಟ್ರೆಂಡಿಂಗ್‌ನಲ್ಲಿದೆ.
ನಿನ್ನಿಂದಲೇ ಹಾಡಿನ ಲಿರಿಕ್ಸ್
ಹೆ ಹೆ ಹೇ... ಹಾ ಹಾ ಹಾ...
ತನನಾನ ನನನಾನ ತನನಾನನನಾ....
ನಿನ್ನಿಂದಲೇ ನಿನ್ನಿಂದಲೇ ಕನಸೊಂದು ಶುರುವಾಗಿದೆ
ನಿನ್ನಿಂದಲೇ ನಿನ್ನಿಂದಲೇ ಮನಸಿಂದು ಕುಣಿದಾಡಿದೆ
ಈ ಎದೆಯಲ್ಲಿ ಸಿಹಿಯಾದ ಕೋಲಾಹಲ
ನನ್ನೆದುರಲ್ಲೇ ನೀ ಹೀಗೆ ಬಂದಾಗಲೇ
ನಿನ್ನ ತುಟಿಯಲ್ಲಿ ನಗುವಾಗುವ ಹಂಬಲ
ನಾ ನಿಂತಲ್ಲೇ ಹಾಳಾದೆ ನಿನ್ನಿಂದಲೇ..
ನಿನ್ನಿಂದಲೇ ನಿನ್ನಿಂದಲೇ
ಕನಸೊಂದು ಶುರುವಾಗಿದೆ..
ನಿನ್ನಿಂದಲೇ ನಿನ್ನಿಂದಲೇ
ಮನಸಿಂದು ಕುಣಿದಾಡಿದೆ...
ಹೆ ಹೆ ಹೇ... ಹಾ ಹಾ ಹಾ...
ತನನಾನ ನನನಾನ ತನನಾನನನಾ....
ಹೋದಲ್ಲಿ ಬಂದಲ್ಲಿ ಎಲ್ಲಾ ನಿನ್ನ
ಸೊಂಪಾದ ಚೆಲುವಿನ ಗುಣಗಾನ
ಕೇದಿಗೆ ಗರಿಯಂಥ ನಿನ್ನ ನೋಟ..
ನನಗೇನೊ ಅಂದಂತೆ ಅನುಮಾನ
ಕಣ್ಣಿಂದಲೇ ಸದ್ದಿಲ್ಲದೆ..
ಮುದ್ದಾದ ಕರೆ ಬಂದಿದೆ..ಏಏಏಏಏ
ನಿನ್ನಿಂದಲೇ ನಿನ್ನಿಂದಲೇ ಕನಸೊಂದು ಶುರುವಾಗಿದೆ
ಈ ಎದೆಯಲ್ಲಿ ಸಿಹಿಯಾದ ಕೋಲಾಹಲ
ನನ್ನೆದುರಲ್ಲೇ ನೀ ಹೀಗೆ ಬಂದಾಗಲೇ
ನಿನ್ನ ತುಟಿಯಲ್ಲಿ ನಗುವಾಗುವ ಹಂಬಲ
ನಾ ನಿಂತಲ್ಲೇ ಹಾಳಾದೆ ನಿನ್ನಿಂದಲೇ...
ನಿನ್ನಿಂದಲೇ ನಿನ್ನಿಂದಲೇ..ಕನಸೊಂದು
ಶುರುವಾಗಿದೆ....
ನಿನ್ನಿಂದಲೇ..ನಿನ್ನಿಂದಲೇ..ಮನಸಿಂದು
ಕುಣಿದಾಡಿದೆ..ಏಏಏಏಏ
4. ನೀರಲ್ಲಿ ಸಣ್ಣ ಅಲೆಯೊಂದು ಮೂಡಿ
ಹುಡುಗರು ಸಿನಿಮಾದ ನೀರಲ್ಲಿ ಸಣ್ಣ ಹಾಡು ಈಗ ಟಾಪ್ 4ನಲ್ಲಿದೆ. "ನೀರಲ್ಲಿ ಸಣ್ಣ ಅಲೆಯೊಂದು ಮೂಡಿ ಚೂರಾದ ಚಂದ್ರನೀಗ.... ಇಲ್ಲೊಂದು ಚೂರು, ಅಲ್ಲೊಂದು ಚೂರು ಒಂದಾಗಬೇಕು ಬೇಗ... ತುಸು ದೂರ ಸುಮ್ಮನೆ ಜೊತೆಯಲ್ಲಿ ಬಂದೆಯಾ... ನಡುವೆಲ್ಲೊ ಮೆಲ್ಲಗೆ ಮಾಯವಾದೆಯ...." ಎಂಬ ಹಾಡು ನಿಮಗೂ ಇಷ್ಟವಾಗಿರಬಹುದು.
5. ಹೇ ಗಗನ ಮಳೆಯಾ ಹರಿಸಿ
ಕೃಷ್ಣಂ ಪ್ರಣಯ ಸಖಿ ಸಿನಿಮಾದ ಇನ್ನೊಂದು ಹಾಡು ಟಾಪ್ 5 ಟ್ರೆಂಡಿಂಗ್‌ನಲ್ಲಿದೆ. ಹೇ ಗಗನ ಹಾಡಿನ ಲಿರಿಕ್ಸ್ ಮುಂದೆ ನೀಡಲಾಗಿದೆ.
ಹೇ ಗಗನ ಲಿರಿಕ್ಸ್
ಹೇ ಗಗನ ಮಳೆಯಾ ಹರಿಸಿ ತಿಳಿಸೇ ಬಿಡುವೆ ಪ್ರೀತಿಯಾ
ಹೇ ಧರಣಿ ಆವಿ ಕಳಿಸಿ ತಿಳಿಸಿ ಕೊಡುವೆ ಆಸೆಯಾ
ನಾ ತಿಳಿಯೆ ತಿಳಿಸೋ ಬಗೆಯಾ
ಪ್ರೀತಿ ಹೇಗೆ ಹೇಳುತಾರೋ ಜಗದಲಿ ಹೋಗಬೇಕು ಪಾಠಕಾಗಿ ಅವರಲಿ
ಹೇ ಗಗನ ಮಳೆಯಾ ಹರಿಸಿ ತಿಳಿಸೇ ಬಿಡುವೆ ಪ್ರೀತಿಯಾ
ಎದುರು ನಡೆದು ಗಮನ ಸೆಳೆಯಲೆ ?
ಮರೆತ ಕವಿತೆ ನೆನಪು ಮಾಡಲೆ ?
ಮೊದಲು ಒಲವ ನಾನೆ ಹೇಳಲೇ? ಏನು ಮಾಡಲಿ ?
ಬೊಗಸೆ ಹಿಡಿದು ನಗುವ ಕೇಳಲೆ ?
ಎದೆಯ ಬಗೆದು ಒಲವ ತೋರಲೆ ?
ಕೊನೆಯ ತನಕ ಜೊತೆಯ ಬೇಡಲೆ ? ಹೇಗೆ ಹೇಳಲಿ ?
ಓ...ಮುಂಗೈಯನು ಚಾಚಲೇನು ? ಮುಂದಾಗಲೇ ಬೇಕು ನೀನು
ಹಾ..… ಹೂವನ್ನು ನಾ ನೀಡಲೇನು ? ಹೂಂ ಅನ್ನಲೇಬೇಕು ನೀನು
ಹೇ... ಆಚೆ ಯಾಕೋ ಧಾರೆಯಾಗಿ ಬರದಿದೆ
ಗೌಪ್ಯವಾಗಿ ಸೌಮ್ಯವಾಗು ಇರದಿದೆ
ಹೇ ಗಗನ ಮಳೆಯಾ ಹರಿಸಿ ತಿಳಿಸೇ ಬಿಡುವೆ ಪ್ರೀತಿಯಾ
ಹೇ ಧರಣಿ ಆವಿ ಕಳಿಸಿ ತಿಳಿಸೀ ಕೊಡುವೆ ಆಸೆಯಾ
ಭಾಷೆ ಮರೆತ ಮೂಕ ಕೋಗಿಲೆ ಅದಕೆ ತುಟಿಯ ಸನ್ನೆ ಕಲಿಸಲೆ ?
ಮಿಡಿವ ಹೃದಯ ನಿನಗೆ ಎನ್ನಲೇ? ಮುದ್ದು ಮಾಡುತಾ...
ಕನಸುಗಳಿಗು ಕಣ್ಣು ತೆರೆಯಲೇ? ಬೆಳಕಿಗೊಂದು ಬಣ್ಣ ಬಳಿಯಲೆ ?
ಪುನಃ ಪುನಃ ಕೂಗಿ ಹೇಳಲೇ ? ಮಧುರ ಸ್ವಾಗತ...
ಓಓಓ ಮೊಗ್ಗಾಗಿಯೇ ಕಾದೆ ನಾನು ಮುಂಜಾವಿನ ಪ್ರೀತಿಗಾಗಿ
ಓ...ಸೂರ್ಯೋದಯಾ ಆಗಲೇನು ? ತಂಗಾಳಿಯ ಸ್ಪರ್ಶಕಾಗಿ
ಈ ಒಲುಮೆ ಒಳಗೇ ಚಿಲುಮೆ
ಹೇ...ಬಾನು ಭೂಮಿ ಹೇಳುವಾಗ ಒಲವನು ನಾನು ಮಾತ್ರ ಮೂಕನಾಗಿ ಉಳಿದೆನು
ಹೇ ಗಗನ ಮಳೆಯಾ ಹರಿಸಿ ತಿಳಿಸೇ ಬಿಡುವೆ ಪ್ರೀತಿಯಾ
ಹೇ ಧರಣಿ ಆವಿ ಕಳಿಸಿ ತಿಳಿಸೀ ಕೊಡುವೆ ಆಸೆಯಾ
ಟ್ರೆಂಡಿಂಗ್‌ನಲ್ಲಿರುವ ಇನ್ನಿತರ ಹಾಡುಗಳು
6. ಪರವಶನಾದೆನು
ಟ್ರೆಂಡಿಂಗ್‌ನಲ್ಲಿರುವ ಪರವಶನಾದೆನು lyrics ಇಲ್ಲಿದೆ.
ಪರವಶನಾದೆನು, ಅರಿಯುವ ಮುನ್ನವೇ,
ಪರಿಚಿತನಾಗಲೀ ಹೇಗೆ ಪ್ರಣಯಕು ಮುನ್ನವೇ,
ಇದಕಿಂತ ಬೇಗ ಇನ್ನೂ, ಸಿಗಬಾರದಿತ್ತೆ ನೀನು,
ಇನ್ನಾದರೂ ಕೂಡಿಟ್ಟುಕೊ ನೀ
ನನ್ನನೂ ಕಳೆಯುವ ಮುನ್ನವೇ,
ಪರವಶನಾದೆನು, ಅರಿಯುವ ಮುನ್ನವೇ,
ಪರಿಚಿತನಾಗಲೀ ಹೇಗೆ ಪ್ರಾಣಯಕು ಮುನ್ನವೇ
ನಿನ್ನ ಕಣ್ಣಿಗಂತು ನಾನು, ನಿರುಪಯೋಗಿ ಈಗಲೂ,
ಇನ್ನು ಬೇರೆ ಏನು ಬೇಕು, ಪ್ರೇಮಯೋಗಿಯಾಗಲು,
ಹೂ ಅರಳುವ ಸದ್ದನು, ನಿನ್ನ ನಗೆಯಲಿ ಕೇಳಬಲ್ಲೆ,
ನನ್ನ ಏಕಾಂತವನ್ನು....
ತಿದ್ದಿಕೊಡು ನೀನೀಗ ನಿಂತಲ್ಲೆ,
ನಾನೇನೇ ಅಂದರೂನೂ,ನನಗಿಂತ ಚೂಟಿ ನೀನು,
ತುಟಿಯಲ್ಲಿಯೇ ಮುಚ್ಚಿಟ್ಟುಕೊ
ಮುತ್ತೊಂದನೂ ಕದಿಯುವ ಮುನ್ನವೇ;
ಪರವಶನಾದೆನು, ಅರಿಯುವ ಮುನ್ನವೇ,
ಪರಿಚಿತನಾಗಲೀ ಹೇಗೆ ಪ್ರಣಯಕು ಮುನ್ನವೇ;
ನಾ..... ನನನನನನನ...
ಕನಸಲಿ ತುಂಬ ಕೆಟ್ಟಿರುವೆನು ನಿನ್ನನು ಕೇಳದೇ,
ರೆಕ್ಕೆಯ ನೀನೆ ಕಟ್ಟಿರಲು ಈ ಹೃದಯವು ಹಾರಿದೆ,
ನನ್ನಾ ಕೌತುಕ ಒಂದೊಂದೇ ಹೇಳಬೇಕು,
ಆಲಿಸುವಾಗ ನಂಬು ನನ್ನನ್ನೆ ಸಾಕು,
ಸಹವಾಸ ದೋಷದಿಂದ, ಸರಿಹೋಗಬಹುದೆ ನಾನು,
ನನಗಾಗಿಯೇ ಕಾದಿಟ್ಟುಕೊ
ಹಟವೊಂದನೂ, ಕೆಣಕುವ ಮುನ್ನವೇ;
ಪರವಶನಾದೆನು, ಅರಿಯುವ ಮುನ್ನವೇ,
ಪರಿಚಿತನಾಗಲೀ ಹೇಗೇ ಪ್ರಣಯಕು ಮುನ್ನವೇ.
ಟ್ರೆಂಡಿಂಗ್‌ನಲ್ಲಿರುವ ಇತರೆ ಹಾಡುಗಳು